ಯಾವ ತಂಡವು ಮಾಡದ ದಾಖಲೆ ಇದೀಗ ಟೀಂ ಇಂಡಿಯಾ ತೆಕ್ಕೆಗೆ..!
ಭಾರತ ತಂಡದ ಮೂವರು ವೇಗಿಗಳು ವರ್ಷವೊಂದರಲ್ಲೇ ಅಪರೂಪದ ದಾಖಲೆ ಬರೆದಿದ್ದಾರೆ. ಈ ದಾಖಲೆಯನ್ನು ನಿರ್ಮಿಸಲು ಜಗತ್ತಿನ ಬೇರೆ ಯಾವ ತಂಡಕ್ಕೂ ಸಾಧ್ಯವಾಗಿಲ್ಲ. ಅಂತಹ ದಾಖಲೆ ಇದೀಗ ಭಾರತದ ಪಾಲಾಗಿದೆ.
ಬೆಂಗಳೂರು[ನ.12]: ಟೀಂ ಇಂಡಿಯಾ ವೇಗಿ ದೀಪಕ್ ಚಹರ್ ಬಾಂಗ್ಲಾದೇಶ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ, ಚುಟುಕು ಕ್ರಿಕೆಟ್’ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎನಿಸಿದರು. ಇದಷ್ಟೇ ಅಲ್ಲದೇ ಅವರಿಗೆ ಅರಿವಿಲ್ಲದೆಯೇ ಅಪರೂಪದಲ್ಲೇ ಅಪರೂಪದ ದಾಖಲೆಗೆ ತಮ್ಮ ಹೆಸರನ್ನು ಸೇರಿಸಿಕೊಂಡಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗುವ ಇಬ್ಬರು ವಿಕೆಟ್ ಕೀಪರ್ ಯಾರು..?
ಹೌದು, ಟೀಂ ಇಂಡಿಯಾದ ಮೂವರು ವೇಗಿಗಳು ವರ್ಷವೊಂದರಲ್ಲೇ ಅಪರೂಪದ ದಾಖಲೆ ಬರೆದಿದ್ದಾರೆ. ಈ ದಾಖಲೆಯನ್ನು ನಿರ್ಮಿಸಲು ಜಗತ್ತಿನ ಬೇರೆ ಯಾವ ತಂಡಕ್ಕೂ ಸಾಧ್ಯವಾಗಿಲ್ಲ. ಅಂತಹ ದಾಖಲೆ ಇದೀಗ ಭಾರತದ ಪಾಲಾಗಿದೆ.
ICC ಟಿ20 ರ‍್ಯಾಂಕಿಂಗ್ ಪ್ರಕಟ: ಹ್ಯಾಟ್ರಿಕ್ ವೀರ ದೀಪಕ್ ಚಹರ್’ಗೆ ಬಂಪರ್..!
ಅರೇ ಅಷ್ಟಕ್ಕೂ ಭಾರತದ ವೇಗದ ಬೌಲರ್ ಮಾಡಿರುವ ಆ ದಾಖಲೆ ಯಾವುದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...