ವಿಕ್ರಮ್ ಲ್ಯಾಂಡರ್ ಸಿಗ್ತಿಲ್ಲ: ಚಂದ್ರನ ನೆಲ ತಡಕಾಡಲು ನಾಸಾಗೂ ಆಗ್ತಿಲ್ಲ!
ವಿಕ್ರಮ್ ಲ್ಯಾಂಡರ್ ಸ್ಥಳ ಗುರುತಿಸಲಾಗುತ್ತಿಲ್ಲ ಎಂದ ನಾಸಾ| ಕಿರಿದಾದ ಹಾಗೂ ಬೆಳಕಿರದ ಪ್ರದೇಶದಲ್ಲಿ ವಿಕ್ರಮ್ ಲ್ಯಾಂಡರ್ ಬಿದ್ದಿರುವ ಸಾಧ್ಯತೆ| ನಾಸಾದ LRO ನೌಕೆಯಿಂದಲೂ ವಿಕ್ರಮ್ ಲ್ಯಾಂಡರ್ ಪತ್ತೆಯಾಗುತ್ತಿಲ್ಲ| ಚಂದ್ರನ ದಕ್ಷಿಣ ಧ್ರುವವನ್ನು ತಡಕಾಡಿದ ನಾಸಾಗೆ ಸಿಗದ ವಿಕ್ರಮ್ ಲ್ಯಾಂಡರ್|
ವಾಷಿಂಗ್ಟನ್(ಅ.23): ಇಸ್ರೋದ ವಿಕ್ರಮ್ ಲ್ಯಾಂಡರ್ ಹುಡುಕಿ ಕೊಡುವುದಾಗಿ ಭರವಸೆ ನೀಡಿದ್ದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ವಿಕ್ರಮ್ ಲ್ಯಾಂಡರ್ ಕುರುಹು ದೊರೆಯುತ್ತಿಲ್ಲ ಎಂದು ಕೈಚೆಲ್ಲಿದೆ.
‘ವಿಕ್ರಮ್’ ಇಳಿಯಬೇಕಿದ್ದ ಜಾಗದ ಚಿತ್ರ ಸೆರೆ ಹಿಡಿದ ನಾಸಾ ಆರ್ಬಿಟರ್!
ವಿಕ್ರಮ್ ಲ್ಯಾಂಡರ್ ಬಿದ್ದಿರಬಹುದಾದ ಚಂದ್ರನ ದಕ್ಷಿಣ ಧ್ರುವದಲ್ಲಿ ಪರಿಶೀಲನೆ ನಡೆಸಲಾಗಿದ್ದು, ಲ್ಯಾಂಡರ್ ಪತ್ತೆಯಾಗಿಲ್ಲ ಎಂದು ನಾಸಾ ತಿಳಿಸಿದೆ.
ಇಸ್ರೋ ವಿಕ್ರಮ್ ಲ್ಯಾಂಡರ್ ಎಲ್ಲಿದೆ?: ಈಗಲಾದರೂ ನಾಸಾ ಉತ್ತರ ಕೊಡಲಿದೆ?
ಅತ್ಯಂತ ಕಿರಿದಾದ ಹಾಗೂ ಬೆಳಕು ಬೀಳದ ಪ್ರದೇಶದಲ್ಲಿ ಲ್ಯಾಂಡರ್ ಬಿದ್ದಿರಬಹುದಾದ ಸಾಧ್ಯೆತೆಯಿದ್ದು, ನಮ್ಮ LRO ನೌಕೆಗೂ ಅದು ಬಿದ್ದಿರಬಹುದಾದ ಸ್ಥಳವನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ನಾಸಾ ಹೇಳಿದೆ.
ಲ್ಯಾಂಡಿಗ್ ಹಾರ್ಡ್ ಆಗಿತ್ತು: ವಿಕ್ರಂ ಬಿದ್ದ ಜಾಗ ನಾಸಾ ಕೊನೆಗೂ ಗುರುತಿಸಿತು!
ಈ ಕುರಿತು ಮಾಹಿತಿ ನೀಡಿರುವ LRO ಪ್ರೊಜೆಕ್ಟ್ ಮ್ಯಾನೇಜರ್ ನೋಹಾ ಎಡ್ವರ್ಡ್ ಪೆಟ್ರೋ, ಕಳೆದ ಅಕ್ಟೋಬರ್ 14ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ಹಾದು ಹೋದ LRO ವಿಕ್ರಮ್ ಲ್ಯಾಂಡರ್ ಬಿದ್ದಿರುವ ಸ್ಥಳ ಗುರುತಿಸುವಲ್ಲಿ ವಿಫಲವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿಕ್ರಮ್ ಲ್ಯಾಂಡರ್ ಸಿಗ್ತಿಲ್ಲ: ನಾಸಾ ಪ್ರಯತ್ನ ಬಿಡ್ತಿಲ್ಲ!