ತೆಂಗಿನಕಾಯಿ, ಬಾಳೆಹಣ್ಣು, ಅಡಿಕೆ, ನಾಣ್ಯ, ‘ಸಿರಿಂಜ್‌’ ಮುಂತಾದ ವಸ್ತುಗಳಿಂದಲೂ ಗಣೇಶಮೂರ್ತಿಯನ್ನು ತಯಾರಿಸುತ್ತಾರೆ. ಇಂತಹ ವಸ್ತುಗಳಿಂದ ಮೂರ್ತಿಯನ್ನು ತಯಾರಿಸುವುದು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ. 

ಹಬ್ಬ, ಉತ್ಸವ ಇತ್ಯಾದಿಗಳೆಡೆ ಕೇವಲ ರೂಢಿಯೆಂದು ನೋಡಬೇಡಿ, ಅದರ ಹಿಂದಿನ ಗೂಢಾರ್ಥ ಮತ್ತು ಶಾಸ್ತ್ರವನ್ನು ಅರಿತುಕೊಳ್ಳಿ ! ಭಾರತದಲ್ಲಿ ಅನೇಕ ಹಬ್ಬ, ಉತ್ಸವ ಮತ್ತು ಪರಂಪರೆಗಳಿವೆ. ಬಹುತೇಕ ಜನರು ಅದರೆಡೆಗೆ ಕೇವಲ ರೂಢಿಯೆಂದು ನೋಡುತ್ತಾರೆ ಮತ್ತು ಆ ದೃಷ್ಟಿಯಿಂದಲೇ ಆಚರಿಸುತ್ತಾರೆ; ಅದರ ಹಿಂದಿನ ಗೂಢಾರ್ಥ ಮತ್ತು ಶಾಸ್ತ್ರವನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ.

ಪ್ರಾದೇಶಿಕ-ಭಿನ್ನತೆ, ಜನಜೀವನ, ಉಪಾಸನೆಯ ಪದ್ಧತಿ ಇತ್ಯಾದಿಗಳಿಂದ ಹಬ್ಬ, ಉತ್ಸವಗಳನ್ನು ಆಚರಿಸುವಾಗ ವಿವಿಧೆಡೆಗಳಲ್ಲಿ ಲೋಕರೂಢಿಯಂತೆ ಕೆಲವೊಮ್ಮೆ ವ್ಯತ್ಯಾಸಗಳು ಕಂಡುಬರುತ್ತವೆ. ಶಾಸ್ತ್ರದ ಆಧಾರವಿಲ್ಲದಿರುವಾಗಲೂ ಕೇವಲ ಹಿಂದಿನ ನಡೆದುಬಂದ ಲೌಕಿಕ ರೂಢಿ ಎಂದು ಯಾವುದಾದರೊಂದು ರೂಢಿಯನ್ನು ಆಚರಿಸುವುದು ಅಯೋಗ್ಯವಾಗಿದೆ.

ಗಣೇಶನ ಪೂಜಿಸಿದ್ರೆ ಶನಿದೇವರ ಕಾಟವಿಲ್ಲ, ಯಾಕೆ ಗೊತ್ತೆ?

ಇಂತಹ ಲೌಕಿಕ ರೂಢಿಗಳಿಗೆ ತಿಲಾಂಜಲಿಯನ್ನಿಟ್ಟು ಶಾಸ್ತ್ರಸಮ್ಮತ ಕೃತಿಗಳನ್ನು ಮಾಡುವುದು ಅವಶ್ಯಕವಾಗಿದೆ. ವ್ರತಗಳ ವಿಷಯದಲ್ಲಾದರೆ ಅದರ ಹಿಂದೆ ಯಾರಾದರೊಬ್ಬ ಉನ್ನತರ ಸಂಕಲ್ಪವಿರುವುದೇ ಅದರ ಹಿಂದಿನ ಶಾಸ್ತ್ರೀಯ ಕಾರಣವಾಗಿದೆ.

