ನೇಹಾ, ರುಕ್ಸಾನಾ ಇಬ್ಬರೂ ಹೆಣ್ಣು; ಹಂತಕರಿಗೆ ಗಲ್ಲು ಶಿಕ್ಷೆಯಾಗಲಿ : ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಆಗ್ರಹ
ಸ್ವಾರ್ಥಕ್ಕಾಗಿ ಯಾರೂ ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡಬಾರದು. ವಿದ್ಯಾರ್ಥಿನಿ ನೇಹಾ ಹಿರೇಮಠ ಹಂತಕನಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಆಗ್ರಹಿಸಿದರು.
ಹುಬ್ಬಳ್ಳಿ (ಏ.21): ಸ್ವಾರ್ಥಕ್ಕಾಗಿ ಯಾರೂ ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡಬಾರದು. ವಿದ್ಯಾರ್ಥಿನಿ ನೇಹಾ ಹಿರೇಮಠ ಹಂತಕನಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಆಗ್ರಹಿಸಿದರು.
ಇಂದು ನೇಹಾ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೇಹಾ ಒಂದು ಹೆಣ್ಣು, ರುಕ್ಸಾನಾ ಕೂಡಾ ಹೆಣ್ಣು. ಹೆಣ್ಣು ಅಂದ್ರೆ ಹೆಣ್ಣು, ಇದರಲ್ಲಿ ಜಾತಿ ರಾಜಕಾರಣ ಧರ್ಮ ಯಾವುದೂ ತರಬೇಡಿ. ನೇಹಾಳಿಗೆ ನ್ಯಾಯ ಸಿಗಬೇಕು ಎಂದರು.
ಹುಬ್ಬಳ್ಳಿ ನೇಹಾ ಕೊಂದವನನ್ನು ಗಲ್ಲಿಗೇರಿಸಿ ಎಂದ ಸಚಿವ ಪಾಟೀಲ್: ಬೇಡ ಜನರಿಗೊಪ್ಪಿಸಿ ಎಂದ ನಟಿ ರಚಿತಾ ರಾಮ್
ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳೆಯರ ಭದ್ರತೆಯ ಕುರಿತು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆಯುವೆ. ಮಹಿಳಾ ಆಯೋಗದಿಂದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನೋಟಿಸ್ ನೀಡಿ ಮಾಹಿತಿ ಪಡೆಯುತ್ತೇನೆ. ಜಿಲ್ಲಾಧಿಕಾರಿಗಳು ಕಾಲೇಜು ಭದ್ರತೆ ಕುರಿತು ಮಾಹಿತಿ ಪಡೆಯಬೇಕು. ಮಹಿಳಾ ಆಯೋಗ ಇದೆ ಅನ್ನೋದು ಎಲ್ಲರಿಗೂ ಗೊತ್ತಾಗಬೇಕು ಎಂದರು.
ಮಹಿಳೆಯರಿಗಾಗಿ ಫ್ರೀ ಹೆಲ್ಪ್‌ಲೈನ್ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯರ ಜೊತೆ ಮಾತನಾಡಿದ್ದೇನೆ. ನೇಹಾ ಹಿರೇಮಠ ಸಾವು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ. ಹಾಗೆ ಬಳಸಿಕೊಳ್ಳೋದು ಆ ಯುವತಿಗೆ ಮಾಡಿದ ಅಪಮಾನ. ಅದೇ ರೀತಿ ಮುಖ್ಯಮಂತ್ರಿ, ಗೃಹಮಂತ್ರಿ, ಪೊಲೀಸರು ಸೂಕ್ಷ್ಮತೆಯಿಂದ ವರ್ತಿಸಬೇಕು. ರಾಜಕೀಯ ಹಿತಾಸಕ್ತಿಯಿಂದ ಅವರ ಮನೆಯವರಿಗೆ ನೋವಾಗುವ ರೀತಿ ಯಾರೂ ಮಾತನಾಡಬಾರದು ಎಂದು ಆ ಮೂಲಕ ನೇಹಾ ಕುರಿತು ಗೃಹ ಸಚಿವ, ಸಿಎಂ ಹೇಳಿಕೆ ಕುರಿತು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ನಿರ್ಭಯಾ ಘಟನೆ ಆದ ಮೇಲೆ ಕಾನೂನು ಸ್ಟಿಕ್ರ್ಟ್ ಆಗಿದೆ.ಪೊಕ್ಸೋ ಕೇಸ್(POCSO case) ನಲ್ಲಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ಹೇಗಿದೆ. ಅದೇ ರೀತಿ ಈ ಕೇಸ್‌ನಲ್ಲಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ಆಗಬೇಕು. ಇಲ್ಲದಿದ್ದರೆ ಜನ ಮರೆತು ಬಿಡ್ತಾರೆ. ಇಡೀ ದೇಶದಲ್ಲಿ ಒಂದು ಗಂಟೆಯಲ್ಲಿ 73 ಹೆಣ್ಣು ಮಕ್ಕಳ ಕೊಲೆಯಾಗ್ತಿವೆ. ಅಶ್ವಿನಿ ಅನ್ನೋ ಹುಡಗಿ ನನಗೆ ಕಾಲ್ ಮಾಡಿದ್ಳು ಆ ಯುವತಿಗೆ ಆಯೋಗದಿಂದ ನಾನು ನ್ಯಾಯ ಕೊಡಿಸಿದ್ದೇನೆ ಎಂದರು. ಅದೇ ನೇಹಾ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.