ಜಾತ್ಯತೀತ ದೇಶದ ಸಂವಿಧಾನ ಒಪ್ಪದವರು ದೇಶ ಬಿಟ್ಟು ಹೋಗಲಿ: ದಲಿತ ಸಂಘರ್ಷ ಸಮಿತಿ

: ದೇಶದಲ್ಲಿ ಸರ್ಕಾರವು ಜನರ ಪರವಾಗಿ ಆಡಳಿತವನ್ನು ನಡೆಸಬೇಕೇ ಹೊರತು ದನಗಳ ಪರವಾಗಿ ಅಲ್ಲ. ಭಾರತ ಜಾತ್ಯತೀಯ ರಾಷ್ಟ್ರವಾಗಿದ್ದು, ದೇಶದ ಸಂವಿಧಾನ ಒಪ್ಪದವರು ದೇಶ ಬಿಟ್ಟು ಹೋಗಬಹುದು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಶರಣು ಪೂಜಾರ ಹೇಳಿದರು.

Those who do not agree Indiain constitution should leave the country says DSS at gadag rav

 ಗಜೇಂದ್ರಗಡ (ಜು.13) : ದೇಶದಲ್ಲಿ ಸರ್ಕಾರವು ಜನರ ಪರವಾಗಿ ಆಡಳಿತವನ್ನು ನಡೆಸಬೇಕೇ ಹೊರತು ದನಗಳ ಪರವಾಗಿ ಅಲ್ಲ. ಭಾರತ ಜಾತ್ಯತೀಯ ರಾಷ್ಟ್ರವಾಗಿದ್ದು, ದೇಶದ ಸಂವಿಧಾನ ಒಪ್ಪದವರು ದೇಶ ಬಿಟ್ಟು ಹೋಗಬಹುದು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಶರಣು ಪೂಜಾರ ಹೇಳಿದರು.

ಕೇಂದ್ರ ಸರ್ಕಾರ ಗೋ ಹತ್ಯೆ ಕಾಯ್ದೆ ರದ್ದತಿಗೆ ಆಗ್ರಹಿಸಿ, ಮಧ್ಯಪ್ರದೇಶದಲ್ಲಿ ಭಿಕ್ಷುಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಬಿಜೆಪಿ ಮುಖಂಡನ ಗಡಿಪಾರು, ಕೋಲಾರದಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣದ ಆರೋಪಿಗಳನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಹಾಗೂ ಇತರ ಬೇಡಿಕೆಗಳ ಈಡೇರಿಕೆಗಾಗಿ ಇಲ್ಲಿನ ಕೆಕೆ ವೃತ್ತದಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಬಾಗಲಕೋಟೆ: ಸಿಇಓ ವಿರುದ್ಧ ದಲಿತ ವಿರೋಧಿ ನೀತಿ ಆರೋಪ, ಪಿಡಿಓ ವಿರುದ್ಧ ಕ್ರಮಕ್ಕೆ ಡಿಎಸ್ಎಸ್ ಆಗ್ರಹ

ದೇಶದ ಜನರ ಮೇಲೆ ಕಾಲು, ಕುತ್ತಿಗೆ ಕತ್ತರಿಸಿದರೆ ಅವರು ಮಾತನಾಡುವುದಿಲ್ಲ. ಬಸವಣ್ಣನವರ ಚಿಂತನೆ, ಸಂಶೋಧನೆಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದ ಎಂ.ಎಂ. ಕಲ್ಬುರ್ಗಿ ಅವರನ್ನು ಹಾಡುಹಗಲೇ ಗುಂಡಿಟ್ಟು ಕೊಲೆ ಮಾಡಿದಾಗ ಅವರು ಹೋರಾಟ ಮಾಡಲಿಲ್ಲ. ದನಗಳ ಕಡಿದರೆ ಅವರು ಪ್ರತಿಭಟನೆ ಮಾಡುತ್ತಾರೆ. ಅವರಿಗೆ ಮನುಷ್ಯರ ಜೀವಗಳಿಗೆ ಬೆಲೆಯಿಲ್ಲ. ದೇಶ ನಡೆಯುವುದು ಜನಗಳಿಂದ ಹೊರತು ದನಗಳಿಂದಲ್ಲ. ಹೀಗಾಗಿ ಡಾ. ಬಾಬಾಸಾಹೇಬ ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ನಮಗೆ ನೀಡಿರುವ ಹಕ್ಕುಗಳಲ್ಲಿ ಆಹಾರ ಹಕ್ಕು ಸಹ ಒಂದಾಗಿದೆ. ಅದನ್ನು ಕಸಿದುಕೊಳ್ಳಲು ಮುಂದಾಗುವವರ ವಿರುದ್ಧ ನಾವು ಪ್ರತಿಭಟನೆಗೆ ಇಳಿಯುತ್ತೇವೆ. ಬಹುತ್ವ ಸಂಸ್ಕೃತಿಯ ದೇಶದಲ್ಲಿ ನಮ್ಮ ಆಹಾರ ಹಕ್ಕು ಕಸಿದುಕೊಳ್ಳುವ ಷಡ್ಯಂತ್ರ ರೂಪಿಸಲಾಗುತ್ತಿದೆ. ಇದಕ್ಕೆ ದಲಿತ ಸಂಘರ್ಷ ಸಮಿತಿ ಮುಂದಿನ ದಿನದಲ್ಲಿ ತಕ್ಕ ಉತ್ತರವನ್ನು ನೀಡಲು ಮುಂದಾಗಲಿದೆ ಎಂದರು.

