ತ್ರಿಭುಜಾಕೃತಿಯಲ್ಲಿ ಹೊಸ ಶಕ್ತಿಸೌಧ: ಹೀಗಿರಲಿದೆ ನೂತನ ಸಂಸತ್ ಭವನ!
ವಿಶ್ವ ದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಈ ಪ್ರಜಾಪ್ರಭುತ್ವದ ದೇಗುಲವೇ ನಮ್ಮ ಹೆಮ್ಮೆಯ ಸಂಸತ್ತು ಭವನ. ಇಲ್ಲೇ ಜನ ಸಾಮಾನ್ಯರ ಸಮಸ್ಯೆಗಳ ಬಗ್ಗೆ ಚರ್ಚೆ, ದೇಶದ ಭವಿಷ್ಯದ ಯೋಜನೆ ಹೀಗೆ ಎಲ್ಲವೂ ಇಲ್ಲೇ ಚರ್ಚೆ ನಡೆಯುವುದು. ಸದ್ಯಕ್ಕಿರುವ ಸಂಸತ್ತು ಬರೋಬ್ಬರಿ ನೂರು ವರ್ಷಗಳ ಇತಿಹಾಸ ಹೊಂದಿದೆ.
ನವದೆಹಲಿ(ಡಿ.10): ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಈ ಪ್ರಜಾಪ್ರಭುತ್ವದ ದೇಗುಲವೇ ನಮ್ಮ ಹೆಮ್ಮೆಯ ಸಂಸತ್ತು ಭವನ. ಇಲ್ಲೇ ಜನ ಸಾಮಾನ್ಯರ ಸಮಸ್ಯೆಗಳ ಬಗ್ಗೆ ಚರ್ಚೆ, ದೇಶದ ಭವಿಷ್ಯದ ಯೋಜನೆ ಹೀಗೆ ಎಲ್ಲವೂ ಇಲ್ಲೇ ಚರ್ಚೆ ನಡೆಯುವುದು. ಸದ್ಯಕ್ಕಿರುವ ಸಂಸತ್ತು ಬರೋಬ್ಬರಿ ನೂರು ವರ್ಷಗಳ ಇತಿಹಾಸ ಹೊಂದಿದೆ.
ಹೊಸ ಸಂಸತ್ ಭವನಕ್ಕೆ ಭೂಮಿ ಪೂಜೆ: ಶೃಂಗೇರಿ ಪುರೋಹಿತರಿಂದ ಪೂಜೆ, ಇಲ್ಲಿವೆ ಫೋಟೋಸ್!
ಕಳೆದ ನೂರು ವರ್ಷಗಳಲ್ಲಿ ಈ ಸಂಸತ್ತನ್ನು ಅವಶ್ಯಕತೆಯನುಸಾರ ಇದನ್ನು ಹಲವಾರು ಬಾರಿ ದುರಸ್ಥಿ ಹಾಗೂ ನವೀಕರಿಸಲಾಗಿದೆ. ಆದರೀಗ ಹಳೆ ಕಟ್ಟಡದಲ್ಲಿ ಆಸನಗಳ ಕ್ಷಮತೆ ಹೆಚ್ಚಿಸುವುದು ಅಸಾಧ್ಯ. ಹೀಗಾಗೇ ಹೊಸದಾಗಿ ನಿರ್ಮಾಣಗೊಳ್ಳುವ ನೂತನ ಸಂಸತ್ ಕಟ್ಟಡ ಅವಶ್ಯಕತೆ ಮಾತ್ರವಲ್ಲ ಬದಲಾಗಿ 21ನೇ ಶತಮಾನದ ಹೊಸ ಹಾಗೂ ಆತ್ಮನಿರ್ಭರ ಭಾರತಕ್ಕೆ ಅಗತ್ಯವಾಗಿದೆ.
ಹೊಸ ಸಂಸತ್ ಭವನ ಕಟ್ಟಡಕ್ಕೆ ಇಂದು ಶಿಲಾನ್ಯಾಸ; ಹೀಗಿರಲಿದೆ ಒಳಗೂ, ಹೊರಗೂ ವಿನ್ಯಾಸ!
ಏಕ ಭಾರತ ಶ್ರೇಷ್ಠ ಭಾರತ ಎಂಬ ಧ್ಯೇಯ ವಾಕ್ಯದೊಂದಿಗೆ ನಿರ್ಮಾಣಗೊಳ್ಳುತ್ತಿರುವ ನೂತನ ಸಂಸತ್ ಭವನ 64,500 ಚದರ ವ್ಯಾಪ್ತಿಯಲ್ಲಿ ನೂತನ ಕಟ್ಟಡ ನಿರ್ಮಾಣಗೊಳ್ಳಲಿದೆ. ತ್ರಿಭುಜಾಕೃತಿಯಲ್ಲಿ ಹೊಸ ನಿರ್ಮಾಣವಾಗುತ್ತಿರುವ ಶಕ್ತಿಸೌಧ 2022ರಲ್ಲಿ ತಲೆ ಎತ್ತಲಿದೆ. ಅಂದಾಜು 971 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಕಟ್ಟಡ ಭೂಕಂಪಕ್ಕೂ ಜಗ್ಗದ ಅತ್ಯಾಧುನಿಕ ಸೌಲಭ್ಯದೊಂದಿಗೆ ತಲೆ ಎತ್ತಲಿದೆ.