ಟಿ20 ಕ್ರಿಕೆಟ್‌ನಲ್ಲಿ 6 ವಿಕೆಟ್ ಪಡೆದ ಟಾಪ್ 3 ಬೌಲರ್‌ಗಳಿವರು..!

ಭಾನುವಾರ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬಹುತೇಕ ಭಾರತ ಸೋಲಿನ ಭೀತಿಯಲ್ಲಿತ್ತು. ಆದರೆ ದೀಪಕ್ ಚಹರ್ ಮಿಂಚಿನ ದಾಳಿ ನಡೆಸುವ ಮೂಲಕ ಪ್ರವಾಸಿ ತಂಡವನ್ನು ತಬ್ಬಿಬ್ಬು ಮಾಡಿದರು, ಮಾತ್ರವಲ್ಲದೇ ಹ್ಯಾಟ್ರಿಕ್ ವಿಕೆಟ್ ಜತೆಗೆ ಟೀಂ ಇಂಡಿಯಾ ಸರಣಿ ಕೈವಶ ಮಾಡಿಕೊಳ್ಳುವಲ್ಲಿ ಚಹರ್ ಪ್ರಮುಖ ಪಾತ್ರವಹಿಸಿದ್ದರು.

First Published Nov 12, 2019, 5:28 PM IST | Last Updated Nov 12, 2019, 5:28 PM IST

ಬೆಂಗಳೂರು[ನ.12]: ಚುಟುಕು ಕ್ರಿಕೆಟ್ ಅಂದರೆ ಹೇಳಬೇಕೇ..? ಅಲ್ಲೇನಿದ್ದರೂ ಬ್ಯಾಟ್ಸ್’ಮನ್’ಗಳದ್ದೇ ಆರ್ಭಟ. ಹೊಡಿಬಡಿಯಾಟದಲ್ಲಿ ಬೌಲರ್’ಗಳ ಮಾರಣಹೋಮ ನಡೆಯುತ್ತಲೇ ಇರುತ್ತದೆ. ಇವೆಲ್ಲವುಗಳಿಗೆ ಅಪವಾದ ಎಂಬಂತೆ ಒಮ್ಮೊಮ್ಮೆ ಬೌಲರ್’ಗಳು ಮಿಂಚುತ್ತಾರೆ.

ICC ಟಿ20 ರ‍್ಯಾಂಕಿಂಗ್ ಪ್ರಕಟ: ಹ್ಯಾಟ್ರಿಕ್ ವೀರ ದೀಪಕ್ ಚಹರ್’ಗೆ ಬಂಪರ್..!

ಹೌದು, ಭಾನುವಾರ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬಹುತೇಕ ಭಾರತ ಸೋಲಿನ ಭೀತಿಯಲ್ಲಿತ್ತು. ಆದರೆ ದೀಪಕ್ ಚಹರ್ ಮಿಂಚಿನ ದಾಳಿ ನಡೆಸುವ ಮೂಲಕ ಪ್ರವಾಸಿ ತಂಡವನ್ನು ತಬ್ಬಿಬ್ಬು ಮಾಡಿದರು, ಮಾತ್ರವಲ್ಲದೇ ಹ್ಯಾಟ್ರಿಕ್ ವಿಕೆಟ್ ಜತೆಗೆ ಟೀಂ ಇಂಡಿಯಾ ಸರಣಿ ಕೈವಶ ಮಾಡಿಕೊಳ್ಳುವಲ್ಲಿ ಚಹರ್ ಪ್ರಮುಖ ಪಾತ್ರವಹಿಸಿದ್ದರು. ಈ ಪಂದ್ಯದಲ್ಲಿ ಚಹರ್ 6 ವಿಕೆಟ್ ಪಡೆದು ಕುಣಿದು ಕುಪ್ಪಳಿಸಿದರು.

ರಣ್‌ವೀರ್ ನಟರಾಜ್ ಸ್ಟೈಲ್ ’ಗೆ ಸ್ವತಃ ಕಪಿಲ್ ದೇವ್ ಬೋಲ್ಡ್..!

ಆದರೆ, ದೀಪಕ್’ಗಿಂತ ಮೊದಲೇ ಇಬ್ಬರು ಚಾಣಾಕ್ಷ ಬೌಲರ್’ಗಳು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ 6 ವಿಕೆಟ್ ಪಡೆದು ಇತಿಹಾಸ ಬರೆದಿದ್ದಾರೆ. ಅದರಲ್ಲೂ ಒಬ್ಬ ಭಾರತೀಯ ಬೌಲರ್ ಎನ್ನುವುದು ಮತ್ತೊಂದು ವಿಶೇಷ. ಆದರೆ ಮತ್ತೊಬ್ಬ ಬೌಲರ್ ಎರೆಡೆರಡು ಬಾರಿ 6 ವಿಕೆಟ್ ಪಡೆದು ಇತಿಹಾಸ ಬರೆದಿದ್ದಾರೆ. ಅಷ್ಟಕ್ಕೂ ದೀಪಕ್’ಗಿಂತ ಮೊದಲು 6 ವಿಕೆಟ್ ಪಡೆದ ಬೌಲರ್’ಗಳಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...