Asianet Suvarna News Asianet Suvarna News

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಾನೂನು ಕುಣಿಕೆ ಮತ್ತಷ್ಟು ಬಿಗಿ; ಕೊಲೆ ಕೇಸಲ್ಲಿ ಭಾಗಿಯಾಗಿರೋದು ಒಪ್ಪಿಕೊಂಡ ದರ್ಶನ್?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರತಿ ಹಂತದಲ್ಲೂ ದರ್ಶನ್ ವಿರುದ್ಧ ಸಾಕ್ಷಿ ಸಿಗ್ತಿದೆ. ಹೀಗಾಗಿ ದರ್ಶನ್ ವಿರುದ್ಧ ಕಾನೂನು ಕುಣಿಕೆ ಇನ್ನಷ್ಟು ಬಿಗಿ ಆಗ್ತಿದೆ. ನ್ಯಾಯಾಲಯಕ್ಕೆ ತನಿಖೆಯ ಇಂಚಿಂಚು ಮಾಹಿತಿ ಸಲ್ಲಿಸಿದ ಪೊಲೀಸರು. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಎಕ್ಸ್ ಕ್ಲೂಸಿವ್ ಡೀಟೆಲ್ಸ್ ಇಲ್ಲಿದೆ
 

Renukaswamy murder case actor darshan thugudeepa judicial custody extended till august 1 rav
Author
First Published Jul 19, 2024, 10:01 AM IST | Last Updated Jul 19, 2024, 10:18 AM IST

ಬೆಂಗಳೂರು (ಜು.19) ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಅಂಡ್ ಗ್ಯಾಂಗ್ ಆರೋಪಿಗಳ ನ್ಯಾಯಾಂಗ ಬಂಧನ ಆ.1ರವರೆಗೆ ಮತ್ತೆ ವಿಸ್ತರಣೆಯಾಗಿದೆ.ಆರೋಪಿಗಳ ನ್ಯಾಯಾಂಗ ಬಂಧನ ಇಂದು ಅಂತ್ಯಗೊಂಡಿದ್ದರಿಂದ ಅವರನ್ನು ಬೆಂಗಳೂರು ಮತ್ತು ತುಮಕೂರು ಕಾರಾಗೃಹದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದೊಂದು ತಿಂಗಳಿಂದ ಜೈಲಿನಲ್ಲಿರುವ ನಟ ದರ್ಶನ್, ಪ್ರೇಯಸಿ ಪವಿತ್ರಾ ಗೌಡ ಸೇರಿ 15 ಆರೋಪಿಗಳು. ಬೇಲ್ ಪಡೆದು ಹೊರಗಡೆ ಬರುತ್ತಾರೆಂಬ ಸುದ್ದಿಯ ನಡುವೆಯೇ ವಿಶೇಷ ನ್ಯಾಯಾಲಯ ಆರೋಪಿಗಳ ನ್ಯಾಯಾಂಗ ಬಂಧನವನ್ನು ಆಗಸ್ಟ್‌ 1 ರವರೆಗೆ ವಿಸ್ತರಿಸಿದೆ.

ಬಿಗಿ ಆಗ್ತಿದೆ ಕಾನೂನು ಕುಣಿಕೆ!

ಪ್ರತಿ ಹಂತದಲ್ಲೂ ದರ್ಶನ್ ವಿರುದ್ಧ ಸಾಕ್ಷಿ ಸಿಗ್ತಿದೆ. ಹೀಗಾಗಿ ದರ್ಶನ್ ವಿರುದ್ಧ ಕಾನೂನು ಕುಣಿಕೆ ಇನ್ನಷ್ಟು ಬಿಗಿ ಆಗ್ತಿದೆ. ಕೊಲೆ ಪ್ರಕರಣದಲ್ಲಿ ದರ್ಶನ್ ಸುತ್ತಮುತ್ತಲಿನವರಿಂದಲೇ ಸಾಕ್ಷ್ಯ ನುಡಿ ಸಿಗ್ತಿರೋದ್ರಿಂದ ತನಿಖಾಧಿಕಾರಿಗಳಿಗೆ ಮತ್ತಷ್ಟು ಸ್ಟ್ರಾಂಗ್ ಎವಿಡೆನ್ಸ್ ಸಿಗ್ತಿದೆ. ತನಿಖೆ ವೇಳೆ ಸ್ಫೋಟಕ ವಿಚಾರಗಳು ಬಯಲಾಗಿವೆ.

