ಕೊನೆರು ಹಂಪಿ ಫಿಡೆ ಮಹಿಳಾ ರ್‍ಯಾಪಿಡ್ ಚೆಸ್‌ನಲ್ಲಿ ವಿಶ್ವ ಚಾಂಪಿಯನ್ ಆದರು. ಇಂಡೋನೇಷ್ಯಾದಲ್ಲಿ ನಡೆದ ಈ ಚಾಂಪಿಯನ್‌ಶಿಪ್‌ನಲ್ಲಿ ೮.೫ ಅಂಕ ಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು. 2019ರಲ್ಲೂ ಈ ಪ್ರಶಸ್ತಿ ಗೆದ್ದಿದ್ದ ಹಂಪಿ, ಎರಡು ಬಾರಿ ಈ ಪ್ರಶಸ್ತಿ ಗೆದ್ದ ಎರಡನೇ ಮಹಿಳಾ ಚೆಸ್ ಆಟಗಾರ್ತಿ ಎನಿಸಿಕೊಂಡರು. ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದಾರೆ.
ನ್ಯೂಯಾರ್ಕ್: ಭಾರತದ ಗ್ರಾಂಡ್‌ಮಾಸ್ಟರ್ ಕೊನೆರು ಹಂಪಿ ಫಿಡೆ ಮಹಿಳಾ ರ್‍ಯಾಪಿಡ್ ಚೆಸ್‌ನಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಒಂದಕ್ಕಿಂತ ಹೆಚ್ಚು ಬಾರಿ ಟ್ರೋಫಿ ಗೆದ್ದ ವಿಶ್ವದ 2ನೇ ಚೆಸ್ ತಾರೆ ಎನಿಸಿಕೊಂಡಿದ್ದಾರೆ.
37 ವರ್ಷದ ಕೊನೆರು ಹಂಪಿ ಭಾನುವಾರ ಇಂಡೋನೇಷ್ಯಾದ ಸುಕಂದರ್ ವಿರುದ್ಧ ಗೆಲ್ಲುವ ಮೂಲಕ ಚಾಂಪಿಯನ್‌ಶಿಪ್ ಮುಡಿಗೇರಿಸಿಕೊಂಡರು. ಈ ಮೊದಲು ಅವರು 2019ರಲ್ಲೂ ಪ್ರಶಸ್ತಿ ಗೆದ್ದಿದ್ದರು. ಕೊನೆರು ಹೊರತಾಗಿ ಚೀನಾದ ಜು ವೆನ್‌ಜುನ್ ಮಾತ್ರ 1ಕ್ಕಿಂತ ಹೆಚ್ಚು ಬಾರಿ ಚಾಂಪಿಯನ್ ಆಗಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ದಕ್ಷಿಣ ಆಫ್ರಿಕಾ ಲಗ್ಗೆ!
ಆರಂಭಿಕ ಸುತ್ತಿನಲ್ಲಿ ಸೋತಿದ್ದ ಕೊನೆರು ಒಟ್ಟು 11 ಸುತ್ತಿನ ಪಂದ್ಯಗಳ ಬಳಿಕ 8.5 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರು. ಭಾರತದ ಹರಿಕಾ ದ್ರೋಣವಲ್ಲಿ ಸೇರಿದಂತೆ ಒಟ್ಟು ಮಂದಿ ತಲಾ 8 ಅಂಕದೊಂದಿಗೆ ಜಂಟಿ 2ನೇ ಸ್ಥಾನ ಹಂಚಿಕೊಂಡರು.
