ದರ್ಶನ್ ಅರೆಸ್ಟ್, ಪ್ರಬಂಧ ಬರೆಸಿ ಬಿಟ್ಟುಬಿಡಿ, ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್!

ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ಆಗಿದ್ದಾರೆ. ಇತ್ತ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಕುರಿತು ಟ್ರೋಲ್, ಮೀಮ್ಸ್ ಹರಿದಾಡುತ್ತಿದೆ. 300 ಪದದ ಪ್ರಬಂಧ ಬರೆಯಿಸಿ ಬಿಟ್ಟುಬಿಡಿ ಅನ್ನೋ ಹಲವು ಟ್ರೋಲ್ ಹರಿದಾಡುತ್ತಿದೆ.

Sandalwood Darshan Arrest for Murder case Social Media trolls Kannada actor ckm

ಬೆಂಗಳೂರು(ಜೂ.11) ಸ್ಯಾಂಡಲ್‌ವುಡ್ ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ದರ್ಶನ್ ಎರಡನೇ ಪತ್ನಿ ಎಂದೇ ಗುರುತಿಸಿಕೊಂಡಿರುವ ಪವಿತ್ರಾ ಗೌಡಾಗೆ ಮೆಸೇಜ್ ಮಾಡಿದ್ದಾನೆ ಅನ್ನೋ ಕಾರಣಕ್ಕೆ ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಹತ್ಯೆಯಾಗಿದೆ. ದರ್ಶನ್ ಸೂಚನೆ ಮೇರೆಗೆ ಈ ಹತ್ಯೆ ಮಾಡಲಾಗಿದೆ ಅನ್ನೋ ಮಾಹಿತಿಯನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ದರ್ಶನ್ ವಿರುದ್ಧ ಕೆಲ ಸಾಕ್ಷ್ಯಗಳು ಲಭ್ಯವಾದ ಬೆನ್ನಲ್ಲೇ ಅರೆಸ್ಟ್ ಆಗಿದ್ದಾರೆ. ದರ್ಶನ್ ಅರೆಸ್ಟ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್ ಆಗಿದ್ದಾರೆ. ದರ್ಶನ್‌ಗೆ 300 ಪದದ ಪ್ರಬಂಧದ ಬರೆಸಿ ಬಿಟ್ಟುಬಿಡಿ, ದರ್ಶನ್ ಜೈಲು ಸೇರುತ್ತಿದ್ದತೆ ಇತ್ತರ ದರ್ಶನ್ ವಿರೋಧಿಗಳ ಸಂಭ್ರಮ, ಸೇರಿದಂತೆ ಬಗೆ ಬಗೆಯ ಟ್ರೋಲ್ ಮೀಮ್ಸ್ ಹರಿದಾಡುತ್ತಿದೆ.

ದರ್ಶನ್‌ಗೆ 300 ಪದದ ಪ್ರಬಂಧ ಬರೆಯಲು ಬರಲ್ಲ. ಹೀಗಾಗಿ ಜೈಲೇ ಗತಿ ಎಂದು ಕೆಲವರು ಟ್ರೋಲ್ ಮಾಡಿದ್ದಾರೆ. ಇತ್ತ ದರ್ಶನ್ ಸಿನಿಮಾ ತುಣುಕು ಪೋಸ್ಟ್ ಮಾಡಿ, ಈಗಾಗಲೇ ದರ್ಶನ್ 300 ಪದದ ಪ್ರಬಂಧ ಬರೆದಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ. ಪತ್ನಿಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ದರ್ಶನ್ ಈಗಾಗಲೇ ಜೈಲು ಶಿಕ್ಷೆ ಅನುಭವಿಸಿದ್ದರು. ಇದೀಗ ಇದೇ ಘಟನೆ ಮುಂದಿಟ್ಟುಕೊಂಡು ದರ್ಶನ್ ತನ್ನ ಹಳೇ ಜೈಲಿನ ಖೈದಿಗಳನ್ನು ಭೇಟಿಯಾಗಲು ಮಾಡಲು ತೆರಳುತ್ತಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.

 

 

ದರ್ಶನ್ ಅರೆಸ್ಟ್ ಕೇಸ್; ಶೆಡ್‌ನಲ್ಲಿ ಕೂಡಿ ಹಾಕಿ ರೇಣುಕಾಸ್ವಾಮಿ ಹತ್ಯೆ, ಮೃತದೇಹ ಮೋರಿಗೆ ಎಸೆದು ಪರಾರಿ!

