ರಾಜ್‌ಕೋಟ್ ಟಿ20 ಈ ಇಬ್ಬರಲ್ಲಿ ಒಬ್ಬರಿಗಾದ್ರೂ ಸಿಗುತ್ತಾ ಚಾನ್ಸ್..?

ಉಭಯ ತಂಡಗಳ ನಡುವಿನ ಮೊದಲ ಟಿ20 ಪಂದ್ಯವನ್ನು ಬಾಂಗ್ಲಾದೇಶ 7 ವಿಕೆಟ್ ಗಳ ಅಂತರದಲ್ಲಿ ಗೆಲುವಿನ ನಗೆ ಬೀರಿತ್ತು. ಈ ಮೂಲಕ ಭಾರತ ವಿರುದ್ಧ ಬರೋಬ್ಬರಿ 8 ಸೋಲುಗಳ ಬಳಿಕ ಬಾಂಗ್ಲಾ ಪಡೆ ಕೊನೆಗೂ ಗೆಲುವಿನ ನಗೆ ಬೀರಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್ ವೈಫಲ್ಯಕ್ಕೆ ಭಾರತ ಬೆಲೆ ತೆತ್ತಿತ್ತು.

First Published Nov 7, 2019, 3:29 PM IST | Last Updated Nov 7, 2019, 3:29 PM IST

ರಾಜ್‌ಕೋಟ್[ನ.07]: ಭಾರತ-ಬಾಂಗ್ಲಾದೇಶ ನಡುವಿನ ಎರಡನೇ ಟಿ20 ಪಂದ್ಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಪಂದ್ಯದ ಸೋಲಿನ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಸಜ್ಜಾಗಿದೆ.

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಲು ರೋಹಿತ್ ರೆಡಿ

ಹೌದು, ಉಭಯ ತಂಡಗಳ ನಡುವಿನ ಮೊದಲ ಟಿ20 ಪಂದ್ಯವನ್ನು ಬಾಂಗ್ಲಾದೇಶ 7 ವಿಕೆಟ್ ಗಳ ಅಂತರದಲ್ಲಿ ಗೆಲುವಿನ ನಗೆ ಬೀರಿತ್ತು. ಈ ಮೂಲಕ ಭಾರತ ವಿರುದ್ಧ ಬರೋಬ್ಬರಿ 8 ಸೋಲುಗಳ ಬಳಿಕ ಬಾಂಗ್ಲಾ ಪಡೆ ಕೊನೆಗೂ ಗೆಲುವಿನ ನಗೆ ಬೀರಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್ ವೈಫಲ್ಯಕ್ಕೆ ಭಾರತ ಬೆಲೆ ತೆತ್ತಿತ್ತು.

ರಾಜ್‌ಕೋಟ್‌ನಲ್ಲಿ ಮಳೆ ಇಲ್ಲವೇ ರನ್‌ ಮಳೆ!

ಇದೀಗ ಟೀಂ ಇಂಡಿಯಾ ಎರಡನೇ ಟಿ20 ಪಂದ್ಯಕ್ಕೆ ಕೆಲ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಮೊದಲ ಪಂದ್ಯದಲ್ಲಿ ಬೆಂಚ್ ಕಾಯಿಸಿದ್ದ ಸಂಜು ಸ್ಯಾಮ್ಸನ್ ಹಾಗೂ ಮನೀಶ್ ಪಾಂಡೆ ಇಬ್ಬರಲ್ಲಿ ಯಾರಿಗೆ ಚಾನ್ಸ್ ಸಿಗಬಹುದು ಎನ್ನುವುದು ಸದ್ಯದ ಕುತೂಹಲ.