ಆಫ್ರಿಕಾದಿಂದ ಬಂತು ಭಾರತೀಯ ಸ್ಟ್ರೀಟ್‌ ಫುಡ್‌ ಟೀಕಿಸುವ ವೀಡಿಯೋ, ಮಸಾಲೆ ಭರಿತ ಪ್ರತಿಕ್ರಿಯೆ ಸಿಗ್ತು!

ಭಾರತೀಯ ಸ್ಟ್ರೀಟ್‌ ಫುಡ್‌ ಗಳ ರುಚಿಗೆ ಸರಿಸಮನಾದುದು ಬೇರೆ ಇಲ್ಲ. ದಿನದಿಂದ ದಿನಕ್ಕೆ ವೈವಿಧ್ಯ ಹೆಚ್ಚಿಸಿಕೊಳ್ಳುತ್ತಿರುವ ಸ್ಟ್ರೀಟ್‌ ಫುಡ್‌ ಮಾರುಕಟ್ಟೆ ದಿನವೂ ಭಾರೀ ಜೋರಾದ ವ್ಯಾಪಾರವನ್ನೇ ಮಾಡುತ್ತದೆ. ಆದರೆ, ಇದರ ಗುಣಮಟ್ಟದ ಬಗ್ಗೆ ಆತಂಕ ಇದ್ದೇ ಇದೆ. ಈ ಸನ್ನಿವೇಶದಲ್ಲಿ ಭಾರತದ ಸ್ಟ್ರೀಟ್‌ ಫುಡ್‌ ಗಳನ್ನು ಟೀಕಿಸುವ ಕೆಲವು ವೀಡಿಯೋಗಳು ಆಫ್ರಿಕಾದಿಂದ ಹರಿದಾಡುತ್ತಿವೆ. 
 

Africans mocks Indian street foods, video viral

ಭಾರತೀಯ ಸ್ಟ್ರೀಟ್‌ ಫುಡ್‌ ಗಳಿಗೆ ಅದೆಷ್ಟು ಜನಪ್ರಿಯತೆ ಇದೆಯೋ ಅಷ್ಟೇ ಅವುಗಳ ಬಗ್ಗೆ ದೊಡ್ಡದೊಂದು ಅಸಮಾಧಾನವೂ ಇದೆ. ಸ್ಟ್ರೀಟ್‌ ಫುಡ್‌ ಗಳ ಶುಚಿತ್ವದ ವಿಚಾರ ಎಂದಿನಿಂದಲೂ ಪ್ರಶ್ನಾರ್ಹವಾಗಿಯೇ ಇದೆ. ಅದು ಸದಾಕಾಲ ಬಿಸಿಬಿಸಿ ಸಂಗತಿಯೂ ಹೌದು. ಆಹಾರದ ಗುಣಮಟ್ಟವನ್ನು ಕಾಪಾಡುವುದಿಲ್ಲ, ನಿಗದಿತ ಪ್ರಕ್ರಿಯೆ ಅನುಸರಿಸುವುದಿಲ್ಲ ಎನ್ನುವ ಮಾತು ಆಗಾಗ ಕೇಳಿಬರುತ್ತದೆ. ಇತ್ತೀಚೆಗೆ, ಶುಚಿತ್ವದ ವಿಚಾರದಲ್ಲಿ ಸಾಕಷ್ಟು ಕಾಳಜಿ ವಹಿಸುವುದು ಕಂಡುಬರುತ್ತದೆಯಾದರೂ ಎಲ್ಲರೂ ಈ ಮಾತನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ, ಅವುಗಳ ರುಚಿಗೆ ಸಾಟಿಯಿಲ್ಲ ಎನ್ನುವ ಮಾತನ್ನಂತೂ ಖಂಡಿತವಾಗಿ ಎಲ್ಲರೂ ಒಪ್ಪುತ್ತಾರೆ. ನಾಲಿಗೆಗೆ ರುಚಿ ಎನಿಸುವ, ತಿನ್ನುವ ಬಯಕೆಯನ್ನು ಮತ್ತಷ್ಟು ಹೆಚ್ಚಿಸುವ, ತಿಂದರೂ ಇನ್ನೂ ಬೇಕು ಎಂದೆನಿಸುವ, ಮತ್ತೆ ಮತ್ತೆ ತಿನ್ನಬೇಕೆಂಬ ಆಸೆಯನ್ನು ಹುಟ್ಟಿಸುವ ಬೀದಿ ಆಹಾರಗಳಿಗೆ ಅವುಗಳದ್ದೇ ಆದ ಗ್ರಾಹಕರಿದ್ದಾರೆ. ಯುವಜನತೆಯಂತೂ ಬೀದಿಬದಿ ಫಾಸ್ಟ್‌ ಫುಡ್‌ ಗಳ ಖಾಯಂ ಗ್ರಾಹಕರು. ಫಾಸ್ಟ್‌ ಫುಡ್‌ ಗಳಲ್ಲಿ ಬಳಸುವ ಹಲವು ಅಂಶಗಳು ಆರೋಗ್ಯಕ್ಕೆ ಹಾನಿಕರ ಎಂದರೂ ಅದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಈಗಂತೂ ಚೈನೀಸ್‌ ಮೋಮೊಸ್‌ ಸೇರಿದಂತೆ, ಹಲವು ಕೆಚಪ್‌, ಸಾಸ್‌ ಇನ್ನಿತರ ಪದಾರ್ಥಗಳಲ್ಲಿ ಅನಾರೋಗ್ಯಕರ ರಾಸಾಯನಿಕಗಳಿರುತ್ತವೆ ಎನ್ನಲಾಗುತ್ತದೆ. ಆದರೂ ಅವುಗಳ ಜನಪ್ರಿಯತೆಗೆ ಮಾತ್ರ ಕುಂದಿಲ್ಲ. 

