Asianet Suvarna News Asianet Suvarna News

ವಿಂಬಲ್ಡನ್ ಗ್ರ್ಯಾನ್‌ಸ್ಲಾಂ: ವಿಶ್ವ ನಂ.1 ಸಿನ್ನರ್‌ ಮಣಿಸಿದ ಮೆಡ್ವೆಡೆವ್‌ ಸೆಮಿಗೆ ಲಗ್ಗೆ

ವಿಶ್ವ ನಂ.1 ಟೆನಿಸಿಗ ಯಾನಿಕ್ ಸಿನ್ನರ್ ಅವರ ವಿಂಬಲ್ಡನ್ ಟೆನಿಸ್ ಗ್ರ್ಯಾನ್‌ಸ್ಲಾಂನಲ್ಲಿ ತಮ್ಮ ಹೋರಾಟ ಮುಗಿಸಿದ್ದಾರೆ. ಸೆಮಿಫೈನಲ್‌ನಲ್ಲಿ ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ವಿರುದ್ಧ ಸೋಲು ಕಂಡ ಸಿನ್ನರ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

Wimbledon 2024 Daniil Medvedev knocks out World No 1 Jannik Sinner in quarterfinal kvn
Author
First Published Jul 10, 2024, 9:36 AM IST

ಲಂಡನ್‌: ವಿಶ್ವ ನಂ.1 ಯಾನಿಕ್‌ ಸಿನ್ನರ್‌ರ ಚೊಚ್ಚಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿದೆ. ಅವರು ಸೆಮಿಫೈನಲ್‌ನಲ್ಲಿ ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ವಿರುದ್ಧ ಸೋಲುಂಡರು.

ಮಂಗಳವಾರ ಪುರುಷರ ಸಿಂಗಲ್ಸ್‌ನಲ್ಲಿ ಇಟಲಿಯ 22 ವರ್ಷದ ಸಿನ್ನರ್‌ಗೆ, 5ನೇ ಶ್ರೇಯಾಂಕಿತ ಮೆಡ್ವೆಡೆವ್‌ ಅವರಿಂದ 7-6, 4-6, 4-7, 6-2, 3-6 ಸೆಟ್‌ಗಳಲ್ಲಿ ವೀರೋಚಿತ ಸೋಲು ಎದುರಾಯಿತು. 2021ರ ಯುಎಸ್‌ ಓಪನ್‌ ಚಾಂಪಿಯನ್‌ ಮೆಡ್ವೆಡೆವ್‌ ಸತತ 2ನೇ ಬಾರಿ ವಿಂಬಲ್ಡನ್‌ ಸೆಮೀಸ್‌ಗೇರಿದರು.

ಇದೇ ವೇಳೆ ಮಹಿಳಾ ಸಿಂಗಲ್ಸ್‌ನಲ್ಲಿ ಕ್ರೊವೇಷಿಯಾದ ಡೊನಾ ವೆಕಿಚ್‌, ನ್ಯೂಜಿಲೆಂಡ್‌ನ ಲುಲು ರಾಡೊವ್‌ಸಿಚ್‌ ವಿರುದ್ಧ 5-7, 6-4, 6-1 ಸೆಟ್‌ಗಳಲ್ಲಿ ಗೆದ್ದು, ಗ್ರ್ಯಾನ್‌ಸ್ಲಾಂನಲ್ಲಿ ಮೊದಲ ಬಾರಿ ಸೆಮಿಫೈನಲ್‌ ಪ್ರವೇಶಿದರು.

ಟೀಂ ಇಂಡಿಯಾ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆ ಘೋಷಿಸಿದ ಜಯ್ ಶಾ!

ಮೊದಲ ಸಲ ಗ್ರ್ಯಾನ್‌ಸ್ಲಾಂ ಸೆಮೀಸ್‌ಗೆ ವೆಕಿಚ್‌

ಲಂಡನ್‌: ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಕ್ರೊವೇಷಿಯಾದ ಡೊನಾ ವೆಕಿಚ್‌ ಸೆಮಿಫೈನಲ್‌ ಪ್ರವೇಶಿದ್ದಾರೆ. ಇದರೊಂದಿಗೆ ಗ್ರ್ಯಾನ್‌ ಸ್ಲಾಂ ಇತಿಹಾಸದಲ್ಲೇ ಮೊದಲ ಬಾರಿ ಅಂತಿಮ 4ರ ಘಟ್ಟ ತಲುಪಿದ ಸಾಧನೆ ಮಾಡಿದ್ದಾರೆ.

