5:49 PM IST
ರಾಯಚೂರು: ಪ್ರವೀಣ್ ನೆಟ್ಟಾರು ಹತ್ಯೆ: ಬಿಜೆಪಿ ಯುವ ಮುಖಂಡರ ರಾಜೀನಾಮೆ
ರಾಯಚೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ: ಹತ್ಯೆ ಹಿನ್ನೆಲೆ ರಾಯಚೂರು ಜಿಲ್ಲೆಯಲ್ಲಿಯೂ ರಾಜೀನಾಮೆ ಪರ್ವ ಆರಂಭವಾಗಿದೆ. ಲಿಂಗಸೂಗೂರು ಬಿಜೆಪಿ ಯುವ ಮುಖಂಡರು ರಾಜೀನಾಮೆ ನೀಡಿದ್ದಾರೆ. ಮಸ್ಕಿ ಮತ್ತು ರಾಯಚೂರಿನಲ್ಲಿಯೂ ಬಿಜೆಪಿ ಮುಖಂಡರು ರಾಜೀನಾಮೆ ನೀಡಿದ್ದು, "ನಾವು ನಂಬಿದ ನಾಯಕರು ನಮ್ಮ ರಕ್ಷಣೆ ನೀಡುತ್ತಿಲ್ಲ, ಬಿಜೆಪಿ ಹಿಂದುತ್ವದ ತಳಹದಿಯಲ್ಲಿ ಬಂದಿರುವ ಪಕ್ಷ, ಹತ್ತಾರು ಹಿಂದೂ ಮುಖಂಡರ ಹತ್ಯೆಗಳು ಆಗಿದೆ ಅವರಿಗೆ ನ್ಯಾಯ ಸಿಕ್ಕಿಲ್ಲ, ಅಸಮರ್ಥ ನಾಯಕರ ಆಡಳಿತದಿಂದ ಬೇಸತ್ತು ನಾವು ರಾಜೀನಾಮೆ ನೀಡುತ್ತಿದ್ದೇವೆ ಎಂದ ಮುಖಂಡರು" ಎಂದಿದ್ದಾರೆ
5:04 PM IST
ಮಂಗಳೂರು: ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ
ಮಂಗಳೂರು: ಮಂಗಳೂರಿನಿಂದ ರಸ್ತೆ ಮಾರ್ಗವಾಗಿ ಬೆಳ್ಳಾರೆಯತ್ತ ಹೋರಾಟ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ. ಸಿಎಂಗೆ ಗೃಹ ಸಚಿವರ ಆರಗ ಜ್ಞಾನೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ನಳಿನ್ ಕುಮಾರ್ ಕಟೀಲ್, ಸಿಟಿ ರವಿ ಸಾಥ್. ಭಾರಿ ಭದ್ರತೆಯಲ್ಲಿ ಹೊರಟ ಸಿಎಂ.
4:42 PM IST
ತುಮಕೂರು: ಪ್ರವೀಣ್ ನೆಟ್ಟಾರು ಹತ್ಯೆ: ಗೃಹ ಸಚಿವರಿಗೆ ಭಗವದ್ಗೀತೆ ಕೋರಿಯರ್
ತುಮಕೂರು: ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆ ಗೃಹ ಸಚಿವರಿಗೆ ಭಗವದ್ಗೀತೆ ಪುಸ್ತಕ ರವಾನಿಸಿದೆ. ತುಮಕೂರು ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ರಾಕೇಶ್ ಗೃಹ ಸಚಿವರಿಗೆ ಭಗವದ್ಗೀತೆ ಕೋರಿಯರ್ ಮಾಡಿದ್ದಾರೆ. ಭಗವದ್ಗೀತೆ ಓದಿ ರಾಜಧರ್ಮ ಪಾಲಿಸುವಂತೆ ಸಂದೇಶ. ಬರೀ ಕಠಿಣ ಕ್ರಮ ಎಂದು ಗೃಹ ಸಚಿವರು ಹೇಳಿದರೆ ಆಗಲ್ಲ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಯುದ್ದ ಮಾಡುವುವಾಗ ಹೇಗಿರಬೇಕು ಎಂದು ಹೇಳಿದ್ದಾರೆ. ನಿರ್ವೀರ್ಯರಾಗಿ ಇರಬಾರದು ಎಂದು ಸಲಹೆ ಕೊಟ್ಟಿದ್ದಾರೆ. ಹಾಗಾಗಿ ಗೃಹ ಸಚಿವರು ಇದನ್ನು ಓದಿ ತಮ್ಮ ಅಧಿಕಾರ ಬಳಸಿಕೊಳ್ಳಲಿ. ಭಗವದ್ಗೀತೆ ಓದಿ ಧರ್ಮ ಕಾಪಾಡುವ ಬಗ್ಗೆ ತಿಳಿಯಲಿ ಎಂದು ಎಂದು ಆಗ್ರಹಿಸಿದ್ದಾರೆ.
4:15 PM IST
ಚಾಮರಾಜನಗರ: ಬೆಲೆ ಕುಸಿತದಿಂದ ರೈತ ಕಂಗಾಲು: ರಸ್ತೆಗೆ ಟೊಮೆಟೊ ಸುರಿದು ಆಕ್ರೋಶ
ಚಾಮರಾಜನಗರ: ಟೊಮೆಟೋ ಬೆಲೆ ಕುಸಿತದಿಂಸ ಕಂಗಲಾಗಿರುವ ರೈತರು, ರಸ್ತೆಗೆ ಟೊಮೆಟೊ ಸುರಿದು ಆಕ್ರೋಶ ಹೊರ ಹಾಕಿದ್ದಾರೆ. ಚಾಮರಾಜನಗರದ ಗುಂಡ್ಲುಪೇಟೆ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಟೊಮೊಟೋ ಸುರಿದಿದ್ದಾರೆ. ಸದ್ಯ 3 ರೂಪಾಯಿಗು ಟೊಮೆಟೋ ಕೇಳುವವರಿಲ್ಲ. ಹೀಗಾಗಿ ಈ ಬೆಲೆ ವಾಹನ ಬಾಡಿಗೆಗೆ ಸಾಲದೆ ರೈತರು ಟೊಮೊಟೋ ರಸ್ತೆಗೆ ಸುರಿದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಬೆಳೆದ ಬೆಳೆಗೆ ಬೆಂಬಲ ಬೆಲ ಕೊಡುವಂತೆ ರೈತರ ಆಗ್ರಹಿಸಿದ್ದಾರೆ.
3:58 PM IST
ಪ್ರವೀಣ್ ನೆಟ್ಟಾರು ಹತ್ಯೆ: ಬೆಂಗಳೂರಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆ ಇಂದು ಸಂಜೆ ಟೌನ್ ಹಾಲ್ ಬಳಿ ಹಿಂದೂ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಲಿವೆ. ಟೌನ್ ಹಾಲ್ ಬಳಿ ಪ್ರತಿಭಟನೆ ಹಿನ್ನೆಲೆ ಸ್ಥಳದಲ್ಲಿ ಪೊಲೀಸರ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಕೇಂದ್ರ ವಿಭಾಗದ ಎಲ್ಲಾ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದ್ದು ಓರ್ವ ಡಿಸಿಪಿ, ಎರಡು ಎಸಿಪಿ, 7 ಜನ ಇನ್ಸ್ಪೆಕ್ಟರ್, 21 ಜನ ಸಬ್ ಇನ್ಸ್ಪೆಕ್ಟರ್, 4 KSRP ತುಕಡಿ ಸೇರಿದಂತೆ 400ಕ್ಕೂ ಹೆಚ್ಚು ಪೊಲೀಸರ ನಿಯೋಜಿಸಲಾಗಿದೆ
ಪ್ರತಿಭಟನೆ ವೇಳೆ ಯಾವುದೇ ರ್ಯಾಲಿಗೆ ಪೊಲೀಸರು ಅವಕಾಶ ನೀಡಿಲ್ಲ. ಒಂದು ವೇಳೆ ರ್ಯಾಲಿ ಮಾಡಿದ್ರೆ ಕಾರ್ಯಕರ್ತರನ್ನ ಬಂಧಿಸಲು ಪೊಲೀಸರ ಸಿದ್ಧತೆ ಮಾಡಿಕೊಂಡಿದ್ದಾರೆ. ಕೆಎಸ್‌ಆರ್‌ಪಿ (KSRP) ಜೊತೆಗೆ ಮೂರ್ನಾಲ್ಕು ಬಿಎಂಟಿಸಿ (BMTC) ಬಸ್ ಗಳ ನಿಯೋಜನೆ ಮಾಡಲಾಗಿದೆ. ರಸ್ತೆ ತಡೆ, ಸಂಚಾರಕ್ಕೆ ತೊಂದರೆ ಮಾಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ ಹೇಳಿದ್ದಾರೆ.
3:26 PM IST
ಪ್ರವೀಣ್ ನೆಟ್ಟಾರು ಹತ್ಯೆ: ಆರೋಪಿಗಳ ಬಂಧನ
ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಸವಣೂರಿನ ಝಾಕೀರ್ ಮತ್ತು ಬೆಳ್ಳಾರೆಯ ಶಪೀಕ್ ಬಂಧಿತರು. ಇಬ್ಬರು ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು. ದ.ಕ ಎಸ್ಪಿ ಹೃಷಿಕೇಶ್ ಸೋನಾವಣೆ ಹೇಳಿಕೆ, ಆರೋಪಿಗಳಿಬ್ಬರಿಗೆ ಪಿಎಫ್‌ಐ ಸಂಘಟನೆ ಜೊತೆ ನಂಟಿನ ಅನುಮಾನ. ಹೀಗಾಗಿ ಹೆಚ್ಚಿನ ವಿಚಾರಣೆ ನಡೆಸಲಾಗುವುದು, ಎಂದಿದ್ದಾರೆ.
3:07 PM IST
ಬೊಮ್ಮಾಯಿ, ಜ್ಞಾನೇಂದ್ರ, ಕಟೀಲ್, ಸಿಟಿ ರವಿ ಮಂಗಳೂರಿಗೆ
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಿಂದ ಬಿಜೆಪಿಯ ವಿರುದ್ಧ ಪಕ್ಷದ ಕಾರ್ಯಕರ್ತರೇ ಮುಗಿ ಬಿದ್ದಿದ್ದಾರೆ. ಬಿಜೆಪಿ ಸಚಿವರ ಮತ್ತು ಮಂಗಳೂರು ಶಾಸಕರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಈಗ ಪರಿಸ್ಥಿತಿ ಹತೋಟಿಗೆ ತರಲು ಬಿಜೆಪಿ ಎಲ್ಲ ರೀತಿಯ ಪ್ರಯತ್ನ ಮಾಡಲು ಮುಂದಾಗಿದ್ದು, ಸಿಎಂ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಿಟಿ ರವಿ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.
2:37 PM IST
'ಬೊಮ್ಮಾಯಿಗೆ ಸಿಎಂ ಕುರ್ಚಿ ಮೇಲೆ ಕೂರೋ ಯೋಗ್ಯತೆ ಇಲ್ಲ'
ವಿಜಯನಗರ: ಮಂಗಳೂರಿನ ಬೆಳ್ಳಾರೆಯಲ್ಲಿ ಹಿಂದೂ ಕಾರ್ಯಕರ್ತ ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಶ್ರೀರಾಮ ಸೇನೆಯ ವಿಭಾಗೀಯ ಅಧ್ಯಕ್ಷ ಸಂಜೀವ್ ಮರಡಿ ಮಾತನಾಡಿ, ಹಿಂದೂತ್ವದ ಆಧಾರದ ಮೇಲೆ ಅಧಿಕಾರಕ್ಕೆ ಬಂದಿದೆ ಈ ಬಿಜೆಪಿ ಸರ್ಕಾರ. ಇವರ ಅಧಿಕಾರದ ದುರಾಸೆಗೆ ಆಪರೇಷನ್ ಕಮಲ ಅಂತ ಯಡಿಯೂರಪ್ಪನವರು ಮಾಡ್ತಾರೆ. ಇವತ್ತಿನವರೆಗೆ ಯಾವ್ ನನ್ ಮಗ MLA ಕೊಲೆಯಾಗಿದ್ದಾನಾ? ಭಟ್ಕಳದ ಚಿತ್ತರಂಜನ್ ದಾಸ್ ಎಂಬ MLA ಬಿಟ್ರೆ ಬೇರೆ ಯಾರಾದ್ರೂ ಕೊಲೆಯಾಗಿದ್ದಾನಾ? ಬರೀ ಸಾಮಾನ್ಯ ಕಾರ್ಯಕರ್ತರ ಕೊಲೆಯಾಗಿವೆ. ಇಂತಹ ಹರಾಮಿಗಳು ಸಂಘ ಪರಿವಾರವನ್ನ ಬಿಟ್ಟು, ಅಧಿಕಾರದ ದುರಾಸೆಗೆ ಬೇರೆ ಪಕ್ಷದವರನ್ನು ಪಕ್ಷಕ್ಕೆ ಕರ್ಕೊಂಡು ಬಂದು ಅಧಿಕಾರ ನಡೆಸ್ತಾರೆ ಒಬ್ಬ ಹಿಂದೂ ಕಾರ್ಯಕರ್ತನ ಕೊಲೆಯಾದ್ರೆ, ಕೊಲೆ ಮಾಡಿದವರನ್ನು ಗಲ್ಲು ಶಿಕ್ಷೆ ಹಾಕೋಕಾಗೋಲ್ಲಾ ಇವರಿಗೆ. ಇಂಥಹ ಬೇವರ್ಸಿಗಳನ್ನ ಎಷ್ಟು ಜತೆ ತಗೊಂಡು ಹೊಡಿಬೇಕು. ಸಿಎಂ ಬಸವರಾಜ್ ಬೊಮ್ಮಾಯಿಯವರಿಗೆ ಆ ಖುರ್ಚಿ ಮೇಲೆ ಕುಳಿತುಕೊಳ್ಳೋ ಶಕ್ತಿ, ಯೋಗ್ಯತೆ ಇಲ್ಲ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಅಡಿಯಲ್ಲಿ ಎಲ್ಲಾ ಪೊಲೀಸ್ ಇಲಾಖೆ ಇದೆ. ಶಿವಮೊಗ್ಗದಲ್ಲಿ ಕೊಲೆ, ಬೇರೆ ಕಡೆಗಳು ಗಲಾಟೆಯಾಗ್ತಿವೆ. ಇವತ್ತು ಪ್ರವೀಣ್ ನೆಟ್ಟೂರ್, ಕೊಲೆಯಾಗಿದೆ. ಹಿಂದೂ ಸಂಘಟನೆಯ ಹೆಸರಿನ ಮೇಲೆ ಹೋಗಿದ್ದು ಪ್ರವೀಣ್ ನೆಟ್ಟಾರು. ಮೊದಲು ಈ ಗೃಹ ಸಚಿವರನ್ನ ಮನೆಗೆ ಕಳಿಸಿ, ಅವರು ಹೋದಾಗ ಯಾಕೆ ಅವರ ಹಿಂದೆ ಹೋಗ್ತಿರಾ? ಬಕೇಟ್ ಹಿಡಿಯೋ ಕೆಲಸ ಮಾಡಬೇಡಿ. ನಾಳೆ ನಿಮ್ಮ ಮನೆಗಳಲ್ಲಿಯೂ ಕೊಲೆಯಾದಾದ 50 ಲಕ್ಷನೂ, ಒಂದಿಷ್ಟು ಹಣ ಕೊಡ್ತಾರೆ ತಗೋಳ್ತಿರಾ ಅಂತ ಪ್ರಶ್ನಿಸಿದ್ದಾರೆ.
