ಸಿದ್ದರಾಮಯ್ಯ ಹೋದ ದಾರಿಗೆ ‘ಸಂಕ’ವಿಲ್ಲ; ಸಂತ್ರಸ್ತರ ಭೇಟಿ ಸಾಧ್ಯವಾಗಿಲ್ಲ!
ಕಳೆದೆರಡು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ಬಾಗಲಕೋಟೆ ಜಿಲ್ಲೆ ಸಮುದ್ರವಾಗಿ ಪರಿವರ್ತನೆಯಾಗಿದೆ. ಸಂತ್ರಸ್ತರನ್ನು ಸಂತೈಸಲು ತೆರಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಖುದ್ದು ಹೋಗುವ ದಾರಿಗೆ ಸಂಕವಿಲ್ಲದೆ ಪರದಾಡಿದ ಘಟನೆ ನಡೆದಿದೆ.
ಬಾಗಲಕೋಟೆ (ಅ.22): ಕಳೆದೆರಡು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ಬಾಗಲಕೋಟೆ ಜಿಲ್ಲೆ ಸಮುದ್ರವಾಗಿ ಪರಿವರ್ತನೆಯಾಗಿದೆ. ಸಂತ್ರಸ್ತರನ್ನು ಸಂತೈಸಲು ತೆರಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಖುದ್ದು ಹೋಗುವ ದಾರಿಗೆ ಸಂಕವಿಲ್ಲದೆ ಪರದಾಡಿದ ಘಟನೆ ನಡೆದಿದೆ.
ಬಾದಾಮಿ ಶಾಸಕರೂ ಆಗಿರುವ ಸಿದ್ದರಾಮಯ್ಯ, ನೆರೆ ಸಂತ್ರಸ್ತರನ್ನು ಭೆಟಿಯಾಗಲು ಚೊಳಚಗುಡ್ಡ ಸೇತುವೆ ಮೂಲಕ ಸಾಗಬೇಕಾಗಿತ್ತು. ಆದರೆ ಆ ಸೇತುವೆ ಮುಳುಗಡೆಯಾದ ಹಿನ್ನೆಲೆಯಲ್ಲಿ ಸಾಧ್ಯವಾಗಲಿಲ್ಲ.
ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಮೂರ್ನಾಲ್ಕು ದಿನಗಳ ಕಾಲ ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.