ಧಾರವಾಡ: 2 ತಿಂಗಳಿಂದ ಸ್ಯಾಲರಿ ಇಲ್ಲ, ಬೀದಿಗೆ ಬಿದ್ದ 6463 ಕೋವಿಡ್ರೋ ಆರೋಗ್ಯ ಸಿಬ್ಬಂದಿ

- ಬೀದಿಗೆ ಬಿದ್ದ 6463 ಕೋವಿಡ್ ಕೆಲಸ ಮಾಡಿದ ಆರೋಗ್ಯ ಸಿಬ್ಬಂದಿ

- 2 ತಿಂಗಳಿಂದ ಸ್ಯಾಲರಿ ಇಲ್ಲ, ರಿಸ್ಕ್ ಅಲೌನ್ಸ್‌ ಇನ್ನೂ ಸಿಕ್ಕಿಲ್ಲ

- ಕೊರೋನಾ ವಾರಿಯರ್ಸ್‌ ಅಂತ ಹೇಳಿ ನಡುನೀರಿನಲ್ಲಿ ಕೈಬಿಟ್ಟ ಸರಕಾರ

First Published May 23, 2022, 2:16 PM IST | Last Updated May 23, 2022, 2:49 PM IST

ಕಳೆದ ಮೂರು ವರ್ಷದಿಂದ ಕೊರೊನಾ (Corona) ದೇಶವ್ಯಾಪ್ತಿ ಹೆಮ್ಮಾರಿ ಆಗಿ ಬಂದು ಅದೆಷ್ಟು ಕುಟುಂಬಗಳನ್ನ ಬೀದಿಗೆ ತಳ್ಳಿದೆ, ರಾಜ್ಯದಲ್ಲಿ ಮೊದಮೊದಲು ಕೊರೊನಾ ವಕ್ಕರಿಸಿದಾಗ ವೈದ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕೊರೋನಾ ಪೇಶಂಟ್ ಕಡೆ ಹೋಗಲೂ ಭಯ ಬಿಳ್ತಾ ಇದ್ರು. ಆದರೆ ಅಂತಹ ಕೆಟ್ಟ ಪರಿಸ್ಥಿತಿ ಯಲ್ಲಿ ರಾಜ್ಯದಲ್ಲಿ 6463 ಜನರನ್ನ‌ ರಾಜ್ಯ ಸರಕಾರ ಹೊರಗುತ್ತಿಗೆಯ ಮೆಲೆ ಆರೋಗ್ಯ ಇಲಾಖೆ (Health Department) ಕೆಲಸಕ್ಕೆ‌ ತೆಗೆದುಕ್ಕೋಂಡು ಸದ್ಯ ಅವರನ್ನೆಲ್ಲ ಕೆಲಸದಿಂದ ತೆಗೆದು ಸದ್ಯ ವಾರಿಯಸ್೯ಗಳನ್ನ ಬದುಕನ್ನ ರೋಡ್ ಗೆ ಬರುವಂತೆ ಮಾಡಿದೆ ಸರಕಾರ.

ಬಾಗಲಕೋಟೆ ಒತ್ತುವರಿ ತೆರವಿಗೆ ನಲುಗಿದ ಮಲಪ್ರಭೆ, ಕಣ್ತೆರಬೇಕಿದೆ ಸರ್ಕಾರ

 ಇವರನ್ನ ಎರಡು ವರ್ಷದಿಂದ ಕೊವಿಡ್ ವಾರಿಯರ್ಸ (Covid Warriors) ಅಂತ ಬಳಕೆ ಮಾಡಿಕೊಂಡು ಸರಕಾರ ಕೆಲಸದಿಂದ ಕೈ ಬಿಟ್ಟಿದೆ. ಇವರಿಗೆ ರಿಸ್ಕ್ ಅಲೊವೆನ್ಸ್ ಪ್ರತಿ ತಿಂಗಳು 5000 ಸಾವಿರ ಕೊಡಬೇಕು ಅಂತ ಸರಕಾರದ ಆದೇಶವಿದೆ, ಆದರೂ ಒಬ್ಬರಿಗೂ ರಿಸ್ಕ ಅಲೊವೆನ್ಸ್ ನೀಡಿಲ್ಲ. ಫೆಬ್ರವರಿ ಮತ್ತು ಮಾರ್ಚ ತಿಂಗಳ ಎರಡು ತಿಂಗಳ ವೇತನ ನೀಡಿಲ್ಲ ಎಂದು ಸದ್ಯ ನಮಗೆ ನ್ಯಾಯ ಕೊಡಿಸಿ ಎಂದು ಸದ್ಯ ಏಷ್ಯಾನೆಟ್ ಸುವರ್ಣ ನ್ಯೂಸ್ ಮುಂದೆ ಕಣ್ಣೀರು ಹಾಕಿದ್ದಾರೆ.

