ಜಮೀನು ಮಾರಿ ಪತ್ನಿಗೆ ಚಿಕಿತ್ಸೆ, ಬದುಕುಳಿಯಲಿಲ್ಲ, ಈಗ ಮಗನಿಗೂ ಸೋಂಕು..!
ಸೋಂಕಿತ ಪತ್ನಿಯ ಚಿಕಿತ್ಸೆಗಾಗಿ ಎರಡೂವರೆ ಎಕರೆ ಜಮೀನು ಮಾರಿದ ಪತಿ, ದುರಾದೃಷ್ಟವಶಾತ್ ಪತ್ನಿ ಬದುಕುಳಿದಿಲ್ಲ. ಹಾಸನ ಜಿಲ್ಲೆ ಬೆಲವತ್ತಳ್ಳಿಯಲ್ಲಿ ನಡೆದ ಕರುಣಾಜನಕ ಕಥೆಯಿದೆ.
ಬೆಂಗಳೂರು (ಮೇ. 24): ಸೋಂಕಿತ ಪತ್ನಿಯ ಚಿಕಿತ್ಸೆಗಾಗಿ ಎರಡೂವರೆ ಎಕರೆ ಜಮೀನು ಮಾರಿದ ಪತಿ, ದುರಾದೃಷ್ಟವಶಾತ್ ಪತ್ನಿ ಬದುಕುಳಿದಿಲ್ಲ. ಹಾಸನ ಜಿಲ್ಲೆ ಬೆಲವತ್ತಳ್ಳಿಯಲ್ಲಿ ನಡೆದ ಕರುಣಾಜನಕ ಕಥೆಯಿದೆ. ರೈತ ಮಂಜುನಾಥ್ ಎಂಬುವವರ ಮಗಳಿಗೆ ಸೋಂಕು ತಗುಲುತ್ತದೆ. ಜಮೀನು ಮಾರಿ ಮಗಳಿಗೆ ಚಿಕಿತ್ಸೆ ಕೊಡಿಸುತ್ತಾರೆ. ಮಗಳು ಗುಣಮುಖರಾಗುತ್ತಿದ್ದಂತೆ ಪತ್ನಿಗೆ ಸೋಂಕು ತಗುಲುತ್ತದೆ. ಇದ್ದಬದ್ದ ಜಮೀನು ಮಾರಿ ಪತ್ನಿಗೂ ಚಿಕಿತ್ಸೆ ಕೊಡಿಸುತ್ತಾರೆ. ಆದರೆ ಆಕೆ ಬದುಕುಳಿಯಲಿಲ್ಲ. ಪತ್ನಿಯ ಅಂತ್ಯಸಂಸ್ಕಾರ ಮುಗಿಯುತ್ತಿದ್ದಂತೆ ಪುತ್ರನಿಗೂ ಸೋಂಕು ತಗುಲಿದೆ. ಈಗ ಚಿಕಿತ್ಸೆಗೆ ಹಣವಿಲ್ಲದೇ ಕುಟುಂಬ ಪರದಾಡುತ್ತದೆ.
ಜಿಂದಾಲ್‌ನಲ್ಲಿ ಆಕ್ಸಿಜನ್ ಕೊರತೆ: ಬಳ್ಳಾರಿ, ವಿಜಯನಗರಕ್ಕೆ ಪೂರೈಕೆಯಲ್ಲಿ ವ್ಯತ್ಯಯವಿಲ್ಲ