Asianet Suvarna News Asianet Suvarna News

ಸೌರಮಂಡಲಕ್ಕೆ ಅತಿಥಿಯಾಗಿ ಬಂದ ಧೂಮಕೇತು: ಆದರೆ ಎಲ್ಲಿಂದ ಬಂತು?

ಸೌರಮಂಡಲಕ್ಕೆ ಬಂದ ವಿಶೇಷ ಅತಿಥಿ| ಅಂತರ್ ತಾರಾವಲಯದಿಂದ ಧೂಮಕೇತುವಿನ ಆಗಮನ| ಹಬಲ್ ಟೆಲಿಸ್ಕೋಪ್ ಗುರುತಿಸಿದ ಕಾಮೆಟ್ 2ಐ/ಬೋರಿಸೊವ್ ಧೂಮಕೇತು| ಧೂಮಕೇತುವಿನ ಬೆಳಕಿನ ಹಿಂದೆ ಕಂಡುಬಂದ ಇಡೀ ಮಿಲ್ಕಿ ವೇ ಗ್ಯಾಲಕ್ಸಿ| ಧೂಮಕೇತು ಪತ್ತೆಹಚ್ಚಿದ ಕ್ರಿಮಿಯಾದ ಹವ್ಯಾಸಿ ಖಗೋಳ ವಿಜ್ಞಾನಿ ಗೆನ್ನಡಿ ಬೊರಿಸೊವ್| ಡಿ.28ಕ್ಕೆ ಭೂಮಿಯಿಂದ ಕೇವಲ 290 ದಶಲಕ್ಷ ಕಿ.ಮೀ. ದೂರದಿಂದ ಹಾದು ಹೋಗಲಿರುವ ಧೂಮಕೇತು|

Hubble Telescope Captures Interstellar Comet 2I/Borisov
Author
Bengaluru, First Published Dec 15, 2019, 6:22 PM IST

ವಾಷಿಂಗ್ಟನ್(ಡಿ.15): ನಮ್ಮ  ಕ್ಷಿರಪಥ ನಕ್ಷತ್ರಪುಂಜದ ಭಾಗವಾದ ಧೂಮಕೇತುವೊಂದು ಸೌರಮಂಡಲದ ಪರಿಧಿಯೊಳಗೆ ಪ್ರವೇಶಿಸಿದ್ದು, ಇದೇ ಮೊದಲ ಬಾರಿಗೆ ಅಂತರ್ ತಾರಾವಲಯದಿಂದ ಧೂಮಕೇತುವೊಂದು ಸೌರಮಂಡಲ ಪ್ರವೇಶಿಸಿದೆ.

ಕಾಮೆಟ್ 2ಐ/ಬೋರಿಸೊವ್ ಎಂಬ ಹೆಸರಿನ ಈ ಧೂಮಕೇತುವನ್ನು ಕಳೆದ ಆಗಸ್ಟ್ 30, 2019 ರಂದು ಕ್ರಿಮಿಯಾದ ಹವ್ಯಾಸಿ ಖಗೋಳ ವಿಜ್ಞಾನಿ ಗೆನ್ನಡಿ ಬೊರಿಸೊವ್ ಕಂಡುಹಿಡಿದರು. ಈ ಹಿನ್ನೆಲೆಯಲ್ಲಿ ಇದಕ್ಕೆ ಬೋರಿಸೊವ್ ಎಂದು ಹೆಸರಿಸಲಾಗಿದೆ.

ಹಬಲ್ ಗುರುತಿಸಿದ ಈ ಗ್ಯಾಲಕ್ಸಿ ಸೂಪರ್ ನೋವಾಗಳ ಮದರ್‌ಲ್ಯಾಂಡ್!

ಕಾಮೆಟ್ 2ಐ/ಬೋರಿಸೊವ್ ಧೂಮಕೇತುವನ್ನು ಹಬಲ್ ಟೆಲಿಸ್ಕೋಪ್ ತನ್ನ ಕ್ಯಾಮರಾಗಳಲ್ಲಿ ಸೆರೆಹಿಡಿದಿದೆ. ಮೊದಲ ಫೋಟೋವನ್ನು 16 ನವೆಂಬರ್ 2019ರಂದು ಕ್ಲಿಕ್ಕಿಸಲಾಗಿದ್ದು, ಧೂಮಕೇತುವಿನ ಬೆಳಕಿನ ಹಿಂದೆ ಇಡೀ ಮಿಲ್ಕಿ ವೇ ಗ್ಯಾಲಕ್ಸಿ ಕಾಣುತ್ತಿರುವುದು ಸ್ಪಷ್ಟವಾಗಿದೆ.

ಭೂಮಿಯಿಂದ 327 ದಶಲಕ್ಷ ಕಿ.ಮೀ ದೂರದಲ್ಲಿರುವ ಕಾಮೆಟ್ 2ಐ/ಬೋರಿಸೊವ್ ಧೂಮಕೇತುವಿನ ಬಾಲ ಫೋಟೋದಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾಗಿದೆ.

ಎರಡನೇಯ ಫೋಟೋದಲ್ಲಿ ಕಾಮೆಟ್ 2ಐ/ಬೋರಿಸೊವ್ ಧೂಮಕೇತು ಸೂರ್ಯನ ಹತ್ತಿರಕ್ಕೆ ಬಂದಿದ್ದು, ಡಿ.28ಕ್ಕೆ ಭೂಮಿಯಿಂದ ಕೇವಲ 290 ದಶಲಕ್ಷ ಕಿ.ಮೀ. ದೂರದಿಂದ ಹಾದು ಹೋಗಲಿದೆ.

ಹಬಲ್ ಕಣ್ಣಿಗೆ ಬಿದ್ದ ಸುಂದರ ನೀಲಿ ನಕ್ಷತ್ರಗಳ ಗ್ಯಾಲಕ್ಸಿ!

ಕಾಮೆಟ್ 2ಐ/ಬೋರಿಸೊವ್ ಕೇವಲ ಒಂದು ಕಿ.ಮೀ ವ್ಯಾಸ ಹೊಂದಿರುವುದು ವಿಶೇಷ ಎಂದು ನಾಸಾ ಹೇಳಿದೆ.

Follow Us:
Download App:
  • android
  • ios