Paris Olympics 2024 ಸೆಮೀಸ್‌ನಲ್ಲಿ ಇಂದು ಲಕ್ಷ್ಯ ಸೇನ್‌ಗೆ ವಿಶ್ವ ನಂ.1 ವಿಕ್ಟರ್ ಸವಾಲು..!
ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿಂದು ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಲಕ್ಷ್ಯ ಸೇನ್ ಮತ್ತು ವಿಶ್ವ ನಂ.1 ನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್ಸನ್ ಕಾದಾಡಲಿದ್ದು, ಭಾರತೀಯ ಅಭಿಮಾನಿಗಳ ಚಿತ್ತ ಲಕ್ಷ್ಯ ಮೇಲೆ ನೆಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಪ್ಯಾರಿಸ್: ಒಲಿಂಪಿಕ್ಸ್ ಇತಿಹಾಸದಲ್ಲೇ ಬ್ಯಾಡ್ಮಿಂಟನ್ ಸೆಮಿಫೈನಲ್ ಪ್ರವೇಶಿಸಿರುವ ಭಾರತದ ಮೊದಲ ಪುರುಷ ಶಟ್ಲರ್ ಎನಿಸಿಕೊಂಡಿರುವ ಲಕ್ಷ್ಯ ಸೇನ್, ಭಾನುವಾರ ಅಂತಿಮ 4ರ ಸುತ್ತಿನಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್, ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್ಸನ್ ವಿರುದ್ಧ ಸೆಣಸಾಡಲಿದ್ದಾರೆ. ಇದರಲ್ಲಿ ಗೆದ್ದರೆ ಸೇನ್‌ಗೆ ಚಿನ್ನ ಅಥವಾ ಬೆಳ್ಳಿ ಪದಕ ಖಚಿತವಾಗಲಿದ್ದು, ಸೋತರೆ ಕಂಚಿನ ಪದಕಕ್ಕಾಗಿ ಆಡಬೇಕಿದೆ.
22 ವರ್ಷದ ಸೇನ್ ಶುಕ್ರವಾರ ಕ್ವಾರ್ಟರ್ ಫೈನಲ್‌ನಲ್ಲಿ ಚೈನೀಸ್ ತೈಪೆಯ ಚೊಯ್ದು ಟೀನ್ ಚೆನ್ ವಿರುದ್ಧ ಗೆದ್ದಿದ್ದರು. ಆದರೆ ಸೆಮೀಸ್‌ನಲ್ಲಿ ಅವರಿಗೆ 2 ಒಲಿಂಪಿಕ್ಸ್ ಪದಕ ವಿಜೇತ, 2 ಬಾರಿ ವಿಶ್ವ ಚಾಂಪಿಯನ್ ಆಗಿರುವ ವಿಶ್ವನಂ.1 ವಿಕ್ಟರ್ ವಿರುದ್ದ ಕಠಿಣ ಸವಾಲು ಎದುರಾಗಲಿದೆ. ಈ ವರೆಗೂ ಉಭಯ ಆಟಗಾರರ ನಡುವೆ 8 ಪಂದ್ಯಗಳು ನಡೆದಿದ್ದು, ಸೇನ್ ಒಮ್ಮೆ ಮಾತ್ರ ಗೆದ್ದಿದ್ದಾರೆ.
ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ
Watch: ಚಿನ್ನ ಗೆದ್ದ ಬೆನ್ನಲ್ಲಿಯೇ ಷಟ್ಲರ್‌ಗೆ ಪ್ರಪೋಸ್ ಮಾಡಿದ ಇನ್ನೊಬ್ಬ ಷಟ್ಲರ್!
ಸಾತ್ವಿಕ್ -ಚಿರಾಗ್ ಕೋಚ್ ಮಥಿಯಾಸ್ ಬೋ ನಿವೃತ್ತಿ
ಪ್ಯಾರಿಸ್: ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ತಾರಾ ಜೋಡಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಸೋಲುವುದರೊಂದಿಗೆ ಅವರ ದೀರ್ಘಕಾಲದ ಕೋಚ್ ಮಥಿಯಾಸ್ ಬೋ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಶನಿವಾರ ಅವರು ಮಾಹಿತಿ ನೀಡಿದ್ದಾರೆ.
'ನನ್ನ ಕೋಚಿಂಗ್ ವೃತ್ತಿ ಬದುಕು ಇಲ್ಲಿಗೆ ಕೊನೆಗೊಂಡಿದೆ. ಭಾರತ ಅಥವಾ ಬೇರೆಲ್ಲಿಯೂ ಕೋಚ್ ಆಗಿ ಮುಂದುವರಿಯುವುದಿಲ್ಲ' ಎಂದು ಡೆನ್ಮಾರ್ಕ್‌ನ 44 ವರ್ಷದ ಬೋ ಅವರು ಶನಿವಾರ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಪ್ರಕಟಿಸಿದ್ದಾರೆ. 2012ರ ಲಂಡನ್ ಒಲಿಂಪಿಕ್ಸ್‌ನ ಡಬಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಮಥಿಯಾಸ್ ಬೋ, 2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ಗೂ ಮುನ್ನ ಚಿರಾಗ್-ಸಾತ್ವಿಕ್ ಜೋಡಿಗೆ ಕೋಚ್ ಆಗಿ ನೇಮಕಗೊಂಡಿದ್ದರು.
ಒಲಿಂಪಿಕ್ಸ್ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಸೆಮಿಫೈನಲ್‌ಗೇರಿದ ಮೊದಲ ಭಾರತೀಯ ಎನಿಸಿಕೊಂಡ ಲಕ್ಷ್ಯಸೆನ್!
ಜೋಕೋ-ಆಲ್ಕರಜ್ ನಡುವೆ ಇಂದು ಫೈನಲ್ ಫೈಟ್
ಟೆನಿಸ್ ಲೋಕದ ದಿಗ್ಗಜ ಆಟಗಾರ ನೋವಾಕ್ ಜೋಕೋವಿಚ್ ಹಾಗೂ ಯುವ ಸೂಪರ್‌ಸ್ಟಾರ್ ಕಾರ್ಲೊಸ್ ಆಲ್ಕರಜ್ ಪ್ಯಾರಿಸ್ ಒಲಿಂಪಿಕ್ಸ್ ಟೆನಿಸ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಭಾನುವಾರ ಪರಸ್ಪರ ಸೆಣಸಾಡಲಿದ್ದಾರೆ. 37 ವರ್ಷದ ಜೋಕೋ, ಒಲಿಂಪಿಕ್ಸ್ ಫೈನಲ್ ಆಡುತ್ತಿರುವ ಅತಿ ಹಿರಿಯ ಆಟಗಾರನಾಗಿದ್ದರೆ, ಬಾರಿ 21ರ ಆಲ್ಕರಜ್ ಅತಿ ಕಿರಿಯ ಆಟಗಾರ.
ಇಬ್ಬರೂ ಒಲಿಂಪಿಕ್ಸ್ ಫೈನಲ್‌ನಲ್ಲಿ ಮೊದಲ ಮುಖಾಮುಖಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಇವರಿಬ್ಬರೂ ವಿಂಬಲ್ಡನ್ ಫೈನಲ್‌ನಲ್ಲಿ ಸೆಣಸಿದ್ದರು. ಸ್ಪೇನ್‌ನ ಆಲ್ಕರಜ್ ಚಾಂಪಿಯನ್ ಆಗಿದ್ದರು. ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಸರ್ಬಿಯಾದ ಜೋಕೋ ಕಾಯುತ್ತಿದ್ದಾರೆ.