ಇನ್ನು ರಾಜ್ಯದಲ್ಲಿ ಆರೋಗ್ಯ ಇಲಾಖೆಯ ವಿವಿಧ ವಿಭಾಗಗಳಲ್ಲಿ 6463 ಜನರನ್ನ ಸದ್ಯ ಸರಕಾರ ಗುತ್ತಿಗೆ ಆಧಾರದ ಮೆಲೆ ತೆಗೆದುಕೊಂಡು ಅವರನ್ನ ಕೈ ಬಿಟ್ಟಿದೆ. ಎರಡು ತಿಂಗಳ‌ ಸ್ಯಾಲರಿ, ನೀಡಬೇಕಾದ ರಿಸ್ಕ್ ಅಲೌನ್ಸ್ ನೀಡಬೇಕು. ಇನ್ನು ಆರೋಗ್ಯ ಇಲಾಖೆಯಲ್ಲಿ ರಾಜ್ಯವ್ಯಾಪಿ 1419, ಶ್ರುಶೂಷಕರು, ಲ್ಯಾಬ್ ಟೆಕ್ನಶಿಯನ್ ನಲ್ಲಿ 505, ಫಾರ್ಮಾಸಿಸ್ಟ 916 ಹುದ್ದೆಗಳು, ಮತ್ತು ಗ್ರುಪ್ ಡಿ ಆಧಾರದ ಮೇಲೆ ಹುದ್ದೆಗಳನ್ನ ಭರ್ತಿ ಮಾಡಿಕ್ಕೊಳ್ಳಲಿ, ನೇರ ನೇಮಕಾತಿಯಾದ್ರೂ ಮಾಡಲು ಇಲ್ಲದಿದ್ದರೆ ಗುತ್ತಿಗೆ ಆಧಾರದ ಮೆಲೆ ನಮಗೆ ಕಂಟಿನ್ಯೂ ಮಾಡಲಿ ಎಂದು ಕೊರೋನಾ ವಾರಿಯರ್ಸ್ ‌ ಬೇಡಿಕೆಯಾಗಿದೆ. 

ತುಂಬಿ ಹರಿಯುವ ನದಿಯಲ್ಲಿ ಬಸ್ ಚಾಲಕನ ಸಾಹಸ: ವಿಡಿಯೋ ವೈರಲ್

ಈ ಕುರಿತು ಆರೋಗ್ಯ ಇಲಾಖೆ, ಮತ್ತು ಉಪಸಭಾಪತಿ ಗಳಿಗೆ ಪತ್ರನೂ ಕೂಡಾ ಬರೆದಿದ್ದಾರೆ. ಆದರೆ ಇವರನ್ನ ಸರಕಾರ ಬಳಕೆ‌ ಮಾಡಿಕೊಂಡು ರದ್ದಿ ಪೇಪರ ತರಹ ಬಿಸಾಕಿದ್ದಾರೆ. ಆದರೆ ವಾರಿಯರ್ಸ್‌ಗಳನ್ನ ಸರಕಾರ ಕಡೆಗಣಿಸಿದ್ದು ಸರಿಯಲ್ಲ ಎಂದು ವಾರಿಯರ್ಸ ಪೋಷಕರು ಸರಕಾರಕ್ಕೆ‌ ಹಿಡಿ ಶಾಪವನ್ನ ಹಾಕಿದ್ದಾರೆ. ಸರ್ಕಾರ ಕೇವಲ ಸ್ಯಾಲರಿ ನೀಡಿದೆ ಹೊರತು  ಆದೇಶದ ಪ್ರಕಾರ ಕೊಡಬೇಕಾಗಿದ್ದ ರಿಸ್ಕ್ ಅಲೌನ್ಸ್  ಕೊಟ್ಟಿಲ್ಲ. ನಮಗೆ ನಮ್ಮ‌ ಮಕ್ಕಳ ಫೀಸ್ ಕಟ್ಟಲಿಕ್ಕೆ ಸದ್ಯ ಹಣವಿಲ್ಲ ಎಂದು ಕಣ್ಣೀರು ಇಡುತ್ತಿದ್ದಾರೆ..ಈ ಸಮಸ್ಯೆ ಇಡಿ ರಾಜ್ಯದ್ಯಂತ ಇರುವ ಹಿನ್ನಲೆ ನಮಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ನ್ಯಾಯ ಕೊಡಿಸಬೇಕು ಎಂದು ಕೇಳಿಕ್ಕೊಳ್ಳುತ್ತಿದ್ದಾರೆ.
 

Video Top Stories