ನಟಿ, ನಿರ್ಮಾಪಕಿ, ನಿರ್ದೇಶಕಿ ಜಯಶ್ರೀ ರಾಜ್ ಪತಿ ಯಾರ್ ಗೊತ್ತಾ? ಇವರು ಕೂಡ ನಟ!
ಕನ್ನಡ ಸೀರಿಯಲ್ ಗಳ ಜನಪ್ರಿಯ ನಟಿ, ನಿರ್ಮಾಪಕಿ, ನಿರ್ದೇಶಕಿ ಜಯಶ್ರೀ ರಾಜ್ ತಮ್ಮ ಗಂಡನ ಜೊತೆಗಿನ ಮುದ್ದಾದ ವಿಡಿಯೋ ಶೇರ್ ಮಾಡುವ ಮೂಲಕ, ತಮ್ಮ ಪ್ರೀತಿಯನ್ನು ಹೊರ ಹಾಕಿದ್ದಾರೆ.

ಕನ್ನಡ ಕಿರುತೆರೆ ಪ್ರಿಯರಿಗೆ ಜಯಶ್ರೀ ಬಿ ರಾಜ್ ಹೊಸಬರು ಅಲ್ವೇ ಅಲ್ಲ. ಯಾಕಂದ್ರೆ ಹಲವಾರು ವರ್ಷಗಳಿಂದ ಕಿರುತೆರೆಯಲ್ಲಿ ತಮ್ಮ ನಟನೆ, ನಿರೂಪಣೆ ಮೂಲಕ ರಂಜಿಸಿಕೊಂಡು ಬಂದಿದ್ದಾರೆ ಜಯಶ್ರೀ ರಾಜ್. ಇವರು ನಟಿಯೂ ಹೌದು, ನಿರೂಪಕಿಯೂ ಹೌದು, ನಿರ್ಮಾಪಕಿಯೂ ಹೌದು ಜೊತೆಗೆ ನಿರ್ದೇಶಕಿಯೂ ಹೌದು. ಎಲ್ಲಾ ವಿಧದಲ್ಲೂ ಕನ್ನಡಿಗರ ಮನ ಗೆಲ್ಲುವ ಮೂಲಕ ಇಂದಿಗೂ ಎವರ್ ಗ್ರೀನ್ ಸುಂದರಿಯಾಗಿ ಕಂಗೊಳಿಸ್ತಿದ್ದಾರೆ ಜಯಶ್ರೀ ರಾಜ್ (Jayashree B Raj).
ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡ 'ಮುಕ್ತ ಮುಕ್ತ' ಜಯಶ್ರೀ ರಾಜ್ ಈಗ ಏನ್ಮಾಡ್ತಿದ್ದಾರೆ?
ಜಯಶ್ರೀ ಇತ್ತೀಚೆನೆ ಕನ್ನಡದಲ್ಲಿ ಕಾಣಿಸಿಕೊಳ್ಳೊದು ತುಂಬಾನೆ ಕಡಿಮೆ. ಕಾರಣ ಅವರು ತೆಲುಗಿನ ಎರಡು ಸೀರಿಯಲ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿ ಕೊನೆಯದಾಗಿ ಅವರು ನಟಿಸಿದ್ದು ಚುಕ್ಕಿ ತಾರೆ ಸೀರಿಯಲ್ ನಲ್ಲಿ, ಈ ಧಾರಾವಾಹಿಯಲ್ಲಿ ಯಶೋಧಾ ಕರ್ವೆ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಆ ಪಾತ್ರದ ತೂಕ ಹೆಚ್ಚಿಸಿದ ಕೀರ್ತಿ ಜಯಶ್ರೀಯವರದ್ದು, ಆ ಕೋಪ, ಬಡವರನ್ನು ಕಂಡ್ರೆ ಕೋಪ, ದರ್ಪ ಇವೆಲ್ಲವೂ ಜನರಿಗೆ ಇಷ್ಟವಾಗಿತ್ತು, ನೆಗೆಟಿವ್ ಅಲ್ಲದ ನೆಗೆಟಿವ್ ಶೇಡ್ (negative shade) ಹೊಂದಿರುವ ಈ ಪಾತ್ರವೇ ಸೀರಿಯಲ್ ಮುಖ್ಯ ಆಕರ್ಷಣೆಯಾಗಿತ್ತು. ಅದಾದ ನಂತರ ಬೇರೆ ಸೀರಿಯಲ್ ಗಳಲ್ಲಿ ಇವರು ಕಾಣಿಸಿಕೊಂಡಿಲ್ಲ. ಸದ್ಯ ತೆಲುಗಿನ ‘ಪಡಮಟಿ ಸಂಧ್ಯಾರಾಗಂ’ ಮತ್ತು ‘ಮಲ್ಲಿ’ ಎನ್ನುವ ಧಾರವಾಹಿಗಳಲ್ಲಿ ನಟಿಸುತ್ತಿದ್ದು, ಪಡಮಟಿ ಸಂಧ್ಯಾರಾಗಂ ಝೀ ತೆಲುಗಿನ (telugu serials) ಸೂಪರ್ ಹಿಟ್ ಸೀರಿಯಲ್ ಗಳಲ್ಲಿ ಒಂದಾಗಿದೆ. ಸದಾ ಬ್ಯುಸಿಯಾಗಿರೋದಕ್ಕೆ ಇಷ್ಟಪಡುವ ಈ ನಟಿ ಸದ್ಯ ಬೆಂಗಳೂರು, ಹೈದರಾಬಾದ್ ಎಂದು ಶೂಟಿಂಗ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ.