11:55 AM IST
ಪ್ರವೀಣ್ ಬೆಟ್ಟಾರು ಹತ್ಯೆ, 21 ಜನರನ್ನು ವಶಕ್ಕೆ ಪಡೆದ ಪೊಲೀಸರು
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಒಟ್ಟು 21 ಜನರು ಪೊಲೀಸ್ ವಶ. ಪ್ರಕರಣದ ಜಾಡು ಹಿಡಿದು ತನಿಖೆ ತೀವ್ರಗೊಳಿಸಿದ ಪೊಲೀಸರು. ಎಸ್ ಡಿಪಿಐ ಮತ್ತು ಪಿಎಫ್ ಐ ಸಂಘಟನೆಗೆ ಸೇರಿದ ಕೆಲವರು ವಶ. ಬೆಳ್ಳಾರೆ ಮತ್ತು ಸುಳ್ಯ ಭಾಗದ ಹಲವರು ಪೊಲೀಸ್ ವಶ. ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರು. ಈವರೆಗೆ ಒಬ್ಬನನ್ನ ಬಂಧಿಸಿದ್ದು, ಉಳಿದ 21 ಜನರ ವಿಚಾರಣೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಪೊಲೀಸ್ ಉನ್ನತ ಮೂಲಗಳ ಮಾಹಿತಿ.
11:50 AM IST
ತೇಜಸ್ವಿ ಸೂರ್ಯ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯೆ; ಸರ್ಕಾರ ಎಲ್ಲರಿಗೂ ರಕ್ಷಣೆ ನೀಡಬೇಕು ಎಂದ ಕಾಂಗ್ರೆಸ್ ಅಧ್ಯಕ್ಷ
ಎಲ್ಲರಿಗೂ ರಕ್ಷಣೆ ಕೊಡಲು ಆಗಲ್ಲ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್ ಹಾಗಾದ್ರೆ ಸರ್ಕಾರ ಯಾಕೆ ಇರಬೇಕು ಎಂದು ಪ್ರಶ್ನಿಸಿದ್ದಾರೆ. ಮೈಸೂರು ಅತ್ಯಾಚಾರ ಪ್ರಕರಣದಲ್ಲಿ, ಸಂಜೆ ಆರು ಗಂಟೆ ಮೇಲೆ ಯಾರು ಓಡಾಡು ಎಂದು ಹೇಳಿದ್ರು ಅಂತ ಗೃಹ ಸಚಿವರು ಹೇಳಿಲಿಲ್ಲವಾ..? ಐದಾರು ದಿನಗಳ ಹಿಂದೆ ಅಲ್ಲಿ ಇದೆ ರೀತಿಯ ಘಟನೆ ನಡೆದಿದೆ. ಏನು ಕ್ರಮ ತೆಗೆದುಕೊಂಡಿದ್ದಾರೆ...? ಅವರನ್ನು ಬಂಧಿಸಿದ್ದಾರೆ ಎಂದು ಪೊಲೀಸರು ಅಂತ ಹೇಳಿದ್ರು. ರಾಜಕಾರಣಿಗಳು ಮಾತಾಡೋದು ಬಿಡಬೇಕು. ಪೊಲೀಸರಿಗೆ ಪ್ರೀ ಹ್ಯಾಂಡ್ ಕೊಡಬೇಕು. ಕಾಂಗ್ರೆಸ್ ಬೆಂಬಲಿತ ಮತಾಂಧ ಶಕ್ತಿಗಳ ಕೃತ್ಯದ ಹಿಂದೆ ಇವೆ ಎಂಬ ಬಿಜೆಪಿ ಟ್ವೀಟ್ ವಿಚಾರ. ಯಾರೇ ಆರೋಪ ಮಾಡಲಿ, ಅವರು ರಾಜಕೀಯ ಮಾಡ್ತಾರಲ್ಲ, ಅವರ ಮೇಲೆ ಕ್ರಮ ತೆಗೆದುಕೊಳ್ಳಲಿ. ಇದರಲ್ಲಿ ರಾಜಕಾರಣ ಮಾಡಬಾರದು ಎಂದು ಪ್ರತಿಕ್ರಿಯಿಸಿದ್ದಾರೆ.
11:43 AM IST
ಪ್ರವೀಣ್ ಹತ್ಯೆ ಖಂಡಿಸಿ ಮಡಿಕೇರಿಯಲ್ಲಿ ಪ್ರತಿಭಟನೆ
ಪ್ರವೀಣ್ ನೆಟ್ಟಾರು ಕೊಲೆ ಖಂಡಿಸಿ ಮಡಿಕೇರಿಯಲ್ಲಿ ಪ್ರತಿಭಟನೆ. ಹಿಂದೂಪರ ಸಂಘಟನೆಗಳಿಂದ ತೀವ್ರ ಆಕ್ರೋಶ. ನಗರದ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ. ವಿಹೆಚ್ ಪಿ, ಭಜರಂಗದಳ, ದುರ್ಗಾವಾಹಿನಿ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ. ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗಿ. ನರಸತ್ತ ಸರ್ಕಾರ ಎಂದು ಕೂಗಿ ಆಕ್ರೋಶ. ಮುಖ್ಯಮಂತ್ರಿ, ಗೃಹಸಚಿವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ. ಆರೋಪಿಗಳ ಗಲ್ಲು ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹ. ಪಿಎಫ್ಐ, ಎಸ್ ಡಿಪಿಐ ಸಂಘಟನೆಗಳ ನಿಷೇಧಿಸುವಂತೆ ಒತ್ತಾಯ. ಹಿಂದೂಗಳಿಗೆ ರಕ್ಷಣೆ ನೀಡಲು ಆಗದಿದ್ದರೆ ಅಧಿಕಾರದಿಂದ ತೊಲಗಿ ಎಂದು ಆಕ್ರೋಶ.
10:45 AM IST
ಕಾರ್ಯಕರ್ತರ ಆಕ್ರೋಶ ಪಕ್ಷದ ಮೇಲಲ್ಲ, ಹಿಂದೂಗಳ ಮೇಲಿನ ಕ್ರೌರ್ಯದ ವಿರುದ್ಧವಿದೆ: ತೇಜಸ್ವಿ ಸೂರ್ಯ
ನವದೆಹಲಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದು ಬಿಜೆಪಿ ಯುವ ಮೋರ್ಚಾದ ಸದಸ್ಯ ಪ್ರವೀಣ್ ಹತ್ಯೆಯಾಗಿದೆ, ಇಡೀ ರಾಜ್ಯದಲ್ಲಿ ಬೇಸರ ದುಖಃ, ಅಸಹಾಯಕತೆ, ಆಕ್ರೋಶದ ಭಾವನೆ ಮೂಡಿಸಿದೆ ಎಂದಿದ್ದಾರೆ. ಒಂಭತ್ತು ತಿಂಗಳ ಮಗುವಿನ ತಂದೆಯಾಗಿದ್ದರು ಪ್ರವೀಣ್, ಯಾವುದೇ ತಪ್ಪಿಲ್ಲದಿದ್ದರೂ ಹತ್ಯೆಯಾಗಿದೆ. ಬಿಜೆಪಿ ಕಾರ್ಯಕರ್ತ ಅನ್ನೊ ಕಾರಣಕ್ಕೆ ಹತ್ಯೆ ಮಾಡಲಾಗಿದೆ. ಈ ಆಘಾತ ಸಹಿಸಲು ಕುಟುಂಬಕ್ಕೆ ಶಕ್ತಿ ಕೊಡಲಿ. ನಮ್ಮ ಪ್ರತಿಯೊಬ್ಬ ಕಾರ್ಯಕರ್ತ ಅವರ ಜೊತೆಗಿದ್ದಾರೆ. ಇಂದು ವರ್ಚುವಲ್ ಸಭೆ ನಡೆಸಿದ್ದೆವು. ಮಹತ್ವದ ತಿರ್ಮಾನ ತೆಗೆದುಕೊಂಡಿದ್ದೇವೆ. ಯುವ ಮೋರ್ಚಾ ಪ್ರವೀಣ್ ಕುಟುಂಬಕ್ಕೆ ಸಹಾಯ ಮಾಡಲು ತಿರ್ಮಾನಿಸಿದೆ. ಪ್ರತಿ ಜಿಲ್ಲೆಯಿಂದ ಯುವ ಮೋರ್ಚಾ ಕಾರ್ಯಕರ್ತರು ಪ್ರವೀಣ್ ಕುಟುಂಬಕ್ಕೆ ಸಹಾಯ ಮಾಡಲಿದೆ. ಮಂಗಳೂರು ತೆರಳಿ ಆರ್ಥಿಕ ಸಹಾಯ ಮಾಡಲಿದ್ದೇವೆ. ಜೊತೆಗೆ ಹಿರಿಯ ನಾಯಕರ ಜೊತೆಗೆ ಮಾತನಾಡಿದ್ದೇವೆ. ಈ ಸರಣಿ ಹತ್ಯೆ ಹಿಂದಿರುವ ಗುಂಪು ಪತ್ತೆ ಹಚ್ಚಲು ಸರ್ಕಾರ ಮೇಲೆ ಒತ್ತಡ ಹಾಕುತ್ತಿದ್ದೇವೆ. ರಾಜಕೀಯ ಪ್ರಯೋಗ ಮಾಡ್ತಿರುವುದು ಕಾಂಗ್ರೆಸ್. ವ್ಯಕ್ತಿಯ ಹತ್ಯೆ ಎನ್ನುವುದು ರಾಜಕೀಯ ಪ್ರಯೋಗವಾ? ಬಿಜೆಪಿ ಈ ರೀತಿಯ ಪ್ರಯೋಗ ಮಾಡಲ್ಲ. ಎಫ್‌ಐಆರ್ ರದ್ದು ಮಾಡಿ ಪ್ರಯೋಗ ಮಾಡಿದ್ದು ಯಾರು? ಕಾರ್ಯಕರ್ತರ ಆಕ್ರೋಶ ಪಕ್ಷದ ಮೇಲೆ ಅಲ್ಲ. ಹಿಂದೂ ಸಮಾಜ ಹೋಗ್ತಿರುವ ದಿಕ್ಕು ನೋಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾನು ಎಲ್ಲರಿಗೂ ಮನವಿ ಮಾಡುತ್ತೇನೆ, ಯಾರು ರಾಜೀನಾಮೆ ನೀಡಬಾರದು. ಬಿಕೆ ಹರಿಪ್ರಸಾದ್ ಅಂತಹ ನಾಯಕನ ಹೇಳಿಕೆಗೆ ನಾನು ಉತ್ತರ ನೀಡಲ್ಲ. ಪುಲ್ವಾಮಾ ದಾಳಿಯಲ್ಲಿ ಯೋಧರು ಸತ್ತಾಗ, ಅದನ್ನ ಮೋದಿ ರಾಜಕೀಯ ಗಿಮಿಕ್ ಅಂದ ವ್ಯಕ್ತಿ. ಅಂತಹ ವ್ಯಕ್ತಿಯ ಹೆಸರು ನಾನು ಹೇಳಲು ಇಷ್ಟಪಡಲ್ಲ. ಸಿದ್ದರಾಮಯ್ಯ ಜಮೀರ್ ಅಹ್ಮದ್ ಅಂತಹ ರಾಜಕಾರಣಿಗಳು ಹೇಗೆ ಕುಮ್ಮಕ್ಕು ನೀಡಲಾಗುತ್ತಿದೆ ಹಿಂದೂಗಳು ಗಮನಿಸಬೇಕು. ಯಾರ ಮೇಲೆ ಹಿಂದೆ ಹತ್ಯೆಯ ಕೇಸಿತ್ತು ಅವರ ಮೇಲಿನ ಎಫ್‌ಐಆರ್ ರದ್ದು ಮಾಡಲಾಗಿತ್ತು. ಅದಾಗ್ಯೂ ಯಾಕೆ ಒಂದು ವರ್ಗದ ಜನರು ಹೀಗೆ ಮಾಡುತ್ತಿದ್ದಾರೆ. ರಾಜಸ್ಥಾನದಲ್ಲೂ ಕನ್ನಯ್ಯಲಾಲ್ ಹತ್ಯೆ ಮಾಡಲಾಯ್ತು. ಸಾಮಾನ್ಯ ಜನರಿಗೂ ಭದ್ರತೆ ನೀಡಲು ಸಾಧ್ಯವಾ? ಇದು ಮತಾಂಧತೆ ಮತ್ತು ಸಿದ್ದಾಂತದ ಸಮಸ್ಯೆ.
10:18 AM IST
ಸಾವಿನ ಮನೆಯಲ್ಲಿ ಸಂಭ್ರಮಿಸುವ ವಿಕೃತಿ ಬೇಡವೆಂದಿದ್ದೆ: ಎಚ್ಡಿಕೆ
ಸಾವಿನ ಮನೆಯಲ್ಲಿ ಸಂಭ್ರಮಿಸುವ ವಿಕೃತಿ ಬೇಡವೆಂದು ನಾನು ಹೇಳಿದ್ದೆ. ಪಾಪ.. ರಾಜ್ಯ ಬಿಜೆಪಿ ಸರಕಾರಕ್ಕೆ ಮಧ್ಯರಾತ್ರಿಯಲ್ಲೇ ಜ್ಞಾನೋದಯವಾಗಿದೆ.
