ಪ್ಯಾರಿಸ್ ಒಲಿಂಪಿಕ್ಸ್: ಯೂಕಿ ಅಥವಾ ಬಾಲಾಜಿ ಜತೆ ಬೋಪಣ್ಣ ಸ್ಪರ್ಧೆ
ವಿಶ್ವ ಟೆನಿಸ್ ರ್‍ಯಾಂಕಿಂಗ್‌ನಲ್ಲಿ 4ನೇ ಸ್ಥಾನದಲ್ಲಿರುವ ಬೋಪಣ್ಣಗೆ ತಮ್ಮ ಜೊತೆಗಾರನನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದ್ದು, ಈ ಬಗ್ಗೆ ಸದ್ಯದಲ್ಲೇ ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ)ಗೆ ತಿಳಿಸಲಿದ್ದಾರೆ ಎನ್ನಲಾಗಿದೆ. ಬೋಪಣ್ಣ ಆಯ್ಕೆಗೆ ಒಪ್ಪಿಗೆ ಸೂಚಿಸಲು ಎಐಟಿಪಿ ನಿರ್ಧರಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ನವದೆಹಲಿ: ಭಾರತದ ಅಗ್ರ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ, ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಯೂಕಿ ಭಾಂಬ್ರಿ ಅಥವಾ ಶ್ರೀರಾಮ್ ಬಾಲಾಜಿ ಜೊತೆ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಜು.26ರಿಂದ ಆ.11ರ ವರೆಗೂ ಪ್ಯಾರಿಸ್ ಒಲಿಂಪಿಕ್ಸ್ ನಡೆಯಲಿದೆ.
ವಿಶ್ವ ಟೆನಿಸ್ ರ್‍ಯಾಂಕಿಂಗ್‌ನಲ್ಲಿ 4ನೇ ಸ್ಥಾನದಲ್ಲಿರುವ ಬೋಪಣ್ಣಗೆ ತಮ್ಮ ಜೊತೆಗಾರನನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದ್ದು, ಈ ಬಗ್ಗೆ ಸದ್ಯದಲ್ಲೇ ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ)ಗೆ ತಿಳಿಸಲಿದ್ದಾರೆ ಎನ್ನಲಾಗಿದೆ. ಬೋಪಣ್ಣ ಆಯ್ಕೆಗೆ ಒಪ್ಪಿಗೆ ಸೂಚಿಸಲು ಎಐಟಿಪಿ ನಿರ್ಧರಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಫ್ರೆಂಚ್ ಓಪನ್ ಟೆನಿಸ್ ಗ್ರ್ಯಾಂಡ್‌ಸ್ಲಾಂನಲ್ಲಿ ಸ್ಪರ್ಧಿಸಲ್ಲ ಎಮ್ಮಾ ರಾಡುಕಾನು
ಪ್ಯಾರಿಸ್: ಮೇ 26ರಿಂದ ಆರಂಭಗೊಳ್ಳಲಿರುವ ಫ್ರೆಂಚ್ ಓಪನ್ ಟೆನಿಸ್ ಗ್ರ್ಯಾನ್‌ಸ್ಲಾಂನಲ್ಲಿ ಸ್ಪರ್ಧಿಸದಿರಲು ಬ್ರಿಟನ್‌ನ ಎಮ್ಮಾ ರಾಡುಕಾನು ನಿರ್ಧರಿಸಿದ್ದಾರೆ. ಮಾಜಿ ಯುಎಸ್ ಓಪನ್ ಚಾಂಪಿಯನ್, 21 ವರ್ಷದ ರಾಡುಕಾನು ಗಾಯದಿಂದ ಸಂಪೂರ್ಣ ಚೇತರಿಸಿಕೊಂಡ ಬಳಿಕ ಆಯ್ದ ಟೂರ್ನಿಗಳಲ್ಲಷ್ಟೇ ಆಡುತ್ತಿದ್ದಾರೆ. ಜುಲೈನಲ್ಲಿ ನಡೆಯಲಿರುವ ವಿಂಬಲ್ಡನ್ ಗ್ರ್ಯಾನ್ ಸ್ಲಾಂನಲ್ಲಿ ಸ್ಪರ್ಧಿಸಲು ಅಗತ್ಯವಿರುವ ಅಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸುವುದಾಗಿ ಎಮ್ಮಾ ತಿಳಿಸಿದ್ದಾರೆ.
T20 World Cup 2024: ಭಾರತ vs ಪಾಕ್ ಪಂದ್ಯದ ಟಿಕೆಟ್‌ಗೆ ನಿಲ್ಲದ ಡಿಮ್ಯಾಂಡ್..!
ವಿಶ್ವ ಪ್ಯಾರಾ ಅಥ್ಲಟಿಕ್ಸ್: ದೀಪ್ತಿ ವಿಶ್ವ ದಾಖಲೆ!
