Asianet Suvarna News Asianet Suvarna News

ಟೀಂ ಇಂಡಿಯಾವನ್ನು ಸೋಲಿನಿಂದ ಪಾರು ಮಾಡಿದ ಆಪತ್ಭಾಂದವನೀತ!

ಒಂದು ಹಂತದಲ್ಲಿ ರೋಹಿತ್, ರಾಹುಲ್ ಹಾಗೂ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಭಾರತ ಸುಲಭ ಜಯ ದಾಖಲಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಡೆತ್ ಒವರ್’ನಲ್ಲಿ ಕೊಹ್ಲಿ ವಿಕೆಟ್ ಪತನವಾಗುತ್ತಿದ್ದಂತೆ ಟೀಂ ಇಂಡಿಯಾ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು. 

First Published Dec 23, 2019, 3:10 PM IST | Last Updated Dec 23, 2019, 3:10 PM IST

ಕಟಕ್[ಡಿ.23]: ಭಾರತ-ವೆಸ್ಟ್ ಇಂಡೀಸ್ ನಡುವಿನ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಭರ್ಜರಿ ಜಯ ದಾಖಲಿಸಿತು. ಇದರೊಂದಿಗೆ 2-1 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿತು. 

ಕಟಕ್‌ನಲ್ಲಿ ವಿಂಡೀಸ್ ಉಡೀಸ್; ಏಕದಿನ ಸರಣಿ ಗೆದ್ದು ದಾಖಲೆ ಬರೆದ ಭಾರತ!

ಆದರೆ ಈ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ಒಂದು ಹಂತದಲ್ಲಿ ರೋಹಿತ್, ರಾಹುಲ್ ಹಾಗೂ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಭಾರತ ಸುಲಭ ಜಯ ದಾಖಲಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಡೆತ್ ಒವರ್’ನಲ್ಲಿ ಕೊಹ್ಲಿ ವಿಕೆಟ್ ಪತನವಾಗುತ್ತಿದ್ದಂತೆ ಟೀಂ ಇಂಡಿಯಾ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು. 

300+ ಚೇಸಿಂಗ್; ಟೀಂ ಇಂಡಿಯಾ ನಂ.1!

ಹೌದು, ಈ ಸಂದರ್ಭದಲ್ಲಿ ತಂಡವನ್ನು ಕಾಪಾಡಿದ್ದು ರವೀಂದ್ರ ಜಡೇಜಾ. ಜಡ್ಡು ಆಟ ಹೇಗಿತ್ತು ಅನ್ನೋದನ್ನು ನೀವೂ ಒಮ್ಮೆ ನೋಡಿ.

Video Top Stories