ʼಸಾವುಗಳನ್ನೇ ಸಾಧನೆʼಗಳನ್ನಾಗಿ ಮಾಡಿಕೊಂಡು, ಅವುಗಳನ್ನೇ ಅಧಿಕಾರದ ಏಣಿ ಮಾಡಿಕೊಂಡವರಿಗೆ ಅಂತೂ ಪಾಪಪ್ರಜ್ಞೆ ಕಾಡಿತಲ್ಲ ಎನ್ನುವ ಸಮಾಧಾನ, ಸರಕಾರ ಮುಖ ಉಳಿಸಿಕೊಂಡಿದೆ.
ಸರಕಾರದ ಕಾಳಜಿಯಲ್ಲಿ ಸಾಚಾತನವಿಲ್ಲ. ʼಸಾವಿನಲ್ಲೂ ಸಿಂಪಥಿʼ ಗಿಟ್ಟಿಸುವ ವ್ಯರ್ಥ ಪ್ರಯತ್ನ ವಾಕರಿಕೆ ತರಿಸುತ್ತದೆ. ಸಾಧನಾ ಸಮಾವೇಶ ನಿಂತಿತಲ್ಲ ಎನ್ನುವ ಹತಾಶೆ ಎದ್ದು ಕಾಣುತ್ತಿದೆ. ರಾಜ್ಯದಲ್ಲಿ ಸಾವುಗಳ ಮೆರವಣಿಗೆ ನಡೆಯುತ್ತಿರುವುದಷ್ಟೇ ಬಿಜೆಪಿ ಸರಕಾರದ ವರ್ಷದ ಸಾಧನೆ!!
ಜಾತಿ, ಧರ್ಮ, ಆಚಾರ, ವಿಚಾರ, ಆಹಾರ, ವ್ಯಾಪಾರ, ಉಡುಗೆ-ತೊಡುಗೆ ನೆಪದಲ್ಲಿ ರಾಜ್ಯವನ್ನು ಭಾವನಾತ್ಮಕವಾಗಿ ಛಿದ್ರ ಛಿದ್ರ ಮಾಡಿದ್ದಾ ಸಾಧನೆ? ತಿನ್ನುವ ಅನ್ನದಲ್ಲಿ, ಕಲಿಯುವ ಅಕ್ಷರದಲ್ಲಿ, ಉರಿಯುವ ಮನೆಯಲ್ಲಿ ʼಮತಕ್ಕಾಗಿ ಕೋಮು ಗಳʼ ಇರಿಯುವುದಾ ಸಾಧನೆ? ಸಾಧನೆ ನೆಪದಲ್ಲಿ ನಲಿಯುವ ಮುನ್ನ ಕನಿಷ್ಠ ನಾಚುವ ಸೂಕ್ಷ್ಮತೆಯೂ ಇಲ್ಲವಲ್ಲ.
ಇನ್ನೆಷ್ಟು ಯುವಕರ ಕಗ್ಗೊಲೆ ಆಗಬೇಕು? ಅದೆಷ್ಟು ಬಡಮನೆಗಳ ದೀಪಗಳು ಆರಬೇಕು? ಮತ್ತೆಷ್ಟು ಹೆತ್ತ ಕರುಳುಗಳು ಕಣ್ಣೀರಿಡಬೇಕು? ಹರ್ಷ, ಚಂದ್ರು ತಾಯಿಂದರ ಆರ್ತನಾದ ಸರಕಾರಕ್ಕೆ ಕೇಳಿಸಿದ್ದಿದ್ದರೆ ಪ್ರವೀಣ್ ನೆಟ್ಟಾರು ಅಮ್ಮನ ಆರ್ತನಾದ ಕೇಳುವ ಸ್ಥಿತಿ ಬರುತ್ತಿತ್ತಾ? ಕೊಲೆಯನ್ನೇ ತಡೆಯಲಾಗದೇ ಈಗ ʼಕೃತಕ ಸಾಂತ್ವನʼ ಹೇಳಿದರೇನು ಪ್ರಯೋಜನ?
ತಾಯಿಂದಿರ ಆರ್ತನಾದ ಸರಕಾರದ ಕಿವಿಗೆ ಇಂಪಾದ ʼನಾದʼದಂತೆ ಕೇಳುತ್ತಿವೆಯಾ? ಬಿಜೆಪಿಯ ʼಮತಕ್ಕಾಗಿ ಮರಣಮೃದಂಗʼದ ಆಳ-ಅಗಲ ಈಗ ಜನರಿಗೂ ಅರ್ಥವಾಗುತ್ತಿದೆ. ಬಿಜೆಪಿ ಅಧ್ಯಕ್ಷರು ಸೇರಿ ಸಚಿವರಿಬ್ಬರಿಗೆ ಎದುರಾದ ಪ್ರತಿರೋಧವೇ ಜನರ ತಾಳ್ಮೆ ಕಟ್ಟೆಯೊಡೆದಿದೆ ಎನ್ನುವುದಕ್ಕೆ ಸಾಕ್ಷಿ. ಕರಾವಳಿ ಕೆರಳಿದೆ. ಕರ್ನಾಟಕ ಕೆರಳುವುದು ಬಾಕಿ ಇದೆ.
ಏನು ಸಾಧನೆ ಅಂತ ಸರಕಾರ ಜನರಿಗೆ ಹೇಳುತ್ತದೆ?
*40% ಕಮಿಷನ್
*ಕೋವಿಡ್ ಹೆಸರಿನಲ್ಲಿ ಕೊಳ್ಳೆ
*ಅಧಿಕಾರಿಗಳ ವರ್ಗದಲ್ಲಿ ಪೇಮೆಂಟ್ ಕೋಟಾ
*ಪಿಎಸ್ಐ ನೇಮಕದಲ್ಲಿ ಕಾಸಿನಾಟ
*ಸಹಾಯಕ ಪ್ರಾಧ್ಯಾಕರ ನೇಮಕದಲ್ಲೂ ನೋಟಿನಾಟ
ಜೇಬು ತುಂಬಿಸಿಕೊಳ್ಳುವ ಧನದಾಟ ಬಿಟ್ಟರೆ, ಜನರಿಗೆ ಸರಕಾರ ಮಾಡಿದ್ದೇನು?
ನಡುರಸ್ತೆಯಲ್ಲಿ ಹರಿದ ಪ್ರವೀಣ್ ನೆಟ್ಟಾರು ನೆತ್ತರು, ನಾಡಿನ ಆತ್ಮಸಾಕ್ಷಿಯನ್ನು ಕಲಕಿದೆ. ಒಂದೇ ಊರಿನಲ್ಲಿ ಎಂಟೇ ದಿನದಲ್ಲಿ 2 ಕೊಲೆ ನಡೆದಿವೆ ಎಂದರೆ ಈ ಸರಕಾರ ಬದುಕಿದೆಯಾ? ಸತ್ತಿದೆಯಾ?
ಸತ್ತ ಸರಕಾರದ ಸಾಹುಕಾರನಿಗೆ ಸಂಭ್ರಮದ ಚಿಂತೆ, ಆಗದ ಸಾಧನೆ ಹೇಳಿಕೊಳ್ಳುವ ಅನಿವಾರ್ಯತೆ..
ಇನ್ನಾದರೂ ಕಂಡೋರ ಮಕ್ಕಳನ್ನು ಸಾವಿನ ದವಡೆಗೆ ನೂಕಿ ಮತ ಫಸಲು ತೆಗೆಯುವ ʼನರಹಂತಕ ರಾಜಕಾರಣʼ ನಿಲ್ಲಲಿ. 8/8
#ಕರಾವಳಿ_ಕೆರಳಿದೆ

— H D Kumaraswamy (@hd_kumaraswamy) July 28, 2022
ʼಸಾವುಗಳನ್ನೇ ಸಾಧನೆʼಗಳನ್ನಾಗಿ ಮಾಡಿಕೊಂಡು, ಅವುಗಳನ್ನೇ ಅಧಿಕಾರದ ಏಣಿ ಮಾಡಿಕೊಂಡವರಿಗೆ ಅಂತೂ ಪಾಪಪ್ರಜ್ಞೆ ಕಾಡಿತಲ್ಲ ಎನ್ನುವ ಸಮಾಧಾನ, ಸರಕಾರ ಮುಖ ಉಳಿಸಿಕೊಂಡಿದೆ. 1/8
10:13 AM IST
ಬೆಂಗ್ಳೂರು ಏರ್ ಶೋ ಪ್ರದರ್ಶನಕ್ಕೆ 7 ತಿಂಗಳ ಮುಂಚೆಯೇ ಸಿದ್ಧತೆ..!
ಮುಂದಿನ ವರ್ಷ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ 14ನೇ ಆವೃತ್ತಿಯ ‘ಏರೋ ಇಂಡಿಯಾ ವೈಮಾನಿಕ ಪ್ರದರ್ಶನ’ಕ್ಕೆ ರಾಜ್ಯ ಸರ್ಕಾರ ಅಗತ್ಯ ಸಿದ್ಧತೆ ಆರಂಭಿಸಿದೆ. ಏರ್ ಶೋ ನಡೆಯುವ ಯಲಹಂಕ ವಾಯುನೆಲೆಯ ಸುತ್ತಮುತ್ತ ಪಾರ್ಕಿಂಗ್, ರಸ್ತೆ ಕಾಮಗಾರಿ, ಬಸ್ ಸಂಚಾರ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.
10:05 AM IST
ವಿಕ್ರಾಂತ್ ರೋಣ ನೋಡಿ ಕಿಚ್ಚನ ಪತ್ನಿ ಭಾವುಕ
ಸಿನಿಮಾ ನೋಡಿ ಎಮೋಷನ್ ಆದ ಸುದೀಪ್ ಪತ್ನಿ ಪ್ರಿಯಾ ಸುದೀಪ್. ಸುದೀಪ್ ಅಕ್ಕನ ಮಗ ಸಂಚಿತ್ ಅವರನ್ನು ಅಪ್ಪಿಕೊಂಡು ಕಣ್ಣೀರಾದ ಪ್ರಿಯಾ ಸುದೀಪ್. ಊರ್ವಶಿ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಪ್ರಿಯಾ ಸುದೀಪ್. ಪ್ರಿಯಾ ಸುದೀಪ್ ಜೊತೆ ನಟ ಅನೂಪ್ ಭಂಡಾರಿ ಕೂಡ ಆಗಮಿಸಿದ್ದರು.
ವರ್ಲ್ಡ್ವೈಡ್ ಮೊದಲ ದಿನ 2500 ಸ್ಕ್ರೀನ್ನಲ್ಲಿ ಸುದೀಪ್ ದರ್ಶನವಾಗಲಿದೆ. ವಿಶ್ವದ್ಯಾಂತ ಮೊದಲ ದಿನ 9000ಕ್ಕೂ ಅಧಿಕ ಪ್ರದರ್ಶನ. ಕರ್ನಾಟಕದಲ್ಲಿ ವಿಕ್ರಾಂತ್ ರೋಣ ದರ್ಬಾರ್. ಕರುನಾಡಿನಲ್ಲಿ ಮೊದಲ ದಿನ 325 ಸಿಂಗಲ್ ಸ್ಕ್ರೀನ್, 65 ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾ ಬಿಡುಗಡೆ ಮೊದಲ ದಿನ ರಾಜ್ಯದಲ್ಲಿ ಬರೋಬ್ಬರಿ 2500 ಶೋಸ್ ನಡೆಯುವ ಸಾಧ್ಯತೆ. ಸುಮಾರು 900 ಸ್ಕ್ರೀನ್ 3ಡಿ ಹಾಗೂ 1600 ಸ್ಕ್ರೀನ್ನಲ್ಲಿ 2ಡಿ ವರ್ಷನ್ ಬಿಡುಗಡೆ. ಬೆಂಗಳೂರಿನಲ್ಲಿ ಮೊದಲ ದಿನ ಸಾವಿರಕ್ಕೂ ಹೆಚ್ಚು ಶೋಸ್. ಬೆಂಗಳೂರಿನ 40 ಮಲ್ಟಿಪ್ಲೆಕ್ಸ್ನಲ್ಲಿ 800 ಶೋ ಶೋಸ್. ಒಟ್ಟು 70 ಸಿಂಗಲ್ ಸ್ಕ್ರೀನ್ನಲ್ಲಿ 400 ಶೋ ಆಗಲಿದೆ. ತೆಲುಗು ರಾಜ್ಯಗಳ 350 ಸಿಂಗಲ್ ಸ್ಕ್ರೀನ್ನಲ್ಲಿ ರಿಲೀಸ್ ಆಗಲಿದ್ದು, ಮೊದಲ ದಿನ 1400 ಶೋ ಆಗುವ ನಿರೀಕ್ಷೆ ಇದೆ.
9:58 AM IST
ಆಭರಣ ಪ್ರಿಯರೇ ಇಲ್ನೋಡಿ: ರಾಜ್ಯದಲ್ಲಿ ಬಂಗಾರ, ಬೆಳ್ಳಿ ದರದಲ್ಲಿ ಇಳಿಕೆ
ದೇಶದಲ್ಲಿ ಆಭರಣ ಪ್ರಿಯರ ಸಂಖ್ಯೆಗೇನೂ ಕೊರತೆ ಇಲ್ಲ. ಮದುವೆ, ಮುಂತಾದ ಶುಭ ಸಮಾರಂಭಗಳಿಗೆ ಬಂಗಾರ, ಬೆಳ್ಳಿ ಖರೀದಿಸುವವರೂ ಸಹ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅದೇ ರೀತಿ, ನೀವೂ ಸಹ ಚಿನ್ನ, ಬೆಳ್ಳಿಖರೀದಿಸುವ ಪ್ಲ್ಯಾನ್ ಮಾಡುತ್ತಿದ್ದೀರಾ..? ಹಾಗಾದರೆ, ನಿಮಗೆ ಇಂದು ಒಳ್ಳೆಯ ಸುದ್ದಿ ಅನ್ಸುತ್ತೆ. ಏಕೆಂದರೆ ದೇಶದಲ್ಲಿಂದು ಚಿನ್ನದ ಬೆಲೆಯಲ್ಲಿ (Gold Price) ಇಳಿಕೆಯಾಗಿದೆ. ಬೆಳ್ಳಿ ಬೆಲೆ ಸಹ ಕಡಿಮೆಯಾಗಿದೆ. ಹಾಗಾದ್ರೆ ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ..? ದೇಶದ ಪ್ರಮುಖ ನಗರಗಳಲ್ಲಿ ದರ ಹೇಗಿದೆ..? ಇಲ್ಲಿದೆ ವಿವರ.
