Asianet Suvarna News Asianet Suvarna News

ಇಂಡೋ-ಕಿವೀಸ್ ಫೈಟ್: ಯಾರ ಮಡಿಲಿಗೆ ಟೆಸ್ಟ್ ಸರಣಿ..?

ತವರಿನಲ್ಲಿ ಬಲಿಷ್ಠ ಟೆಸ್ಟ್ ತಂಡ ಎನಿಸಿರುವ ಕಿವೀಸ್‌ ವಿರುದ್ಧ ಭಾರತ ಯಾವ ರೀತಿಯ ಪ್ರದರ್ಶನ ನೀಡಲಿದೆ ಎನ್ನುವ ಕುತೂಹಲ ಜೋರಾಗಿದೆ. ಹೀಗಾಗಿ ಟೆಸ್ಟ್ ಸರಣಿ ಯಾರ ಪಾಲಾಗಲಿದೆ ಎನ್ನುವ ಕುತೂಹಲ ಜೋರಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ... 

ವೆಲ್ಲಿಂಗ್ಟನ್(ಫೆ.20): ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಶುಕ್ರವಾರ(ಫೆ.21) ಮುಂಜಾನೆ ಆರಂಭವಾಗಲಿದೆ. 2 ಪಂದ್ಯಗಳ ಸರಣಿಯ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಶುಭಾರಂಭ ಮಾಡಲು ಉಭಯ ತಂಡಗಳು ತುದಿಗಾಲಿನಲ್ಲಿ ನಿಂತಿವೆ.

ಕಿವೀಸ್‌ ಟೆಸ್ಟ್‌ಗೆ ಟೀಂ ಇಂಡಿಯಾ ರೆಡಿ; ಯಾರಿಗೆಲ್ಲಾ ಸಿಗಲಿದೆ ಚಾನ್ಸ್?

ಟೆಸ್ಟ್ ಚಾಂಪಿಯನ್‌ಶಿಪ್ ಆರಂಭವಾದಾಗಿನಿಂದ ಅಜೇಯವಾಗಿ ಮುನ್ನುಗ್ಗುತ್ತಿರುವ ಟೀಂ ಇಂಡಿಯಾಗೆ ಪ್ರಬಲ ಪೈಪೋಟಿ ನೀಡಲು ಕೇನ್ ವಿಲಿಯಮ್ಸನ್ ಪಡೆ ಸಜ್ಜಾಗಿದೆ. ಇನ್ನು ತವರಿನಲ್ಲಿ ಬಲಿಷ್ಠ ಟೆಸ್ಟ್ ತಂಡ ಎನಿಸಿರುವ ಕಿವೀಸ್‌ ವಿರುದ್ಧ ಭಾರತ ಯಾವ ರೀತಿಯ ಪ್ರದರ್ಶನ ನೀಡಲಿದೆ ಎನ್ನುವ ಕುತೂಹಲ ಜೋರಾಗಿದೆ.

52 ವರ್ಷಗಳ ಹಳೇ ದಾಖಲೆ ಸರಿಗಟ್ಟಲು ಸಜ್ಜಾದ ವಿರಾಟ್!

ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ್ದ ಭಾರತಕ್ಕೆ ಏಕದಿನ ಸರಣಿಯಲ್ಲಿ ಕಿವೀಸ್ ತಿರುಗೇಟು ನೀಡಿತ್ತು. ಹೀಗಾಗಿ ಟೆಸ್ಟ್ ಸರಣಿ ಯಾರ ಪಾಲಾಗಲಿದೆ ಎನ್ನುವ ಕುತೂಹಲ ಜೋರಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ... 
 

Video Top Stories