Asianet Suvarna News

ನಾಳೆಯಿಂದ ಬಸ್‌ ಸಂಚಾರ ಆರಂಭ: ಕೊಪ್ಪಳದ ಬಸ್‌ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯ

Jun 20, 2021, 2:05 PM IST

ಕೊಪ್ಪಳ(ಜೂ.20): ನಾಳೆಯಿಂದ ರಾಜ್ಯಾದ್ಯಂತ ಸಾರಿಗೆ ಬಸ್‌ ಸಂಚಾರ ಆರಂಭವಾಗಲಿದೆ. ಹೀಗಾಗಿ ನಗರದ ಬಸ್‌ ನಿಲ್ದಾಣದಲ್ಲಿ ಬಸ್‌ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಬಸ್‌ ನಿಲ್ದಾಣದಲ್ಲಿ ಸಿಬ್ಬಂದಿ ಸ್ಯಾನಿಟೈಸ್‌ ಮಾಡುತ್ತಿದ್ದಾರೆ. ಲಾಕ್‌ಡೌನ್‌ನಿಂದ ಬಸ್‌ ಸಂಚಾರ ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಇದೀಗ ಕೊರೋನಾ ಪ್ರಕರಣಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಅನ್‌ಲಾಕ್‌ ಮಾಡಲಾಗುತ್ತಿದೆ.  ಹೀಗಾಗಿ ಜಿಲ್ಲೆಯ ಕೊಪ್ಪಳ ಹಾಗೂ ಗಂಗಾವತಿ ನಗರದ ಬಸ್‌ ನಿಲ್ದಾಣಗಳಲ್ಲಿ ಸ್ಯಾನಿಟೈಸ್‌ ಮಾಡಲಾಗುತ್ತಿದೆ. ಶೇ.50 ರಷ್ಟು ಸೀಟ್‌ ಭರ್ತಿ ಮಾಡಿ ಬಸ್‌ ಸಂಚಾರ ಆರಂಭವಾಗಲಿದೆ.

ಪ್ರಯಾಣಿಕರೇ ಗಮನಿಸಿ, ವಾರದಲ್ಲಿ 5 ದಿನ ಮೆಟ್ರೋ ಸಂಚಾರ, ಸಮಯ ಹೀಗಿರಲಿದೆ