ಯಾವ ರಾಜ್ಯದಲ್ಲಿ ಬೆಳ್ಳಿ, ಬಂಗಾರ ಬೆಲೆ ಎಷ್ಟಿದೆ, ಇಲ್ಲಿದೆ ಮಾಹಿತಿ
9:54 AM IST
ಪ್ರವೀಣ್ ಹತ್ಯೆ: ಕೋಲಾರ ಸಂಸದ ಮುನಿಸ್ವಾಮಿ ಖಂಡನೆ
ಕೋಲಾರ: ಬಿಜೆಪಿ ಮುಖಂಡ ಪ್ರವೀಣ್ ಕೊಲೆಗೆ ಸಂಸದ ಎಸ್.ಮುನಿಸ್ವಾಮಿ ಖಂಡನೆ. ಬಿಜೆಪಿಯ ಸಕ್ರಿಯ ಕಾರ್ಯಕರ್ತ ಪ್ರವೀಣ್ ಕೊಲೆ ಅಮಾನುಷ. ರಾಜ್ಯದಲ್ಲಿ ಹಿಂದುಗಳ ಕೊಲೆ ಎರಡು ಮೂರು ತಿಂಗಳಿಗೊಮ್ಮೆ ನಡೆಯುತ್ತಿರುವುದು ಬೇಸರ. ಪ್ರವೀಣ್ ಕೊಲೆಯ ಹಿನ್ನಲೆ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು ರಾಜಿನಾಮೇ ನೀಡಿರುವುದು ಸರಿಯಲ್ಲ. ಪ್ರವೀಣ್ ನಿಮಗೆ ಮಾತ್ರವಲ್ಲ ನಮ್ಮಗೆಲ್ಲರಿಗೂ ಸಹೋದರ. ಹಿಂದು ಪರ ಸಂಘಟನೆಯ ಮುಖಂಡರನ್ನು ಕೊಲೆಮಾಡಲು ಬೇರೆ ರಾಜ್ಯದಿಂದ ಜನರನ್ನ ಕರೆಸಿ ಕೊಲೆ ಪಿತೂರಿ ನಡೆಯುತ್ತಿದೆ. ರಾಜ್ಯದಲ್ಲಿ ಹಿಂದುಗಳು ಒಗ್ಗಟ್ಟು ಆಗಬೇಕು. ಎಸ್ ಡಿಪಿಐ, ಪಿಎಫ್ಐ ಇತರೆ ಸಂಘಟನೆಗಳು ಇಂತಹ ಕೃತ್ಯದಲ್ಲಿ ಭಾಗಿ. ಗೃಹ ಮಂತ್ರಿಗಳು ಈಗಾಗಲೇ ಆರೋಪಿಗಳ ಬಂಧನಕ್ಕೆ ತಂಡಗಳು ರಚಿಸಿದ್ದಾರೆ. ರಾಜ್ಯ ಸರ್ಕಾರ ಈ ಕೃತ್ಯದಲ್ಲಿ ಭಾಗಿಯಾದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು.
9:49 AM IST
ಜನೋತ್ಸವ ರದ್ದು: ಬಿಜೆಪಿಗೆ ಕಾಂಗ್ರೆಸ್ ಛೀಮಾರಿ
ಜನಪರ ಯೋಜನೆಯನ್ನೇ ರೂಪಿಸದ ಸರ್ಕಾರ ಜನೋತ್ಸವ ಎಂಬ ಕೃತಕ ಜನ ಬೆಂಬಲವನ್ನು ತೋರಿಸಲು ಹೊರಟಿತ್ತು. ಆದರೆ ಸರಕಾರದ ವೈಫಲ್ಯಕ್ಕೆ ಸಾಕ್ಷಿ ಎಂಬಂತೆ ಜನರ ಅಸಲಿ ಆಕ್ರೋಶವನ್ನ ಕಣ್ಣಾರೆ ಕಂಡಿತು. ಮಧ್ಯರಾತ್ರಿ ಓಡೋಡಿ ಬಂದು ಕಾರ್ಯಕ್ರಮವನ್ನು ರದ್ದುಗೊಳಿಸುವಷ್ಟು ಅನಿವಾರ್ಯತೆ ಸೃಷ್ಟಿಯಾಗಿದ್ದು ಈ ಸರ್ಕಾರದ ಅಸಲಿ ಸಾಧನೆಗೆ ಕನ್ನಡಿ ಹಿಡಿದಂತಾಗಿದೆ, ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.
ಜನಪರ ಯೋಜನೆಯನ್ನೇ ರೂಪಿಸದ ಸರ್ಕಾರ ಜನೋತ್ಸವ ಎಂಬ ಕೃತಕ ಜನ ಬೆಂಬಲವನ್ನು ತೋರಿಸಲು ಹೊರಟಿತ್ತು.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) July 28, 2022
ಆದರೆ ಸರಕಾರದ ವೈಫಲ್ಯಕ್ಕೆ ಸಾಕ್ಷಿ ಎಂಬಂತೆ ಜನರ ಅಸಲಿ ಆಕ್ರೋಶವನ್ನ ಕಣ್ಣಾರೆ ಕಂಡಿತು.
ಮಧ್ಯರಾತ್ರಿ ಓಡೋಡಿ ಬಂದು ಕಾರ್ಯಕ್ರಮವನ್ನು ರದ್ದುಗೊಳಿಸುವಷ್ಟು ಅನಿವಾರ್ಯತೆ ಸೃಷ್ಟಿಯಾಗಿದ್ದು ಈ ಸರ್ಕಾರದ ಅಸಲಿ ಸಾಧನೆಗೆ ಕನ್ನಡಿ ಹಿಡಿದಂತಾಗಿದೆ.
9:38 AM IST
ಭಟ್ಕಳದಲ್ಲಿ ಅದ್ಧೂರಿ ಮಾರಿ ಜಾತ್ರೆ: ದೇವಿಯ ದರ್ಶನ ಪಡೆದ ಸಾವಿರಾರು ಭಕ್ತರು
ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಸುಪ್ರಸಿದ್ಧ ಮಾರಿ ಜಾತ್ರೆಯು ಬುಧವಾರ ಮಾರಿಕಾಂಬೆ ದೇವಸ್ಥಾನದ ಗದ್ದುಗೆ ಏರುವುದರ ಮೂಲಕ ವಿದ್ಯುಕ್ತವಾಗಿ ಚಾಲನೆಗೊಂಡಿತು. ಮಂಗಳವಾರ ರಾತ್ರಿ ಮಾರಿಕಾಂಬೆ ದೇವಿ ಮೂರ್ತಿಯ ತಯಾರಕರಾದ ವಿಶ್ವಕರ್ಮ ಸಮಾಜದವರಿಂದ ವಿಶೇಷ ಪೂಜೆ ಸಂಪನ್ನಗೊಂಡ ಬಳಿಕ ಮಾರಿ ದೇವಿಯ ಮೂರ್ತಿಯನ್ನು ಮೆರವಣಿಗೆಯ ಮೂಲಕ ಕರೆತಂದು ಸಂಪ್ರದಾಯದಂತೆ ಜೈನ ಸಮುದಾಯದವರಿಂದ ದೇವಿಗೆ ಮೊದಲ ಪೂಜೆ ಸಲ್ಲಿಸಲಾಯಿತು.
ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ
9:37 AM IST
ಶಂಕಿತ ಉಗ್ರ ಅಖ್ತರ್ ವಿಚಾರಣೆ ತೀವ್ರಗೊಳಿಸಿದ ಸಿಸಿಬಿ
ಇಬ್ಬರು ಶಂಕಿತರು ಸಂಘಟನೆಯೊಂದರ ಜೊತೆ ಸಂಭಾಷಣೆ ನಡೆಸಿರೋದು ಪತ್ತೆ. ಶಂಕಿತ ಉಗ್ರರಾದ ಅಖ್ತರ್ ಹುಸೇನ್ ಮತ್ತು ಅಬ್ದುಲ್ ಅಲೀಂ ಸಂಭಾಷಣೆ. ದುಬೈಗೆ ಬಂದು ಆಫ್ಘಾನಿಸ್ಥಾನಕ್ಕೆ ಬರಲು ಸಂಭಾಷಣೆಯಲ್ಲಿ ಸೂಚನೆ. 2 ಲಕ್ಷ ಹಣ ಹೊಂದಿಸಿಕೊಳ್ಳುವಂತೆ ಸೂಚಿಸಿದ್ದ ಹ್ಯಾಂಡ್ಲರ್. ಇಬ್ಬರ ಬಳಿ ಹಣ ಇಲ್ಲವೆಂದಾಗ ಕಾಶ್ಮೀರಕ್ಕೆ ಬರಲು ಸೂಚನೆ. ಅಲ್ಲಿಂದ ಕರೆಸಿ ಕೊಳ್ಳುವುದಾಗಿ ಹ್ಯಾಂಡ್ಲರ್ ಭರವಸೆ ನೀಡಿದ್ದ. ಅಲ್ಲದೇ ನೀವು ಎಲ್ಲದಕ್ಕೂ ಸಿದ್ದರಿರಬೇಕು ಎಂಬುದನ್ನೂ ಹೇಳಿದ್ದ. ಮುಂದಿನ ವಾರದಲ್ಲಿ ಶಂಕಿತರು ಕಾಶ್ಮೀರಕ್ಕೆ ಹೊರಡಲು ಸಜ್ಜು. ಅಷ್ಟರಲ್ಲಿ ಸಿಸಿಬಿ ಬಲೆಗೆ ಬಿದ್ದ ಶಂಕಿತರು. ಸದ್ಯ ಇಬ್ಬರ ವಿಚಾರಣೆ ತೀವ್ರಗೊಳಿಸಿದ ಸಿಸಿಬಿ ಪೊಲೀಸರು.
9:36 AM IST
ಬೆಂಗಳೂರಿನಲ್ಲಿ ಆನ್ ಲೈನ್ ಸಾಲಗಾರರ ಕಿರುಕುಳಕ್ಕೆ ಮತ್ತೊಬ್ಬ ಬಲಿ
ಆನ್‌ಲೈನ್ ಸಾಲಗಾರರ ಹಾವಳಿಗೆ ಬೇಸತ್ತ ವ್ಯಕ್ತಿ ಆತ್ಮಹತ್ಯೆ. ನಾಗದೇವನಹಳ್ಳಿಯ ನಂದಕುಮಾರ್ ಮೃತ ವ್ಯಕ್ತಿ. ಖಾಸಗಿ ಕೋಅಪರೇಟಿವ್ ಬ್ಯಾಂಕ್‌ನಲ್ಲಿ ಕೆಲಸ ಮಾಡ್ತಿದ್ದ ನಂದಕುಮಾರ್. ಆನ್‌ಲೈನ್ ಆ್ಯಪ್ ಮೂಲಕ ಸಾಲ ಪಡೆದಿದ್ದ ನಂದಕುಮಾರ್. ಸಾಲ ಹಿಂದಿರುಗಿಸುವುದು ಸ್ವಲ್ಪ ತಡವಾಗಿದ್ದರಿಂದ ಕಿರುಕುಳ. ನಂದಕುಮಾರ್ ಪೋಟೋವನ್ನು ಅಶ್ಲೀಲವಾಗಿ ಮಾರ್ಪಡಿಸಿ ಕಿರುಕುಳ. ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ನಂದಕುಮಾರ್. ಆನ್ ಲೈನ್ ಆ್ಯಪ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಡೆತ್ ನೋಟ್‌ನಲ್ಲಿ ಉಲ್ಲೇಖ. ಬೆಂಗಳೂರು ಸಿಟಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
9:34 AM IST
ಗದಗದಲ್ಲಿ ಮಳೆ, ತಗ್ಗು ಪ್ರದೇಶಗಳು ಜಲಾವೃತ
ಗದಗ: ಗದಗ ಬೆಟಗೇರಿ ಅವಳಿ ನಗರದಲ್ಲಿ ಭಾರೀ ಮಳೆ. ತಗ್ಗು ಪ್ರದೇಶಗಳು ಜಾಲಾವೃತ. ನಸುಕಿನಿಂದೇ ಧಾರಾಕಾರವಾಗಿ ಸುರಿದ ಮಳೆಗೆ ತುಂಬಿ ಹರಿದ ರಾಜಕಾಲುವೆಗಳು. ಗಂಗಿಮಡಿ, ನರಸಾಪೂರ ಕಾಲೋನಿಗಳಲ್ಲಿನ ಮನೆಗಳಿಗೆ ನುಗ್ಗಿದ ಮಳೆ ನೀರು. ಬೆಳಗ್ಗೆ 3 ಗಂಟೆಯಿಂದಲೇ ಮನೆಯ ಸಾಮಗ್ರಿ ರಕ್ಷಿಸಿಕೊಳ್ಳಲು ಪ್ರಯತ್ನದಲ್ಲಿದ್ದ ಜನರು.
9:32 AM IST
ಹೇಗಿದೆ ವಿಕ್ರಾಂತ್ ರೋಣ ಮೂವಿ: ರಿವ್ಯೂ ಇಲ್ಲಿದೆ.