ಮಂಗಳವಾರ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ 28ರ ವೆಕಿಚ್‌, ನ್ಯೂಜಿಲೆಂಡ್‌ನ ಲುಲು ರಾಡೊವ್‌ಸಿಚ್‌ ವಿರುದ್ಧ 5-7, 6-4, 6-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ವೆಕಿಚ 10ನೇ ಬಾರಿ ವಿಂಬಲ್ಡನ್‌ ಆಡುತ್ತಿದ್ದು, 2018ರಲ್ಲಿ 4ನೇ ಸುತ್ತಿಗೇರಿದ್ದು ಈ ವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. 2019ರ ಯುಎಸ್‌ ಓಪನ್‌, 2023ರ ಆಸ್ಟ್ರೇಲಿಯನ್‌ ಓಪನ್‌ ಕ್ವಾರ್ಟರ್‌ಗೇರಿದ್ದ ವಿಶ್ವ ನಂ.37 ವೆಕಿಚ್‌ ಈ ಸಲ ಮೊದಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.

ಸಂಭ್ರಮಾಚರಣೆಗೆ ಬನ್ನಿ: ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಮಾಲ್ಡೀವ್ಸ್ ಆಹ್ವಾನ!

ಜೋಕೋ ಕ್ವಾರ್ಟರ್‌ಗೆ

24 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ನೋವಾಕ್ ಜೋಕೋವಿಚ್‌ ವಿಂಬಲ್ಡನ್‌ ಕ್ವಾರ್ಟರ್‌ ಫೈನಲ್‌ಗೇರಿದ್ದಾರೆ. ಪ್ರಿ ಕ್ವಾರ್ಟರ್‌ನಲ್ಲಿ ವಿಶ್ವ ನಂ.2 ಸರ್ಬಿಯಾದ ಜೋಕೋ, 15ನೇ ಶ್ರೇಯಾಂಕಿತ ಡೆನ್ಮಾರ್ಕ್‌ನ ಹೋಲ್ಗರ್‌ ರ್‍ಯುನೆ ವಿರುದ್ಧ 6-3, 6-4, 6-2 ವಿರುದ್ಧ ಸುಲಭ ಗೆಲುವು ಸಾಧಿಸಿದರು. ವಿಂಬಲ್ಡನ್‌ನಲ್ಲಿ 15ನೇ ಬಾರಿ ಕ್ವಾರ್ಟರ್‌ ಪ್ರವೇಶಿಸಿರುವ 7 ಬಾರಿ ಚಾಂಪಿಯನ್‌ ಜೋಕೋಗೆ, ಆಸ್ಟ್ರೇಲಿಯಾದ ಅಲೆಕ್ಸ್‌ ಡೆ ಮಿನಾರ್‌ ಸವಾಲು ಎದುರಾಗಲಿದೆ.

ನಿಂದಿಸಿದ ಪ್ರೇಕ್ಷಕರ ವಿರುದ್ಧ ಜೋಕೋ ಗರಂ!

ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಬಳಿಕ ಮಾತನಾಡುವ ವೇಳೆ ಜೋಕೋವಿಚ್‌, ಪಂದ್ಯದ ವೇಳೆ ತಮ್ಮನ್ನು ನಿಂದಿಸಿದ ಕೆಲ ಪ್ರೇಕ್ಷಕರ ವಿರುದ್ಧ ಸಿಟ್ಟು ಹೊರಹಾಕಿದರು. ‘ಈ ರೀತಿಯ ವರ್ತನೆಯನ್ನು ನಾನು ಸಹಿಸುವುದಿಲ್ಲ. ಒಬ್ಬ ಆಟಗಾರನನ್ನು ನಿಂದಿಸುವುದು ಸರಿಯಲ್ಲ. 20 ವರ್ಷಗಳಿಂದ ವೃತ್ತಿಪರ ಟೆನಿಸ್‌ ಆಡುತ್ತಿದ್ದೇನೆ. ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ನನ್ನನ್ನು ಮುಟ್ಟಲು ಯಾರಿಂದಲೂ ಆಗಲ್ಲ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
 

Latest Videos
Follow Us:
Download App:
  • android
  • ios