ಕೊಬೆ(ಜಪಾನ್): ಭಾರತದ ದೀಪ್ತಿ ಜೀವನ್‌ಜಿ ಇಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಕೂಟದ ಮಹಿಳೆಯರ 400 ಮೀ. ಟಿ20 ವಿಭಾಗದ ಓಟದಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. 55.07 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ದೀಪ್ತಿ, ಕಳೆದ ಆವೃತ್ತಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅಮೆರಿಕದ ಬ್ರಿಯಾನಾ ಕ್ಲಾರ್ಕ್ ನಿರ್ಮಿಸಿದ್ದ ದಾಖಲೆ (55.12 ಸೆಕೆಂಡ್)ಯನ್ನು ಮುರಿದರು. ಟರ್ಕಿಯ ಐಸೆಲ್ ಒನ್ಡೆರ್ (55.19 ಸೆ.) ಹಾಗೂ ಈಕ್ವೆಡಾರ್‌ನ ಲಿಜಾನ್ಶೆಲಾ (56.68) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಪಡೆದರು. ಬುದ್ಧಿಶಕ್ತಿಯ ದೌರ್ಬಲ್ಯವಿರುವ ಅಥ್ಲೀಟ್‌ಗಳು ಟಿ20 ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
ಇನ್ನು ಸೋಮವಾರ ಭಾರತಕ್ಕೆ ಮತ್ತೆರಡು ಪದಕಗಳು ದೊರೆತವು. ಪುರಷರ ಎಫ್ 56 ವಿಭಾಗದ ಡಿಸ್ಕಸ್ ಥ್ರೋನಲ್ಲಿ ಯೋಗೇಶ್ ಕಥೂನಿಯಾ, ಮಹಿಳೆಯರ ಎಫ್ 34 ವಿಭಾಗದ ಶಾಟ್‌ಪುಟ್‌ನಲ್ಲಿ ಭಾಗ್ಯಶ್ರೀ ಜಾಧವ್ ಬೆಳ್ಳಿ ಜಯಿಸಿದರು. ಕೂಟದಲ್ಲಿ ಈವರೆಗೂ ಭಾರತ ಒಟ್ಟು 5 ಪದಕ ಪಡೆದಿದೆ.
2023ರಲ್ಲಿ ಪ್ಲೇ ಆಫ್‌ಗೇರಿದ ಎಲ್ಲಾ ತಂಡ ಈ ಬಾರಿ ಔಟ್, ಈ ಬಾರಿ 4 ರ ಪೈಕಿ ಆರ್‌ಸಿಬಿಗೆ ಹೆಚ್ಚು ಚಾನ್ಸ್!
4X400 ಮೀ. ಮಿಶ್ರ ರಿಲೇ ತಂಡದಿಂದ ರಾಷ್ಟ್ರೀಯ ದಾಖಲೆ
ಬ್ಯಾಂಕಾಕ್: ಭಾರತದ 4X400 ಮೀ. ಮಿಶ್ರ ರಿಲೇ ತಂಡ ಇಲ್ಲಿ ನಡೆಯುತ್ತಿರುವ ಉದ್ಘಾಟನಾ ಆವೃತ್ತಿಯ ಏಷ್ಯನ್ ರಿಲೇ ಚಾಂಪಿಯನ್‌ಶಿಪ್‌ನಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದೆ. ಆದರೆ, ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ತಂಡ ವಿಫಲವಾಗಿದೆ.
ಸೋಮವಾರ ನಡೆದ ಸ್ಪರ್ಧೆಯಲ್ಲಿ ಮುಹಮ್ಮದ್ ಅಜ್ಮಲ್, ಜ್ಯೋತಿಕಾ ಶ್ರೀ ದಂಡಿ, ಅಮೋಲ್ ಜೇಕಬ್ ಹಾಗೂ ಶುಭಾ ವೆಂಕಟೇಶನ್ ಅವರಿದ್ದ ತಂಡ 3 ನಿಮಿಷ 14.12 ಸೆಕೆಂಡ್‌ಗಳಲ್ಲಿ ಓಟ ಪೂರ್ತಿಗೊಳಿಸಿತು. ಈ ಮೊದಲು ಭಾರತ ತಂಡ ಹಾಂಗ್ಝೋ ಏಷ್ಯನ್ ಗೇಮ್ಸ್‌ನಲ್ಲಿ 3 ನಿಮಿಷ 14.34 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದು ರಾಷ್ಟ್ರೀಯ ದಾಖಲೆ ಎನಿಸಿತ್ತು. ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಲು 3 ನಿಮಿಷ 13.56 ಸೆಕೆಂಡ್‌ಗಳಲ್ಲಿ ಓಟ ಪೂರ್ತಿಗೊಳಿಸಬೇಕಿತ್ತು.