ಪ್ಯಾರಿಸ್ ಒಲಿಂಪಿಕ್ ಕಂಚಿನ ಪದಕ ವಿಜೇತ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಇದೀಗ ಲಾಸನ್ ಡೈಮಂಡ್ ಲೀಗ್‌ನಲ್ಲಿ ಈ ಸೀಸನ್‌ನ ಶ್ರೇಷ್ಠ ಪ್ರದರ್ಶನದೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಲಾಸನ್(ಸ್ವಿಜರ್‌ಲೆಂಡ್): ಭಾರತದ ತಾರಾ ಜಾವೆಲಿನ್ ಪಟು, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ನೀರಜ್ ಚೋಪ್ರಾ, ಇದೀಗ ಲಾಸನ್ ಡೈಮಂಡ್ ಲೀಗ್ ಕೂಟದಲ್ಲಿ ವೃತ್ತಿಜೀವನದ ಎರಡನೇ ಶ್ರೇಷ್ಠ ಪ್ರದರ್ಶನ ತೋರಿದರು. 90 ಮೀಟರ್ ಗಡಿ ದಾಟುವ ಗುರಿಯೊಂದಿಗೆ ಕಣಕ್ಕಿಳಿದಿದ್ದ ನೀರಜ್ ಚೋಪ್ರಾ, ಲಾಸನ್ ಡೈಮಂಡ್ ಲೀಗ್‌ನಲ್ಲಿ ತಮ್ಮ ಕೊನೆಯ ಪ್ರಯತ್ನದಲ್ಲಿ 89.49 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
26 ವರ್ಷದ ನೀರಜ್ ಚೋಪ್ರಾ 4ನೇ ಸುತ್ತಿನ ಅಂತ್ಯದ ವೇಳೆಗೆ 4ನೇ ಸ್ಥಾನದಲ್ಲಿಯೇ ಇದ್ದರು. ಆದರೆ 5ನೇ ಪ್ರಯತ್ನದಲ್ಲಿ ನೀರಜ್ ಚೋಪ್ರಾ 85.58 ಮೀಟರ್ ದೂರ ಜಾವೆಲಿನ್ ಎಸೆದರು. ಇನ್ನು ಆರನೇ ಹಾಗೂ ಕೊನೆಯ ಪ್ರಯತ್ನದಲ್ಲಿ ವೃತ್ತಿಜೀವನದ ಎರಡನೇ ಜೀವನ ಶ್ರೇಷ್ಠ ಪ್ರದರ್ಶನ ತೋರಿದ ನೀರಜ್ ಚೋಪ್ರಾ 89.49 ಮೀಟರ್ ದೂರ ಎಸೆಯುವ ಮೂಲಕ ಎರಡನೇ ಸ್ಥಾನಕ್ಕೇರಿದರು. ಇನ್ನು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ 89.45 ಮೀಟರ್ ದೂರ ಜಾವೆಲಿನ್ ಎಸೆದಿದ್ದರು
ನೀರಜ್ ಚೋಪ್ರಾ ಆರನೇ ಸುತ್ತಿಗೂ ಮುನ್ನವೇ ಅಂತಿಮ ರೇಸ್‌ನಿಂದ ಹೊರಬೀಳುವ ಭೀತಿಗೆ ಸಿಲುಕಿದ್ದರು. ಆದರೆ ಐದನೇ ಸುತ್ತಿನಲ್ಲಿ ನೀರಜ್ 85.58 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಆರನೇ ಸುತ್ತಿಗೆ ಅರ್ಹತೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಯಾಕೆಂದರೆ ನಿಯಮಾವಳಿಗಳ ಪ್ರಕಾರ 5 ಸುತ್ತುಗಳ ಅಂತ್ಯದ ವೇಳೆಗೆ ಅಗ್ರ ಮೂರು ಸ್ಥಾನ ಪಡೆಯುವ ಜಾವೆಲಿನ್ ಥ್ರೋ ಪಟುಗಳು ಮಾತ್ರ ಆರನೇ ಸುತ್ತಿನಲ್ಲಿ ಜಾವೆಲಿನ್ ಥ್ರೋ ಮಾಡಲು ಅವಕಾಶವಿರುತ್ತದೆ.
ಪ್ಯಾರಿಸ್ ಒಲಿಂಪಿಕ್ಸ್ ಬೆನ್ನಲ್ಲೇ ಟೇಬಲ್ ಟೆನಿಸ್‌ಗೆ ವಿದಾಯ ಘೋಷಿಸಿದ ಕನ್ನಡತಿ ಅರ್ಚನಾ ಕಾಮತ್..!
ಇನ್ನು ಎರಡು ಬಾರಿಯ ವಿಶ್ವ ಚಾಂಪಿಯನ್ ಹಾಗೂ ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಗ್ರೆನೆಡಾದ ಆಂಡರ್‌ಸನ್ ಪೀಟರ್ಸ್ ತಮ್ಮ ಎರಡನೇ ಪ್ರಯತ್ನದಲ್ಲೇ 90.61 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡರು. ಇನ್ನು ಜರ್ಮನಿಯ ಜೂಲಿಯನ್ ವೆಬರ್ ತಮ್ಮ ಮೂರನೇ ಪ್ರಯತ್ನದಲ್ಲಿ 87.08 ಮೀಟರ್ ದೂರ ಜಾವೆಲಿನ್ ಎಸೆದು ಮೂರನೇ ಸ್ಥಾನ ಪಡೆದರು.
ಇನ್ನು ಈ ಸ್ಪರ್ಧೆ ಮುಗಿದ ಬಳಿಕ ಮಾತನಾಡಿದ ನೀರಜ್ ಚೋಪ್ರಾ, "ಮೊದಲಿಗೆ ಅಷ್ಟೇನೂ ಉತ್ತಮ ಅನುಭವ ಎನಿಸಲಿಲ್ಲ. ಆದರೆ ನನ್ನ ಥ್ರೋ ಬಗ್ಗೆ ನನಗೆ ಖುಷಿಯಿದೆ. ನನ್ನ ವೃತ್ತಿಜೀವನದ ಎರಡನೇ ಶ್ರೇಷ್ಠ ಪ್ರದರ್ಶನ ಮೂಡಿ ಬಂದಿದ್ದರ ಬಗ್ಗೆ ತೃಪ್ತಿಯಿದೆ. ಆರಂಭ ಉತ್ತಮವಾಗಿಲ್ಲದಿದ್ದರೂ, ನಾನು ಕಮ್‌ಬ್ಯಾಕ್ ಮಾಡಿದ್ದು ಖುಷಿ ಎನಿಸಿತು. ನನ್ನ ಹೋರಾಟದ ಗುಣವನ್ನು ನಾನು ಎಂಜಾಯ್ ಮಾಡಿದೆ ಎಂದು ಚಂಢೀಗಢದ ಜಾವೆಲಿನ್ ಪಟು ಹೇಳಿದ್ದಾರೆ.