ಇದೀಗ, ಭಾರತದ ಬೀದಿಬದಿ ಫಾಸ್ಟ್‌ ಫುಡ್‌ ಗಳ (Fast Food) ಶುಚಿತ್ವವನ್ನು (Hygiene) ವಿಡಂಬಿಸುವ (Mock) ವೀಡಿಯೋವೊಂದು (Video) ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕೀನ್ಯಾ ಹಾಗೂ ಆಫ್ರಿಕಾದ ಕೆಲ ಮಂದಿ ಸೇರಿ ಮಾಡಿರುವ ಟಿಕ್‌ ಟಾಕ್‌ ವೀಡಿಯೋಗಳು ಭಾರತದ ಫಾಸ್ಟ್‌ ಫುಡ್‌ ಗಳ ಗುಣಮಟ್ಟವನ್ನು ಟೀಕಿಸಿವೆ. ಆದರೆ, ಇದಕ್ಕೆ ಸಾಕಷ್ಟು ಮಸಾಲೆಭರಿತ (Spicy) ಟೀಕೆಗಳೂ ಬಂದಿವೆ. 

'ಅಬ್‌ ಲಂಚ್‌ ತುಮ್‌ ಆಮೇಲ್‌ ಆನಾ..' ಬ್ಯಾಂಕ್‌ನಲ್ಲಿ ಹೀಗ್‌ ಮಾತಾಡಿ ಕೆಲ್ಸ ಪಡ್ಕೊಂಡ ನಂದಿನಿ!

ಟೀಕಿಸುವ ವೀಡಿಯೋ
ನೀರಿನಲ್ಲಿ ಕೆಲವು ಸೊಪ್ಪು, ಕೆಲ ತರಕಾರಿ ಚೂರುಗಳು ಸೇರಿದಂತೆ ಏನೇನೋ ಅಂಶಗಳನ್ನು ಮಿಕ್ಸ್‌ ಮಾಡಿಕೊಂಡು, ಅದರಲ್ಲಿ ಕಾಲು ನೀಡಿಕೊಂಡು ಕುಳಿತಿರುವ ವ್ಯಕ್ತಿಯೊಬ್ಬ (Man) ಅದೇ ನೀರನ್ನು ಬಳಸಿ ಆಹಾರ ಸಿದ್ಧಪಡಿಸುತ್ತಾನೆ. ಜತೆಗೆ, ತನ್ನ ಕಂಕುಳಿಗೂ ಸೋಕಿಸಿ ನೀಡುತ್ತಾನೆ. ಮತ್ತೊಂದು ವೀಡಿಯೋದಲ್ಲಿ ಮುಖ ತೊಳೆದ ನೀರಿನಿಂದ ಆಹಾರ ಸಿದ್ಧಪಡಿಸುವುದು ಕಂಡುಬರುತ್ತದೆ. ಅದನ್ನು ಯಾರೂ ಸ್ವೀಕಾರ ಮಾಡುವುದಿಲ್ಲ. ಈ ವೀಡಿಯೋಗಳಿಗೆ ನೆಟ್ಟಿಗರು ಭಾರೀ ಖಾರವಾದ ಕಾಮೆಂಟ್‌ ಮಾಡಿದ್ದಾರೆ. 