ದರ್ಶನ್ ವಿರುದ್ಧ ಸಿಕ್ಕಿರೋ ಸಾಕ್ಷ್ಯಗಳೇನು?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿರೋ ಬಗ್ಗೆ ನ್ಯಾಯಾಲಯಕ್ಕೆ ಇಂಚಿಂಚು ಮಾಹಿತಿ ಸಲ್ಲಿಸಿರುವ ಪೊಲೀಸರು. ಪ್ರಕರಣದಲ್ಲಿ ದರ್ಶನ್‌ ಸ್ವಇಚ್ಛಾ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು. ಹೇಳಿಕೆ ವೇಳೆ 83,55,500 ಲಕ್ಷ ಹಣ ಇದೇ ಕೊಲೆ ಕೇಸ್ ಗಾಗಿ ಬಳಸಿಕೊಂಡಿರೋದು ಒಪ್ಪಿಕೊಂಡಿರುವ ದರ್ಶನ್. ಮೇಕಪ್ ಮೆನ್, ಕಾಸ್ಟೂಮ್ ಡಿಸೈನರ್, ಸ್ಟೋನಿ ಬ್ರೂಕ್ ಸಿಬ್ಬಂದಿ ಸಹ ದರ್ಶನ್ ವಿರುದ್ಧ ಹೇಳಿಕೆ ನೀಡಿದ್ದಾರೆ. ಕೊಲೆ ನಡೆದ ಸ್ಥಳ, ಕೊಲೆ ನಡೆಯೋ ಮುಂಚೆ, ನಂತರ ಆರೋಪಿ ದರ್ಶನ್ ಓಡಾಡಿದ ಕಡೆಯೂ ಪೊಲೀಸರಿಂದ ತನಿಖೆ ನಡೆಸಲಾಗಿದೆ. ಮನೆ, ರೆಸ್ಟೋಬಾರ್, ಶೂಟಿಂಗ್ ಸ್ಪಾಟ್, ಮೈಸೂರು ಜಿಮ್ ಸೇರಿ ದರ್ಶನ್ ಹಲವೆಡೆ ಸುತ್ತಾಟ ನಡೆಸಿದ್ದದ ಸ್ಥಳಗಳಲ್ಲಿದ್ದ ಪ್ರಮುಖ ಸಾಕ್ಷಿಗಳಿಂದ ಹೇಳಿಕೆ ದಾಖಲು ಮಾಡಿಕೊಂಡಿರುವ ಪೊಲೀಸರು. ಸದಾ ದರ್ಶನ್ ಸುತ್ತಲೂ ಇರುತ್ತಿದ್ದ ವ್ಯಕ್ತಿಗಳಿಂದಲೇ ಸಾಕ್ಷ್ಯ ಸಂಗ್ರಹಿಸಿದ ತನಿಖಾಧಿಕಾರಿಗಳು. ಸದ್ಯ ದರ್ಶನ್ ಸ್ನೇಹಿತ, ಮನೆ ಕೆಲಸದವರು, ದರ್ಶನ್  ಕಾಸ್ಟೂಮ್ ಡಿಸೈನರ್, ಸ್ಟೋನಿ ಬ್ರೂಕ್ ಸಿಬ್ಬಂದಿ ಒಟ್ಟಿನಲ್ಲಿ ದರ್ಶನ್ ಯಾರಾರ ಜೊತೆ ಸಂಪರ್ಕ ಹೊಂದಿದ್ದನೋ ಅವರೆಲ್ಲರ ಬಳಿ ಸಾಕ್ಷ್ಯ ಸಂಗ್ರಹಿಸಲಾಗಿದೆ. ನಟ ದರ್ಶನ್ ಅತಿ ಹೆಚ್ಚು ಪಾರ್ಟಿ ಮಾಡ್ತಿದ್ದಿದ್ದು ಸ್ಟೋನಿ ಬ್ರೂಕ್‌ನಲ್ಲಿ ಹೀಗಾಗಿ ಅಲ್ಲಿನ ಸಿಬ್ಬಂದಿಗೆ ದರ್ಶನ್ ಬಗ್ಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ತನಿಖಾಧಿಕಾರಿಗಳ ಅಲ್ಲಿನ ಸಿಬ್ಬಂದಿಯನ್ನ ವಿಚಾರಣೆ ಮಾಡಿ ಹೇಳಿಕೆ ದಾಖಲಿಸಿಕೊಂಂಡಿದ್ದಾರೆ. ಪ್ರತಿಯೊಬ್ಬರೂ ತನಿಖೆಗೆ ಸಹಕಾರ ಆಗೋ ರೀತಿಯೇ ಹೇಳಿಕೆ ನೀಡಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ದರ್ಶನ್‌ ಪಾರಾಗಲು ಸಾಧ್ಯವಿಲ್ಲ ಎಂಬಷ್ಟು ಎವಿಡೆನ್ಸ್ ಗಳು ಸಿಕ್ಕಿವೆ.