ಧರ್ಮ ಮತ್ತು ಸಂಸ್ಕೃತಿ ಇವುಗಳ ಹಾನಿ ಮಾಡುವ ರೂಢಿಗಳನ್ನು ವಿರೋಧಿ​ಸಿ. ಇತ್ತೀಚೆಗೆ ಇಂತಹ ರೂಢಿಗಳು ಜನರ ಮನಸ್ಸಿನಲ್ಲಿ ಮಹತ್ವದ ಸ್ಥಾನ ಪಡೆದಿವೆ. ಉದಾ. ದೀಪಾವಳಿ ಮತ್ತು ಗಣೇಶೋತ್ಸವಗಳಲ್ಲಿ ಪಟಾಕಿ ಸಿಡಿಸುವುದು, ಗಣೇಶೋತ್ಸವ ಮತ್ತು ನವರಾತ್ರ್ಯೋತ್ಸವಗಳ ನಿಮಿತ್ತ ಅನೇಕ ಅಯೋಗ್ಯ ಪದ್ಧತಿಗಳಾಗುತ್ತವೆ. ‘ಈ ರೂಢಿಗಳೆಂದರೇ ಹಬ್ಬ ಮತ್ತು ಉತ್ಸವಗಳನ್ನು ಆಚರಿಸುವ ಪದ್ಧತಿ ಎಂಬ ತಪ್ಪು ಸಂಸ್ಕಾರವು ಭಾವೀ ಪೀಳಿಗೆಯ ಮೇಲಾಗುತ್ತಿದೆ. ಈ ರೂಢಿಗಳನ್ನು ಬಹಿಷ್ಕರಿಸುವುದು ಮತ್ತು ಅವುಗಳನ್ನು ವಿರೋಧಿ​ಸುವುದು ಧರ್ಮಪಾಲನೆಯೇ ಆಗಿದೆ.

ಈಶ್ವರ ಪ್ರಾಪ್ತಿ ಹಬ್ಬ

ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳಿಗೆ ಅಧ್ಯಾತ್ಮಶಾಸ್ತ್ರೀಯ ಆಧಾರವಿರುವುದರಿಂದ ಅವುಗಳನ್ನು ಆಚರಿಸುವಾಗ ಚೈತನ್ಯನಿರ್ಮಿತಿಯಾಗುತ್ತದೆ ಮತ್ತು ಅದರಿಂದ ಸರ್ವಸಾಮಾನ್ಯ ಮನುಷ್ಯನಿಗೂ ಈಶ್ವರನ ಕಡೆ ಹೋಗಲು ಸಹಾಯವಾಗುತ್ತದೆ. ಸಾಧಕರ ದೃಷ್ಟಿಯಿಂದ ಕರ್ಮಕಾಂಡವು ಕನಿಷ್ಠ ಮಟ್ಟದ್ದಾದರೂ, ಸಾಧನೆ ಮಾಡದಿರುವವರನ್ನು ಕ್ರಮೇಣ ಸಾಧನೆಯ ಕಡೆ ಹೊರಳಿಸುವ ದೃಷ್ಟಿಯಿಂದ ಅದು ಮಹತ್ವದ್ದಾಗಿದೆ. ಕರ್ಮಕಾಂಡದ ದೃಷ್ಟಿಯಿಂದ ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು ಎಷ್ಟುಮಹತ್ವದ್ದಾಗಿವೆ ಎಂದರೆ ವರ್ಷದಲ್ಲಿ ಸುಮಾರು ಶೇ.75ರಷ್ಟುತಿಥಿಗಳಂದು ಏನಾದರೊಂದು ಇದ್ದೇ ಇರುತ್ತದೆ.

ವಾಸ್ತವದಲ್ಲಿ ನಮ್ಮ ಜೀವನದಲ್ಲಿ ಯಾವಾಗಲೂ ಸಂಯಮ ಇರಬೇಕು, ಆದರೆ ಅದನ್ನು ನಾವು ಪಾಲಿಸುವುದಿಲ್ಲ; ಆದ್ದರಿಂದ ಹಬ್ಬ-ಹರಿದಿನಗಳು, ಧಾರ್ಮಿಕ ಉತ್ಸವಗಳು ಮತ್ತು ವ್ರತಗಳ ದಿನಗಳಲ್ಲಾದರೂ ಅದರ ಪಾಲನೆಯಾಗಬೇಕು; ಅಂದರೆ ಕ್ರಮೇಣ ಸದಾಕಾಲ ಸಂಯಮದಿಂದ ಜೀವನವನ್ನು ನಡೆಸಬಹುದು.

