ಚಿಕ್ಕಬಳ್ಳಾಪುರಕ್ಕೆ ಅರಬ್ ಖರ್ಜೂರ ಎಂಟ್ರಿ, ಬಂಪರ್ ಬೆಳೆ ಬೆಳೆದು ಸೈ ಎನಿಸಿಕೊಂಡ ರೈತ!

ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದ ರೈತ ಲಕ್ಷ್ಮಿನಾರಾಯಣರವರು ತಮ್ಮ 4 ಎಕರೆ ಪ್ರದೇಶದಲ್ಲಿ 260 ಖರ್ಜೂರ ಗಿಡಗಳಲ್ಲಿ  ಬಂಪರ್ ಬೆಳೆ ಬೆಳೆದಿದ್ದಾರೆ. 

First Published Jul 20, 2022, 5:22 PM IST | Last Updated Jul 20, 2022, 5:39 PM IST

ಉಷ್ಣವಲಯ ದೇಶಗಳಲ್ಲಿ  ಮಾತ್ರ ಬೆಳೆಯೋ ಖರ್ಜೂರವನ್ನು ಈಗ ರಾಜ್ಯದಲ್ಲೂ ಬೆಳೆದು ಇಲ್ಲೊಬ್ಬ ಸೈ ಎನಿಸಿಕೊಂಡಿದ್ದಾನೆ.. ಅರಬ್ ರಾಷ್ಟ್ರಗಳಲ್ಲಿ ಮಾತ್ರ ಖರ್ಜೂರವನ್ನು ಬೆಳೆಯುತ್ತಾರೆ, ಆದ್ರೆ ಇಲ್ಲೊಬ್ಬ ರೈತ ನಾವೇನು ಕಡಿಮೆ ಎಂದು 4 ಎಕರೆಯಲ್ಲಿ ಖರ್ಜೂರ ಬೆಳೆದು ಯಶಸ್ವಿಯಾಗಿದ್ದಾನೆ, ಜೊತೆಗೆ ಲಾಭವನ್ನು ಕೂಡ ಗಳಿಸಿದ್ದಾನೆ. 

ಚಿತ್ರದುರ್ಗ: ಜಿಟಿ ಜಿಟಿ ಮಳೆಗೆ ದಾಳಿಂಬೆ ಬೆಳೆಗೆ ಹಾನಿ, ಕಂಗಾಲಾದ ಅನ್ನದಾತ..!

ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದ ರೈತ ಲಕ್ಷ್ಮಿನಾರಾಯಣರವರು ತಮ್ಮ 4 ಎಕರೆ ಪ್ರದೇಶದಲ್ಲಿ 260 ಖರ್ಜೂರ ಗಿಡಗಳಲ್ಲಿ  ಬಂಪರ್ ಬೆಳೆ ಬೆಳೆದಿದ್ದಾರೆ. ಈ ಹಿಂದೆ ಲಕ್ಷ್ಮೀ ನಾರಾಯಣ್ ತೋಟಗಾರಿಕೆ ಬೆಳೆಗಳಾದ ಟೊಮೊಟೊ, ಮಾವು, ಸಪೋಟ ಬೆಳೆದ್ರು. ಬೆಳೆ ಬಂದರೆ  ಬೆಲೆ ಇರುತ್ತಿರಲಿಲ್ಲ, ಬೆಲೆ ಇದ್ದಾಗ ಬೆಳೆ ಇರುತ್ತಿರಲಿಲ್ಲ, ಹೀಗಾಗಿ ಸಾಕಷ್ಟು ಬೆಳೆಗಳನ್ನು ಬೆಳೆದ್ರು ಲಾಭ ಗಳಿಸಲು ಆಗುತ್ತಿರಲಿಲ್ಲ. ಖರ್ಜೂರ ಬೆಳೆಯನ್ನು ಯಾಕೆ ಬೆಳೆಯಬಾರದು ಎಂದು ಯೋಚಿಸಿದ ಲಕ್ಷ್ಮೀನಾರಾಯಣ ಸ್ನೇಹಿತರ ಮೂಲಕ ಮಾಹಿತಿ ಪಡೆದು, ಉಷ್ಣವಲಯ ರಾಷ್ಟ್ರಗಳಲ್ಲಿ  ಬೆಳೆಯುವ ಖರ್ಜೂರ ಬೆಳೆಯನ್ನು ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಇನ್ನೂ ರೈತ ಲಕ್ಷ್ಮಿನಾರಾಯಣ ಅವರ ತೋಟದ ಖರ್ಜೂರ ಹಣ್ಣು ನೋಡಲು ಜನರು ಮುಗಿ ಬೀಳುತ್ತಿದ್ದಾರೆ. ಈ ಭಾಗದಲ್ಲಿ ಖರ್ಜೂರ ಬೆಳೆ ಹೇಗಿರುತ್ತದೆ ಎಂಬುದರ ಅರಿವೇ ಇಲ್ಲದ ಜನರು ಈಗ ಈ ಬೆಳೆ ನೋಡಲು ಆಸಕ್ತಿಯಿಂದ ಬರ್ತಿದ್ದಾರೆ. ಜೊತೆಗೆ ಜನತೆ ತೋಟಕ್ಕೆ ಬಂದು ಖರ್ಜೂರ ಖರೀದಿ ಮಾಡುತ್ತಿದ್ದಾರೆ. ತೋಟದಲ್ಲಿಯೇ ಕೆ.ಜಿ ಖರ್ಜೂರಕ್ಕೆ 200 ರೂಪಾಯಿಗೆ ಮಾರಾಟವಾಗುತ್ತಿದೆ. ಇದ್ರಿಂದ ರೈತನ ಮೊಗದಲ್ಲಿ ಸಂತಸ ಮೂಡಿದ್ರೆ, ಮತ್ತೊಂದೆಡೆ ಸ್ಥಳೀಯರು ಕೂಡ ಬಂದು ಸಂತಸಗೊಂಡಿದ್ದಾರೆ. 

BIG 3 Heroes:ಇಳಿವಯಸ್ಸಿನಲ್ಲೂ ಸ್ವಾವಲಂಬಿ ಬದುಕು ಕಟ್ಟಿಕೊಂಡ ಗಟ್ಟಿಗಿತ್ತಿ ಈರಮ್ಮಜ್ಜಿ...!

ಉಷ್ಣವಲಯದಲ್ಲಿ ಹೇರಳವಾಗಿ ಬೆಳೆಯಾಗುವ ಖರ್ಜೂರವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಬೆಳೆಯಲು ಆರಂಭಿಸಿದ್ದಾರೆ. ಇದ್ರಿಂದ ರೈತರಿಗೆ ಲಾಭ ಕೂಡ ಸಿಗುತ್ತಿದ್ದು, ಕೈತುಂಬ ಕಾಸು ಸಂಪಾದನೆ ಆಗುತ್ತಿದೆ. ಈ ಭಾಗದ  ಜನರಿಗೂ ಕೂಡ ಖರ್ಜೂರ ಹಣ್ಣಿನ ಸವಿರುಚಿ ಸವಿಯುವ ಭಾಗ್ಯ ದೊರೆತಿದೆ.