ಪರಪ್ಪನ ಅಗ್ರಹಾರ ಜೈಲು ಸೇರಿ ಕಂಗಾಲಾದ ನಟ ದರ್ಶನ್: ಒಂದೆಡೆ ಊಟ ಸೇರ್ತಿಲ್ಲ, ಜೈಲು ವಾಸ ಸಹಿಸೋಕೆ ಆಗ್ತಿಲ್ಲ!

ಏನಿದು ಪ್ರಕರಣ?

ಇನ್‌ಸ್ಟಾಗ್ರಾಂನಲ್ಲಿ ತಮ್ಮ ಪ್ರಿಯತಮೆ ಪವಿತ್ರಾ ಗೌಡಳಿಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಅಪಹರಿಸಿ ಪಟ್ಟಣಗೆರೆ ಶೆಡ್‌ಗೆ ಕರೆತಂದು ಬಳಿಕ ಆತನಿಗೆ ನಟ ದರ್ಶನ್ ಸೇರಿ 17 ಜನರ ಗ್ಯಾಂಗ್ ದೈಹಿಕವಾಗಿ ಚಿತ್ರಹಿಂಸೆ ನೀಡಿ ಕೊಲೆಗೈದ ಆರೋಪದ ಹಿನ್ನೆಲೆಯಲ್ಲಿ ನಟ ದರ್ಶನ್ ಹಾಗೂ ಅವರ ಪ್ರಿಯತಮೆ ಪವಿತ್ರಾಗೌಡ ಸೇರಿದಂತೆ 17 ಮಂದಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಮೂರು ಬಾರಿ ನ್ಯಾಯಾಲಯದ ಅನುಮತಿ ಪಡೆದು ವಶಕ್ಕೆ ಪಡೆದು ದರ್ಶನ್‌ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು.

ದರ್ಶನ್ ಬಗ್ಗೆ ಒಂದಿಷ್ಟು ಹೇಳಿದ ಅನು ಪ್ರಭಾಕರ್, ಇನ್ನೊಂದಿಷ್ಟು ಹೇಳಲ್ಲ ಅಂದಿದ್ಯಾಕೆ?

ಈ ಹತ್ಯೆ ಕೃತ್ಯದಲ್ಲಿ ತಪ್ಪಿಸಿಕೊಳ್ಳಲು 70 ಲಕ್ಷ ರು. ವ್ಯಯಿಸಲು ದರ್ಶನ್ ಯತ್ನಿಸಿದ್ದರು. ಕೊನೆಗೆ 12 ದಿನಗಳ ತನಿಖೆ ನಡೆಸಿದ ಬಳಿಕ ದರ್ಶನ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೊಲೀಸರು. ವಿಚಾರಣೆ ನಡೆಸಿದ್ದ ನ್ಯಾಯಾಲಯವು 14 ದಿನ ನ್ಯಾಯಾಂಗ ಬಂಧನಕ್ಕೊಪ್ಪಿಸಿತ್ತು.

Latest Videos
Follow Us:
Download App:
  • android
  • ios