Asianet Suvarna News Asianet Suvarna News

ಸಾಯೋ ಮೊದಲು ಜನ್ಮ ರಹಸ್ಯ ಬಿಚ್ಚಿಟ್ಟ ಅಮ್ಮ.. ಬೆಚ್ಚಿಬಿದ್ದ ಮಗಳು !

ಕೆಲವೊಂದು ರಹಸ್ಯ ರಹಸ್ಯವಾಗಿದ್ರೆ ಒಳ್ಳೆಯದು. ಸಾಯುವ ಕೊನೆ ಕ್ಷಣದಲ್ಲಿ ತಮ್ಮ ಭಾರ ಇಳಿಸಿಕೊಳ್ಳಲು ಸತ್ಯ ಹೇಳುವ ಜನರು ಇನ್ನೊಬ್ಬರ ನೋವು ಹೆಚ್ಚು ಮಾಡಿರ್ತಾರೆ. ಈ ಮಹಿಳೆ ಜೀವನದಲ್ಲೂ ಈಗ ಅದೇ ಆಗಿದೆ.  
 

Woman Mother Deathbed Secret Told Minutes Before Her Death Tore Life Apart roo
Author
First Published Nov 18, 2023, 1:12 PM IST

ಅನೇಕ ಬಾರಿ ಕುಟುಂಬದಲ್ಲಿ ಮುಚ್ಚಿಟ್ಟ ರಸಹ್ಯ ಹೊರಗೆ ಬರದಿರುವುದೇ ಒಳ್ಳೆಯದು. ಈ ರಹಸ್ಯ ಯುವಪೀಳಿಗೆಗೆ ಗೊತ್ತಾದ್ರೆ ಅವರ ಜೀವನ ನರಕವಾಗುತ್ತದೆ. ಅನೇಕ ಸಮಸ್ಯೆ, ಸವಾಲುಗಳನ್ನು ಅವರು ಎದುರಿಸಬೇಕಾಗುತ್ತದೆ. ತಂದೆ – ತಾಯಿಯ ಸ್ವಂತ ಮಗುವಲ್ಲ ಎಂಬ ಸಂಗತಿ ಅಥವಾ ಮಗು ಅಕ್ರಮ ಸಂಬಂಧದಿಂದ ಜನಿಸಿದೆ ಎಂಬ ಸತ್ಯವೆಲ್ಲ ಭಯಾನಕವಾಗಿರುತ್ತದೆ. ಲೂಯಿಸ್ ಹೆಸರಿನ ಮಹಿಳೆ ಜೀವನದಲ್ಲೂ ಇಂಥಹದ್ದೇ ಒಂದು ಘಟನೆ ನಡೆದಿದೆ. ತನ್ನ ಕುಟುಂಬದ ರಹಸ್ಯ ಹೊರಗೆ ಬರ್ತಿದ್ದಂತೆ ಲೂಯಿಸ್ ಜೀವನದಲ್ಲಿ ಬಿರುಗಾಳಿ ಬೀಸಿದೆ. ಆಕೆ ಸಂಪೂರ್ಣ ಕುಸಿದಿದ್ದಾಳೆ.

ಕೊನೆ ಕ್ಷಣದಲ್ಲಿ ಸತ್ಯ (Truth) ಬಿಚ್ಚಿಟ್ಟ ಲೂಯಿಸ್ ತಾಯಿ : ಲೂಯಿಸ್ ತನ್ನ ಜೀವನದಲ್ಲಿ ಏನಾಗಿದೆ ಎಂಬ ವಿಷ್ಯವನ್ನು ಹೇಳಿದ್ದಾಳೆ. ತಾಯಿ ಸಾವಿನಂಚಿನಲ್ಲಿರುವಾಗ ತನ್ನ ಜೀವನದಲ್ಲಿ ಅಡಗಿದ್ದ ದೊಡ್ಡ ಸತ್ಯವೊಂದನ್ನು ಲೂಯಿಸ್ ಮುಂದೆ ಹೇಳಿದ್ದಾಳೆ. ಇದನ್ನು ಕೇಳಿದ ಲೂಯಿಸ್ ದಂಗಾಗಿದ್ದಾಳೆ. 