ಕಿಚ್ಚನ ಮೊದಲ 3D ಸಿನಿಮಾ ಇದಾಗಿದ್ದು ಅಭಿಮಾನಿಗಳಿಗೆ ಹೆಚ್ಚಿನ ನಿರೀಕ್ಷೆ ಇತ್ತು. ಫಸ್ಟ್ ಡೇ ಫಸ್ಟ್ ಶೋ ನೋಡಿರುವ ಅಭಿಮಾನಿಗಳು ಫಸ್ಟ್ ಹಾಫ್ ನೋಡಿ ಥ್ರಿಲ್ ಆಗಿದ್ದಾರೆ. ಕೋಟಿಗೊಬ್ಬ 3 ನಂತರ ಬಿಡುಗಡೆ ಆಗಿರುವ ಸಿನಿಮಾ ಇದಾಗಿದ್ದು ಸಿಳ್ಳೆ ಹೊಡೆದು ಕುಣಿದು ಕುಪ್ಪಳಿಸಿದ್ದಾರೆ. ಎರಡನೇ ಭಾಗದಲ್ಲಿ ರಕ್ಕಮ್ಮ ಎಂಟ್ರಿ ಕೊಡುವುದು. ವಿರೇಶ್ ಚಿತ್ರಮಂದಿರದಲ್ಲಿ ಅಭಿಮಾನಿಗಳು ಪಟಾಕಿ ಹೊಡೆದು ಸಂಭ್ರಮಿಸಿದ್ದಾರೆ. 2D ಹಾಗೂ 3D ನೋಡಿ ಸಕ್ಸಸ್ ವಿಮರ್ಶೆ ಕೊಟ್ಟಿದ್ದಾರೆ.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
9:31 AM IST
ಪ್ರವೀಣ್ ಹತ್ಯೆಯಲ್ಲಿ ಕೇರಳ ಮತಾಂಧ ಸಂಘಟನೆಗಳ ನಂಟು ಶಂಕೆ
ಬೆಳ್ಳಾರೆ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ(Praveen Nettaru Murder) ಘಟನೆ ಹಿಂದೆ ಕೇರಳ ನಂಟು ಹೊಂದಿರುವ ಸಾಧ್ಯತೆ ಬಗ್ಗೆ ಪೊಲೀಸ್ ಇಲಾಖೆ ಪರಿಶೀಲನೆ ನಡೆಸುತ್ತಿದೆ. ಇದೇ ವೇಳೆ ವಾರದ ಹಿಂದೆ ಬೆಳ್ಳಾರೆಯಲ್ಲಿ ನಡೆದ ಕೇರಳ ಯುವಕನ ಹತ್ಯೆಗೆ ಪ್ರತೀಕಾರವಾಗಿ ಈ ಹತ್ಯೆ ನಡೆಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಬೆಳ್ಳಾರೆ ಪೇಟೆ ಸಮೀಪ ಕೋಳಿಫಾರಂ ಅಂಗಡಿ ಹೊಂದಿದ್ದ ಪ್ರವೀಣ್ ಮಂಗಳವಾರ ರಾತ್ರಿ 9 ಗಂಟೆಗೆ ಮನೆಗೆ ತೆರಳು ತನ್ನ ದ್ವಿಚಕ್ರ ವಾಹನ ಚಲಾಯಿಸಲು ಮುಂದಾಗುತ್ತಿದ್ದಂತೆ ಇನ್ನೊಂದು ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಮೂವರು ಮುಸುಕುಧಾರಿಗಳ ತಂಡ ತಲೆಗೆ ಮಚ್ಚಿನ ಏಟು ಕಡಿದು ಪರಾರಿಯಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದ ಪ್ರವೀಣ್‌ರನ್ನು ಸ್ಥಳೀಯರು ಪುತ್ತೂರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ದಾರಿಮಧ್ಯೆ ಮೃತಪಟ್ಟಿದ್ದರು.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
9:31 AM IST
ಕಿಚ್ಚನ ವಿಆರ್ ನೋಡಿ ಕುಣಿದು ಕುಪ್ಪಳಿಸಿದ ಫ್ಯಾನ್ಸ್
ಫಸ್ಟ್ ಡೇ ಫಸ್ಟ್ ಶೋ ನೋಡಿ ಖುಷ್ ಆದ ಅಭಿಮಾನಿಗಳು. ರೋಣನ ಎಂಟ್ರಿ ರಕ್ಕಮ್ಮನ ಡ್ಯಾನ್ಸ್‌ಗೆ ಕಿಚ್ಚನ ಅಭಿಮಾನಿಗಳು ಫಿದಾ. ವಿರೇಶ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಂಭ್ರಮ. 2D ಹಾಗೂ 3D ಅವತಾರದಲ್ಲಿ ಬಾದ್ ಷಾ ನೋಡಿ ಕುಣಿದು ಕುಪ್ಪಳಿಸಿದ ಫ್ಯಾನ್ಸ್. ವಿಕ್ರಾಂತ್ ರೋಣಗೆ ಮೊದಲ ದಿನವೇ ಸಕ್ಸಸ್ ರಿವ್ಯ್ಯೂ ಕೊಟ್ಟ ಕಿಚ್ಚನ ಅಭಿಮಾನಿಗಳು. ಕಾಫಿನಾಡು ಚಂದು ಸ್ಟೈಲ್‌ನಲ್ಲಿ ರಿವ್ಯೂ ಕೊಟ್ಟ ಅಭಿಮಾನಿ. ವಿಶೇಷ ಚೇತನರು ಸಹ ಮೊದಲ ದಿನವೇ ಆಗಮಿಸಿ ಚಿತ್ರ ವೀಕ್ಷಿಸಿದ್ದಾರೆ.
5:49 PM IST:
ರಾಯಚೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ: ಹತ್ಯೆ ಹಿನ್ನೆಲೆ ರಾಯಚೂರು ಜಿಲ್ಲೆಯಲ್ಲಿಯೂ ರಾಜೀನಾಮೆ ಪರ್ವ ಆರಂಭವಾಗಿದೆ. ಲಿಂಗಸೂಗೂರು ಬಿಜೆಪಿ ಯುವ ಮುಖಂಡರು ರಾಜೀನಾಮೆ ನೀಡಿದ್ದಾರೆ. ಮಸ್ಕಿ ಮತ್ತು ರಾಯಚೂರಿನಲ್ಲಿಯೂ ಬಿಜೆಪಿ ಮುಖಂಡರು ರಾಜೀನಾಮೆ ನೀಡಿದ್ದು, "ನಾವು ನಂಬಿದ ನಾಯಕರು ನಮ್ಮ ರಕ್ಷಣೆ ನೀಡುತ್ತಿಲ್ಲ, ಬಿಜೆಪಿ ಹಿಂದುತ್ವದ ತಳಹದಿಯಲ್ಲಿ ಬಂದಿರುವ ಪಕ್ಷ, ಹತ್ತಾರು ಹಿಂದೂ ಮುಖಂಡರ ಹತ್ಯೆಗಳು ಆಗಿದೆ ಅವರಿಗೆ ನ್ಯಾಯ ಸಿಕ್ಕಿಲ್ಲ, ಅಸಮರ್ಥ ನಾಯಕರ ಆಡಳಿತದಿಂದ ಬೇಸತ್ತು ನಾವು ರಾಜೀನಾಮೆ ನೀಡುತ್ತಿದ್ದೇವೆ ಎಂದ ಮುಖಂಡರು" ಎಂದಿದ್ದಾರೆ
5:04 PM IST:
ಮಂಗಳೂರು: ಮಂಗಳೂರಿನಿಂದ ರಸ್ತೆ ಮಾರ್ಗವಾಗಿ ಬೆಳ್ಳಾರೆಯತ್ತ ಹೋರಾಟ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ. ಸಿಎಂಗೆ ಗೃಹ ಸಚಿವರ ಆರಗ ಜ್ಞಾನೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ನಳಿನ್ ಕುಮಾರ್ ಕಟೀಲ್, ಸಿಟಿ ರವಿ ಸಾಥ್. ಭಾರಿ ಭದ್ರತೆಯಲ್ಲಿ ಹೊರಟ ಸಿಎಂ.
4:42 PM IST:
ತುಮಕೂರು: ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆ ಗೃಹ ಸಚಿವರಿಗೆ ಭಗವದ್ಗೀತೆ ಪುಸ್ತಕ ರವಾನಿಸಿದೆ. ತುಮಕೂರು ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ರಾಕೇಶ್ ಗೃಹ ಸಚಿವರಿಗೆ ಭಗವದ್ಗೀತೆ ಕೋರಿಯರ್ ಮಾಡಿದ್ದಾರೆ. ಭಗವದ್ಗೀತೆ ಓದಿ ರಾಜಧರ್ಮ ಪಾಲಿಸುವಂತೆ ಸಂದೇಶ. ಬರೀ ಕಠಿಣ ಕ್ರಮ ಎಂದು ಗೃಹ ಸಚಿವರು ಹೇಳಿದರೆ ಆಗಲ್ಲ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಯುದ್ದ ಮಾಡುವುವಾಗ ಹೇಗಿರಬೇಕು ಎಂದು ಹೇಳಿದ್ದಾರೆ. ನಿರ್ವೀರ್ಯರಾಗಿ ಇರಬಾರದು ಎಂದು ಸಲಹೆ ಕೊಟ್ಟಿದ್ದಾರೆ. ಹಾಗಾಗಿ ಗೃಹ ಸಚಿವರು ಇದನ್ನು ಓದಿ ತಮ್ಮ ಅಧಿಕಾರ ಬಳಸಿಕೊಳ್ಳಲಿ. ಭಗವದ್ಗೀತೆ ಓದಿ ಧರ್ಮ ಕಾಪಾಡುವ ಬಗ್ಗೆ ತಿಳಿಯಲಿ ಎಂದು ಎಂದು ಆಗ್ರಹಿಸಿದ್ದಾರೆ.
4:15 PM IST:
ಚಾಮರಾಜನಗರ: ಟೊಮೆಟೋ ಬೆಲೆ ಕುಸಿತದಿಂಸ ಕಂಗಲಾಗಿರುವ ರೈತರು, ರಸ್ತೆಗೆ ಟೊಮೆಟೊ ಸುರಿದು ಆಕ್ರೋಶ ಹೊರ ಹಾಕಿದ್ದಾರೆ. ಚಾಮರಾಜನಗರದ ಗುಂಡ್ಲುಪೇಟೆ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಟೊಮೊಟೋ ಸುರಿದಿದ್ದಾರೆ. ಸದ್ಯ 3 ರೂಪಾಯಿಗು ಟೊಮೆಟೋ ಕೇಳುವವರಿಲ್ಲ. ಹೀಗಾಗಿ ಈ ಬೆಲೆ ವಾಹನ ಬಾಡಿಗೆಗೆ ಸಾಲದೆ ರೈತರು ಟೊಮೊಟೋ ರಸ್ತೆಗೆ ಸುರಿದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಬೆಳೆದ ಬೆಳೆಗೆ ಬೆಂಬಲ ಬೆಲ ಕೊಡುವಂತೆ ರೈತರ ಆಗ್ರಹಿಸಿದ್ದಾರೆ.
3:58 PM IST:
ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆ ಇಂದು ಸಂಜೆ ಟೌನ್ ಹಾಲ್ ಬಳಿ ಹಿಂದೂ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಲಿವೆ. ಟೌನ್ ಹಾಲ್ ಬಳಿ ಪ್ರತಿಭಟನೆ ಹಿನ್ನೆಲೆ ಸ್ಥಳದಲ್ಲಿ ಪೊಲೀಸರ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಕೇಂದ್ರ ವಿಭಾಗದ ಎಲ್ಲಾ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದ್ದು ಓರ್ವ ಡಿಸಿಪಿ, ಎರಡು ಎಸಿಪಿ, 7 ಜನ ಇನ್ಸ್ಪೆಕ್ಟರ್, 21 ಜನ ಸಬ್ ಇನ್ಸ್ಪೆಕ್ಟರ್, 4 KSRP ತುಕಡಿ ಸೇರಿದಂತೆ 400ಕ್ಕೂ ಹೆಚ್ಚು ಪೊಲೀಸರ ನಿಯೋಜಿಸಲಾಗಿದೆ
ಪ್ರತಿಭಟನೆ ವೇಳೆ ಯಾವುದೇ ರ್ಯಾಲಿಗೆ ಪೊಲೀಸರು ಅವಕಾಶ ನೀಡಿಲ್ಲ. ಒಂದು ವೇಳೆ ರ್ಯಾಲಿ ಮಾಡಿದ್ರೆ ಕಾರ್ಯಕರ್ತರನ್ನ ಬಂಧಿಸಲು ಪೊಲೀಸರ ಸಿದ್ಧತೆ ಮಾಡಿಕೊಂಡಿದ್ದಾರೆ. ಕೆಎಸ್‌ಆರ್‌ಪಿ (KSRP) ಜೊತೆಗೆ ಮೂರ್ನಾಲ್ಕು ಬಿಎಂಟಿಸಿ (BMTC) ಬಸ್ ಗಳ ನಿಯೋಜನೆ ಮಾಡಲಾಗಿದೆ. ರಸ್ತೆ ತಡೆ, ಸಂಚಾರಕ್ಕೆ ತೊಂದರೆ ಮಾಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ ಹೇಳಿದ್ದಾರೆ.
3:26 PM IST:
ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಸವಣೂರಿನ ಝಾಕೀರ್ ಮತ್ತು ಬೆಳ್ಳಾರೆಯ ಶಪೀಕ್ ಬಂಧಿತರು. ಇಬ್ಬರು ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು. ದ.ಕ ಎಸ್ಪಿ ಹೃಷಿಕೇಶ್ ಸೋನಾವಣೆ ಹೇಳಿಕೆ, ಆರೋಪಿಗಳಿಬ್ಬರಿಗೆ ಪಿಎಫ್‌ಐ ಸಂಘಟನೆ ಜೊತೆ ನಂಟಿನ ಅನುಮಾನ. ಹೀಗಾಗಿ ಹೆಚ್ಚಿನ ವಿಚಾರಣೆ ನಡೆಸಲಾಗುವುದು, ಎಂದಿದ್ದಾರೆ.
3:07 PM IST:
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಿಂದ ಬಿಜೆಪಿಯ ವಿರುದ್ಧ ಪಕ್ಷದ ಕಾರ್ಯಕರ್ತರೇ ಮುಗಿ ಬಿದ್ದಿದ್ದಾರೆ. ಬಿಜೆಪಿ ಸಚಿವರ ಮತ್ತು ಮಂಗಳೂರು ಶಾಸಕರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಈಗ ಪರಿಸ್ಥಿತಿ ಹತೋಟಿಗೆ ತರಲು ಬಿಜೆಪಿ ಎಲ್ಲ ರೀತಿಯ ಪ್ರಯತ್ನ ಮಾಡಲು ಮುಂದಾಗಿದ್ದು, ಸಿಎಂ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಿಟಿ ರವಿ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.
