ಈ ಪ್ರಾಣಿ-ಪಕ್ಷಿಗಳ ಬಗ್ಗೆ ಹೇಳದಿದ್ರೆ ದೇಶದ ಇತಿಹಾಸವೇ ಅಪೂರ್ಣ; ಇವುಗಳ ಜೀವನ ರೋಮಾಂಚಕ
ಭಾರತದ ಇತಿಹಾಸದಲ್ಲಿ ಸಾಕಷ್ಟು ಪ್ರಾಣಿ-ಪಕ್ಷಿಗಳ ಉಲ್ಲೇಖವಿದೆ. ರಾಜಮಹಾರಾಜರು ಪ್ರಾಣಿ-ಪಕ್ಷಿಗಳನ್ನು ಸಾಕುವುದಷ್ಟೇ ಅಲ್ಲ, ಅವುಗಳನ್ನು ತಮ್ಮ ಜೀವದ ಮಿತ್ರನಂತೆ ನೋಡಿಕೊಂಡಿರುವ ದಾಖಲೆಗಳಿವೆ. ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆಯುವಲ್ಲಿ ಯಾವೆಲ್ಲ ಪ್ರಾಣಿಗಳಿವೆ ಎಂದು ಅರಿತರೆ ರೋಮಾಂಚನವಾಗೋದು ಗ್ಯಾರೆಂಟಿ.
ಭಾರತವು ಸಮೃದ್ಧ ಇತಿಹಾಸ, ಸಂಸ್ಕೃತಿ, ಪರಂಪರೆ ಹೊಂದಿರುವ ದೇಶ. ಹೀಗಾಗಿ ಇಲ್ಲಿ ಕತೆಗಳಿಗೆ ಬರವಿಲ್ಲ. ನಮ್ಮ ರಾಮಾಯಣ, ಮಹಾಭಾರತದಿಂದ ಹಿಡಿದು, ಸ್ವಾತಂತ್ರ್ಯಪೂರ್ವದ ರಾಜಮಹಾರಾಜರ ಕಾಲದವರೆಗೆ ಲೆಕ್ಕವಿಲ್ಲದಷ್ಟು ಮೈನವಿರೇಳಿಸುವ ಕತೆಗಳಿವೆ. ಈ ಕತೆಗಳಲ್ಲಿ ಕೆಲವು ಪ್ರಾಣಿ-ಪಕ್ಷಿಗಳ ಹೆಸರುಗಳು ನುಸುಳುತ್ತವೆ. ಅಂದು ಪಾರಿವಾಳಗಳನ್ನು ಸಂದೇಶವಾಹಕವನ್ನಾಗಿ ಬಳಕೆ ಮಾಡಲಾಗುತ್ತಿತ್ತು ಎನ್ನುವ ಕತೆಗಳನ್ನು ನಾವು ಕೇಳಿದ್ದೇವೆ. ಮಹಾರಾಣಾ ಪ್ರತಾಪನ ಚೇತಕ್ ಕುದುರೆ ಸೇರಿದಂತೆ ಇನ್ನಿತರ ಹಲವು ಪ್ರಾಣಿಗಳು ಇತಿಹಾಸದ ಕತೆಗಳಲ್ಲಿ ಮಹತ್ವದ ಸ್ಥಾನ ಪಡೆಯುತ್ತವೆ. ಹೀಗೆ, ಭಾರತೀಯ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದ ಹಲವು ಪ್ರಾಣಿಗಳಿವೆ. ಅವುಗಳನ್ನು ಹೊರತುಪಡಿಸಿದರೆ ಅವುಗಳಿಗೆ ಸಂಬಂಧಿಸಿದ ಘಟನೆ ಅಥವಾ ವ್ಯಕ್ತಿಗಳ ಜೀವನಗಾಥೆ ಅಪೂರ್ಣ ಎನ್ನುವಷ್ಟು ಅವು ಅವಿನಾಭಾವ ಸಂಬಂಧ ಹೊಂದಿವೆ. ಇತಿಹಾಸದ ಕಾಲಘಟ್ಟದಲ್ಲಿ ಪ್ರಮುಖವಾಗಿ ನಿಲ್ಲುವ ಕೆಲವು ಪ್ರಾಣಿಗಳನ್ನು ಅರಿತುಕೊಳ್ಳೋಣ.
• ಚೇತಕ್ ಕುದುರೆ (Chetak Horse)
ಮೇವಾಡದ ಇತಿಹಾಸ ಮಾತ್ರವಲ್ಲ, ಇತಿಹಾಸದ ಅಧ್ಯಯನಕ್ಕೆ ಪೂರಕವಾದ ಹಸ್ತಪ್ರತಿಗಳಲ್ಲೂ ಚೇತಕ್ ಕುದುರೆಯ ಪ್ರಸ್ತಾಪವಿದೆ ಎಂದರೆ, ಅದರ ಮಹತ್ವ ಅರ್ಥವಾಗುತ್ತದೆ. 1576ರಲ್ಲಿ ಮೊಘಲರೊಂದಿಗೆ ನಡೆದ ಹಲ್ದಿಘಾಟ್ ಕದನದಲ್ಲಿ ಮಹಾರಾಣಾ ಪ್ರತಾಪ್ (Maharana Prathap) ಅಪಾಯಕಾರಿ ಸನ್ನಿವೇಶದಲ್ಲಿ ಸಿಲುಕಿದಾಗ ತಾನು ತೀವ್ರವಾಗಿ ಗಾಯಗೊಂಡಿದ್ದರೂ ಅವರನ್ನು ಯುದ್ಧಭೂಮಿಯಿಂದ ಹೊರಕ್ಕೆ ಕರೆತಂದು ರಕ್ಷಿಸಿದ ಚೇತಕ್, ಬಳಿಕ ಜೀವತ್ಯಾಗ ಮಾಡಿತ್ತು.
ಸಂಭ್ರಮದ ಹೊತ್ತಲ್ಲಿ ನೆನಯಬೇಕಾದ ಸಂಘರ್ಷದ ಕಥೆ!! ರಾಮ ಜನ್ಮಭೂಮಿಯ ರಣರೋಚಕ ಇತಿಹಾಸ!
• ಕಾಲೂ ಆನೆ (Kalu Elephant)
ಕಾಲೂ ಆನೆ ಟಿಪ್ಪು ಸುಲ್ತಾನನ (Tipu Sultan) ಯುದ್ಧದ ಆನೆಯಾಗಿತ್ತು. ಅವನು ಇದರ ಮೇಲೆ ಕುಳಿತುಕೊಂಡು ಯುದ್ಧ ಮಾಡುತ್ತಿದ್ದ ಎನ್ನುವುದನ್ನು ಹಲವು ಇತಿಹಾಸಕಾರರು ಉಲ್ಲೇಖಿಸಿದ್ದಾರೆ.
• ಮಣಿ-ಬುದ್ಧಿವಂತ ಗಿಳಿ (Clever Pigeon)
ಅತ್ಯಂತ ಬುದ್ಧಿವಂತ ಪಕ್ಷಿ ಎನ್ನುವ ಖ್ಯಾತಿ ಹೊಂದಿದ್ದ ಮಣಿ ಹೆಸರಿನ ಗಿಳಿ ಮೊಘಲ್ ದೊರೆ ಅಕ್ಬರ್ (Akbar) ನ ಆಸ್ಥಾನದಲ್ಲಿತ್ತು. ಇದರ ಬುದ್ಧಿವಂತಿಕೆ ಮತ್ತು ಮಿಮಿಕ್ ಮಾಡುವ ಅದ್ಭುತ ಗುಣದಿಂದಾಗಿ ಅಕ್ಬರ್ ಇದನ್ನು ಬಹುವಾಗಿ ಇಷ್ಟಪಡುತ್ತಿದ್ದ.
• ಝಾನ್ಸಿ ರಾಣಿಯ (Jhansi Rani) ಕುದುರೆ
ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಕುದುರೆಗೆ ಹೆಸರಿಲ್ಲ. ಆದರೆ, ಇದಕ್ಕೆ ಇತಿಹಾಸದಲ್ಲಿ ಸ್ಥಾನವಿದೆ. ಇದು ಯುದ್ಧಗಳಲ್ಲಿ ತನ್ನ ರಾಣಿಯೊಂದಿಗೆ ಧೈರ್ಯ, ಶೌರ್ಯದಿಂದ ಕಾದಾಡಿದ ಇತಿಹಾಸ ಹೊಂದಿದೆ.
• ಮೋತಿ-ಶ್ವಾನ (Moti-Dog)
ದೆಹಲಿಯ ಕೆಂಪುಕೋಟೆಯಲ್ಲಿದ್ದ ಒಂದು ನಾಯಿ ಮೋತಿ. 1857ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಅತಿ ನಿಷ್ಠಾವಂತನಾಗಿ ಗುರುತಿಸಿಕೊಂಡಿತ್ತು.