ಸೆಲೆಬ್ರಿಟಿಗಳಿಗೆ ವೈಯಕ್ತಿಕ ಬದುಕೆನ್ನುವುದೇ ಸತ್ತು ಹೋಗಿರುತ್ತೆ: ಬೆಕಮ್ ಜೊತೆ ಸಾರಾ ಆಲಿ ಖಾನ್ ಮಾತುಕತೆ!

ಲೂಯಿಸ್ ನಿನಗೆ ಏನೋ ಹೇಳೋದಿದೆ ಎಂದ ತಾಯಿ (Mother), ನಿನ್ನ ತಂದೆ ನಿನ್ನ ನಿಜವಾದ ತಂದೆಯಲ್ಲ. ನೀನು ಮೂರು ವರ್ಷದಲ್ಲಿದ್ದಾಗ ತಂದೆ ನಿನ್ನ ಜವಾಬ್ದಾರಿ (Responsibility) ತೆಗೆದುಕೊಂಡು ಎಂದು ತಾಯಿ ಹೇಳಿದ್ದಾಳೆ. ಈ ಮಾತನ್ನು ಕೇಳಿ ಕುಸಿದ ಲೂಯಿಸ್ ಗೆ ಅಲ್ಲಿಂದ ಓಡಿ ಹೋಗುವ ಮನಸ್ಸಾಗಿದೆ. ಆದ್ರೆ ತಾಯಿ ಕೈ ಹಿಡಿದುಕೊಂಡಿದ್ದರಿಂದ ತಾಯಿಯ ಎಲ್ಲ ಮಾತುಗಳನ್ನು ಕೇಳಬೇಕಾಯ್ತು ಎನ್ನುತ್ತಾಳೆ ಲೂಯಿಸ್.

ಮಾತು ಮುಂದುವರೆಸಿದ ತಾಯಿ, ನಾನು 21 ವರ್ಷದಲ್ಲಿರುವಾಗ ಗ್ಲಾಸ್ಗೋದಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ ಆಗ್ತಿದ್ದೆ. ಈ ವೇಳೆ ಅಪರಿಚಿತನೊಬ್ಬ ನನ್ನನ್ನು ಹಿಡಿದು, ನನ್ನ ಮೇಲೆ ಅತ್ಯಾಚಾರವೆಸಗಿದ್ದ. ಈ ಘಟನೆ ನಂತ್ರ ನಾನು ಗರ್ಭಿಣಿಯಾಗಿದ್ದೆ. ನಂತ್ರ ನೀನು ಜನಿಸಿದೆ. ಈ ವಿಷ್ಯವನ್ನು ಇಷ್ಟು ದಿನ ಮುಚ್ಚಿಟ್ಟಿದ್ದಕ್ಕೆ ನನ್ನನ್ನು ಕ್ಷಮಿಸು. ನನಗೆ ಈ ವಿಷ್ಯವನ್ನು ನಿನಗೆ ಹೇಗೆ ಹೇಳ್ಬೇಕು ಎಂಬುದು ಗೊತ್ತಾಗಿರಲಿಲ್ಲ. ನಾನು ಅಪರಾಧಿ ಭಾವನೆಯಲ್ಲಿ ಹೂತು ಹೋಗಿದ್ದೇನೆ. ನನ್ನನ್ನ ಕ್ಷಮಿಸು. ನೀನು ನನ್ನನ್ನು ಕ್ಷಮಿಸ್ತೀಯಾ ಎನ್ನುವ ನಂಬಿಕೆ ನನಗಿದೆ ಎಂದು ತಾಯಿ ಹೇಳಿದ್ದಾಳೆ.

ಅನುಷ್ಕಾ - ವಿರಾಟ್ ದಾಂಪತ್ಯದ ಗುಟ್ಟಿದು, ಇದ್ರಿಂದ ಸಂಸಾರ ಸುಖ!

