ಬೆಂಗಳೂರಿಗೆ ಮರಳಿದ ಶಿವಣ್ಣ.... ಆನಂದ್ ಸಿನಿಮಾ ಹಾಡಿಗೆ ಪುತ್ರಿ ಜೊತೆ ಭರ್ಜರಿ ಹೆಜ್ಜೆ ಹಾಕಿ ಸಂಭ್ರಮಿಸಿದ ಸುಧಾರಾಣಿ
ನಟ ಶಿವರಾಜಕುಮಾರ್ ಯಶಸ್ವಿಯಾಗಿ ಚಿಕಿತ್ಸೆಗೆ ಒಳಗಾಗಿ ಆರೋಗ್ಯಯುತವಾಗಿ ಬೆಂಗಳೂರಿಗೆ ಹಿಂದಿರುಗಿದ ಹಿನ್ನೆಲೆಯಲ್ಲಿ ನಟಿ ಸುಧಾರಾಣಿ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ.

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಚಂದನವನದ ನಟ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ (Shivarajkumar)ಅದಕ್ಕಾಗಿ ಚಿಕಿತ್ಸೆ ಪಡೆಯಲು ಅಮೆರಿಕಾಗೆ ತೆರಳಿದ್ದರು. ಇದೀಗ ಯಶಸ್ವಿ ಶಸ್ತ್ರ ಚಿಕಿತ್ಸೆಯ ಬಳಿಕ, ಪೂರ್ಣ ಗುಣಮುಖರಾಗಿ ಶಿವಣ್ಣ ತಾಯ್ನಾಡಿಗೆ ಮರಳಿದ್ದಾರೆ. ಪತ್ನಿ ಮತ್ತು ಮಗಳೊಂದಿಗೆ ಬೆಂಗಳೂರಿಗೆ ಆಗಮಿಸಿದ ಶಿವಣ್ಣನನ್ನು ಅಭಿಮಾನಿಗಳು, ಚಿತ್ರರಂಗದ ಗಣ್ಯರು ಎಲ್ಲರೂ ಸೇರಿ ಭರ್ಜರಿಯಾಗಿ ಸ್ವಾಗತಿಸಿದ್ದರು. ನಿನ್ನೆಯಷ್ಟೇ ಕರ್ನಾಟಕ ರಾಜು ಮುಖ್ಯಮಂತ್ರಿ ಸಿದ್ಧರಾಮಯ್ಯನವರೂ ಕೂಡ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಬಂದಿದ್ದರು. ಇದೀಗ ನಟಿ ಸುಧಾರಾಣಿ (Sudharani)ಕೂಡ ಶಿವಣ್ಣ ಮತ್ತೆ ಬೆಂಗಳೂರಿಗೆ ಆಗಮಿಸಿರುವುದನ್ನು ವಿಶೇಷ ರೀತಿಯಲ್ಲಿ ಸಂಭ್ರಮಿಸಿದ್ದಾರೆ.
ಅಮ್ಮ-ಮಗಳ ವಿಡಿಯೋ ವೈರಲ್, ಸುಧಾರಾಣಿ 'ಜಿಂಗಿ ಚಕ್ಕ' ಕಂಡು ಕರ್ನಾಟಕವೇ ಶಾಕ್!
ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಆಕ್ಟೀವ್ ಆಗಿರುವ ನಟಿ ಸುಧಾರಾಣಿ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ವಿಡೀಯೋ ಒಂದನ್ನು ಶೇರ್ ಮಾಡಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಆಗಮಿಸಿರೋದನ್ನು ಸಂಭ್ರಮಿಸಿದ್ದಾರೆ. ಸುಧಾರಾಣಿಯವರು ತಮ್ಮ ಮುದ್ದಿನ ಮಗಳು ಲಾಯರ್ ಹಾಗೂ ಭರತನಾಟ್ಯ ಡ್ಯಾನ್ಸರ್ ಆಗಿರುವ ನಿಧಿ Sudharani daughter Nidhi_ ಜೊತೆ ಶಿವಣ್ಣ ಮತ್ತು ಸುಧಾರಾಣಿ ಜೊತೆಯಾಗಿ ನಟಿಸಿದ ಆನಂದ್ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ತಮ್ಮ ವಿಡಿಯೋ ಜೊತೆ Time to celebrate as Shivanna is back rocking and decided to dance to our one more fav song from ANAND!! But my Mickey boy decided to celebrate it by sleeping some more ಎಂದು ಬರೆದುಕೊಂಡಿದ್ದಾರೆ.
ಯಂಗ್ ಹುಡುಗರು ಬಂದು ನಟಿ ಸುಧಾರಾಣಿ ಹತ್ರ ಹಂಗಾ ಕೇಳೋದು!?
ಆನಂದ್ ಸಿನಿಮಾ (Anand Cinema) ಸಿಂಗೀತಂ ಶ್ರೀನಿವಾಸ ರಾವ್ ಕಥೆ ಬರೆದು ನಿರ್ದೇಶನ ಮಾಡಿದ ಕನ್ನಡ ಸಿನಿಮಾ ಆಗಿದ್ದು, ಈ ಸಿನಿಮಾ ಮೂಲಕ ಶಿವರಾಜ್ ಕುಮಾರ್ ಹಾಗೂ ಸುಧಾರಾಣಿ ಇಬ್ಬರೂ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಈ ಸಿನಿಮಾದ ಹಾಡಾದ ತಿಮ್ಮ ತಿಮ್ಮ ತಿಮ್ಮ ತಿಮ್ಮ, ನಮ್ಮ ಗೆಳೆಯ ತಿಮ್ಮನನ್ನು ಕಚ್ಚಿ ಕೊಂದ ಸರ್ಪವೇ ಹಾಡಿಗೆ ಸುಧಾರಾಣಿ ಪುತ್ರಿ ಜೊತೆ ಹೆಜ್ಜೆ ಹಾಕಿದ್ದಾರೆ. ಶಿವಣ್ಣ ರಾಕಿಂಗ್ ಆಗಿ ಮರಳಿ ಬಂದಿರೋದನ್ನು ನನ್ನ ಫೇವರಿಟ್ ಹಾಡಿನ ಮೂಲಕ ಸೆಲೆಬ್ರೇಟ್ ಮಾಡುವುದಾಗಿ ನಟಿ ವಿಡಿಯೋದಲ್ಲಿ ತಿಳಿಸಿದ್ದರು.