Narendra Modi: ಇಂದು ಹೊಸಪೇಟೆ ರೈಲು ನಿಲ್ದಾಣ ಮೋದಿಯಿಂದ ರಾಷ್ಟ್ರಕ್ಕೆ ಸಮರ್ಪಣೆ

ಹಂಪಿ ಸ್ಮಾರಕಗಳ ಮಾದರಿಯಲ್ಲಿ ನವೀಕೃತಗೊಂಡ ಹೊಸಪೇಟೆ ರೈಲು ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಮಾ. 12ರಂದು ರಾಷ್ಟ್ರಕ್ಕೆ ಸಮರ್ಪಣೆ ಮಾಡಲಿದ್ದಾರೆ.

Hospet new railway station inauguration by pm narendra modi todaybellary rav

ಕೃಷ್ಣ ಎನ್‌. ಲಮಾಣಿ

 ಹೊಸಪೇಟೆ (ಮಾ.12) : ಹಂಪಿ ಸ್ಮಾರಕಗಳ ಮಾದರಿಯಲ್ಲಿ ನವೀಕೃತಗೊಂಡ ಹೊಸಪೇಟೆ ರೈಲು ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಮಾ. 12ರಂದು ರಾಷ್ಟ್ರಕ್ಕೆ ಸಮರ್ಪಣೆ ಮಾಡಲಿದ್ದಾರೆ. ಪ್ರವಾಸಿಗರನ್ನು ಆಕರ್ಷಿಸಲು ಈ ನಿಲ್ದಾಣ ನವೀಕರಣ ಮಾಡಲಾಗಿದ್ದು, ಧಾರವಾಡದಿಂದಲೇ ಮೋದಿ ಅವರು ವರ್ಚುವಲ್‌ ಮೂಲಕ ನಿಲ್ದಾಣ ಸಮರ್ಪಿಸಲಿದ್ದಾರೆ.

ಹಂಪಿ ಸ್ಮಾರಕಗಳ ಮಾದರಿ(Model of Hampi monuments)ಯಲ್ಲಿ ಈ ನಿಲ್ದಾಣವನ್ನು .13.5 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ. ದೇಶ-ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವಂತಿದೆ. ಕೇಂದ್ರ ರೈಲ್ವೆ ಸಚಿವಾಲಯ ಮತ್ತು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ(Union Ministry of Railways and Union Ministry of Tourism)ದ ಸಹಭಾಗಿತ್ವದಲ್ಲಿ ಮೇಲ್ದರ್ಜೆಗೇರಿಸಿರುವ ಈ ರೈಲು ನಿಲ್ದಾಣ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಮಾ. 12ರಂದು ಧಾರವಾಡಕ್ಕೆ ಆಗಮಿಸಲಿರುವ ಪ್ರಧಾನಿ ಅವರು ವರ್ಚುವಲ್‌ ಮೂಲಕ ಹೊಸಪೇಟೆ ರೈಲು ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

ರಾಜ್ಯಕ್ಕೆ ಇಂದು ಪ್ರಧಾನಿ ಆಗಮನ; ಧಾರವಾಡದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ

ಹಂಪಿ ಸ್ಮಾರಕ ಮಾದರಿ ನಿಲ್ದಾಣ:

ವಿಶ್ವ ಪರಂಪರೆ ತಾಣ ಹಂಪಿಯ ಸ್ಮಾರಕಗಳ ಮಾದರಿಯಲ್ಲಿ ಈ ನಿಲ್ದಾಣ ನವೀಕರಣ ಮಾಡಲಾಗಿದೆ. ಹೊಸ ಮೆರಗನ್ನು ಪಡೆದಿರುವ ನಿಲ್ದಾಣದಲ್ಲಿ ಕಲ್ಲಿನ ತೇರಿನ ಶೈಲಿಯಲ್ಲಿ ಆಕರ್ಷಣೆ ಮಾಡಲಾಗಿದೆ. ಜತೆಗೆ ವಿಜಯನಗರ ಸಾಮ್ರಾಜ್ಯದ ನಾಣ್ಯಗಳನ್ನು ಕೂಡ ಸೃಜಿಸಲಾಗಿದೆ. ಅಲ್ಲದೇ ಹಂಪಿಯ ವಿವಿಧ ಸ್ಮಾರಕಗಳನ್ನು ಕೂಡ ನಿಲ್ದಾಣದಲ್ಲಿ ಸೃಜಿಸಲಾಗಿದ್ದು, ದೇಶ-ವಿದೇಶಿ ಪ್ರವಾಸಿಗರು ಹಾಗೂ ಪ್ರಯಾಣಿಕರನ್ನು ಆಕರ್ಷಿಸುತ್ತಿದೆ.

