ಸ್ಟೇಡಿಯಂಗೆ ಪಂಜುರ್ಲಿ ವೇಷ ಧರಿಸಿ ಬಂದ ಅಭಿಮಾನಿ, ಕರಾವಳಿ ಮಂದಿಯಿಂದ ಆಕ್ರೋಶ
ಮುಂಬೈ ಇಂಡಿಯನ್ಸ್ , ಆರ್ಸಿಬಿ ಪಂದ್ಯದಲ್ಲಿ ಪಂಜುರ್ಲಿ ದೈವದ ವೇಷವನ್ನು ಧರಿಸಿ ಅಭಿಮಾನಿಯೊಬ್ಬರು ಕಾಣಿಸಿಕೊಂಡಿದ್ದು,ಕರಾವಳಿ ಮಂದಿ ಬೇಸರಕ್ಕೆ ಕಾರಣವಾಗಿದೆ.
ಕಾಂತಾರ ಬಿಡುಗಡೆಯಾದ ಬಳಿಕ ಪಂಜುರ್ಲಿ ದೈವಗಳ ಬಗ್ಗೆ ಸಾಕಷ್ಟು ಚರ್ಚೆಯಾಯಿತು. ಅಲ್ಲದೆ, ಹಲವು ಮಂದಿ ಪಂಜುರ್ಲಿ ವೇಷದಲ್ಲಿ ರೀಲ್ಸ್ ಕೂಡ ಮಾಡುವ ಮೂಲಕ ವಿವಾದ ಮಾಡಿಕೊಂಡರು. ಹುಡುಗಿಯೊಬ್ಬಳು ಪಂಜುರ್ಲಿ ವೇಷ ಹಾಕಿ ರೀಲ್ಸ್ ಮಾಡಿ ವಿರೋಧ ವ್ಯಕ್ತವಾದ ನಂತರ ಧರ್ಮಸ್ಥಳಕ್ಕೆ ತೆರಳಿ ಕ್ಷಮೆ ಕೂಡ ಕೇಳಿದ್ದರು. ಈಗ ಮತ್ತೆ ಕರಾವಳಿ ಮಂದಿ ಬೇಸರ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಸಮಯದಲ್ಲಿ ಅಭಿಮಾನಿಯೊಬ್ಬ ಪಂಜುರ್ಲಿ ದೈವದ ವೇಷ ಹಾಕಿಕೊಂಡು ಬಂದಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಈ ಫೋಟೊವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದೈವದ ವೇಷ ಹಾಕಿದ್ದನ್ನು ನೋಡಿರುವ ತುಳುವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿ ದೈವದ ವೇಷವನ್ನು ಹಾಕುವ ಮೂಲಕ ತುಳುನಾಡಿನ ದೈವಗಳಿಗೆ ಅವಮಾನ ಮಾಡಬೇಡಿ ಎಂದು ಒತ್ತಾಯಿಸಿದ್ದಾರೆ. ವೇಷ ಹಾಕಿಕೊಂಡು ಬಂದವರಿಗೆ ಕ್ರೀಡಾಂಗಣದ ಒಳಗಡೆ ಪ್ರವೇಶ ನೀಡದಂತೆ ಆಗ್ರಹಿಸಿದ್ದಾರೆ