ಆಹಾರದ ಕೊರತೆ (Shortage) ಎದುರಿಸುತ್ತಿರುವ ಆಫ್ರಿಕಾ (Africa) ಜನರು ಇಂತಹ ವೀಡಿಯೋ ಮಾಡುವುದು ಸಹಜ ಎಂದು ಹಲವರು ಟೀಕಿಸಿದ್ದಾರೆ. ಭಾರತವನ್ನು ಹಿಂದಿಕ್ಕಲು ಸಾಧ್ಯವಾಗದಿದ್ದರಿಂದ ಹೀಗೆ ಟೀಕೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಟಿಕ್‌ ಟಾಕ್‌ (TikTok) ವೀಡಿಯೋವನ್ನು ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿರುವವರು “ಇದು ಯಾರೋ ಒಬ್ಬರು ಮಾಡಿರುವ ಹಾಸ್ಯಭರಿತ ಸ್ಕಿಟ್‌ (Skit) ಅಲ್ಲ, ಅನೇಕರು ಇದನ್ನು ಮಾಡುತ್ತಿದ್ದಾರೆ. ಇದು ವಿಡಂಬನೆಯ ಪ್ರಕಾರವಾಗಿದೆʼ ಎಂದು ಹೇಳಿದ್ದಾರೆ. 

ತೀಕ್ಷ್ಣ ಕಾಮೆಂಟ್‌ (Comments)
“ಈ ವೀಡಿಯೋಕ್ಕಾಗಿ ಬಳಸುವ ಆಹಾರ ಪದಾರ್ಥಗಳು ನಿಮಗೆ ವಾರಕ್ಕೆ ಸಾಕಾಗುತ್ತಿದ್ದವು, ಈಗ ಇಡೀ ಗ್ರಾಮದ ಜನರು ಆಹಾರದ ಕೊರತೆ ಎದುರಿಸಬೇಕುʼ ಎಂದು ಒಬ್ಬರು ಹೇಳಿದ್ದರೆ, ಮತ್ತೊಬ್ಬರು, “ಇಷ್ಟೆಲ್ಲ ಆಹಾರ ಪದಾರ್ಥ ನಿಮಗೆಲ್ಲಿ ದೊರೆಯಿತು?ʼ ಎಂದು ಹಾಸ್ಯ ಮಾಡಿದ್ದಾರೆ.

Kolkata Cartoonist Coffee: ಇಂಟರ್ನೆಟ್ ಸೆನ್ಸೇಷನ್ ಆಗಿರೋ ಈ ಕಾಫಿ ಶಾಪ್ ವಿಶೇಷ ಏನು ಗೊತ್ತಾ?

ಒಬ್ಬರು, “ಇದೇ ಆಹಾರವನ್ನು ನೀವೀಗ ತಿನ್ನಬೇಕು, ಇದು ನಿಮ್ಮ ತಿಂಗಳ ರೇಷನ್‌ʼ ಎಂದು ಹೇಳಿದ್ದಾರೆ. ಆದರೆ, ಕೆಲವರು, ಪರಸ್ಪರ ದೋಷಾರೋಪಣೆ ಮಾಡಿಕೊಂಡರೆ ಪ್ರಯೋಜನವಿಲ್ಲ. ಸ್ಟ್ರೀಟ್‌ ಫುಡ್‌ ಗುಣಮಟ್ಟ (Quality) ಹೆಚ್ಚಿಸಬೇಕು ಎಂದು ಸಲಹೆ ನೀಡಿದ್ದಾರೆ. “ಇದು ಅರಿವನ್ನು ಹೆಚ್ಚಿಸಿಕೊಳ್ಳುವ ಸಮಯ. ಇದನ್ನು ಎಂದಿಗೂ ತಿನ್ನದವರು (Eat) ಸಹ ಟೀಕಿಸಲು ಶುರು ಮಾಡಿದ್ದಾರೆʼ ಎಂದು ಹೇಳಿದ್ದಾರೆ.  

Latest Videos
Follow Us:
Download App:
  • android
  • ios