ವಿಜಯನಗರ ಸಾಮ್ರಾಜ್ಯದ ಕಲೆ, ವಾಸ್ತುಶಿಲ್ಪ ಎಲ್ಲರನ್ನು ಸೆಳೆಯುವ ಮಾದರಿಯಲ್ಲಿ ಕೇಂದ್ರ ರೈಲ್ವೆ ಸಚಿವಾಲಯ ಮತ್ತು ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ .13.5 ಕೋಟಿ ವೆಚ್ಚದಲ್ಲಿ ವಿಶ್ವ ವಿಖ್ಯಾತ ಹಂಪಿ ಮಾದರಿಯಲ್ಲಿ ರೈಲು ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರವನ್ನು ಸ್ಮಾರಕಗಳ ಶೈಲಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಹಂಪಿಯ ವಾಸ್ತುಶಿಲ್ಪದ ಮಾದರಿ ವಿನ್ಯಾಸದಲ್ಲಿ ರೈಲು ನಿಲ್ದಾಣದಲ್ಲಿ ಹಂಪಿಯಲ್ಲಿರುವ ಪ್ರಮುಖ ದೇಗುಲ, ಸ್ಮಾರಕವನ್ನು ಹೋಲುವ ಕಟ್ಟಡಗಳನ್ನು ನಿರ್ಮಿಸಲಾಗಿದೆ. ದೇಶ, ವಿದೇಶಗಳಿಂದ ಹೊಸಪೇಟೆಗೆ ಬರುವ ಪ್ರವಾಸಿಗರು ರೈಲು ನಿಲ್ದಾಣದಲ್ಲಿ ಸ್ಮಾರಕಗಳ ಮಾದರಿಯಲ್ಲಿರುವ ಮುಖ್ಯ ಪ್ರವೇಶದ್ವಾರ ಸ್ವಾಗತಿಸುತ್ತದೆ. ಹಂಪಿಯಲ್ಲಿರುವ ಪ್ರಮುಖ ದೇವಾಲಯಗಳಲ್ಲಿ ಒಂದಾಗಿರುವ ವಿಜಯವಿಠ್ಠಲ ದೇವಾಲಯದಲ್ಲಿರುವ ಕಲ್ಲಿನತೇರನ್ನು ಹೋಲುವ ವಿನ್ಯಾಸದಲ್ಲಿ ಹೊಸಪೇಟೆ ರೈಲು ನಿಲ್ದಾಣದ ಮುಖ್ಯದ್ವಾರವನ್ನು ನಿರ್ಮಾಣ ಮಾಡಲಾಗಿದೆ.

ಯಾವ್ಯಾವ ಸ್ಮಾರಕಗಳ ಮಾದರಿ?:

ರೈಲು ನಿಲ್ದಾಣದ ಪ್ರವೇಶದ್ವಾರದ ಎರಡೂ ಬದಿಗಳಲ್ಲಿರುವ ಕಟ್ಟಡಗಳನ್ನು ಹಂಪಿ ವಿರೂಪಾಕ್ಷೇಶ್ವರ ದೇಗುಲವನ್ನು ಹೋಲುವಂತೆ ಅಭಿವೃದ್ಧಿಪಡಿಸಲಾಗಿದೆ. ರೈಲು ನಿಲ್ದಾಣದ ಎಡ ಮತ್ತು ಬಲ ಬದಿಯಲ್ಲಿರುವ ಮುಂಗಡ ಟಿಕೆಟ್‌ ಕಾಯ್ದಿರಿಸುವ ಹಾಗೂ ಕಚೇರಿಗಳಿಗೆ ತೆರಳುವ ಕಟ್ಟಡಗಳನ್ನು ವಿರೂಪಾಕ್ಷೇಶ್ವರ ದೇಗುಲ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ವಿರೂಪಾಕ್ಷ ದೇಗುಲದಂತಿರುವ ಎರಡೂ ಬದಿಯ ಕಟ್ಟಡಗಳನ್ನು ಹಂಪಿಯ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದರ ಜತೆಗೆ ರೈಲು ನಿಲ್ದಾಣದಲ್ಲಿ 14 ವಿಶ್ರಾಂತಿ ಕೊಠಡಿಗಳನ್ನು ಮತ್ತು ಪ್ರಯಾಣಿಕರಿಗಾಗಿ ಒಂದು ನಿರೀಕ್ಷಣಾಲಯ ಹಾಗೂ ಒಂದು ಗಣ್ಯರ ನಿರೀಕ್ಷಣಾ ಕೊಠಡಿ, ಪ್ರವಾಸಿ ಮಾಹಿತಿ ಕೇಂದ್ರ ಹಾಗೂ ಕ್ಯಾಂಟೀನ್‌ ಕೂಡ ನಿರ್ಮಿಸಲಾಗಿದೆ.

ಹುಬ್ಬಳ್ಳಿ: ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌ ಇಂದು ಉದ್ಘಾಟನೆ

ಧಾರವಾಡಕ್ಕೆ ಆಗಮಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೊಸಪೇಟೆ ರೈಲು ನಿಲ್ದಾಣವನ್ನು ವರ್ಚುವಲ್‌ ಮೂಲಕ ರಾಷ್ಟ್ರಕ್ಕೆ ಸಮರ್ಪಣೆ ಮಾಡಲಿದ್ದಾರೆ. .13.5 ಕೋಟಿ ವೆಚ್ಚದಲ್ಲಿ ರೈಲು ನಿಲ್ದಾಣವನ್ನು ಪ್ರವಾಸಿಗರನ್ನು ಆಕರ್ಷಿಸಲು ನವೀಕರಣ ಮಾಡಲಾಗಿದೆ.

ಬಾಬುಲಾಲ್‌ ಜೈನ್‌ ನೈಋುತ್ಯ ರೈಲ್ವೆ ವಲಯ ಬಳಕೆದಾರರ ಸಲಹಾ ಸಮಿತಿ ಸದಸ್ಯರು, ಹೊಸಪೇಟೆ

Latest Videos
Follow Us:
Download App:
  • android
  • ios