ಕೋಟ್ಯಂತರ ಜನರಿಗೆ ಸ್ಫೂರ್ತಿ: ಮೋದಿ
ಈ ಗೆಲುವು ಐತಿಹಾಸಿಕ. ಅವರ ಬದ್ಧತೆ, ಪ್ರತಿಭೆ ಕೋಟ್ಯಂತರ ಭಾರತೀಯರಿಗೆ ಮಾದರಿ, ಚೆಸ್ ನಲ್ಲಿ ಇದು ಭಾರತದ ಸಮಯ. ವಿಶ್ವ ಚಾಂಪಿಯನ್ ಗುಕೇಶ್ ನಮ್ಮಲ್ಲಿದ್ದಾರೆ. ಈಗ ರ್‍ಯಾಪಿಡ್ ಇವೆಂಟ್‌ನಲ್ಲಿ 2ನೇ ವಿಶ್ವ ಚಾಂಪಿಯನ್‌ಶಿಪ್ ಗೆದ್ದಿದ್ದೇವೆ. ಭಾರತೀಯ ಚೆಸ್ ಪ್ರತಿಭೆಗಳಿಗೆ ಇದು ಪ್ರೇರಣೆಯಾಗಲಿದೆ.- ನರೇಂದ್ರ ಮೋದಿ
ದಕ್ಷಿಣ ಭಾರತ ಕುಸ್ತಿ: ರಾಜ್ಯಕ್ಕೆ 49 ಬಂಗಾರ, 10 ಬೆಳ್ಳಿ ಪದಕ
ಬೆಂಗಳೂರು: ತಮಿಳುನಾಡಿನ ವೆಟ್ಟೂರಿನಲ್ಲಿ ಶನಿವಾರ, ಭಾನುವಾರ ನಡೆದ ದಕ್ಷಿಣ ಭಾರತ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಬರೋಬ್ಬರಿ 60 ಪದಕ ಗೆದ್ದಿದೆ. ಅಂಡರ್-15 ವಿಭಾಗದಲ್ಲಿ 27 ಚಿನ್ನ, 2 ಬೆಳ್ಳಿ ಹಾಗೂ 1 ಕಂಚು, ಹಿರಿಯರ ವಿಭಾಗದಲ್ಲಿ 22 ಚಿನ್ನ ಹಾಗೂ 8 ಬೆಳ್ಳಿ ಪದಕಗಳನ್ನು ತನ್ನದಾಗಿಸಿಕೊಂಡಿದೆ.
ಅಂಡರ್-15 ವಿಭಾಗದ ಫ್ರೀಸ್ಟೈಲ್‌ನಲ್ಲಿ 10 ಚಿನ್ನ, ಗ್ರೀಕೋ-ರೋಮನ್ ವಿಭಾಗದಲ್ಲಿ 9 ಚಿನ್ನ, 1 ಬೆಳ್ಳಿ, ಮಹಿಳಾ ವಿಭಾಗದಲ್ಲಿ 8 ಚಿನ್ನ 8, 1 ಬೆಳ್ಳಿ, 1 ಕಂಚು ಲಭಿಸಿತು.
ಸುನಿಲ್ ಗವಾಸ್ಕರ್ ಪಾದಕ್ಕೆರಗಿದ ಸೆಂಚುರಿ ಸ್ಟಾರ್ ನಿತೀಶ್ ರೆಡ್ಡಿ ತಂದೆ, ಭಾವುಕ ಕ್ಷಣದ ವಿಡಿಯೋ!
ಹಿರಿಯ ವಿಭಾಗದ ಫ್ರೀಸ್ಟೈಲ್‌ನಲ್ಲಿ 8 ಚಿನ್ನ, 2 ಬೆಳ್ಳಿ, ಗ್ರೀಕೋ-ರೋಮನ್‌ನಲ್ಲಿ 9 ಚಿನ್ನ, 1 ಬೆಳ್ಳಿ, ಮಹಿಳಾ ವಿಭಾಗದಲ್ಲಿ 5 ಚಿನ್ನ, 5 ಬೆಳ್ಳಿ ಪದಕಗಳನ್ನು ಕರ್ನಾಟಕ ಜಯಿಸಿತು. ಒಟ್ಟಾರೆ ಕರ್ನಾಟಕ ಎಲ್ಲಾ ವಿಭಾಗದಲ್ಲಿ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು. ಸಾಧಕ ಕುಸ್ತಿಪಟುಗಳಿಗೆ ಕರ್ನಾಟಕ ಕುಸ್ತಿ ಸಂಸ್ಥೆ ಅಧ್ಯಕ್ಷ ಅಭಿನಂದನೆ ಸಲ್ಲಿಸಿದ್ದಾರೆ.
