Asianet Suvarna News Asianet Suvarna News

ಟೋಕಿಯೋ 2020: ಮೀರಾಬಾಯಿ ಚಾನು ಕೋಚ್‌ ವಿಜಯ್‌ ಶರ್ಮಾ ಎಕ್ಸ್‌ಕ್ಲೂಸಿವ್ ಸಂದರ್ಶನ

ರಿಯೋ ಒಲಿಂಪಿಕ್ಸ್ ಬಳಿಕ ಚಾನು ನಿರಂತರವಾಗಿ ಅಭ್ಯಾಸ ನಡೆಸಿದ್ದಾರೆ. ಶಿಸ್ತುಬದ್ದವಾಗಿ ಒಂದೇ ಗುರಿಯಿಟ್ಟುಕೊಂಡು ಚಾನು ಅಭ್ಯಾಸ ನಡೆಸಿದ್ದರ ಪರಿಣಾಮ ಇಂದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಾನು ಪದಕ ಗೆಲ್ಲಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಟೋಕಿಯೋ(ಜು.25): ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಮೂಲಕ ಭಾರತ ಪದಕದ ಖಾತೆ ತೆರೆದಿದೆ. 49 ಕೆ.ಜಿ ವಿಭಾಗದಲ್ಲಿ ಚಾನು ಒಟ್ಟು 202 ಕೆ.ಜಿ ಭಾರ ಎತ್ತುವ ಮೂಲಕ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ ಪದಕದ ಖಾತೆ ತೆರೆದಿದೆ. ಚಾನು ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ಕೋಚ್‌ ವಿಜಯ್‌ ಶರ್ಮಾ ಏಷ್ಯಾನೆಟ್‌ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್‌ ಸಂದರ್ಶನ ನೀಡಿದ್ದಾರೆ.

ರಿಯೋ ಒಲಿಂಪಿಕ್ಸ್ ಬಳಿಕ ಚಾನು ನಿರಂತರವಾಗಿ ಅಭ್ಯಾಸ ನಡೆಸಿದ್ದಾರೆ. ಶಿಸ್ತುಬದ್ದವಾಗಿ ಒಂದೇ ಗುರಿಯಿಟ್ಟುಕೊಂಡು ಚಾನು ಅಭ್ಯಾಸ ನಡೆಸಿದ್ದರ ಪರಿಣಾಮ ಇಂದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಾನು ಪದಕ ಗೆಲ್ಲಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಟೋಕಿಯೋ ಒಲಿಂಪಿಕ್ಸ್‌ ತಾರೆ ಮೀರಾಬಾಯಿ ಚಾನು ಎಕ್ಸ್‌ಕ್ಲೂಸಿವ್‌ ಸಂದರ್ಶನ

ಕಳೆದ 5 ವರ್ಷಗಳಲ್ಲಿ ಚಾನು ಸಾಕಷ್ಟು ತ್ಯಾಗ ಮಾಡಿದ್ದಾರೆ. ಮನೆಯ ಹಲವು ಶುಭಕಾರ್ಯಗಳಿಗೂ ಚಾನು ಪಾಲ್ಗೊಳ್ಳದೇ ಅಭ್ಯಾಸ ನಡೆಸಿದ್ದರು. ರಿಯೋ ಒಲಿಂಪಿಕ್ಸ್‌ನಲ್ಲಿ ವೈಫಲ್ಯದಿಂದ ಸಾಕಷ್ಟು ಪಾಠವನ್ನು ಕಲಿತೆವು ಎಂದು ವಿಜಯ್‌ ಶರ್ಮಾ ತಿಳಿಸಿದ್ದಾರೆ. ಏಷ್ಯಾನೆಟ್‌ ನ್ಯೂಸ್‌ ಜತೆ ಚಾನು ಕೋಚ್‌ ಸಂಪೂರ್ಣ ಸಂದರ್ಶನ ಇಲ್ಲಿದೆ ನೋಡಿ.

Video Top Stories