MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • ಅನುಷ್ಕಾ - ವಿರಾಟ್ ದಾಂಪತ್ಯದ ಗುಟ್ಟಿದು, ಇದ್ರಿಂದ ಸಂಸಾರ ಸುಖ!

ಅನುಷ್ಕಾ - ವಿರಾಟ್ ದಾಂಪತ್ಯದ ಗುಟ್ಟಿದು, ಇದ್ರಿಂದ ಸಂಸಾರ ಸುಖ!

ವರ್ಲ್ಡ್ ಕಪ್ ಸೆಮಿಫೈನಲ್ ಕ್ರಿಕೆಟ್ ಪಂದ್ಯದಲ್ಲಿ ಸೆಂಚುರಿ ಬಾರಿಸಿದ ವಿರಾಟ್ ಕೊಹ್ಲಿ ಪತ್ನಿಗೆ ಹೂ ಮುತ್ತನ್ನು ನೀಡಿದ್ದು, ಅದಕ್ಕೆ ಪ್ರತಿಯಾಗಿ ಅನುಷ್ಕಾ ಸಹ ಫ್ಲೈಯಿಂಗ್ ಕಿಸ್ ನೀಡಿದ್ದು, ನೋಡಿದ್ರೆ, ವಾವ್ ಎಷ್ಟು ಚೆನ್ನಾಗಿದೆ ಈ ಜೋಡಿ ಎಂದು ಅನಿಸದೇ ಇರದು ಅಲ್ವಾ? ಏನಿದು ಈ ದಾಂಪತ್ಯದ ಗುಟ್ಟು? 

2 Min read
Suvarna News
Published : Nov 17 2023, 05:44 PM IST
Share this Photo Gallery
  • FB
  • TW
  • Linkdin
  • Whatsapp
18

ಅನುಷ್ಕಾ ಶರ್ಮಾ (Anushka Sharma) ಮತ್ತು ವಿರಾಟ್ ಕೊಹ್ಲಿ (Virat Kohli) ದೇಶದ ಅತ್ಯಂತ ಜನಪ್ರಿಯ ಮತ್ತು ಫೇವರಿಟ್ ಕಪಲ್ಸ್‌ನಲ್ಲಿ ಒಬ್ಬರು. ಪ್ರತಿ ದಂಪತಿಯೂ ಈ ಇಬ್ಬರ ನಡುವಿನ ಕೆಮಿಸ್ಟ್ರಿಯಿಂದ ಸ್ಫೂರ್ತಿ ಪಡೆಯಬೇಕು. ವಿರಾಟ್ ಮತ್ತು ಅನುಷ್ಕಾ ಅವರಿಂದ ಪ್ರತಿಯೊಬ್ಬ ಕಪಲ್ಸ್ ಕಲಿಯೋದು ತುಂಬಾ ಇದೆ. ಬನ್ನಿ ಇವರಿಂದ ಕಪಲ್ಸ್ ತಿಳಿದುಕೊಳ್ಳಬೇಕಾದ್ದು ಏನು ತಿಳಿಯೋಣ. 
 

28

ಸಮಯ ಮೀಸಲಿಡಿ  (Give time)
ನೀವು ಎಷ್ಟೇ ಬ್ಯುಸಿಯಾಗಿದ್ದರೂ ನಿಮ್ಮ ಸಂಗಾತಿಗಾಗಿ ಸಮಯ ಮೀಸಲಿಡಿ. ವಿರಾಟ್ ಮತ್ತು ಅನುಷ್ಕಾ ಅವರ ವೃತ್ತಿ ಜೀವನವು ವಿಭಿನ್ನವಾಗಿದೆ, ಆದರೂ ಅವರು ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇಬ್ಬರು ಜೊತೆಯಾಗಿಯೇ ಇದ್ದಷ್ಟು ಸಂಬಂಧ ಗಟ್ಟಿಯಾಗುತ್ತೆ.

38

ಪ್ರಶಂಸೆ (praise them)
ಪ್ರೀತಿ ಮಾಡುತ್ತಿದ್ದಾಗ ಸಂಗಾತಿಯನ್ನು ಹೊಗಳುತ್ತಿದ್ದ ಜನರು ಮದುವೆಯ ನಂತರ ಹಾಗೆ ಮಾಡುವುದಿಲ್ಲ, ಇದು ಸಂಪೂರ್ಣವಾಗಿ ತಪ್ಪು. ವಿರಾಟ್ ಮತ್ತು ಅನುಷ್ಕಾ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ಸ್ ನೋಡಿದಾಗ ಇಂದಿಗೂ ಈ ಇಬ್ಬರು ಪರಸ್ಪರ ಹೊಗಳುತ್ತಾರೆ ಅನ್ನೋದನ್ನೂ ಕಾಣಬಹುದು. ನೀವು ಹಾಗೇ ಮಾಡಿ, ಪ್ರೀತಿ ಹೆಚ್ಚುತ್ತೆ ನೋಡಿ.

