Bengaluru: ಎನ್‌ಐಎ ಬೆಂಗಳೂರು ಘಟಕ ಕಾರ್ಯಾರಂಭ: ಹರ್ಷ ಕೊಲೆ ತನಿಖೆ ಮೊದಲ ಕೇಸ್‌

*   ರಾಜ್ಯದಲ್ಲಿನ ಆತಂಕಕಾರಿ ಬೆಳವಣಿಗೆ ಹಿನ್ನೆಲೆ
*  ಇಲ್ಲಿಯೇ ಶಾಶ್ವತ ಕಚೇರಿ ಆರಂಭ
*  ದೊಮ್ಮಲೂರಿನಲ್ಲಿ ಎನ್‌ಐಎ ಕಚೇರಿ
 

NIA Bengaluru Unit Officially Launched grg

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಮಾ.26):  ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ(Harsha Murder) ಪ್ರಕರಣದ ಮೂಲಕ ರಾಷ್ಟ್ರೀಯ ತನಿಖಾ ದಳದ(NIA) ಬೆಂಗಳೂರು ವಿಭಾಗವು ಅಧಿಕೃತವಾಗಿ ಕಾರ್ಯಾರಂಭ ಮಾಡಿದೆ.
ರಾಜ್ಯದಲ್ಲಿ(Karnataka) ಎನ್‌ಐಎ ಘಟಕ ಆರಂಭಿಸುವಂತೆ ರಾಜ್ಯ ಬಿಜೆಪಿ(BJP) ನಾಯಕರ ಕೂಗಿಗೆ ಅಸ್ತು ಎಂದಿದ್ದ ಕೇಂದ್ರ ಗೃಹ ಸಚಿವಾಲಯವು, ಇದೇ ವರ್ಷದ ಜನವರಿಯಲ್ಲಿ ಬೆಂಗಳೂರಿನಲ್ಲಿ(Bengaluru) ಎನ್‌ಐಎ ಪೂರ್ಣ ಪ್ರಮಾಣದ ವಿಭಾಗ ಮಂಜೂರು ಮಾಡಿತ್ತು. ಈಗ ಹರ್ಷ ಹತ್ಯೆ ಕೃತ್ಯವು ಬೆಂಗಳೂರಿನ ಎನ್‌ಐಎ ಘಟಕದ ಪ್ರಥಮ ತನಿಖಾ ಕೇಸ್‌ ಆಗಿದೆ.

ಈ ಮೊದಲು ರಾಜ್ಯದ ಅಪರಾಧ ಪ್ರಕರಣಗಳ ತನಿಖೆಗೆ ದೆಹಲಿ ಎನ್‌ಐಎ ಕೇಂದ್ರ ಕಚೇರಿಯಿಂದ ಕರ್ನಾಟಕಕ್ಕೆ ಕೇರಳ ಅಥವಾ ಹೈದರಾಬಾದ್‌ ಘಟಕದ ಅಧಿಕಾರಿಗಳು ನಿಯೋಜನೆಗೊಳ್ಳುತ್ತಿದ್ದರು. ಹೊರ ರಾಜ್ಯದ ಅಧಿಕಾರಿಗಳು ತಾತ್ಕಾಲಿಕವಾಗಿ ರಾಜ್ಯದಲ್ಲಿ ಬೀಡು ಬಿಟ್ಟು ತನಿಖೆ ನಡೆಸಿ ತೆರಳುತ್ತಿದ್ದರು. ಅಲ್ಲದೆ ಬೆಂಗಳೂರಿನಲ್ಲಿ ಎನ್‌ಐಎ ಕ್ಯಾಂಪ್‌ ಕಚೇರಿಯೊಂದು ನೆಪಕ್ಕೆ ಎನ್ನುವಂತೆ ಇತ್ತು. ಇತ್ತೀಚೆಗೆ ಮತೀಯ ಸಂಘಟನೆಗಳ ಸಕ್ರಿಯವಾಗಿವೆ ಎಂಬ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪೂರ್ಣ ಪ್ರಮಾಣದ ಎನ್‌ಐಎ ಕಚೇರಿ ಸ್ಥಾಪಿಸುವಂತೆ ರಾಜ್ಯ ಬಿಜೆಪಿ ನಾಯಕರು ಒಕ್ಕೊರಲಿನಿಂದ ಒತ್ತಾಯ ಹಾಕಿದ್ದರು. ಹಲವು ಬಾರಿ ಬಿಜೆಪಿ ನಾಯಕರು ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ವಿನಂತಿಸಿದ್ದರು.

ಸಾಮಾಜಿಕ ಜಾಲತಾಣ ಖಾತೆ ಮೂಲಕ ದೀಪ್ತಿ ಐಸಿಸ್‌ ನೇಮಕಾತಿ: ಇಸ್ಲಾಮಿಕ್‌ ಸ್ಟೇಟ್ಸ್‌ಗೆ ಹಿಂದೂ ಯುವತಿ ಬಳಕೆ