ಮಣ್ಣಿನ ಗಣೇಶನ ಪೂಜಿಸಿ

ಜೇಡಿಮಣ್ಣು ಅಥವಾ ಆವೆಮಣ್ಣಿನಿಂದ ಮೂರ್ತಿಯನ್ನು ತಯಾರಿಸಬೇಕು ಎಂಬ ಶಾಸ್ತ್ರವಿ​ಯಿದೆ. ಪಾರ್ವತಿಯು ತಯಾರಿಸಿದ ಶ್ರೀ ಗಣೇಶನು ಮಹಾಗಣಪತಿಯ ಅವತಾರವಾಗಿದ್ದಾನೆ. ಅವಳು ಮೃತ್ತಿಕೆಯ (ಮಣ್ಣಿನ) ಆಕಾರ ಮಾಡಿ ಅದರಲ್ಲಿ ಗಣೇಶನ ಆವಾಹನೆಯನ್ನು ಮಾಡಿದಳು. (ಪುರಾಣದಲ್ಲಿ ಶ್ರೀ ಗಣೇಶನು ಮಣ್ಣಿನಿಂದ ನಿರ್ಮಾಣವಾಗಿದ್ದಾನೆ ಎಂದು ಹೇಳಲಾಗಿದೆ) ‘ಭಾದ್ರಪದ ಶುಕ್ಲ ಚತುರ್ಥಿಯಂದು ಮಣ್ಣಿನ ಗಣೇಶಮೂರ್ತಿಯನ್ನು ತಯಾರಿಸಬೇಕು’ ಎಂದು ಶಾಸ್ತ್ರವಿ​ಯಿದೆ.

ಶ್ರೀ ಗಣೇಶನ ಮೂರ್ತಿಯನ್ನು ಜೇಡಿಮಣ್ಣಿನಿಂದ ಅಥವಾ ಆವೆಮಣ್ಣಿನಿಂದ ತಯಾರಿಸಬೇಕು. ಇತ್ತೀಚೆಗೆ ಮಾತ್ರ ಭಾರ ಕಡಿಮೆಯಾಗಬೇಕು ಮತ್ತು ಅದು ಹೆಚ್ಚು ಆಕರ್ಷಕವಾಗಿ ಕಾಣಿಸಬೇಕೆಂದು ‘ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌’ನಿಂದ ಮೂರ್ತಿಗಳನ್ನು ತಯಾರಿಸಲಾಗುತ್ತದೆ. ಮಣ್ಣಿನ ಮತ್ತು ‘ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌’ನ ಗಣೇಶ ಮೂರ್ತಿಯಲ್ಲಿ ವ್ಯತ್ಯಾಸವಿದೆ.

ಗುಮ್ಮಟನಗರಿಯಲ್ಲೂ ಶುರುವಾಯ್ತು ದೇಶಿ ಮಣ್ಣಿನ ಗಣೇಶನ ಟ್ರೆಂಡ್!

ಮಣ್ಣಿನ ಮೂರ್ತಿ ಲಾಭಗಳು

ಮಣ್ಣಿನ ಮೂರ್ತಿಯಲ್ಲಿ ಗಣೇಶನ ಪವಿತ್ರಕಗಳು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಿ ಕಾರ್ಯನಿರತವಾಗಿರುತ್ತವೆ. ‘ಮಣ್ಣಿನಲ್ಲಿರುವ ಪೃಥ್ವಿ ತತ್ವದಿಂದಾಗಿ ಮೂರ್ತಿಯು ಬ್ರಹ್ಮಾಂಡ ಮಂಡಲದಿಂದ ಆಕರ್ಷಿಸಿದ ದೇವತೆಯ ತತ್ವವು ಮೂರ್ತಿಯಲ್ಲಿ ದೀರ್ಘಕಾಲ ಕಾರ್ಯನಿರತವಾಗಿರುತ್ತದೆ. ತದ್ವಿರುದ್ಧವಾಗಿ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌’ನ ಮೂರ್ತಿಯಲ್ಲಿ ದೇವತೆಯ ತತ್ವವನ್ನು ಆಕರ್ಷಿಸುವ ಮತ್ತು ಕಾರ್ಯನಿರತವಾಗಿಡುವ ಕ್ಷಮತೆಯೂ ಕಡಿಮೆಯಿರುತ್ತದೆ. ಆದ್ದರಿಂದ ‘ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌’ನ ಮೂರ್ತಿಯಿಂದ ಆಧ್ಯಾತ್ಮಿಕ ಸ್ತರದಲ್ಲಿ ಹೆಚ್ಚೇನೂ ಲಾಭವಾಗುವುದಿಲ್ಲ.