News Hour: ಕಾಲಾರಾಮ್ ಮಂದಿರಕ್ಕೂ ರಾಮಾಯಣಕ್ಕೂ ಇರುವ ನಂಟೇನು?
• ಮಯೂರ (Mayura) -ರಾಯಲ್ ನವಿಲು
ಮಯೂರವನ್ನು ಒಳಗೊಂಡ ಲಾಂಛನವನ್ನು (Symbol) ಗುಪ್ತ ರಾಜ ಮನೆತನ ಬಳಕೆ ಮಾಡುತ್ತಿತ್ತು. ಮಯೂರ ಸೌಂದರ್ಯ ಹಾಗೂ ಕಲಾಸಿರಿಯ ಮೂಲಕ ಎಲ್ಲ ಕಾಲದಲ್ಲೂ ಮನ್ನಣೆಗೆ ಒಳಗಾಗಿರುವ ಪಕ್ಷಿ. ಕಲೆ ಮತ್ತು ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.
• ನೀಲಕಂಠ-ದೈವಿಕ ಪಾರಿವಾಳ
ಶಿವನೊಂದಿಗೆ ಗುರುತಿಸಲ್ಪಡುವ ನೀಲಕಂಠ (Neelakanta) ಪಾರಿವಾಳವು ಶಾಂತಿ (Peace) ಮತ್ತು ಆಧ್ಯಾತ್ಮಿಕತೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಭಾರತದ ಧಾರ್ಮಿಕ ಕಲೆಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ.
• ನವಾಬ್-ಹುಲಿ (Nawab Tiger)
ನವಾಬ್ ಹುಲಿ ಬಂಗಾಳದ ಹುಲಿ. ಸುಂದರಬನ್ಸ್ ವಲಯದಲ್ಲಿ ಇದರ ಅಸ್ತಿತ್ವ ವೈಭವಯುತವಾಗಿತ್ತು. ನವಾಬ್ ಹುಲಿ ಈ ಪ್ರಾಂತ್ಯದ ಹಲವು ಜಾನಪದ ಕತೆಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ.
• ಸುಲ್ತಾನ್ (Sultan)-ಆನೆ
ಮೈಸೂರು ಅರಸರ ಆಡಳಿತದಲ್ಲಿ ಮಹತ್ವದ ಸ್ಥಾನ ಪಡೆದಿತ್ತು. ಬೃಹದಾಕಾರದ ಈ ಆನೆ ಬಲಾಢ್ಯತೆ ಮತ್ತು ಶಕ್ತಿಗೆ ಹೆಸರುವಾಸಿಯಾಗಿತ್ತು.
• ಕಾಮಧೇನು ಹಸು (Kamadhenu Cow)
ಸಂಸ್ಕೃತ ಮಹಾಕಾವ್ಯಗಳು, ಪುರಾಣಗಳಲ್ಲಿ ಕಾಮಧೇನು ಕುರಿತ ಹಲವು ಕತೆಗಳಿವೆ. ಸಮುದ್ರ ಮಂಥನದ ಕಾಲದಲ್ಲಿ ಜನಿಸಿದ ಕಾಮಧೇನು ಹಸು ಬೇಡಿದ್ದನ್ನು ನೀಡುವ ಹಸು. ಈ ಹಸುವನ್ನು ಸಪ್ತಋಷಿಗಳಿಗೆ ನೀಡಲಾಗಿತ್ತು. ಕಾಲಾಂತರದಲ್ಲಿ ವಸಿಷ್ಠರ ಆಶ್ರಮ ಸೇರಿತ್ತು. ಇದನ್ನು ಬಯಸಿದ ಕೌಶಿಕ ಮಹಾರಾಜ ವಸಿಷ್ಠರ ವಿರುದ್ಧ ಯುದ್ಧಕ್ಕೆ ನಿಂತು, ಬಳಿಕ ವಿಶ್ವಾಮಿತ್ರನಾಗಿ ಬದಲಾಗುತ್ತಾನೆ ಎನ್ನುವುದು ಕಾಮಧೇನು ಕುರಿತ ಖ್ಯಾತ ಕತೆಗಳಲ್ಲಿ ಒಂದಾಗಿದೆ.