48

ಟ್ರಾವೆಲ್ ಮಾಡಿ (travel together)
ನಿಮ್ಮ ಬಿಡುವಿಲ್ಲದ ಜೀವನಶೈಲಿಯಿಂದ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಸಂಗಾತಿಯೊಂದಿಗೆ ಸುತ್ತಾಡಲು ಪ್ಲ್ಯಾನ್ ಮಾಡಿ. ವಿರಾಟ್ ಮತ್ತು ಅನುಷ್ಕಾ ಆಗಾಗ್ಗೆ ಟ್ರಾವೆಲ್ ಪೋಸ್ಟ್ ಹಂಚಿಕೊಳ್ಳುತ್ತಾರೆ, ಇದನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ. 

58

ಜಗತ್ತಿನ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ (Do not think about world)
ಒಮ್ಮೆ ಈ ಇಬ್ಬರ ಬ್ರೇಕಪ್ ಸುದ್ದಿ ತುಂಬಾ ಚರ್ಚೆಯಾಗಿತ್ತು, ಆದರೆ ಏನೂ ಸಂಭವಿಸಲಿಲ್ಲ, ಆದ್ದರಿಂದ ಜಗತ್ತು ಏನೇ ಹೇಳಿದರೂ, ನಾವು ನಮ್ಮ ಸಂಬಂಧವನ್ನು ಹಾಳು ಮಾಡಬಾರದು ಎಂದು ನಾವು ವಿರಾಟ್ ಮತ್ತು ಅನುಷ್ಕಾ ಅವರಿಂದ ಕಲಿಯಬೇಕಾಗಿದೆ. 

68

ವೃತ್ತಿಜೀವನವನ್ನು ಬೆಂಬಲಿಸಿ (support career)
ಅನುಷ್ಕಾ ಮತ್ತು ವಿರಾಟ್ ಅವರ ಕೆಲಸದ ಕ್ಷೇತ್ರಗಳು ವಿಭಿನ್ನವಾಗಿವೆ, ಆದರೆ ಈ ಇಬ್ಬರು ಒಬ್ಬರನ್ನೊಬ್ಬರು ಬೆಂಬಲಿಸುತ್ತಾರೆ ಮತ್ತು ಪ್ರೋತ್ಸಾಹ ಕೂಡ ನೀಡುತ್ತಾರೆ. ನಿಜವಾದ ರಿಲೇಶನ್ ಶಿಪ್ ಅಲ್ಲಿ ಇದೇ ಅಲ್ವಾ ಬೇಕಾಗಿರೋದು. 

78

ಪ್ರೀತಿ ಕಡಿಮೆ ಮಾಡಬೇಡಿ
ಮದುವೆ ನಂತರ ಹುಡುಗರ ಪ್ರೀತಿ ಕಡಿಮೆಯಾಗುತ್ತೆ ಎಂದು ಜನರು ಆಗಾಗ್ಗೆ ಹೇಳುತ್ತಾರೆ, ಆದರೆ ಇದು ನಿಜವಲ್ಲ. ವ್ಯಕ್ತಿಯ ಪ್ರೀತಿ ನಿಜವಾಗಿದ್ರೆ, ಆ ಪ್ರೀತಿ ಎಂದಿಗೂ ಕಡಿಮೆಯಾಗಲ್ಲ.  ಅನುಷ್ಕಾ ಮತ್ತು ವಿರಾಟ್ ಜೋಡಿಯಿಂದ ನೀವು ಇದನ್ನು ಕಲಿಯಬಹುದು. ಮದುವೆಯಾಗಿ ಇಷ್ಟು ವರ್ಷಗಳ ನಂತರವೂ, ಅವರ ಪ್ರೀತಿ ಕಡಿಮೆಯಾಗಿಯೇ ಇಲ್ಲ.

88

ಕಾಳಜಿ ಮುಖ್ಯ (caring)
ಸಂಗಾತಿಯನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ಅನುಷ್ಕಾ ಮತ್ತು ವಿರಾಟ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟಿನಲ್ಲಿ, ಈ ಜೋಡಿಗಳ ಸುಂದರವಾದ ಫೋಟೋಗಳನ್ನು ನೀವು ನೋಡಬಹುದು, ಇದು ಪರಸ್ಪರ ಪ್ರೀತಿ ಮತ್ತು ಕಾಳಜಿ (Caring) ಎರಡನ್ನೂ ತೋರಿಸುತ್ತದೆ.  

About the Author

SN
Suvarna News
ಸಂಬಂಧಗಳು
ಪ್ರೀತಿ
ವಿರಾಟ್ ಕೊಹ್ಲಿ
ಅನುಷ್ಕಾ ಶರ್ಮಾ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved