ಹಾಲುಣಿಸುವ ತಾಯಿಯ ಆಹಾರ ಕ್ರಮ ಹೇಗಿರಬೇಕು ? ಆಹಾರ ತಜ್ಞರ ಟಿಪ್ಸ್ ಇಲ್ಲಿದೆ
ತಾಯ್ತನ ಎನ್ನುವುದು ಈ ಪ್ರಕೃತಿ ಸ್ತ್ರೀಗೆ ನೀಡಿರುವ ವರದಾನವೇ ಸರಿ. ಒಂದು ಜೀವಕ್ಕೆ ಜನ್ಮ ಕೊಡುವ ಶಕ್ತಿ ಇರುವುದು ಸ್ತ್ರೀಗೆ ಮಾತ್ರ, ಜನ್ಮ ನೀಡುವುದಷ್ಟೇ ಅಲ್ಲ, ತನ್ನ ಕರುಳಿನಕುಡಿಯನ್ನು ತನ್ನೆತ್ತರಕ್ಕೆ ಬೆಳೆಸುವ ಜವಾಬ್ದಾರಿಯೂ ತಾಯಿಯದ್ದೇ. ಅದರ ಅಡಿಪಾಯವೇ ಸ್ತನ್ಯಪಾನ. ಮಗುವಿಗೆ ಎದೆಹಾಲು ಕುಡಿಸುವ ತಾಯಿಯ ಆರೋಗ್ಯ ಕೂಡ ಅತಿ ಮುಖ್ಯ. ಹಾಗಿದ್ರೆ ಹಾಲುಣಿಸುವ ತಾಯಿಯ ಆಹಾರ ಕ್ರಮ ಹೇಗಿರಬೇಕು?
ಮಗುವಿಗೆ ಜನ್ಮ ನೀಡಿದ ಮರುಜನ್ಮ ಪಡೆಯುವ ತಾಯಿಯ ದೇಹವು ಸಹ ಪೋಷಕಾಂಶ ಕಳೆದುಕೊಂಡು ಸಂಪೂರ್ಣ ಕುಗ್ಗಿ ಹೋಗಿರುತ್ತದೆ. ಮಗುವಿನ ಆರೈಕೆಯಂತೆಯೇ ತಾಯಿಯ ಆರೋಗ್ಯದ ಆರೈಕೆ ಕೂಡ ಅಷ್ಟೇ ಮುಖ್ಯ. ಆಗಸ್ಟ್ ಮೊದಲ ವಾರವನ್ನು ವಿಶ್ವ ಸ್ತನ್ಯಪಾನ ಸಪ್ತಾವನ್ನು ಆಚರಿಸಲಾಗುತ್ತಿದೆ. ಇದರ ಭಾಗವಾಗಿ, ಹಾಲುಣಿಸುವ ತಾಯಿಯ ಆಹಾರ ಕ್ರಮ ಹೇಗಿರಬೇಕು? ಅವರ ಡಯೆಟ್ ಪ್ಲಾನ್ ಏನು? ಎನ್ನುವುದನ್ನು ಫೊರ್ಟಿಸ್ ಆಸ್ಪತ್ರೆ ಆಹಾರ ತಜ್ಞೆ ಡಾ.ಶಾಲಿನಿ ಅರವಿಂದ್ ವಿವರಿಸಿದ್ದಾರೆ.
ಬಾಣಂತಿಯರಿಗೆ ಪೌಷ್ಠಿಕ ಆಹಾರ ಎಷ್ಟು ಮುಖ್ಯ?
ಒಂದು ಹೆಣ್ಣು (Woman) ಗರ್ಭ ಧರಿಸಿದ ನಂತರದಿಂದಲೇ ಆಕೆಯು ಸಂಪೂರ್ಣ ಆರೋಗ್ಯದ (Health) ಬಗ್ಗೆ ಕಾಳಜಿ ವಹಿಸುವುದನ್ನು ಪ್ರಾರಂಭಿಸಬೇಕು. ಈ 9 ತಿಂಗಳ ಅವಧಿಯಲ್ಲಿ ಮತ್ತೊಂದು ಜೀವವನ್ನು ಒಡಲಲ್ಲಿ ಇರಿಸಿಕೊಂಡು ಪೋಷಿಸುವ ಆಕೆ ಪೌಷ್ಠಿಕಯುಕ್ತ ಆಹಾರವನ್ನು ಯತ್ತೇಚ್ಚವಾಗಿ ಸೇವಿಸಬೇಕು. ಇಲ್ಲವಾದಲ್ಲಿ ಮಗು ಹೆರಿಯಾದ ಬಳಿಕ ತಾಯಿಯ ಎದೆ ಹಾಲಿನಲ್ಲಿ (Breast milk) ಕೊರತೆ ಉಂಟಾಗಬಹುದು. ಹೀಗಾಗಿ ಗರ್ಭಾವಸ್ಥೆಯಲ್ಲಿ ಪೋಷಕಾಂಶಯುಕ್ತ ಆಹಾರ ಸೇವನೆ ಅತಿಮುಖ್ಯ. ಬಾಣಂತನದಲ್ಲಿಯೂ ಸಹ ತಾಯಿಗೆ ಪೌಷ್ಠಿಕಯುಕ್ತ ಆಹಾರ ನೀಡುವುದನ್ನು ನಿರ್ಲಕ್ಷಿಸಬಾರದು.
