ಜೈನ ಮುನಿಗಳ ಹತ್ಯೆ ಪ್ರಕರಣ: ಚಿಕ್ಕೋಡಿಯ ಅಜ್ಞಾತ ಸ್ಥಳದಲ್ಲಿ ಆರೋಪಿಗಳ ವಿಚಾರಣೆ
ಜೈನ ಮುನಿಗಳ ಅಂತ್ಯಕ್ರಿಯೆ ಬಳಿಕ ಆರೋಪಿಗಳ ವಿಚಾರಣೆ ಮತ್ತೆ ಆರಂಭವಾಗಿದೆ. ಚಿಕ್ಕೋಡಿಯ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಯುತ್ತಿದೆ.
ಬೆಳಗಾವಿ: ಹಿರೇಕೋಡಿಯ ಕಾಮಕುಮಾರ ನಂದಿ ಮಹಾರಾಜರ ಹತ್ಯೆ(Murder) ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಅಂತ್ಯಕ್ರಿಯೆ ಬಳಿಕ ಆರೋಪಿಗಳ ವಿಚಾರಣೆ ಮತ್ತೆ ಆರಂಭವಾಗಿದೆ. ಇಬ್ಬರು ಹಂತಕರು ನ್ಯಾಯಾಂಗ ಬಂಧನದಲ್ಲಿದ್ದು, ಹೆಚ್ಚಿನ ವಿಚಾರಣೆಗಾಗಿ ಇಬ್ಬರನ್ನು ಪೊಲೀಸರ ವಶಕ್ಕೆ ಕೊಡುವ ಸಾಧ್ಯತೆ ಇದೆ. ನಾರಾಯಣ ಮಾಳಿ, ಚಿಕ್ಕೋಡಿಯ ಹಸನ್ ಡಲಾಯತ್ ಆರೋಪಿಗಳಾಗಿದ್ದಾರೆ. ಚಿಕ್ಕೋಡಿಯ ಅಜ್ಞಾತ ಸ್ಥಳದಲ್ಲಿ ಜೈನಮುನಿಗಳ(Jain muni) ಹಂತಕರ ವಿಚಾರಣೆ ಮಾಡಲಾಗುತ್ತಿದೆ. ಅಲ್ಲದೇ ಇಂದು ಚಿಕ್ಕೋಡಿಯಲ್ಲಿ(Chikkodi) ಈ ಹತ್ಯೆಯನ್ನು ಖಂಡಿಸಿ, ಜೈನ ಸಮಾಜದಿಂದ ಬೃಹತ್ ಪ್ರತಿಭಟನೆ(Protest) ಮಾಡಲಾಗುತ್ತದೆ. ಈ ಹಿನ್ನೆಲೆ ಆಶ್ರಮಕ್ಕೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್. ಹಿತೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರೇಕೋಡಿ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತೇವೆ ಎಂದು ಎಡಿಜಿಪಿ ಆರ್.ಹಿತೇಂದ್ರ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ಮೈಸೂರು: ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ನಾಯ್ಕ್ ಕೊಲೆ