2:37 PM IST:
ವಿಜಯನಗರ: ಮಂಗಳೂರಿನ ಬೆಳ್ಳಾರೆಯಲ್ಲಿ ಹಿಂದೂ ಕಾರ್ಯಕರ್ತ ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಶ್ರೀರಾಮ ಸೇನೆಯ ವಿಭಾಗೀಯ ಅಧ್ಯಕ್ಷ ಸಂಜೀವ್ ಮರಡಿ ಮಾತನಾಡಿ, ಹಿಂದೂತ್ವದ ಆಧಾರದ ಮೇಲೆ ಅಧಿಕಾರಕ್ಕೆ ಬಂದಿದೆ ಈ ಬಿಜೆಪಿ ಸರ್ಕಾರ. ಇವರ ಅಧಿಕಾರದ ದುರಾಸೆಗೆ ಆಪರೇಷನ್ ಕಮಲ ಅಂತ ಯಡಿಯೂರಪ್ಪನವರು ಮಾಡ್ತಾರೆ. ಇವತ್ತಿನವರೆಗೆ ಯಾವ್ ನನ್ ಮಗ MLA ಕೊಲೆಯಾಗಿದ್ದಾನಾ? ಭಟ್ಕಳದ ಚಿತ್ತರಂಜನ್ ದಾಸ್ ಎಂಬ MLA ಬಿಟ್ರೆ ಬೇರೆ ಯಾರಾದ್ರೂ ಕೊಲೆಯಾಗಿದ್ದಾನಾ? ಬರೀ ಸಾಮಾನ್ಯ ಕಾರ್ಯಕರ್ತರ ಕೊಲೆಯಾಗಿವೆ. ಇಂತಹ ಹರಾಮಿಗಳು ಸಂಘ ಪರಿವಾರವನ್ನ ಬಿಟ್ಟು, ಅಧಿಕಾರದ ದುರಾಸೆಗೆ ಬೇರೆ ಪಕ್ಷದವರನ್ನು ಪಕ್ಷಕ್ಕೆ ಕರ್ಕೊಂಡು ಬಂದು ಅಧಿಕಾರ ನಡೆಸ್ತಾರೆ ಒಬ್ಬ ಹಿಂದೂ ಕಾರ್ಯಕರ್ತನ ಕೊಲೆಯಾದ್ರೆ, ಕೊಲೆ ಮಾಡಿದವರನ್ನು ಗಲ್ಲು ಶಿಕ್ಷೆ ಹಾಕೋಕಾಗೋಲ್ಲಾ ಇವರಿಗೆ. ಇಂಥಹ ಬೇವರ್ಸಿಗಳನ್ನ ಎಷ್ಟು ಜತೆ ತಗೊಂಡು ಹೊಡಿಬೇಕು. ಸಿಎಂ ಬಸವರಾಜ್ ಬೊಮ್ಮಾಯಿಯವರಿಗೆ ಆ ಖುರ್ಚಿ ಮೇಲೆ ಕುಳಿತುಕೊಳ್ಳೋ ಶಕ್ತಿ, ಯೋಗ್ಯತೆ ಇಲ್ಲ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಅಡಿಯಲ್ಲಿ ಎಲ್ಲಾ ಪೊಲೀಸ್ ಇಲಾಖೆ ಇದೆ. ಶಿವಮೊಗ್ಗದಲ್ಲಿ ಕೊಲೆ, ಬೇರೆ ಕಡೆಗಳು ಗಲಾಟೆಯಾಗ್ತಿವೆ. ಇವತ್ತು ಪ್ರವೀಣ್ ನೆಟ್ಟೂರ್, ಕೊಲೆಯಾಗಿದೆ. ಹಿಂದೂ ಸಂಘಟನೆಯ ಹೆಸರಿನ ಮೇಲೆ ಹೋಗಿದ್ದು ಪ್ರವೀಣ್ ನೆಟ್ಟಾರು. ಮೊದಲು ಈ ಗೃಹ ಸಚಿವರನ್ನ ಮನೆಗೆ ಕಳಿಸಿ, ಅವರು ಹೋದಾಗ ಯಾಕೆ ಅವರ ಹಿಂದೆ ಹೋಗ್ತಿರಾ? ಬಕೇಟ್ ಹಿಡಿಯೋ ಕೆಲಸ ಮಾಡಬೇಡಿ. ನಾಳೆ ನಿಮ್ಮ ಮನೆಗಳಲ್ಲಿಯೂ ಕೊಲೆಯಾದಾದ 50 ಲಕ್ಷನೂ, ಒಂದಿಷ್ಟು ಹಣ ಕೊಡ್ತಾರೆ ತಗೋಳ್ತಿರಾ ಅಂತ ಪ್ರಶ್ನಿಸಿದ್ದಾರೆ.
11:55 AM IST:
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಒಟ್ಟು 21 ಜನರು ಪೊಲೀಸ್ ವಶ. ಪ್ರಕರಣದ ಜಾಡು ಹಿಡಿದು ತನಿಖೆ ತೀವ್ರಗೊಳಿಸಿದ ಪೊಲೀಸರು. ಎಸ್ ಡಿಪಿಐ ಮತ್ತು ಪಿಎಫ್ ಐ ಸಂಘಟನೆಗೆ ಸೇರಿದ ಕೆಲವರು ವಶ. ಬೆಳ್ಳಾರೆ ಮತ್ತು ಸುಳ್ಯ ಭಾಗದ ಹಲವರು ಪೊಲೀಸ್ ವಶ. ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರು. ಈವರೆಗೆ ಒಬ್ಬನನ್ನ ಬಂಧಿಸಿದ್ದು, ಉಳಿದ 21 ಜನರ ವಿಚಾರಣೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಪೊಲೀಸ್ ಉನ್ನತ ಮೂಲಗಳ ಮಾಹಿತಿ.
11:50 AM IST:
ಎಲ್ಲರಿಗೂ ರಕ್ಷಣೆ ಕೊಡಲು ಆಗಲ್ಲ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್ ಹಾಗಾದ್ರೆ ಸರ್ಕಾರ ಯಾಕೆ ಇರಬೇಕು ಎಂದು ಪ್ರಶ್ನಿಸಿದ್ದಾರೆ. ಮೈಸೂರು ಅತ್ಯಾಚಾರ ಪ್ರಕರಣದಲ್ಲಿ, ಸಂಜೆ ಆರು ಗಂಟೆ ಮೇಲೆ ಯಾರು ಓಡಾಡು ಎಂದು ಹೇಳಿದ್ರು ಅಂತ ಗೃಹ ಸಚಿವರು ಹೇಳಿಲಿಲ್ಲವಾ..? ಐದಾರು ದಿನಗಳ ಹಿಂದೆ ಅಲ್ಲಿ ಇದೆ ರೀತಿಯ ಘಟನೆ ನಡೆದಿದೆ. ಏನು ಕ್ರಮ ತೆಗೆದುಕೊಂಡಿದ್ದಾರೆ...? ಅವರನ್ನು ಬಂಧಿಸಿದ್ದಾರೆ ಎಂದು ಪೊಲೀಸರು ಅಂತ ಹೇಳಿದ್ರು. ರಾಜಕಾರಣಿಗಳು ಮಾತಾಡೋದು ಬಿಡಬೇಕು. ಪೊಲೀಸರಿಗೆ ಪ್ರೀ ಹ್ಯಾಂಡ್ ಕೊಡಬೇಕು. ಕಾಂಗ್ರೆಸ್ ಬೆಂಬಲಿತ ಮತಾಂಧ ಶಕ್ತಿಗಳ ಕೃತ್ಯದ ಹಿಂದೆ ಇವೆ ಎಂಬ ಬಿಜೆಪಿ ಟ್ವೀಟ್ ವಿಚಾರ. ಯಾರೇ ಆರೋಪ ಮಾಡಲಿ, ಅವರು ರಾಜಕೀಯ ಮಾಡ್ತಾರಲ್ಲ, ಅವರ ಮೇಲೆ ಕ್ರಮ ತೆಗೆದುಕೊಳ್ಳಲಿ. ಇದರಲ್ಲಿ ರಾಜಕಾರಣ ಮಾಡಬಾರದು ಎಂದು ಪ್ರತಿಕ್ರಿಯಿಸಿದ್ದಾರೆ.
11:43 AM IST:
ಪ್ರವೀಣ್ ನೆಟ್ಟಾರು ಕೊಲೆ ಖಂಡಿಸಿ ಮಡಿಕೇರಿಯಲ್ಲಿ ಪ್ರತಿಭಟನೆ. ಹಿಂದೂಪರ ಸಂಘಟನೆಗಳಿಂದ ತೀವ್ರ ಆಕ್ರೋಶ. ನಗರದ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ. ವಿಹೆಚ್ ಪಿ, ಭಜರಂಗದಳ, ದುರ್ಗಾವಾಹಿನಿ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ. ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗಿ. ನರಸತ್ತ ಸರ್ಕಾರ ಎಂದು ಕೂಗಿ ಆಕ್ರೋಶ. ಮುಖ್ಯಮಂತ್ರಿ, ಗೃಹಸಚಿವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ. ಆರೋಪಿಗಳ ಗಲ್ಲು ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹ. ಪಿಎಫ್ಐ, ಎಸ್ ಡಿಪಿಐ ಸಂಘಟನೆಗಳ ನಿಷೇಧಿಸುವಂತೆ ಒತ್ತಾಯ. ಹಿಂದೂಗಳಿಗೆ ರಕ್ಷಣೆ ನೀಡಲು ಆಗದಿದ್ದರೆ ಅಧಿಕಾರದಿಂದ ತೊಲಗಿ ಎಂದು ಆಕ್ರೋಶ.
10:45 AM IST:
ನವದೆಹಲಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದು ಬಿಜೆಪಿ ಯುವ ಮೋರ್ಚಾದ ಸದಸ್ಯ ಪ್ರವೀಣ್ ಹತ್ಯೆಯಾಗಿದೆ, ಇಡೀ ರಾಜ್ಯದಲ್ಲಿ ಬೇಸರ ದುಖಃ, ಅಸಹಾಯಕತೆ, ಆಕ್ರೋಶದ ಭಾವನೆ ಮೂಡಿಸಿದೆ ಎಂದಿದ್ದಾರೆ. ಒಂಭತ್ತು ತಿಂಗಳ ಮಗುವಿನ ತಂದೆಯಾಗಿದ್ದರು ಪ್ರವೀಣ್, ಯಾವುದೇ ತಪ್ಪಿಲ್ಲದಿದ್ದರೂ ಹತ್ಯೆಯಾಗಿದೆ. ಬಿಜೆಪಿ ಕಾರ್ಯಕರ್ತ ಅನ್ನೊ ಕಾರಣಕ್ಕೆ ಹತ್ಯೆ ಮಾಡಲಾಗಿದೆ. ಈ ಆಘಾತ ಸಹಿಸಲು ಕುಟುಂಬಕ್ಕೆ ಶಕ್ತಿ ಕೊಡಲಿ. ನಮ್ಮ ಪ್ರತಿಯೊಬ್ಬ ಕಾರ್ಯಕರ್ತ ಅವರ ಜೊತೆಗಿದ್ದಾರೆ. ಇಂದು ವರ್ಚುವಲ್ ಸಭೆ ನಡೆಸಿದ್ದೆವು. ಮಹತ್ವದ ತಿರ್ಮಾನ ತೆಗೆದುಕೊಂಡಿದ್ದೇವೆ. ಯುವ ಮೋರ್ಚಾ ಪ್ರವೀಣ್ ಕುಟುಂಬಕ್ಕೆ ಸಹಾಯ ಮಾಡಲು ತಿರ್ಮಾನಿಸಿದೆ. ಪ್ರತಿ ಜಿಲ್ಲೆಯಿಂದ ಯುವ ಮೋರ್ಚಾ ಕಾರ್ಯಕರ್ತರು ಪ್ರವೀಣ್ ಕುಟುಂಬಕ್ಕೆ ಸಹಾಯ ಮಾಡಲಿದೆ. ಮಂಗಳೂರು ತೆರಳಿ ಆರ್ಥಿಕ ಸಹಾಯ ಮಾಡಲಿದ್ದೇವೆ. ಜೊತೆಗೆ ಹಿರಿಯ ನಾಯಕರ ಜೊತೆಗೆ ಮಾತನಾಡಿದ್ದೇವೆ. ಈ ಸರಣಿ ಹತ್ಯೆ ಹಿಂದಿರುವ ಗುಂಪು ಪತ್ತೆ ಹಚ್ಚಲು ಸರ್ಕಾರ ಮೇಲೆ ಒತ್ತಡ ಹಾಕುತ್ತಿದ್ದೇವೆ. ರಾಜಕೀಯ ಪ್ರಯೋಗ ಮಾಡ್ತಿರುವುದು ಕಾಂಗ್ರೆಸ್. ವ್ಯಕ್ತಿಯ ಹತ್ಯೆ ಎನ್ನುವುದು ರಾಜಕೀಯ ಪ್ರಯೋಗವಾ? ಬಿಜೆಪಿ ಈ ರೀತಿಯ ಪ್ರಯೋಗ ಮಾಡಲ್ಲ. ಎಫ್‌ಐಆರ್ ರದ್ದು ಮಾಡಿ ಪ್ರಯೋಗ ಮಾಡಿದ್ದು ಯಾರು? ಕಾರ್ಯಕರ್ತರ ಆಕ್ರೋಶ ಪಕ್ಷದ ಮೇಲೆ ಅಲ್ಲ. ಹಿಂದೂ ಸಮಾಜ ಹೋಗ್ತಿರುವ ದಿಕ್ಕು ನೋಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾನು ಎಲ್ಲರಿಗೂ ಮನವಿ ಮಾಡುತ್ತೇನೆ, ಯಾರು ರಾಜೀನಾಮೆ ನೀಡಬಾರದು. ಬಿಕೆ ಹರಿಪ್ರಸಾದ್ ಅಂತಹ ನಾಯಕನ ಹೇಳಿಕೆಗೆ ನಾನು ಉತ್ತರ ನೀಡಲ್ಲ. ಪುಲ್ವಾಮಾ ದಾಳಿಯಲ್ಲಿ ಯೋಧರು ಸತ್ತಾಗ, ಅದನ್ನ ಮೋದಿ ರಾಜಕೀಯ ಗಿಮಿಕ್ ಅಂದ ವ್ಯಕ್ತಿ. ಅಂತಹ ವ್ಯಕ್ತಿಯ ಹೆಸರು ನಾನು ಹೇಳಲು ಇಷ್ಟಪಡಲ್ಲ. ಸಿದ್ದರಾಮಯ್ಯ ಜಮೀರ್ ಅಹ್ಮದ್ ಅಂತಹ ರಾಜಕಾರಣಿಗಳು ಹೇಗೆ ಕುಮ್ಮಕ್ಕು ನೀಡಲಾಗುತ್ತಿದೆ ಹಿಂದೂಗಳು ಗಮನಿಸಬೇಕು. ಯಾರ ಮೇಲೆ ಹಿಂದೆ ಹತ್ಯೆಯ ಕೇಸಿತ್ತು ಅವರ ಮೇಲಿನ ಎಫ್‌ಐಆರ್ ರದ್ದು ಮಾಡಲಾಗಿತ್ತು. ಅದಾಗ್ಯೂ ಯಾಕೆ ಒಂದು ವರ್ಗದ ಜನರು ಹೀಗೆ ಮಾಡುತ್ತಿದ್ದಾರೆ. ರಾಜಸ್ಥಾನದಲ್ಲೂ ಕನ್ನಯ್ಯಲಾಲ್ ಹತ್ಯೆ ಮಾಡಲಾಯ್ತು. ಸಾಮಾನ್ಯ ಜನರಿಗೂ ಭದ್ರತೆ ನೀಡಲು ಸಾಧ್ಯವಾ? ಇದು ಮತಾಂಧತೆ ಮತ್ತು ಸಿದ್ದಾಂತದ ಸಮಸ್ಯೆ.