ಮಣ್ಣಿನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವುದರಿಂದ ವಾಯುಮಂಡಲವು ಶುದ್ಧವಾಗುತ್ತದೆ. ಮಣ್ಣಿನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವುದರಿಂದ ಅದು ಕೂಡಲೇ ನೀರಿನಲ್ಲಿ ಕರಗಿ, ಹರಿಯುವ ನೀರಿನಿಂದ ಸುತ್ತಮುತ್ತಲಿನ ಪರಿಸರದಲ್ಲಿ ದೂರದವರೆಗೆ ದೇವತೆಗಳ ಸಾತ್ವಿಕ ಲಹರಿಗಳನ್ನು ಕಡಿಮೆ ಕಾಲಾವಧಿ​ಯಲ್ಲಿ ಪ್ರಕ್ಷೇಪಿಸುತ್ತದೆ. ಇದರಿಂದ ಸಂಪೂರ್ಣ ಪರಿಸರದ ವಾಯುಮಂಡಲ ಶುದ್ಧವಾಗುತ್ತದೆ. ಈ ಪ್ರಕ್ರಿಯೆಯಿಂದ ಸಮಷ್ಟಿಸ್ತರದಲ್ಲಿ ಲಾಭವಾಗಲು ಸಹಾಯವಾಗುತ್ತದೆ.

‘ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌’ ಹಾನಿ

‘ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌’ ನೀರಿನಲ್ಲಿ ಸಹಜವಾಗಿ ಕರಗದಿರುವುದರಿಂದ ವಿಸರ್ಜನೆಯ ನಂತರ ಮೂರ್ತಿಯು ನೀರಿನ ಮೇಲೆ ತೇಲುತ್ತದೆ. ಅನೇಕ ಕಡೆಗಳಲ್ಲಿ ವಿಸರ್ಜಿತವಾಗದ ಮೂರ್ತಿಗಳ ಅವಶೇಷಗಳನ್ನು ಕೆಲವೊಮ್ಮೆ ಒಟ್ಟು ಮಾಡಿ ಅವುಗಳ ಮೇಲೆ ‘ಬುಲ್ಡೋಝರ್‌’ನ್ನು ಚಲಾಯಿಸಲಾಗುತ್ತದೆ. ಹೀಗೆ ಮಾಡುವುದು ಶ್ರೀಗಣಪತಿಯ ಘೋರ ವಿಡಂಬನೆಯೇ ಆಗಿದೆ. ಯಾವ ಸನ್ಮಾನದಿಂದ ನಾವು ಗಣಪತಿಯನ್ನು ಆವಾಹನೆ ಮಾಡುತ್ತೇವೆಯೋ, ಅದೇ ಸನ್ಮಾನದಿಂದ ಅವನನ್ನು ಬೀಳ್ಕೊಡುವುದೂ ಅವಶ್ಯಕ. ಗಣಪತಿಯ ಘೋರ ವಿಡಂಬನೆಯಾಗುವುದರಿಂದ ಘೋರ ಪಾಪ ತಗಲುತ್ತದೆ. ಹಾಗಾಗಿ ಜೇಡಿಮಣ್ಣು ಅಥವಾ ಆವೆಮಣ್ಣನ್ನು ಬಿಟ್ಟು ಬೇರೆ ವಸ್ತುಗಳಿಂದ ಮೂರ್ತಿಯನ್ನು ತಯಾರಿಸುವುದು ಧರ್ಮಶಾಸ್ತ್ರದ ವಿರುದ್ಧವಾಗಿದೆ.

ಇತ್ತೀಚೆಗೆ ತೆಂಗಿನಕಾಯಿ, ಬಾಳೆಹಣ್ಣು, ಅಡಿಕೆ, ನಾಣ್ಯ, ‘ಸಿರಿಂಜ್‌’ ಮುಂತಾದ ವಸ್ತುಗಳಿಂದಲೂ ಗಣೇಶಮೂರ್ತಿಯನ್ನು ತಯಾರಿಸುತ್ತಾರೆ. ಇಂತಹ ವಸ್ತುಗಳಿಂದ ಮೂರ್ತಿಯನ್ನು ತಯಾರಿಸುವುದು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ. ಇಂತಹ ಮೂರ್ತಿಯ ಕಡೆಗೆ ಗಣೇಶನ ಪವಿತ್ರಕಗಳು ಆಕರ್ಷಿಸುವುದಿಲ್ಲ.

