ಈ ಇಂಡಿಯಾ ಹೌಸ್‌ನಲ್ಲಿ ಭಾರತದ ಕ್ರೀಡಾ ಸಂಸ್ಕೃತಿ- ಪರಂಪರೆಯನ್ನು ಪ್ರದರ್ಶಿಸಲಾಗುತ್ತದೆ. ಅದರಲ್ಲಿ ಕ್ರೀಡೆಗೆ ಸಂಬಂಧಿಸಿದ ಇತಿಹಾಸ, ಭವಿಷ್ಯದ ಕನಸುಗಳನ್ನು ಸಹ ಪ್ರದರ್ಶಿಸಲಾಗುತ್ತದೆ. ಒಲಿಂಪಿಕ್ಸ್ ವೇಳೆ ವಿಶ್ವದ ವಿವಿಧ ಅಥ್ಲೀಟ್‌ಗಳು, ಗಣ್ಯರು, ಕ್ರೀಡಾಭಿಮಾನಿಗಳು ಈ ಇಂಡಿಯಾ ಹೌಸ್‌ಗೆ ಭೇಟಿ ನೀಡುವ ನಿರೀಕ್ಷೆ ಇದೆ ರಿಲಯನ್ಸ್ ಸಂಸ್ಥೆ ತಿಳಿಸಿದೆ.
ಮುಂಬೈ: ಒಲಿಂಪಿಕ್ಸ್‌ನಲ್ಲೇ ಇದೇ ಮೊದಲ ಬಾರಿ ಪ್ಯಾರಿಸ್‌ನಲ್ಲಿ ‘ಇಂಡಿಯಾ ಹೌಸ್’ ನಿರ್ಮಾಣ ಮಾಡಲಾಗಿದ್ದು, ಭಾರತೀಯ ಅಥ್ಲೀಟ್‌ಗಳು ಅಲ್ಲೇ ಉಳಿದುಕೊಳ್ಳಲಿದ್ದಾರೆ. ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ)ಯ ಸಹಭಾಗಿತ್ವ ಹೊಂದಿರುವ ರಿಲಯನ್ಸ್ ಫೌಂಡೇಶನ್ ಇದನ್ನು ನಿರ್ಮಿಸಿದೆ.
ಈ ಇಂಡಿಯಾ ಹೌಸ್‌ನಲ್ಲಿ ಭಾರತದ ಕ್ರೀಡಾ ಸಂಸ್ಕೃತಿ- ಪರಂಪರೆಯನ್ನು ಪ್ರದರ್ಶಿಸಲಾಗುತ್ತದೆ. ಅದರಲ್ಲಿ ಕ್ರೀಡೆಗೆ ಸಂಬಂಧಿಸಿದ ಇತಿಹಾಸ, ಭವಿಷ್ಯದ ಕನಸುಗಳನ್ನು ಸಹ ಪ್ರದರ್ಶಿಸಲಾಗುತ್ತದೆ. ಒಲಿಂಪಿಕ್ಸ್ ವೇಳೆ ವಿಶ್ವದ ವಿವಿಧ ಅಥ್ಲೀಟ್‌ಗಳು, ಗಣ್ಯರು, ಕ್ರೀಡಾಭಿಮಾನಿಗಳು ಈ ಇಂಡಿಯಾ ಹೌಸ್‌ಗೆ ಭೇಟಿ ನೀಡುವ ನಿರೀಕ್ಷೆ ಇದೆ ರಿಲಯನ್ಸ್ ಸಂಸ್ಥೆ ತಿಳಿಸಿದೆ.
ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟವು ಮುಂಬರುವ ಜುಲೈ 26ರಿಂದ ಆರಂಭವಾಗಿ ಆಗಸ್ಟ್ 11ರವರೆಗೆ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆಯಲಿದೆ. ಈ ಬಾರಿ ಭಾರತ ಹೆಚ್ಚು ಪದಕಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ.
400 ಮೀ. ಓಟ: ಕಿರಣ್ ಪಾಹಲ್ ಒಲಿಂಪಿಕ್ಸ್‌ಗೆ
ಪಂಚಕುಲ(ಹರ್ಯಾಣ): ಭಾರತದ ಓಟಗಾರ್ತಿ ಕಿರಣ್ ಪಾಹಲ್ ಮಹಿಳೆಯರ 400 ಮೀ. ಓಟದ ಸ್ಪರ್ಧೆಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಗುರುವಾರ ಅವರು ರಾಷ್ಟ್ರೀಯ ಅಂತರ್-ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಸೆಮಿಫೈನಲ್‌ನಲ್ಲಿ 50.92 ಸೆಕೆಂಡ್‌ಗಳಲ್ಲಿ ಕ್ರಮಿಸಿ ಅಗ್ರಸ್ಥಾನಿಯಾದರು.
