'ಓರ್ವ ಸಾಧುವನ್ನು ಈ ರೀತಿ ಹತ್ಯೆ ಮಾಡಿದರೆ ಇನ್ನು ಸಾಮಾನ್ಯರ ಪಾಡೇನು? -ಪೇಜಾವರಶ್ರೀ

ಬೆಳಗಾವಿಯ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜ ಜೈನ ಮುನಿಗಳ ಹತ್ಯೆಯನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತೀವ್ರವಾಗಿ ಖಂಡಿಸಿದ್ದಾರೆ.

Jain monk murder case Condemnation by Pagevarshree at udupi rav

ಉಡುಪಿ (ಜು.10) : ಬೆಳಗಾವಿಯ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜ ಜೈನ ಮುನಿಗಳ ಹತ್ಯೆಯನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತೀವ್ರವಾಗಿ ಖಂಡಿಸಿದ್ದಾರೆ.

ಮುನಿಗಳ ಹತ್ಯೆ ಜನತೆಯಲ್ಲಿ ಗಾಬರಿ ಹುಟ್ಟಿಸುವ ಘಟನೆಯಾಗಿದೆ. ಓರ್ವ ಸಾಧು(jain monk Sri Gunadhar Nandi maharaj)ವನ್ನು ಹತ್ಯೆ ಮಾಡಿರುವುದು ಸ್ವತಂತ್ರ ಭಾರತದಲ್ಲಿ ದುರಂತವಾಗಿದೆ. ಸಾಧುವನ್ನು ಈ ರೀತಿ ಹತ್ಯೆ ಮಾಡಿದರೆ ಇನ್ನು ಸಾಮಾನ್ಯ ಜನರ ಪಾಡೇನು, ಇಂತಹ ಕೃತ್ಯ ಎಂದೂ ಎಲ್ಲೆಲ್ಲೂ ನಡೆಯಬಾರದು, ಈ ಘಟನೆಯನ್ನು ತೀಕ್ಷ$್ಣ ಮಾತುಗಳಿಂದ ಖಂಡಿಸುತ್ತೇವೆ ಎಂದವರು ಹೇಳಿದ್ದಾರೆ.

ಸರ್ಕಾರ(Karnataka governmeent) ತಕ್ಷಣ ಕ್ರಮ ಕೈಗೊಂಡು ಸಾಧುವನ್ನು ಹತ್ಯೆ ಮಾಡಿದ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು, ಅಲ್ಲದೆ ಮುಂದೆ ಇಂತಹ ಘಟನೆ ಆಗದಂತೆ ತಕ್ಕ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.

ಜೈನ ಮುನಿಗಳ ಹತ್ಯೆ ಹಿಂದೆ ಉಗ್ರರ ಕೈವಾಡ ಎಂದ ಶಾಸಕ ಸವದಿ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

ಚಿಕ್ಕೋಡಿ ದಿಗಂಬರ ಜೈನ ಮುನಿ ಹತ್ಯೆಗೆ ಶಾಸಕ ಸುನಿಲ್‌ ಖಂಡನೆ

ಕಾರ್ಕಳ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಜೈನ ಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಭೀಕರ ಹತ್ಯೆ ಖಂಡನೀಯ. ದಿಗಂಬರ ಮುನಿಗಳ ಹತ್ಯೆ ಮನಸ್ಸಿಗೆ ತೀವ್ರ ಅಘಾತ ತಂದಿದೆ. ಮನಸ್ಸನ್ನು ಅತೀವ ಘಾಸಿಗೊಳಿಸಿದೆ ಎಂದು ಮಾಜಿ ಸಚಿವ, ಶಾಸಕ ವಿ. ಸುನಿಲ್‌ ಕುಮಾರ್‌ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸ್ವಾಮೀಜಿ ರೊಕ್ಕದ ವ್ಯವಹಾರ ಮಾಡಲು ಸಾಧ್ಯವೇ ಇಲ್ಲ: ಅಭಯ್ ಪಾಟೀಲ್

ತಪ್ಪಿತಸ್ಥ ಕೊಲೆಗಡುಕರಿಗೆ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಾಧು, ಸಂತರು ಶಾಂತಿ ಪ್ರಿಯರು. ದೇಶದ ಒಳಿತು. ಸಂಸ್ಕಾರ, ಸನಾತನ ಧರ್ಮದ ವಿಚಾರವಾಗಿ ಮಾರ್ಗದರ್ಶನ ನೀಡುವವರು. ಅಂತಹ ಸಾಧು ಸಂತರನ್ನೆ ಈ ರೀತಿ ಹೇಯವಾಗಿ ಕೃತ್ಯವೆಸಗಿ ಕೊಲೆ ಮಾಡಿರುವುದನ್ನು ಸಮಾಜ ಒಪ್ಪಲು ಸಾಧ್ಯವೇ ಇಲ್ಲ. ಹತ್ಯೆ ಕುರಿತು ಸೂಕ್ತ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಕೊಲೆಗಡುಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ನಾಡಿನ ಸಾಧು ಸಂತರಿಗೆ ರಕ್ಷಣೆ ಒದಗಿಸುವಂತೆ ಅವರು ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios