ಜಿಂದಾಲ್‌ನಲ್ಲಿ ಆಕ್ಸಿಜನ್ ಕೊರತೆ: ಬಳ್ಳಾರಿ, ವಿಜಯನಗರಕ್ಕೆ ಪೂರೈಕೆಯಲ್ಲಿ ವ್ಯತ್ಯಯವಿಲ್ಲ
- ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ಆಕ್ಸಿಜನ್ ಉತ್ಪಾದನೆ ಕುಂಟಿತ
- ಪ್ರತಿದಿನ 100ರಿಂದ 200 ಟನ್ ಉತ್ಪಾದನೆ ಕಡಿಮೆ
- ಅಗತ್ಯ ಬಿದ್ರೇ ಮಹಾರಾಷ್ಟ್ರ ದಿಂದ ಆಕ್ಸಿಜನ್ ತರಸಲು ಸಿದ್ಧತೆ
ಬಳ್ಳಾರಿ (ಮೇ. 24): ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ಏರ್ ಟ್ರಿಪ್ ಆದ ಕಾರಣ ಆಕ್ಸಿಜನ್ ಉತ್ಪಾದನೆ ಕುಂಟಿತವಾಗಿದೆ ಹೀಗಾಗಿ ಪ್ರತಿದಿನ 100ರಿಂದ 200 ಟನ್ ಉತ್ಪಾದನೆ ಕಡಿಮೆಯಾಗಲಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪವನ್ ಮಾಲ್ಪಟಿ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಹೇಳಿದ್ಧಾರೆ.
ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಉಚಿತ ಚಿಕಿತ್ಸೆ: ಡಾ. ಸುಧಾಕರ್
ಜಿಂದಾಲ್ ನಲ್ಲಿ ಐದು ಪ್ಲಾಂಟ್ ನಲ್ಲಿ ಆಕ್ಸಿಜನ್ ಉತ್ಪಾದನೆ ಮಾಡಲಾಗುತ್ತಿದೆ. ಇದರಲ್ಲಿ ಕೆಲ ತಾಂತ್ರಿಕ ತೊಂದರೆಯಿಂದ ಏರ್ ಟ್ರಿಪ್ ಆಗಿದೆ. ಇದು ಸರಿಯಾಗಲು ಒಂದಷ್ಟು ಟೈಮ್ ಬೇಕಾಗುತ್ತದೆ. ಹೀಗಾಗಿ ಪ್ರೊಡೆಕ್ಷನ್ ಕಡಿಮೆಯಾಗಿದೆ. ತಾಂತ್ರಿಕ ತೊಂದರೆ ನಿವಾರಣೆಗೆ ಪ್ರಯತ್ನಿಸಲಾಗುತ್ತಿದೆ. ಆಕ್ಸಿಜನ್ ಕೊರತೆ ಸರಿದೂಗಿಸಲು ಅಗತ್ಯ ಬಿದ್ರೆ ಮಹಾರಾಷ್ಟ್ರ ದಿಂದ ಆಕ್ಸಿಜನ್ ತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ' ಎಂದಿದ್ದಾರೆ.