ಭಾರತಕ್ಕಾಗಿಯೇ ಟಿ20 ವಿಶ್ವಕಪ್ ಸೆಟ್ ಮಾಡಿದ್ದಾರೆ: ಐಸಿಸಿ ವಿರುದ್ಧ ವಾನ್ ಆಕ್ರೋಶ!
ಪ್ಯಾರಿಸ್ ಒಲಿಂಪಿಕ್ಸ್‌ಗೆ ಪ್ರವೇಶಿಬೇಕಿದ್ದರೆ 50.95 ಸೆಕೆಂಡ್‌ಗಳಲ್ಲಿ ಕ್ರಮಿಸಬೇಕಿತ್ತು. ಕಿರಣ್ 400 ಮೀ. ಸ್ಪರ್ಧೆಯಲ್ಲಿ ಭಾರತದ 2ನೇ ಶ್ರೇಷ್ಠ ಓಟಗಾರ್ತಿ ಎನಿಸಿಕೊಂಡಿದ್ದಾರೆ. 2018ರಲ್ಲಿ ಜಕಾರ್ತದಲ್ಲಿ ಹಿಮಾ ದಾಸ್ 50.79 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದು ಈಗಲೂ ರಾಷ್ಟ್ರೀಯ ದಾಖಲೆ ಎನಿಸಿಕೊಂಡಿದೆ.
ಏಷ್ಯನ್ ಕಿರಿಯರ ಸ್ಕ್ವ್ಯಾಶ್: ಶಿವೆನ್, ಆದ್ಯಾ, ಗೌಷಿಕಾ ಸೆಮಿಫೈನಲ್ ಪ್ರವೇಶ
ಇಸ್ಲಾಮಾಬಾದ್: ಇಲ್ಲಿ ನಡೆಯುತ್ತಿರುವ 31ನೇ ಏಷ್ಯನ್ ಕಿರಿಯರ ಸ್ಕ್ವ್ಯಾಶ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಶಿವೆನ್ ಅಗರ್‌ವಾಲ್, ಆದ್ಯಾ ಬುಧಿಯಾ ಹಾಗೂ ಗೌಷಿಕಾ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಬಾಲಕರ ಅಂಡರ್-15 ಕ್ವಾರ್ಟರ್ ಫೈನಲ್‌ನಲ್ಲಿ ಶಿವೆನ್, ಪಾಕಿಸ್ತಾನದ ಅಬ್ದುಲ್ ಅಹದ್ ವಿರುದ್ಧ 11-4, 11-7, 11-5 ಅಂತರದಲ್ಲಿ ಗೆದ್ದರೆ, ಅಂಡರ್-13 ಬಾಲಕಿಯರ ಸ್ಪರ್ಧೆಯಲ್ಲಿ ಆದ್ಯಾ ಪಾಕ್‌ನ ಮಹ್‌ನೂರ್ ಅಲಿ ವಿರುದ್ಧ 11-4, 11-8, 6-11, 11-6ರಲ್ಲಿ ಜಯಗಳಿಸಿದರು.
ಟಿ20 ವಿಶ್ವಕಪ್ ಫೈನಲ್‌ಗೆ ಬಂದು ಕಪ್ ಗೆಲ್ಲದ ನತದೃಷ್ಟ ತಂಡ ಇದೊಂದೇ...!
ಗೌಷಿಕಾ ಹಾಂಕಾಂಗ್‌ನ ಲಿನ್ ಕ್ಯಾಸಿಡಿ ವಿರುದ್ಧ 11-8, 11-9, 11-8ರಲ್ಲಿ ಗೆದ್ದರು. ಆದರೆ ಅಂಡರ್-17 ಬಾಲಕರ ವಿಭಾಗದಲ್ಲಿ ಯುಶಾ ನಫೀಸ್, ಬಾಲಕಿಯರ ವಿಭಾಗದಲ್ಲಿ ಉನ್ನತಿ ತ್ರಿಪಾಠಿ, ಬಾಲಕಿಯರ ಅ-15 ವಿಭಾಗದಲ್ಲಿ ಅಂಕಿತಾ ದುಬೆ, ದಿವಾ ಶಾ, ಅಂಡರ್-19 ವಿಭಾಗದಲ್ಲಿ ನಿರುಪಮಾ ಕ್ವಾರ್ಟರ್‌ನಲ್ಲೇ ಸೋತರು.