ಚಿಕ್ಕ ವಯಸ್ಸಲ್ಲೇ ಮದುವೆಯಾಗಿದ್ದ ಜಯಶ್ರೀ
14ನೇ ವಯಸ್ಸಿನಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡ ಜಯಶ್ರೀ, ಬಳಿಕ ಟಿ.ಎನ್ ಸೀತಾರಾಮ್ (T.N Seetharam) ನಿರ್ದೇಶನದ ‘ಕಥೆಗಾರ’ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ‘ಮಾಯಾಮೃಗ’, ‘ಜನನಿ’, ‘ಸಮಾಗಮ’, ‘ಸಹನ’, ‘ಭಾರ್ಗವಿ’, ‘ಪುಣ್ಯಕೋಟಿ’, ‘ರಥಸಪ್ತಮಿ’ ಸೇರಿದಂತೆ ಐವತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆ ಜತೆಗೆ ‘ಅರಮನೆ’ ಮತ್ತು ‘ಕಸ್ತೂರಿ ನಿವಾಸ’ ಧಾರಾವಾಹಿಗಳ ನಿರ್ಮಾಣ ಕೂಡ ಮಾಡಿದ್ದಾರೆ. ಜೊತೆಗೆ ಬಿಗ್ ಬಾಸ್ ಕನ್ನಡದಲ್ಲೂ (Bigg Boss Kannada) ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಇದೆಲ್ಲದಕ್ಕೂ ಇವರಿಗೆ ಬೆನ್ನೆಲುಬಾಗಿ ನಿಂತವರು ಇವರ ಪತಿ ಚಂದ್ರಶೇಖರ್.
ತೆಲುಗು ನಾಡಿನಲ್ಲಿ ಕನ್ನಡಿಗರದ್ದೇ ಹವಾ… ಝೀ ಕುಟುಂಬಂ ಅವಾರ್ಡ್ಸ್ ನಲ್ಲಿ ಸಾಲು ಸಾಲು ಪ್ರಶಸ್ತಿ ಗೆದ್ದ ಕನ್ನಡ ತಾರೆಯರು
ಯಾರಪ್ಪಾ ಈ ಚಂದ್ರಶೇಖರ್ (Chandrashekhar) ಅಂತ ಯೋಚನೆ ಮಾಡ್ತಿದ್ದೀರಾ? ಇವರು ಕೂಡ ಒಂದು ಕಾಲದಲ್ಲಿ ಸೀರಿಯಲ್ ಗಳಲ್ಲಿ ಸಹ ನಟನಾಗಿ, ವಿಲನ್ ಆಗಿ ಕಾಣಿಸಿಕೊಂಡವರು. ಸೀರಿಯಲ್ ಮೂಲಕ ಇವರಿಗೆ ಸಿಕ್ಕ ಹೆಸರು ರಾಕೇಶ್ ಚಂದ್ರು, ಸೀರಿಯಲ್ ಒಂದರಲ್ಲಿ ಇವರ ಹೆಸರು ರಾಕೇಶ್ ಆಗಿದ್ದರಿಂದ ಜನ ಅವರನ್ನು ಅದೇ ಹೆಸರಲ್ಲಿ ಗುರುತಿಸಲು ಆರಂಭಿಸಿದರು. ಆದರೆ ಅವರ ನಿಜವಾದ ಹೆಸರು ಚಂದ್ರ ಶೇಖರ್. ಜಯಶ್ರೀ ಅವರ ಪ್ರೀತಿಯ ಚಿನ್ನು. ಹೆಂಡತಿಗೆ ಬೆನ್ನೆಲುಬಾಗಿ ನಿಂತು, ಧಾರಾವಾಹಿಗಳಾ ನಿರ್ಮಾಣ ಕೂಡ ಮಾಡಿದ್ದಾರೆ. ಇದೀಗ ಜಯಶ್ರೀ ತಮ್ಮ ಪತಿಯ ಜೊತೆಗಿನ ಸ್ಪೆಷಲ್ ವಿಡೀಯೋ ಒಂದನ್ನು ಶೇರ್ ಮಾಡಿ My strength..... my hubby....who gives me energy to be strong......ಎಂದು ಬರೆದು ಕೊಂಡಿದ್ದಾರೆ. ಇವರಿಬ್ಬರ ಮುದ್ದಾದ ಜೋಡಿ ನೋಡಿ, ಅಭಿಮಾನಿಗಳು ಖುಷಿಯಾಗಿರಿ ಎಂದು ಹಾರೈಸಿದ್ದಾರೆ.