ಕಾಗದದ ಮೂರ್ತಿಯೂ ಬೇಡ

ಇತ್ತೀಚೆಗೆ ಕೆಲವು ಸಂಸ್ಥೆಗಳು ‘ಇಕೋ-ಫ್ರೆಂಡ್ಲಿ (ಇಕಾಲಾಜಿಕಲ್‌ ಫ್ರೆಂಡ್ಲಿ ಅಂದರೆ ಪರಿಸರ ಸ್ನೇಹಿ) ಗಣೇಶಮೂರ್ತಿಗಳನ್ನು ತಯಾರಿಸಲು ಆಹ್ವಾನಿಸುತ್ತಾರೆ. ಅವುಗಳಲ್ಲಿ ಕೆಲವು ಮೂರ್ತಿಗಳನ್ನು ಕಾಗದದ ಮುದ್ದೆಗಳಿಂದ ತಯಾರಿಸಲಾಗುತ್ತದೆ. ಇದು ಅಶಾಸ್ತ್ರೀಯವಂತೂ ಆಗಿದೆ, ಹಾಗೆಯೇ ಪರಿಸರಕ್ಕೆ ಹಾನಿಕಾರಕವೂ ಆಗಿದೆ. ಏಕೆಂದರೆ ಕಾಗದದ ಮುದ್ದೆಗಳು ನೀರಿನಲ್ಲಿರುವ ಪ್ರಾಣವಾಯುವನ್ನು ಹೀರುತ್ತವೆ ಮತ್ತು ಜೀವಗಳಿಗೆ ಹಾನಿಕರವಾದ ‘ಮಿಥೇನ್‌’ ವಾಯುವನ್ನು ನಿರ್ಮಿಸುತ್ತವೆ. ಇಂತಹ ಸಂಸ್ಥೆಗಳಿಂದ ಮಾಡಲಾಗಿರುವ ನಿಸರ್ಗದ ವಿಚಾರವು ಕೇವಲ ಮೇಲುಮೇಲಿನದ್ದಾಗಿರುತ್ತದೆ. ಹಿಂದೂ ಧರ್ಮಶಾಸ್ತ್ರವು ನಿಸರ್ಗದ ರಕ್ಷಣೆಯೊಂದಿಗೆ ಮಾನವನ ಸರ್ವಾಂಗೀಣ ಉನ್ನತಿಯ ವಿಚಾರವನ್ನೂ ಮಾಡಿರುತ್ತದೆ ಎಂಬುದನ್ನು ಗಮನದಲ್ಲಿಡಿ.

ಜೇಡಿ ದುಬಾರಿ ಅಲ್ಲ

ಧರ್ಮಶಾಸ್ತ್ರಕ್ಕನುಸಾರ ತರಬೇಕಾದ ಜೇಡಿಮಣ್ಣಿನ ಮೂರ್ತಿಯು ದುಬಾರಿಯಾಗಿರುತ್ತದೆ. ಈ ರೀತಿ ಹೇಳುವುದು ಕುಂಟು ನೆಪವಾಗಿದೆ. ಪ್ರತಿಯೊಂದು ಕುಟುಂಬದಲ್ಲಿ ಗಣೇಶೋತ್ಸವಕ್ಕಾಗಿ ಆಗುವ ಒಟ್ಟು ಖರ್ಚಿನಲ್ಲಿ (ಉದಾ. ಆಧುನಿಕ ಅಲಂಕಾರ, ಕುಟುಂಬದವರಿಗೆ ಬಟ್ಟೆಗಳ ಖರೀದಿ ಇತ್ಯಾದಿ) ಮೂರ್ತಿಯ ಖರೀದಿಗಾಗಿ ಆಗುವ ಖರ್ಚು ಅತ್ಯಲ್ಪ. ಗಣೇಶನನ್ನು ಪೂಜಿಸುವುದರ ಉದ್ದೇಶವು ಕುಟುಂಬದಲ್ಲಿನ ಸದಸ್ಯರಿಗೆ ಮೂರ್ತಿಯಿಂದ ಗಣೇಶ ತತ್ವ ಸಿಗುವುದಾಗಿದೆ. ‘ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌’ನ ಮೂರ್ತಿಯಿಂದ ಈ ಲಾಭ ಸಿಗುವುದು ಸಾಧ್ಯವಿಲ್ಲ. ಗಣೇಶ ಭಕ್ತರೇ, ಮೂರ್ತಿಯ ಖರ್ಚಿನ ಪ್ರಶ್ನೆಯಿದ್ದರೆ, ಚಿಕ್ಕ ಮೂರ್ತಿಯನ್ನು ತೆಗೆದುಕೊಳ್ಳಿರಿ; ಆದರೆ ತುಲನೆಯಲ್ಲಿ ಅಗ್ಗವಾಗಿದೆ ಎಂದು ‘ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌’ನ ಮೂರ್ತಿಯನ್ನು ಕೊಳ್ಳುವ ಧರ್ಮಶಾಸ್ತ್ರವಿರೋ​ ವರ್ತನೆಯನ್ನು ಮಾಡಬೇಡಿರಿ.

- ಮೋಹನ್‌ ಗೌಡ, ಸನಾತನ ಸಂಸ್ಥೆ