ಲೂಯಿಸ್ ತಾಯಿಯ ಈ ಮಾತುಗಳನ್ನು ಕೇಳ್ತಿದ್ದಂತೆ ದುಃಖ ತಡೆಯಲಾರದೆ ತನ್ನ ಕೋಣೆಗೆ ಓಡಿದ್ದಾಳೆ. ನನಗೆ ಉಸಿರಾಡಲೂ ತೊಂದರೆಯಾಗ್ತಾಯಿತ್ತು. ಏನು ನಡೀತಾ ಇದೆ ಎಂಬುದು ಗೊತ್ತಾಗ್ಲಿಲ್ಲ. ಆದ್ರೆ ಆಲೋಚನೆ ಮಾಡುವಷ್ಟು ಸಮಯ ಆಗಿರಲಿಲ್ಲ. ನನ್ನ ತಾಯಿ ಸಾಯುವ ಸ್ಥಿತಿಯಲ್ಲಿದ್ದಳು ಎಂದು ಲೂಯಿಸ್ ಹೇಳಿದ್ದಾಳೆ.

ವಾಸ್ತವಕ್ಕೆ ಬಂದು ಅಮ್ಮನ ಬಳಿ ಹೋಗ್ತಿದ್ದಂತೆ ಅಲ್ಲಿನ ಸ್ಥಿತಿ ಬದಲಾಗಿತ್ತು. ಅಮ್ಮ ನಿನ್ನನ್ನು ಕ್ಷಮಿಸಿದ್ದೇನೆಂದು ಆಕೆ ಹಣೆ ಮೇಲೆ ಮುತ್ತಿಟ್ಟೆ. ಆದ್ರೆ ಆಕೆ ಆಗ್ಲೇ ಸಾವನ್ನಪ್ಪಿದ್ದಳು ಎನ್ನುತ್ತಾಳೆ ಲೂಯಿಸ್. ದುಃಖದಲ್ಲಿ ನನ್ನ ಸಹೋದರಿಯರನ್ನು ನೋಡಿದ್ರೆ ಅವರಿಗೆ ಈ ವಿಷ್ಯ ಮೊದಲೇ ಗೊತ್ತಿದ್ದಂತೆ ಕಾಣ್ತಿತ್ತು ಎಂದ ಲೂಯಿಸ್, ನನ್ನ ಜೀವನದ ಬಗ್ಗೆ ನಾನು ಸಾಕಷ್ಟು ಆಲೋಚನೆ ಮಾಡಿದ್ದೇನೆ ಎನ್ನುತ್ತಾಳೆ. ನನ್ನ ಕುಟುಂಬದ ಎಲ್ಲ ಸದಸ್ಯರಿಗಿಂತ ನಾನು ಭಿನ್ನವಾಗಿದ್ದೆ. ಅವರ ಜೋಕ್ ಕೂಡ ನನಗೆ ಅರ್ಥವಾಗ್ತಿರಲಿಲ್ಲ. ಅದ್ಯಾಕೆ ಎಂಬುದು ಈಗ ಗೊತ್ತಾಯ್ತು. ಅದೇ ಚಿಂತೆಯಲ್ಲಿ ನಾನು ಖಿನ್ನತೆಗೆ (Depression) ಒಳಗಾಗಿದ್ದೆ. ಅನೇಕ ಥೆರಪಿ (Therapy) ನಂತ್ರ ಸುಧಾರಿಸಿಕೊಂಡಿದ್ದೇನೆ.  ಅಪ್ಪನಲ್ಲದ ಅಪ್ಪ ನನ್ನನ್ನು ತನ್ನ ಮಗಳಂತೆ ನೋಡಿಕೊಂಡಿದ್ದಾನೆ. ಪ್ರೀತಿ ಕಡಿಮೆ ಮಾಡಿಲ್ಲ. ಆರ್ಥಿಕ ಸಹಾಯ ನೀಡಿದ್ದಲ್ಲದೆ ನನಗೆ ಕೆಲಸ ಸಿಗಲು ನೆರವಾಗಿದ್ದಾರೆ. ನನ್ನ ಸಹೋದರ – ಸಹೋದರಿ ಕೂಡ ನನಗೆ ಸಾಕಷ್ಟು ಪ್ರೀತಿ ನೀಡಿದ್ದಾರೆ. ಇದಕ್ಕಿಂತ ಇನ್ನೇನು ಬೇಕು ಎನ್ನುತ್ತಾಳೆ ಲೂಯಿಸ್. 
 

Follow Us:
Download App:
  • android
  • ios