10:18 AM IST:
ಸಾವಿನ ಮನೆಯಲ್ಲಿ ಸಂಭ್ರಮಿಸುವ ವಿಕೃತಿ ಬೇಡವೆಂದು ನಾನು ಹೇಳಿದ್ದೆ. ಪಾಪ.. ರಾಜ್ಯ ಬಿಜೆಪಿ ಸರಕಾರಕ್ಕೆ ಮಧ್ಯರಾತ್ರಿಯಲ್ಲೇ ಜ್ಞಾನೋದಯವಾಗಿದೆ.
ʼಸಾವುಗಳನ್ನೇ ಸಾಧನೆʼಗಳನ್ನಾಗಿ ಮಾಡಿಕೊಂಡು, ಅವುಗಳನ್ನೇ ಅಧಿಕಾರದ ಏಣಿ ಮಾಡಿಕೊಂಡವರಿಗೆ ಅಂತೂ ಪಾಪಪ್ರಜ್ಞೆ ಕಾಡಿತಲ್ಲ ಎನ್ನುವ ಸಮಾಧಾನ, ಸರಕಾರ ಮುಖ ಉಳಿಸಿಕೊಂಡಿದೆ.
ಸರಕಾರದ ಕಾಳಜಿಯಲ್ಲಿ ಸಾಚಾತನವಿಲ್ಲ. ʼಸಾವಿನಲ್ಲೂ ಸಿಂಪಥಿʼ ಗಿಟ್ಟಿಸುವ ವ್ಯರ್ಥ ಪ್ರಯತ್ನ ವಾಕರಿಕೆ ತರಿಸುತ್ತದೆ. ಸಾಧನಾ ಸಮಾವೇಶ ನಿಂತಿತಲ್ಲ ಎನ್ನುವ ಹತಾಶೆ ಎದ್ದು ಕಾಣುತ್ತಿದೆ. ರಾಜ್ಯದಲ್ಲಿ ಸಾವುಗಳ ಮೆರವಣಿಗೆ ನಡೆಯುತ್ತಿರುವುದಷ್ಟೇ ಬಿಜೆಪಿ ಸರಕಾರದ ವರ್ಷದ ಸಾಧನೆ!!
ಜಾತಿ, ಧರ್ಮ, ಆಚಾರ, ವಿಚಾರ, ಆಹಾರ, ವ್ಯಾಪಾರ, ಉಡುಗೆ-ತೊಡುಗೆ ನೆಪದಲ್ಲಿ ರಾಜ್ಯವನ್ನು ಭಾವನಾತ್ಮಕವಾಗಿ ಛಿದ್ರ ಛಿದ್ರ ಮಾಡಿದ್ದಾ ಸಾಧನೆ? ತಿನ್ನುವ ಅನ್ನದಲ್ಲಿ, ಕಲಿಯುವ ಅಕ್ಷರದಲ್ಲಿ, ಉರಿಯುವ ಮನೆಯಲ್ಲಿ ʼಮತಕ್ಕಾಗಿ ಕೋಮು ಗಳʼ ಇರಿಯುವುದಾ ಸಾಧನೆ? ಸಾಧನೆ ನೆಪದಲ್ಲಿ ನಲಿಯುವ ಮುನ್ನ ಕನಿಷ್ಠ ನಾಚುವ ಸೂಕ್ಷ್ಮತೆಯೂ ಇಲ್ಲವಲ್ಲ.
ಇನ್ನೆಷ್ಟು ಯುವಕರ ಕಗ್ಗೊಲೆ ಆಗಬೇಕು? ಅದೆಷ್ಟು ಬಡಮನೆಗಳ ದೀಪಗಳು ಆರಬೇಕು? ಮತ್ತೆಷ್ಟು ಹೆತ್ತ ಕರುಳುಗಳು ಕಣ್ಣೀರಿಡಬೇಕು? ಹರ್ಷ, ಚಂದ್ರು ತಾಯಿಂದರ ಆರ್ತನಾದ ಸರಕಾರಕ್ಕೆ ಕೇಳಿಸಿದ್ದಿದ್ದರೆ ಪ್ರವೀಣ್ ನೆಟ್ಟಾರು ಅಮ್ಮನ ಆರ್ತನಾದ ಕೇಳುವ ಸ್ಥಿತಿ ಬರುತ್ತಿತ್ತಾ? ಕೊಲೆಯನ್ನೇ ತಡೆಯಲಾಗದೇ ಈಗ ʼಕೃತಕ ಸಾಂತ್ವನʼ ಹೇಳಿದರೇನು ಪ್ರಯೋಜನ?
ತಾಯಿಂದಿರ ಆರ್ತನಾದ ಸರಕಾರದ ಕಿವಿಗೆ ಇಂಪಾದ ʼನಾದʼದಂತೆ ಕೇಳುತ್ತಿವೆಯಾ? ಬಿಜೆಪಿಯ ʼಮತಕ್ಕಾಗಿ ಮರಣಮೃದಂಗʼದ ಆಳ-ಅಗಲ ಈಗ ಜನರಿಗೂ ಅರ್ಥವಾಗುತ್ತಿದೆ. ಬಿಜೆಪಿ ಅಧ್ಯಕ್ಷರು ಸೇರಿ ಸಚಿವರಿಬ್ಬರಿಗೆ ಎದುರಾದ ಪ್ರತಿರೋಧವೇ ಜನರ ತಾಳ್ಮೆ ಕಟ್ಟೆಯೊಡೆದಿದೆ ಎನ್ನುವುದಕ್ಕೆ ಸಾಕ್ಷಿ. ಕರಾವಳಿ ಕೆರಳಿದೆ. ಕರ್ನಾಟಕ ಕೆರಳುವುದು ಬಾಕಿ ಇದೆ.
ಏನು ಸಾಧನೆ ಅಂತ ಸರಕಾರ ಜನರಿಗೆ ಹೇಳುತ್ತದೆ?
*40% ಕಮಿಷನ್
*ಕೋವಿಡ್ ಹೆಸರಿನಲ್ಲಿ ಕೊಳ್ಳೆ
*ಅಧಿಕಾರಿಗಳ ವರ್ಗದಲ್ಲಿ ಪೇಮೆಂಟ್ ಕೋಟಾ
*ಪಿಎಸ್ಐ ನೇಮಕದಲ್ಲಿ ಕಾಸಿನಾಟ
*ಸಹಾಯಕ ಪ್ರಾಧ್ಯಾಕರ ನೇಮಕದಲ್ಲೂ ನೋಟಿನಾಟ
ಜೇಬು ತುಂಬಿಸಿಕೊಳ್ಳುವ ಧನದಾಟ ಬಿಟ್ಟರೆ, ಜನರಿಗೆ ಸರಕಾರ ಮಾಡಿದ್ದೇನು?
ನಡುರಸ್ತೆಯಲ್ಲಿ ಹರಿದ ಪ್ರವೀಣ್ ನೆಟ್ಟಾರು ನೆತ್ತರು, ನಾಡಿನ ಆತ್ಮಸಾಕ್ಷಿಯನ್ನು ಕಲಕಿದೆ. ಒಂದೇ ಊರಿನಲ್ಲಿ ಎಂಟೇ ದಿನದಲ್ಲಿ 2 ಕೊಲೆ ನಡೆದಿವೆ ಎಂದರೆ ಈ ಸರಕಾರ ಬದುಕಿದೆಯಾ? ಸತ್ತಿದೆಯಾ?
ಸತ್ತ ಸರಕಾರದ ಸಾಹುಕಾರನಿಗೆ ಸಂಭ್ರಮದ ಚಿಂತೆ, ಆಗದ ಸಾಧನೆ ಹೇಳಿಕೊಳ್ಳುವ ಅನಿವಾರ್ಯತೆ..
ಇನ್ನಾದರೂ ಕಂಡೋರ ಮಕ್ಕಳನ್ನು ಸಾವಿನ ದವಡೆಗೆ ನೂಕಿ ಮತ ಫಸಲು ತೆಗೆಯುವ ʼನರಹಂತಕ ರಾಜಕಾರಣʼ ನಿಲ್ಲಲಿ. 8/8
#ಕರಾವಳಿ_ಕೆರಳಿದೆ
ಸಾವಿನ ಮನೆಯಲ್ಲಿ ಸಂಭ್ರಮಿಸುವ ವಿಕೃತಿ ಬೇಡವೆಂದು ನಾನು ಹೇಳಿದ್ದೆ. ಪಾಪ.. ರಾಜ್ಯ ಬಿಜೆಪಿ ಸರಕಾರಕ್ಕೆ ಮಧ್ಯರಾತ್ರಿಯಲ್ಲೇ ಜ್ಞಾನೋದಯವಾಗಿದೆ.
— H D Kumaraswamy (@hd_kumaraswamy) July 28, 2022
ʼಸಾವುಗಳನ್ನೇ ಸಾಧನೆʼಗಳನ್ನಾಗಿ ಮಾಡಿಕೊಂಡು, ಅವುಗಳನ್ನೇ ಅಧಿಕಾರದ ಏಣಿ ಮಾಡಿಕೊಂಡವರಿಗೆ ಅಂತೂ ಪಾಪಪ್ರಜ್ಞೆ ಕಾಡಿತಲ್ಲ ಎನ್ನುವ ಸಮಾಧಾನ, ಸರಕಾರ ಮುಖ ಉಳಿಸಿಕೊಂಡಿದೆ. 1/8
10:13 AM IST:
ಮುಂದಿನ ವರ್ಷ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ 14ನೇ ಆವೃತ್ತಿಯ ‘ಏರೋ ಇಂಡಿಯಾ ವೈಮಾನಿಕ ಪ್ರದರ್ಶನ’ಕ್ಕೆ ರಾಜ್ಯ ಸರ್ಕಾರ ಅಗತ್ಯ ಸಿದ್ಧತೆ ಆರಂಭಿಸಿದೆ. ಏರ್ ಶೋ ನಡೆಯುವ ಯಲಹಂಕ ವಾಯುನೆಲೆಯ ಸುತ್ತಮುತ್ತ ಪಾರ್ಕಿಂಗ್, ರಸ್ತೆ ಕಾಮಗಾರಿ, ಬಸ್ ಸಂಚಾರ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.
10:06 AM IST:
ಸಿನಿಮಾ ನೋಡಿ ಎಮೋಷನ್ ಆದ ಸುದೀಪ್ ಪತ್ನಿ ಪ್ರಿಯಾ ಸುದೀಪ್. ಸುದೀಪ್ ಅಕ್ಕನ ಮಗ ಸಂಚಿತ್ ಅವರನ್ನು ಅಪ್ಪಿಕೊಂಡು ಕಣ್ಣೀರಾದ ಪ್ರಿಯಾ ಸುದೀಪ್. ಊರ್ವಶಿ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಪ್ರಿಯಾ ಸುದೀಪ್. ಪ್ರಿಯಾ ಸುದೀಪ್ ಜೊತೆ ನಟ ಅನೂಪ್ ಭಂಡಾರಿ ಕೂಡ ಆಗಮಿಸಿದ್ದರು.
ವರ್ಲ್ಡ್ವೈಡ್ ಮೊದಲ ದಿನ 2500 ಸ್ಕ್ರೀನ್ನಲ್ಲಿ ಸುದೀಪ್ ದರ್ಶನವಾಗಲಿದೆ. ವಿಶ್ವದ್ಯಾಂತ ಮೊದಲ ದಿನ 9000ಕ್ಕೂ ಅಧಿಕ ಪ್ರದರ್ಶನ. ಕರ್ನಾಟಕದಲ್ಲಿ ವಿಕ್ರಾಂತ್ ರೋಣ ದರ್ಬಾರ್. ಕರುನಾಡಿನಲ್ಲಿ ಮೊದಲ ದಿನ 325 ಸಿಂಗಲ್ ಸ್ಕ್ರೀನ್, 65 ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾ ಬಿಡುಗಡೆ ಮೊದಲ ದಿನ ರಾಜ್ಯದಲ್ಲಿ ಬರೋಬ್ಬರಿ 2500 ಶೋಸ್ ನಡೆಯುವ ಸಾಧ್ಯತೆ. ಸುಮಾರು 900 ಸ್ಕ್ರೀನ್ 3ಡಿ ಹಾಗೂ 1600 ಸ್ಕ್ರೀನ್ನಲ್ಲಿ 2ಡಿ ವರ್ಷನ್ ಬಿಡುಗಡೆ. ಬೆಂಗಳೂರಿನಲ್ಲಿ ಮೊದಲ ದಿನ ಸಾವಿರಕ್ಕೂ ಹೆಚ್ಚು ಶೋಸ್. ಬೆಂಗಳೂರಿನ 40 ಮಲ್ಟಿಪ್ಲೆಕ್ಸ್ನಲ್ಲಿ 800 ಶೋ ಶೋಸ್. ಒಟ್ಟು 70 ಸಿಂಗಲ್ ಸ್ಕ್ರೀನ್ನಲ್ಲಿ 400 ಶೋ ಆಗಲಿದೆ. ತೆಲುಗು ರಾಜ್ಯಗಳ 350 ಸಿಂಗಲ್ ಸ್ಕ್ರೀನ್ನಲ್ಲಿ ರಿಲೀಸ್ ಆಗಲಿದ್ದು, ಮೊದಲ ದಿನ 1400 ಶೋ ಆಗುವ ನಿರೀಕ್ಷೆ ಇದೆ.