ಪ್ರಸವದ ಮೊದಲು, ನಂತರ ಮಹಿಳೆಯರು ಮಾಡಲೇಬೇಕು ಈ ಯೋಗಾಸನ
ಹಿಂದೆಲ್ಲಾ ಬಾಣಂತಿಯರಿಗೆ ಕೇವಲ ಬಿಸಿ ಅನ್ನ, ತುಪ್ಪದಂತ ಆಹಾರವನ್ನಷ್ಢ ನೀಡಲಾಗುತ್ತಿತ್ತು, ಈ ಬಗ್ಗೆ ಸಾಕಷ್ಟು ಮೂಢನಂಬಿಕೆಗಳಿಗೆ ಜನ ಒಳಗಾಗಿದ್ದಾರೆ. ಬಾಣಂತಿಯರು ಈ ಸಂದರ್ಭದಲ್ಲಿ ಹೆಚ್ಚು ಪೌಷ್ಠಿಕ ಆಹಾರ ಸೇವನೆ ಮಾಡುವುದು ಮಗು ಹಾಗೂ ತಾಯಿಯ ಆರೋಗ್ಯ ಎರಡಕ್ಕೂ ಒಳ್ಳೆಯದು.
ಕ್ಯಾಲೋರಿಗಳ ಬಗ್ಗೆ ಗಮನವಿರಲಿ:: ಮಗು ಜನಿಸಿದ 6 ತಿಂಗಳ ಅವಧಿಯಲ್ಲಿ ಮಗುವು ಸಂಪೂರ್ಣ ತಾಯಿಯ ಹಾಲನ್ನೇ ಅವಲಂಬಿಸಿ, ಬೆಳವಣಿಗೆ ಕಾಣುತ್ತದೆ. ಈ ಹಂತದಲ್ಲಿ ಮಗುವಿಗೆ ಕನಿಷ್ಠ 600 ಕ್ಯಾಲೋರಿಯಷ್ಟು ಪೌಷ್ಠಿಕತೆ ಹಾಲಿನಲ್ಲಿ ಲಭ್ಯವಾಗುತ್ತದೆ. ಶಿಶುವು 7 ರಿಂದ 12 ತಿಂಗಳ ವಯಸ್ಸಿನಲ್ಲಿ ತಾಯಿಂದ 520 ಕ್ಯಾಲೋರಿಯಷ್ಟು ಪೌಷ್ಠಿಕತೆಯನ್ನು ಪಡೆಯುತ್ತದೆ. ಹೀಗಾಗಿ ತಾಯಿಯು ಪ್ರತಿದಿನ 1800 ಕ್ಯಾಲೋರಿಯಷ್ಟು ಪೌಷ್ಠಿಕಯುಕ್ತ ಆಹಾರ ಸೇವನೆ ಮಾಡುವುದು ಕಡ್ಡಾಯ. ಇದಕ್ಕೂ ಕಡಿಮೆ ಕ್ಯಾಲೋರಿಯಷ್ಟು ಆಹಾರ ಸೇವಿಸುವುದರಿಂದ ತಾಯಿಯ ಆರೋಗ್ಯ ಕುಂದಬಹುದು. ಜೊತೆಗೆ ಸಾಕಷ್ಟು ನೀರನ್ನು ಕುಡಿಯುವ ಮೂಲಕ ದೇಹವು ನಿರ್ಜಲೀಕರಣವಾಗದಂತೆ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ, ಮೂತ್ರನಾಳದ ಸೋಂಕು (UTIs), ನಿರ್ಜಲೀಕರಣ, ಮೂತ್ರಪಿಂಡದಲ್ಲಿ ಕಲ್ಲುಗಳು, ಮಲಬದ್ಧತೆ, ಹೆಮೊರೊಯಿಡ್ಸ್ ಇತರೆ ಸಮಸ್ಯೆಗಳಿಗೆ ಕಾರಣವಾಗಬಹುದು.