ಡಿಐಜಿ ನೇತೃತ್ವದಲ್ಲಿ 20 ಅಧಿಕಾರಿಗಳು

2021ರ ಆಗಸ್ಟ್‌ 11ರಂದು ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಬಳಿಕ ಬೆಂಗಳೂರಿನಲ್ಲಿ ಎನ್‌ಐಎ ಘಟಕ ಆರಂಭಕ್ಕೆ ರಾಜ್ಯ ಸರ್ಕಾರವು ಧ್ವನಿಗೂಡಿಸಿತು. ಈ ಗಲಭೆ ಪ್ರಕರಣದ ತನಿಖೆಯೂ ಎನ್‌ಐಎಗೆ ವರ್ಗವಾಗಿತ್ತು. ಇದಾದ ಬಳಿಕ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಜಾಗತಿಕ ಮಟ್ಟದ ಅತ್ಯುಗ್ರ ಭಯೋತ್ಪಾದಕ ಸಂಘಟನೆ ಐಸಿಸ್‌ನ ನೇಮಕಾತಿ ದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರೋಪದ ಮೇರೆಗೆ ಮಾಜಿ ಶಾಸಕರ ಕುಟುಂಬದ ಇಬ್ಬರು ಸದಸ್ಯರು ಸೇರಿದಂತೆ ಕೆಲವರು ಎನ್‌ಐಎ ಬಲೆಗೆ ಬಿದ್ದಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ತನ್ನ ದಳ ನಿಯೋಜನೆಯು ಎನ್‌ಐಎಗೆ ಬಹುಮುಖ್ಯವಾಗಿತ್ತು.

ಅಂತೆಯೇ ಜನವರಿಯಲ್ಲಿ ಬೆಂಗಳೂರು ಸೇರಿದಂತೆ ಬಿಹಾರದ ಪಟ್ನಾ, ಜೈಪುರ, ಭುವನೇಶ್ವರ್‌, ಅಹಮದಾಬಾದ್‌ ಹಾಗೂ ಭೂಪಾಲ್‌ ನಗರದಲ್ಲಿ ಹೊಸದಾಗಿ ಎನ್‌ಎಎ ಘಟಕ ಮಂಜೂರು ಮಾಡಿದ ಕೇಂದ್ರ ಸರ್ಕಾರವು, ಬೆಂಗಳೂರಿನ ಘಟಕಕ್ಕೆ ಓರ್ವ ಡಿಐಜಿ ನೇತೃತ್ವದಲ್ಲಿ ಎಸ್ಪಿ ಸೇರಿದಂತೆ 20 ಅಧಿಕಾರಿಗಳನ್ನು ನೇಮಿಸಿದೆ. ನಗರದ ದೊಮ್ಮೂರಿನಲ್ಲಿ ಎನ್‌ಐಎ ಕಚೇರಿ ಇದೆ. ಕೇಂದ್ರ ತನಿಖಾ ಸಂಸ್ಥೆಗೆ ಜತೆ ಸಮನ್ವಯದಲ್ಲಿ ಕಾರ್ಯನಿರ್ವಹಣೆ ಸಲುವಾಗಿ ರಾಜ್ಯದ ಓರ್ವ ಇನ್‌ಸ್ಪೆಕ್ಟರನ್ನು ಎನ್‌ಐಎಗೆ ಎರವಲು ಸೇವೆ ಮೇಲೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

NIA Raid Mangaluru: ಐಸಿಸ್ ನಂಟು? ಮಾಜಿ ಶಾಸಕ ಇದಿನಬ್ಬ ಪುತ್ರನ ಸೊಸೆ ಬಂಧನ

ಎನ್‌ಐಎ ಘಟಕದಿಂದ ಆಗುವ ಅನುಕೂಲ

ಕೆಲ ವರ್ಷಗಳಿಂದ ರಾಜ್ಯದಲ್ಲಿ ಐಸಿಸ್‌(ISIS) ಸೇರಿದಂತೆ ಕೆಲ ಭಯೋತ್ಪಾದಕ ಸಂಘಟನೆಗಳ(Terrorist Organizations) ನೇಮಕಾತಿ ದಳವು ಗುಪ್ತ ಚಟುವಟಿಕೆ ಹೊಂದಿರುವುದು ಕೇಂದ್ರ ಹಾಗೂ ರಾಜ್ಯ ತನಿಖಾ ಸಂಸ್ಥೆಗಳು ಪತ್ತೆ ಹಚ್ಚಿದ್ದವು. ಈ ಹಿನ್ನೆಲೆಯಲ್ಲಿ ಮತೀಯ ಹಾಗೂ ಭಯೋತ್ಪಾದಕ ಸಂಘಟನೆಗಳ ಮೇಲೆ ನಿರಂತರವಾಗಿ ನಿಗಾವಹಿಸಲು ಎನ್‌ಐಎ ಘಟಕದಿಂದ ಅನುಕೂಲವಾಗಲಿದೆ. ಅಲ್ಲದೆ ರಾಷ್ಟ್ರ ವ್ಯಾಪ್ತಿ ಸರಹದ್ದು ಹೊಂದಿರುವ ಕಾರಣ ಮತೀಯ ಗುಂಪುಗಳ ಶೋಧನೆಗೂ ಸಹ ರಾಜ್ಯ ಪೊಲೀಸರಿಗಿಂತ ಎನ್‌ಐಎಗೆ ಸುಲಭವಾಗಲಿದೆ.

ಎನ್‌ಐಎ ವಹಿಸಿ: ಕೇಂದ್ರ ಸಚಿವೆ ಕರಂದ್ಲಾಜೆ

ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ(Harsha Murder) ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ(National Investigation Agency) ವಹಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ(Shobha Karandlaje) ಮನವಿ ಮಾಡಿದ್ದರು.
 

Latest Videos
Follow Us:
Download App:
  • android
  • ios