9:58 AM IST:
ದೇಶದಲ್ಲಿ ಆಭರಣ ಪ್ರಿಯರ ಸಂಖ್ಯೆಗೇನೂ ಕೊರತೆ ಇಲ್ಲ. ಮದುವೆ, ಮುಂತಾದ ಶುಭ ಸಮಾರಂಭಗಳಿಗೆ ಬಂಗಾರ, ಬೆಳ್ಳಿ ಖರೀದಿಸುವವರೂ ಸಹ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅದೇ ರೀತಿ, ನೀವೂ ಸಹ ಚಿನ್ನ, ಬೆಳ್ಳಿಖರೀದಿಸುವ ಪ್ಲ್ಯಾನ್ ಮಾಡುತ್ತಿದ್ದೀರಾ..? ಹಾಗಾದರೆ, ನಿಮಗೆ ಇಂದು ಒಳ್ಳೆಯ ಸುದ್ದಿ ಅನ್ಸುತ್ತೆ. ಏಕೆಂದರೆ ದೇಶದಲ್ಲಿಂದು ಚಿನ್ನದ ಬೆಲೆಯಲ್ಲಿ (Gold Price) ಇಳಿಕೆಯಾಗಿದೆ. ಬೆಳ್ಳಿ ಬೆಲೆ ಸಹ ಕಡಿಮೆಯಾಗಿದೆ. ಹಾಗಾದ್ರೆ ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ..? ದೇಶದ ಪ್ರಮುಖ ನಗರಗಳಲ್ಲಿ ದರ ಹೇಗಿದೆ..? ಇಲ್ಲಿದೆ ವಿವರ.
ಯಾವ ರಾಜ್ಯದಲ್ಲಿ ಬೆಳ್ಳಿ, ಬಂಗಾರ ಬೆಲೆ ಎಷ್ಟಿದೆ, ಇಲ್ಲಿದೆ ಮಾಹಿತಿ
9:54 AM IST:
ಕೋಲಾರ: ಬಿಜೆಪಿ ಮುಖಂಡ ಪ್ರವೀಣ್ ಕೊಲೆಗೆ ಸಂಸದ ಎಸ್.ಮುನಿಸ್ವಾಮಿ ಖಂಡನೆ. ಬಿಜೆಪಿಯ ಸಕ್ರಿಯ ಕಾರ್ಯಕರ್ತ ಪ್ರವೀಣ್ ಕೊಲೆ ಅಮಾನುಷ. ರಾಜ್ಯದಲ್ಲಿ ಹಿಂದುಗಳ ಕೊಲೆ ಎರಡು ಮೂರು ತಿಂಗಳಿಗೊಮ್ಮೆ ನಡೆಯುತ್ತಿರುವುದು ಬೇಸರ. ಪ್ರವೀಣ್ ಕೊಲೆಯ ಹಿನ್ನಲೆ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು ರಾಜಿನಾಮೇ ನೀಡಿರುವುದು ಸರಿಯಲ್ಲ. ಪ್ರವೀಣ್ ನಿಮಗೆ ಮಾತ್ರವಲ್ಲ ನಮ್ಮಗೆಲ್ಲರಿಗೂ ಸಹೋದರ. ಹಿಂದು ಪರ ಸಂಘಟನೆಯ ಮುಖಂಡರನ್ನು ಕೊಲೆಮಾಡಲು ಬೇರೆ ರಾಜ್ಯದಿಂದ ಜನರನ್ನ ಕರೆಸಿ ಕೊಲೆ ಪಿತೂರಿ ನಡೆಯುತ್ತಿದೆ. ರಾಜ್ಯದಲ್ಲಿ ಹಿಂದುಗಳು ಒಗ್ಗಟ್ಟು ಆಗಬೇಕು. ಎಸ್ ಡಿಪಿಐ, ಪಿಎಫ್ಐ ಇತರೆ ಸಂಘಟನೆಗಳು ಇಂತಹ ಕೃತ್ಯದಲ್ಲಿ ಭಾಗಿ. ಗೃಹ ಮಂತ್ರಿಗಳು ಈಗಾಗಲೇ ಆರೋಪಿಗಳ ಬಂಧನಕ್ಕೆ ತಂಡಗಳು ರಚಿಸಿದ್ದಾರೆ. ರಾಜ್ಯ ಸರ್ಕಾರ ಈ ಕೃತ್ಯದಲ್ಲಿ ಭಾಗಿಯಾದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು.
9:49 AM IST:
ಜನಪರ ಯೋಜನೆಯನ್ನೇ ರೂಪಿಸದ ಸರ್ಕಾರ ಜನೋತ್ಸವ ಎಂಬ ಕೃತಕ ಜನ ಬೆಂಬಲವನ್ನು ತೋರಿಸಲು ಹೊರಟಿತ್ತು. ಆದರೆ ಸರಕಾರದ ವೈಫಲ್ಯಕ್ಕೆ ಸಾಕ್ಷಿ ಎಂಬಂತೆ ಜನರ ಅಸಲಿ ಆಕ್ರೋಶವನ್ನ ಕಣ್ಣಾರೆ ಕಂಡಿತು. ಮಧ್ಯರಾತ್ರಿ ಓಡೋಡಿ ಬಂದು ಕಾರ್ಯಕ್ರಮವನ್ನು ರದ್ದುಗೊಳಿಸುವಷ್ಟು ಅನಿವಾರ್ಯತೆ ಸೃಷ್ಟಿಯಾಗಿದ್ದು ಈ ಸರ್ಕಾರದ ಅಸಲಿ ಸಾಧನೆಗೆ ಕನ್ನಡಿ ಹಿಡಿದಂತಾಗಿದೆ, ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.
ಜನಪರ ಯೋಜನೆಯನ್ನೇ ರೂಪಿಸದ ಸರ್ಕಾರ ಜನೋತ್ಸವ ಎಂಬ ಕೃತಕ ಜನ ಬೆಂಬಲವನ್ನು ತೋರಿಸಲು ಹೊರಟಿತ್ತು.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) July 28, 2022
ಆದರೆ ಸರಕಾರದ ವೈಫಲ್ಯಕ್ಕೆ ಸಾಕ್ಷಿ ಎಂಬಂತೆ ಜನರ ಅಸಲಿ ಆಕ್ರೋಶವನ್ನ ಕಣ್ಣಾರೆ ಕಂಡಿತು.
ಮಧ್ಯರಾತ್ರಿ ಓಡೋಡಿ ಬಂದು ಕಾರ್ಯಕ್ರಮವನ್ನು ರದ್ದುಗೊಳಿಸುವಷ್ಟು ಅನಿವಾರ್ಯತೆ ಸೃಷ್ಟಿಯಾಗಿದ್ದು ಈ ಸರ್ಕಾರದ ಅಸಲಿ ಸಾಧನೆಗೆ ಕನ್ನಡಿ ಹಿಡಿದಂತಾಗಿದೆ.
9:38 AM IST:
ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಸುಪ್ರಸಿದ್ಧ ಮಾರಿ ಜಾತ್ರೆಯು ಬುಧವಾರ ಮಾರಿಕಾಂಬೆ ದೇವಸ್ಥಾನದ ಗದ್ದುಗೆ ಏರುವುದರ ಮೂಲಕ ವಿದ್ಯುಕ್ತವಾಗಿ ಚಾಲನೆಗೊಂಡಿತು. ಮಂಗಳವಾರ ರಾತ್ರಿ ಮಾರಿಕಾಂಬೆ ದೇವಿ ಮೂರ್ತಿಯ ತಯಾರಕರಾದ ವಿಶ್ವಕರ್ಮ ಸಮಾಜದವರಿಂದ ವಿಶೇಷ ಪೂಜೆ ಸಂಪನ್ನಗೊಂಡ ಬಳಿಕ ಮಾರಿ ದೇವಿಯ ಮೂರ್ತಿಯನ್ನು ಮೆರವಣಿಗೆಯ ಮೂಲಕ ಕರೆತಂದು ಸಂಪ್ರದಾಯದಂತೆ ಜೈನ ಸಮುದಾಯದವರಿಂದ ದೇವಿಗೆ ಮೊದಲ ಪೂಜೆ ಸಲ್ಲಿಸಲಾಯಿತು.
ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ
9:37 AM IST:
ಇಬ್ಬರು ಶಂಕಿತರು ಸಂಘಟನೆಯೊಂದರ ಜೊತೆ ಸಂಭಾಷಣೆ ನಡೆಸಿರೋದು ಪತ್ತೆ. ಶಂಕಿತ ಉಗ್ರರಾದ ಅಖ್ತರ್ ಹುಸೇನ್ ಮತ್ತು ಅಬ್ದುಲ್ ಅಲೀಂ ಸಂಭಾಷಣೆ. ದುಬೈಗೆ ಬಂದು ಆಫ್ಘಾನಿಸ್ಥಾನಕ್ಕೆ ಬರಲು ಸಂಭಾಷಣೆಯಲ್ಲಿ ಸೂಚನೆ. 2 ಲಕ್ಷ ಹಣ ಹೊಂದಿಸಿಕೊಳ್ಳುವಂತೆ ಸೂಚಿಸಿದ್ದ ಹ್ಯಾಂಡ್ಲರ್. ಇಬ್ಬರ ಬಳಿ ಹಣ ಇಲ್ಲವೆಂದಾಗ ಕಾಶ್ಮೀರಕ್ಕೆ ಬರಲು ಸೂಚನೆ. ಅಲ್ಲಿಂದ ಕರೆಸಿ ಕೊಳ್ಳುವುದಾಗಿ ಹ್ಯಾಂಡ್ಲರ್ ಭರವಸೆ ನೀಡಿದ್ದ. ಅಲ್ಲದೇ ನೀವು ಎಲ್ಲದಕ್ಕೂ ಸಿದ್ದರಿರಬೇಕು ಎಂಬುದನ್ನೂ ಹೇಳಿದ್ದ. ಮುಂದಿನ ವಾರದಲ್ಲಿ ಶಂಕಿತರು ಕಾಶ್ಮೀರಕ್ಕೆ ಹೊರಡಲು ಸಜ್ಜು. ಅಷ್ಟರಲ್ಲಿ ಸಿಸಿಬಿ ಬಲೆಗೆ ಬಿದ್ದ ಶಂಕಿತರು. ಸದ್ಯ ಇಬ್ಬರ ವಿಚಾರಣೆ ತೀವ್ರಗೊಳಿಸಿದ ಸಿಸಿಬಿ ಪೊಲೀಸರು.
9:36 AM IST:
ಆನ್‌ಲೈನ್ ಸಾಲಗಾರರ ಹಾವಳಿಗೆ ಬೇಸತ್ತ ವ್ಯಕ್ತಿ ಆತ್ಮಹತ್ಯೆ. ನಾಗದೇವನಹಳ್ಳಿಯ ನಂದಕುಮಾರ್ ಮೃತ ವ್ಯಕ್ತಿ. ಖಾಸಗಿ ಕೋಅಪರೇಟಿವ್ ಬ್ಯಾಂಕ್‌ನಲ್ಲಿ ಕೆಲಸ ಮಾಡ್ತಿದ್ದ ನಂದಕುಮಾರ್. ಆನ್‌ಲೈನ್ ಆ್ಯಪ್ ಮೂಲಕ ಸಾಲ ಪಡೆದಿದ್ದ ನಂದಕುಮಾರ್. ಸಾಲ ಹಿಂದಿರುಗಿಸುವುದು ಸ್ವಲ್ಪ ತಡವಾಗಿದ್ದರಿಂದ ಕಿರುಕುಳ. ನಂದಕುಮಾರ್ ಪೋಟೋವನ್ನು ಅಶ್ಲೀಲವಾಗಿ ಮಾರ್ಪಡಿಸಿ ಕಿರುಕುಳ. ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ನಂದಕುಮಾರ್. ಆನ್ ಲೈನ್ ಆ್ಯಪ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಡೆತ್ ನೋಟ್‌ನಲ್ಲಿ ಉಲ್ಲೇಖ. ಬೆಂಗಳೂರು ಸಿಟಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
9:34 AM IST:
ಗದಗ: ಗದಗ ಬೆಟಗೇರಿ ಅವಳಿ ನಗರದಲ್ಲಿ ಭಾರೀ ಮಳೆ. ತಗ್ಗು ಪ್ರದೇಶಗಳು ಜಾಲಾವೃತ. ನಸುಕಿನಿಂದೇ ಧಾರಾಕಾರವಾಗಿ ಸುರಿದ ಮಳೆಗೆ ತುಂಬಿ ಹರಿದ ರಾಜಕಾಲುವೆಗಳು. ಗಂಗಿಮಡಿ, ನರಸಾಪೂರ ಕಾಲೋನಿಗಳಲ್ಲಿನ ಮನೆಗಳಿಗೆ ನುಗ್ಗಿದ ಮಳೆ ನೀರು. ಬೆಳಗ್ಗೆ 3 ಗಂಟೆಯಿಂದಲೇ ಮನೆಯ ಸಾಮಗ್ರಿ ರಕ್ಷಿಸಿಕೊಳ್ಳಲು ಪ್ರಯತ್ನದಲ್ಲಿದ್ದ ಜನರು.
9:32 AM IST:
ಕಿಚ್ಚನ ಮೊದಲ 3D ಸಿನಿಮಾ ಇದಾಗಿದ್ದು ಅಭಿಮಾನಿಗಳಿಗೆ ಹೆಚ್ಚಿನ ನಿರೀಕ್ಷೆ ಇತ್ತು. ಫಸ್ಟ್ ಡೇ ಫಸ್ಟ್ ಶೋ ನೋಡಿರುವ ಅಭಿಮಾನಿಗಳು ಫಸ್ಟ್ ಹಾಫ್ ನೋಡಿ ಥ್ರಿಲ್ ಆಗಿದ್ದಾರೆ. ಕೋಟಿಗೊಬ್ಬ 3 ನಂತರ ಬಿಡುಗಡೆ ಆಗಿರುವ ಸಿನಿಮಾ ಇದಾಗಿದ್ದು ಸಿಳ್ಳೆ ಹೊಡೆದು ಕುಣಿದು ಕುಪ್ಪಳಿಸಿದ್ದಾರೆ. ಎರಡನೇ ಭಾಗದಲ್ಲಿ ರಕ್ಕಮ್ಮ ಎಂಟ್ರಿ ಕೊಡುವುದು. ವಿರೇಶ್ ಚಿತ್ರಮಂದಿರದಲ್ಲಿ ಅಭಿಮಾನಿಗಳು ಪಟಾಕಿ ಹೊಡೆದು ಸಂಭ್ರಮಿಸಿದ್ದಾರೆ. 2D ಹಾಗೂ 3D ನೋಡಿ ಸಕ್ಸಸ್ ವಿಮರ್ಶೆ ಕೊಟ್ಟಿದ್ದಾರೆ.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
9:31 AM IST: