ಸ್ವಾಮೀಜಿ ರೊಕ್ಕದ ವ್ಯವಹಾರ ಮಾಡಲು ಸಾಧ್ಯವೇ ಇಲ್ಲ: ಅಭಯ್ ಪಾಟೀಲ್

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಹಿರೆಕೋಡಿ ಗ್ರಾಮದ ಜೈನ್ ಮುನಿ ಕಾಮಕುಮಾರ ನಂದಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಅಭಯ್ ಪಾಟೀಲ್​  ಹೇಳಿಕೆ ನೀಡಿದ್ದಾರೆ

belagavi Jain monk murder case BJP MLA Abhay Patil statement Karnataka news gow

ಬೆಳಗಾವಿ (ಜು.10): ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಹಿರೆಕೋಡಿ ಗ್ರಾಮದ ಜೈನ ಮುನಿ ಕಾಮಕುಮಾರ ನಂದಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಅಭಯ್ ಪಾಟೀಲ್​ (MLA Abhay Patil) ಹೇಳಿಕೆ ನೀಡಿದ್ದಾರೆ. ನನಗೆ ಗೊತ್ತಿಲ್ಲ ಜೈನ ಮುನಿಗಳು ಎಲ್ಲವನ್ನು ತ್ಯಾಗ ಮಾಡಿರುತ್ತಾರೆ. ಸ್ವಾಮೀಜಿಯವರು 41 ಎಕರೆ ಹೊಂದಿದ್ದಾರೆ. ಎಲ್ಲವನ್ನೂ ಬಿಡ್ತಾರೆ ಆದರೆ ಬಟ್ಟೆ ಬಿಡೋಕೆ ಸಾಧ್ಯ ಇಲ್ಲ ಆದರೆ ಇವರು ಬಟ್ಟೆ ಕೂಡ ಧರಿಸುತ್ತಿರಲಿಲ್ಲ. 15 ವರ್ಷದಿಂದಲೂ ಇದೇ ಸೇವೆಯಲ್ಲಿದ್ದಾರೆ. ಬಡ್ಡಿ ವ್ಯವಹಾರ ಮಾಡ್ತಿದ್ರು ಅಂತ ಹೇಳ್ತಾರೆ ಅವರ ಬಳಿ 41 ಎಕರೆ ಜಮೀನಿದೆ. ಶುಕ್ರವಾರ ಮಧ್ಯಾಹ್ನದ ವರೆಗೂ ಆರೋಪಿಯ ಹೆಸರು ಹೇಳಲಿಲ್ಲ ಅಲ್ಲಿನವರಿಗೆ ಒತ್ತಡ ಇದೆ. ಆರೋಪಿ ಹೆಸರು ಹೇಳದೆ ಇರೋದು ಅಂದ್ರೆ ಪೊಲೀಸರು ಯಾವುದೋ ಒತ್ತಡಕ್ಕೆ ಒಳಗಾಗಿದ್ದಾರೆ. ಈ ತನಿಖೆ ಮೇಲೆ ನಮಗೆ ವಿಶ್ವಾಸ ಇಲ್ಲ. ಈ ಪ್ರಕರಣವನ್ನ ಸಿಬಿಐ ತನಿಖೆಗೆ ಒಪ್ಪಿಸಬೇಕು. ಇಬ್ಬರು ಆರೋಪಿ ಹೆಸರು ಹೇಳಲೇ ಇಲ್ಲ ಒಬ್ಬರ ಹೆಸರೇ ಹೇಳಿದ್ದು ಯಾಕೆ. ಸ್ವಾಮೀಜಿ ಅವರು ರೊಕ್ಕದ ವ್ಯವಹಾರ ಮಾಡಲು ಸಾಧ್ಯವೇ ಇಲ್ಲ ಎಂದಿದ್ದಾರೆ.

ಜೈನ ಮುನಿಗಳ ಹತ್ಯೆ ಪ್ರಕರಣ: ಚಿಕ್ಕೋಡಿಯ ಅಜ್ಞಾತ ಸ್ಥಳದಲ್ಲಿ ಆರೋಪಿಗಳ ವಿಚಾರಣೆ

ಆಶ್ರಮಕ್ಕೆ ADGP ಭೇಟಿ:
ಇನ್ನು ಪ್ರಕರಣ ಸಂಬಂಧ ಹಿರೆಕೋಡಿ ಗ್ರಾಮದ ನಂದಿ ಆಶ್ರಮಕ್ಕೆ ಕಾನೂನು ಮತ್ತು ಸುವ್ಯವಸ್ಥೆ ADGP ಆರ್. ಹಿತೇಂದ್ರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಗ್ರಾಮಸ್ಥರು ಹಾಗೂ ಜೈನ ಸಮುದಾಯದ ಮುಖಂಡರ ಜೊತೆಗೆ ADGP ಸುದೀರ್ಘ ಚರ್ಚೆ ನಡೆಸಿದರು. ಮುನಿಗಳ ಪ್ರಕರಣವನ್ನು ಸರ್ಕಾರ  ಗಂಭೀರವಾಗಿ ಪರಿಗಣಿಸಿದೆ.  ಜೈನ ಸಮಾಜದಿಂದ ಬೃಹತ್ ಪ್ರತಿಭಟನೆ ಹಿನ್ನಲೆ ದಿಢೀರ್ ‌ಹಿರೇಕೋಡಿಗೆ ಭೇಟಿ ನೀಡಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಎಡಿಜಿಪಿ ಮನವಿ ಮಾಡಿದರು. ಎಡಿಜಿಪಿಗೆ ಬೆಳಗಾವಿ ಎಸ್ಪಿ ಡಾ. ಸಂಜೀವ್ ಪಾಟೀಲ ಸಾಥ್ ನೀಡಿದರು. ಜೊತೆಗೆ ಹುಬ್ಬಳ್ಳಿಯ ವರೂರಿಗೆ ADGP ಹಿತೇಂದ್ರ ಭೇಟಿ ನೀಡಿದರು. ಹುಬ್ಬಳ್ಳಿ ತಾಲೂಕಿನ ವರೂರಿಗೆ ಭೇಟಿ ನೀಡಿದ ADGP ವರೂರಿನ ಜೈನ ಮುನಿ ಗುಣಧರನಂದಿ ಸ್ವಾಮೀಜಿ ಭೇಟಿ ಮಾಡಿದರು.   ಜೈನ ಮುನಿ ಕಾಮಕುಮಾರ ನಂದಿ ಹತ್ಯೆ ಕುರಿತು ಸ್ವಾಮೀಜಿ ಅಸಮಧಾನ ವ್ಯಕ್ತಪಡಿಸಿದ್ದರು. ಸರ್ಕಾರಕ್ಕೆ ಹಲವು ಬೇಡಿಕೆ ಇಟ್ಟು,ಉಪವಾಸ ಸತ್ಯಾಗ್ರಹ ನಡೆಸಿದ್ದ ಗುಣಧರನಂದಿ ಸ್ವಾಮೀಜಿ. ಈ ಹಿನ್ನೆಲೆ  ಜಿ ಪರಮೇಶ್ವರ ದೂರವಾಣಿ ಮೂಲಕ ಸ್ವಾಮೀಜಿ ಜೊತೆ ಭಾನುವಾರ ಮಾತಾಡಿದ್ರು. ಪರಮೇಶ್ವರ್ ಸೂಚನೆ ಮೇರೆ ADGP ಹಿತೇಂದ್ರ ಭೇಟಿ ನೀಡಿದ್ದರು.

ಬೆಳಗಾವಿ ಜೈನಮುನಿ ಹತ್ಯೆ ಪ್ರಕರಣ ಸಿಬಿಐ ತನಿಖೆಗೆ ವಹಿಸಿ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಗೃಹ ಸಚಿವ ಡಾ.ಜಿ.ಪರಮೇಶ್ವರ ವರೂರಿಗೆ ಭೇಟಿ:
ಜೈನಮುನಿ ಕಾಮಕುಮಾರ ಮಹರಾಜರ ಬರ್ಬರ ಕೊಲೆ ವಿಚಾರವಾಗಿ, ವರೂರಿನ ಗುನಧರನಂದಿ ಮಹರಾಜರನ್ನು  ಗೃಹ ಸಚಿವ ಡಾ.ಜಿ.ಪರಮೇಶ್ವರ ಭೇಟಿ ನೀಡಿದರು.  ಹುಬ್ಬಳ್ಳಿ ತಾಲೂಕಿನ ವರೂರಿನಲ್ಲಿರುವ ಜೈನಮಂದಿರಕ್ಕೆ‌ ಭೇಟಿ ನೀಡಿದ ಗೃಹ ಸಚಿವ ಪರಂ,  ಜೈನ ಮುನಿ ಕೊಲೆಯ ವಿಚಾರವಾಗಿ ಮಹಾರಾಜರ ಜೊತೆ ಚರ್ಚೆ ನಡೆಸಿದರು. ಗೃಹ ಸಚಿವರಿಗೆ ಸಚಿವ ಸಂತೋಷ್ ಲಾಡ, ಶಾಸಕ ಪ್ರಸಾದ ಅಬ್ಬಯ್ಯ ಸಾಥ್ ಕೊಟ್ಟರು. ಜೈನ ಮುನಿಗಳ‌ ಹತ್ಯೆ ಖಂಡಿಸಿ  ಜೈನಮುನಿ ಗುಣಧರನಂದಿ ಮಾಹಾರಾಜ್ ಸ್ವಾಮೀಜಿ ಸಲ್ಲೇಖನ ವೃತ (ಅಮರಣಾಂತ ಉಪವಾಸ ಸತ್ಯಾಗ್ರಹ) ನಡೆಸುತ್ತಿದ್ದಾರೆ. ಈ ವೇಳೆ ಸ್ವಾಮೀಜಿಗಳನ್ನ ಭೇಟಿ ಮಾಡಿ  ಗೃಹ ಸಚಿವ ಭದ್ರತೆಯ ಭರವಸೆ ನೀಡಿದರು.

ಇನ್ನೊಂದೆಡೆ ಮುನಿಗಳ ಹತ್ಯೆ ಖಂಡಿಸಿ ಚಿಕ್ಕೋಡಿ ಪಟ್ಟಣದಲ್ಲಿಂದು ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಬೆಳಗಾವಿ ಜಿಲ್ಲೆಯ ಜೈನ ಸಮುದಾಯದಿಂದ ‌ಪ್ರತಿಭಟನೆ ನಡೆಯುತ್ತಿದ್ದು, ಚಿಕ್ಕೋಡಿಯ ಆರ್.ಡಿ ಕಾಲೇಜು ಆವರಣದಲ್ಲಿ  ಸಾವಿರಾರು ಸಂಖ್ಯೆಯಲ್ಲಿ  ಜೈನ ಸಮುದಾಯ ಸೇರಿದೆ. ಆರ್.ಡಿ ಕಾಲೇಜಿನಿಂದ ತಹಶಿಲ್ದಾರ ಕಚೇರಿವರೆಗೆ ಮೌನ ಪ್ರತಿಭಟನೆ ನಡೆಸಿದ್ದಾರೆ. ತಹಶಿಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದೆ.

Latest Videos
Follow Us:
Download App:
  • android
  • ios