Asianet Suvarna News Asianet Suvarna News

ಹೊಸ ಮಾದರಿಯ ಕೊರೋನಾ: ರಾಜ್ಯದಲ್ಲಿ ಶಾಲೆ ಮರು ಆರಂಭ ಬೇಡ ಎಂದ ಸಚಿವ!

ಬ್ರಿಟನ್‌ನಲ್ಲಿ ಹೊಸ ಮಾದರಿಯ ಕೊರೋನಾ ಪತ್ತೆಯಾಗಿದ್ದು, ಸರ್ಕಾರ ಹಾಗೂ ಜನರನ್ನು ಆತಂಕಕ್ಕೀಡು ಮಾಡಿದೆ. ಹೀಗಿರುವಾಗಲೇ ಸಚಿವ ನಾಗೇಶ್ ಸದ್ಯಕ್ಕೆ ಶಾಲೆಗಳನ್ನು ತೆರೆಯದಿರುವುದೇ ಉತ್ತಮ ಎಂದಿದ್ದಾರೆ.

First Published Dec 22, 2020, 5:46 PM IST | Last Updated Dec 22, 2020, 5:47 PM IST

ಬೆಂಗಳೂರು(ಡಿ.22): ಬ್ರಿಟನ್‌ನಲ್ಲಿ ಹೊಸ ಮಾದರಿಯ ಕೊರೋನಾ ಪತ್ತೆಯಾಗಿದ್ದು, ಸರ್ಕಾರ ಹಾಗೂ ಜನರನ್ನು ಆತಂಕಕ್ಕೀಡು ಮಾಡಿದೆ. ಹೀಗಿರುವಾಗಲೇ ಸಚಿವ ನಾಗೇಶ್ ಸದ್ಯಕ್ಕೆ ಶಾಲೆಗಳನ್ನು ತೆರೆಯದಿರುವುದೇ ಉತ್ತಮ ಎಂದಿದ್ದಾರೆ.

ನನಗೆ ಆರೋಗ್ಯ ಸಮಸ್ಯೆ ಇಲ್ಲ; ಲಂಡನ್‌ನಿಂದ ಹಿಂದಿರುಗಿದ ಹರ್ಷಿಕಾ ಸ್ಪಷ್ಟನೆ!

ಕಳೆದೊಂದು ವರ್ಷದ ಹಿಂದೆ ಎಂಟ್ರಿ ಕೊಟ್ಟ ಕೊರೋನಾ ಮಹಾಮಾರಿ ತಗ್ಗುತ್ತಿತ್ತು. ಹೀಗಿರುವಾಗ ಸರ್ಕಾರ ಸಮಾಲೋಚನೆ ನಡೆಸಿ ಶಾಲೆ ಮರು ಆರಂಭಿಸಲು ನಿರ್ಧರಿಸಿತ್ತು. ಪೋಷಕರೂ ಇದಕ್ಕೆ ಬಹುತೇಕ ಒಪ್ಪಿದ್ದರು. ಆದರೀಗ ಶಾಲೆ ಮರು ಆರಂಭವಾಗುವ ಹಂತದಲ್ಲೇ ಈ ಹೊಸ ಮಾದರಿಯ ಕೊರೋನಾ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ.

ಲಸಿಕೆ ಕೊಟ್ಟರೂ ನಿಲ್ಲುತ್ತಿಲ್ಲ ವೈರಸ್ ವ್ಯೂಹ, ವಿಜ್ಞಾನಿಗಳೂ ಶಾಕ್!

ಅಲ್ಲದೇ ಅಬಕಾರಿ ಸಚಿವ ನಾಗೇಶ್ ಕೂಡಾ ಶಾಲೆಗಳನ್ನು ಮರು ಆರಂಭಿಸುವ ಅಭಿಪ್ರಾಯವನ್ನು ನಿರಾಕರಿಸಿದ್ದಾರೆ. 

Video Top Stories