ಇತ್ತ ದರ್ಶನ್ ಅಭಿಮಾನಿಗಳು ನಟನ ಪರ ನಿಂತಿದ್ದಾರೆ. ಆದರೆ ದರ್ಶನ್ ಅಭಿಮಾನಿಗಳ ಪೋಸ್ಟ್‌ಗಳು ಇದೀಗ ಟ್ರೋಲ್ ಆಗಿದೆ. ನಮ್ಮ ಬಾಸ್ ಸುಮ್ಮನೆ ಕೊಲೆಮಾಡಿಲ್ಲ. ಅದಕ್ಕೆ ಕಾರಣ ಇರುತ್ತೆ. ತಪ್ಪು ಮಾಡಿದರೆ ಶಿಕ್ಷೆ ಕೊಟ್ಟಿದ್ದಾರೆ ಅಷ್ಟೆ ಎಂದು ಟ್ವೀಟ್ ಮಾಡಿದ್ದಾರೆ. ಆಧರೆ ದರ್ಶನ್ ಅಭಿಮಾನಿಗಳ ಪೋಸ್ಟ್‌ಗಳನ್ನು ಟ್ರೋಲ್ ಮಾಡಲಾಗುತ್ತಿದೆ.

 

 

ದರ್ಶನ್ ಅರೆಸ್ಟ್ ಸುದ್ದಿಯನ್ನು ನಟನ ವಿರುದ್ಧ ತೊಡೆತಟ್ಟಿದ ಕೆಲವರು ನ್ಯೂಸ್ ಚಾನೆಲ್ ನೋಡಿ ಸಂಭ್ರಮಿಸುತ್ತಿರುವ ರೀತಿ ಇದು ಎಂದು ಹಲವು ಪೋಸ್ಟ್‌ಗಳು ಹರಿದಾಡುತ್ತಿದೆ. ಪತ್ನಿಗೆ ಹಲ್ಲೆ ನಡೆಸಿ ಜೈಲು ಸೇರಿದ ಬಳಿಕ ಬಿಡುಗಡೆಯಾದ ದರ್ಶನ್ ಸಾರಥಿ ಚಿತ್ರ ಸೂಪರ್ ಹಿಟ್ ಆಗಿತ್ತು. ಇದೀಗ ದರ್ಶನ್ ಮತ್ತೊಂದು ಸೂಪರ್ ಹಿಟ್ ಚಿತ್ರ ನೀಡಲು ಮಾಡಿದ ಪ್ರಮೋಶನ್ ಇದು ಎಂದು ಕೆಲವರು ಟ್ರೋಲ್ ಮಾಡಿದ್ದಾರೆ.

ಕನ್ನಡ ಸುದ್ದಿ ವಾಹನಿಗಳಿಂದ ದರ್ಶನ್ ನಿಷೇಧಕ್ಕೊಳಾಗದರೇನು? ನಮ್ಮ ಬಾಸ್ ಇಂಗ್ಲೀಷ್ ಸುದ್ದಿ ವಾಹನಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಮೀಮ್ಸ್ ಮಾಡಿ ಹರಿಬಿಡಲಾಗಿದೆ. 

 

 

ಬಂಧನದ ಸುಳಿವು ಮೊದಲೇ ಸಿಕ್ಕಿತ್ತಾ? ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿದ್ದ ದರ್ಶನ್, ಕೊಲೆ ಕೇಸ್‌ನಿಂದ ಕಂಗಾಲಾಗಿದ್ದ ನಟ!

ಕೊಲೆಯಾಗಿರುವ ರೇಣುಕಾಸ್ವಾಮಿ ಚಿತ್ರದುರ್ಗದ ಮೂಲದವರಗಾಗಿದ್ದು, ಪವಿತ್ರಾ ಗೌಡಾಗೆ ಮೆಸೇಜ್ ಮಾಡಿದ್ದ. ದರ್ಶನ್ ಸೂಚನೆ ಮೇರೆಗೆ ರೇಣಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಯಿಸಿ ಹತ್ಯೆ ಮಾಡಲಾಗಿದೆ. ಹತ್ಯೆ ಸಂಬಂಧ ಪೊಲೀಸರು ಒಟ್ಟು 10 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.


 

Latest Videos
Follow Us:
Download App:
  • android
  • ios