ಮುಖಂಡರಾದ ಮಾರುತಿ ಚಿಟಗಿ, ಚಂದ್ರು ರಾಠೋಡ, ರವಿ ಗಡೇದವರ, ಉಮೇಶ ರಾಠೋಡ, ಬಸವರಾಜ ಕಡಬಿನ ಮಾತನಾಡಿ, ದೇಶದಲ್ಲಿ ವಿವಿಧ ಸಮುದಾಯದಗಳು ತಮ್ಮದೆ ಆದ ಸಂಪ್ರದಾಯ, ಆಚರಣೆ ಹಾಗೂ ಸಂಸ್ಕೃತಿಯನ್ನು ಹೊಂದಿದ್ದಾರೆ. ಎಲ್ಲರಿಗೂ ಇಲ್ಲಿ ಬದುಕುವ ಹಾಗೂ ತಮ್ಮ ಆಚರಣೆಗಳನ್ನು ಪಾಲಿಸುವ ಹಕ್ಕಿದೆ. ಅದನ್ನು ಕಿತ್ತುಕೊಳ್ಳಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹವಣಿಸುತ್ತಿವೆ ಎಂದ ದೂರಿದ ಮುಖಂಡರು, ಗೋ ಹತ್ಯೆ ನಿಷೇಧ ಕಾಯ್ದೆ ರದ್ದಾಗಬೇಕು. ಮಧ್ಯಪ್ರದೇಶದಲ್ಲಿ ಭಿಕ್ಷುಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಬಿಜೆಪಿ ಮುಖಂಡನ ಗಡಿಪಾರು ಮಾಡಬೇಕು. ಕೋಲಾರದಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣದ ಆರೋಪಿಗಳನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ದೇಶದಲ್ಲಿ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಸಾಂಕೇತಿಕ ಪ್ರತಿಭಟನೆ ನಡೆಸಲಾಗುತ್ತಿದೆ. ಸಂವಿಧಾನ ವಿರೋಧಿ ವರ್ತನೆಗಳಲ್ಲಿ ಭಾಗಿಯಾಗುವವರ ವಿರುದ್ಧ ರಾಜ್ಯ ದಲಿತ ಸಂಘರ್ಷ ಸಮಿತಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದರು.

ಸ್ವೆಟರ್ ಸ್ಕಾಮ್.. ಮಾನನಷ್ಟ ಮೊಕದ್ದಮೆ.. ಜಗ್ಗೇಶ್  VS ರಘು

ನೀಲಪ್ಪ ಗುಡಿಮನಿ, ಪರಶು ಕಾಳೆ, ರಾಜು ಸಾಂಗ್ಲೀಕರ, ಶಿವಕುಮಾರ ಚವ್ಹಾಣ, ರಜಾಕ್‌ ಡಾಲಾಯತ, ಬಸವರಾಜ ಹೊಸಮನಿ, ಟಿ.ಕೆ. ಕಟ್ಟಿ, ಶರಣು ದೊಡ್ಡಮನಿ, ದೇವರಾಜ ಚಂಗುಟ್ಟಿ, ಮರಿಯಪ್ಪ ಮಾದರ, ಕನಕರಾಯ ಚಲವಾದಿ, ಅಲ್ಲಾಭಕ್ಷಿ ಮುಚ್ಚಾಲಿ, ಆನಂದ ಮಾದರ, ಭಾಷೇಸಾಬ್‌ ಕರ್ನಾಚಿ ಇತರರು ಇದ್ದರು.

Latest Videos
Follow Us:
Download App:
  • android
  • ios