ಮೊದಲ ಬಾರಿ ತಾಯಿಯಾಗುತ್ತಿದ್ದೀರಾ ? ಈ ವಿಚಾರಗಳ ಬಗ್ಗೆ ಗೊತ್ತಿರಲಿ
ಪ್ರೋಟೀನ್‌ಯುಕ್ತ ಆಹಾರ ಸೇವಿಸಿ: ಮಗುವಗೆ 6 ತಿಂಗಳು ತುಂಬುವರೆಗೂ ಕನಿಷ್ಠ ದಿನಕ್ಕೆ 17 ಗ್ರಾಂಗಳಷ್ಟು ಪ್ರೋಟಿನ್ ಅಗತ್ಯವಿರುತ್ತದೆ. ನಂತರ 7 ರಿಂದ 12 ತಿಂಗಳ ಅವಧಿಯಲ್ಲಿ ಪ್ರೋಟಿನ್‌ನ ಪ್ರಮಾಣ 13 ಗ್ರಾಂಗಳಿಗೆ ಹೆಚ್ಚಾಗುತ್ತಾ ಹೋಗುತ್ತದೆ, ಹೀಗಾಗಿ ತಾಯಿಯಾದವಳು ತನ್ನ ಹಾಗೂ ಮಗುವಿನ ಆರೋಗ್ಯಕ್ಕಾಗಿ ಪ್ರೋಟಿನ್‌ಯುಕ್ತ ಆಹಾರಗಳ ಸೇವನೆಗೆ ಹೆಚ್ಚು ಆದ್ಯತೆ ನೀಡಬೇಕು, ಅದರಲ್ಲಿ ಪೋಷಕಾಂಶಗಳೆಂದರೆ ವಿಟಮಿನ್ ಎ, ಬಿ1, ಬಿ2, ಬಿ3, ಸಿ, ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ12. ಜೊತೆಗೆ ಆರೋಗ್ಯಕರ ಕೊಬ್ಬನಾಮ್ಲದ ಸಮತೋಲನ ಅತಿ ಮುಖ್ಯ.
ಕನಿಷ್ಠ 20 ಗ್ರಾಂನಷ್ಟು ಕೊಬ್ಬಿನಾಂಶ ಹೊಂದಿರುವುದು ಒಳ್ಳೆಯದು. ಇನ್ನು, ಹಾಲುಣಿಸುವ ಮಹಿಳೆ ಕನಿಷ್ಠ 500 ಮಿಲಿ ಹಾಲನ್ನು ಮಗುವಿಗೆ ಉಣಿಸುತ್ತಾಳೆ. ಇದಕ್ಕೆ ಕನಿಷ್ಠ 1200 ಮಿಗ್ರಾಂ ಕ್ಯಾಲ್ಸಿಯಂನ ಅಗತ್ಯವಿರುತ್ತದೆ. ಹೀಗಾಗಿ ಕ್ಯಾಲ್ಸಿಯಂ ಭರಿತ ಆಹಾರಗಳಾದ ಹಾಲು, ಹಾಲಿನ ಉತ್ಪನ್ನಗಳು, ಹಸಿರು ಸೊಪ್ಪು, ತರಕಾರಿ, ರಾಗಿ, ಜೋಳ, ಎಳ್ಳು, ಕರಿಬೇವಿನ ಎಲೆಗಳು, ಬೆಂಗಾಲಿ, ಅಮರಂಥ್, ಮೆಂತ್ಯ ಎಲೆ ಇತ್ಯಾದಿ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.
ಮಾನಸಿಕ ನೆಮ್ಮದಿ ಇರಲಿ: ಉತ್ತಮ ಆಹಾರ ಸೇವನೆ ಜೊತೆಗೆ ಮಾನಸಿಕ ನೆಮ್ಮದಿ ಇರುವಂತೆಯೂ ತಾಯಿಯಾದವಳು ನೋಡಿಕೊಳ್ಳಬೇಕು. ಏಕೆಂದರೆ, ಮಗುವಾದ ಬಳಿಕ ತಾಯಿಯಲ್ಲಿ ಸಾಕಷ್ಟು ಹಾರ್ಮೋನ್ ಬದಲಾಔಣೆಯಾಗಲಿದ್ದು, ಇದು ಮಾನಸಿಕ ಒತ್ತಡಕ್ಕೂ ಕಾರಣವಾಗಬಹುದು. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನೂ ಕಾಪಾಡಿಕೊಳ್ಳುವುದರಿಂದ ತಾಯಿ-ಮಗು ಇಬ್ಬರೂ ಉತ್ತಮ ವಾತಾವರಣದಲ್ಲಿ ಬೆಳೆಯಲು ಸಾಧ್ಯ.