ಚಿಕ್ಕಮಗಳೂರು ನಗರಸಭೆ ಉಪಾಧ್ಯಕ್ಷೆ ಉಮಾದೇವಿ ರಾಜೀನಾಮೆ; ಬಿಜೆಪಿಗೆ ಅಧಿಕಾರ ಕೈ ತಪ್ಪುವ ಆತಂಕ!
ನಗರಸಭೆ ಉಪಾಧ್ಯಕ್ಷೆ ಉಮಾದೇವಿ ಅವರು ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಉಮಾದೇವಿ ಅವರು 18 ತಿಂಗಳ ಕಾಲ ಉಪಾಧ್ಯಕ್ಷರಾಗಿದ್ದು, ಬಿಜೆಪಿ ಪಕ್ಷದಲ್ಲಿನ ಆಂತರಿಕ ಒಡಂಬಡಿಕೆಯಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಚಿಕ್ಕಮಗಳೂರು (ಜು.21) : ನಗರಸಭೆ ಉಪಾಧ್ಯಕ್ಷೆ ಉಮಾದೇವಿ ಅವರು ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಉಮಾದೇವಿ ಅವರು 18 ತಿಂಗಳ ಕಾಲ ಉಪಾಧ್ಯಕ್ಷರಾಗಿದ್ದು, ಬಿಜೆಪಿ ಪಕ್ಷದಲ್ಲಿನ ಆಂತರಿಕ ಒಡಂಬಡಿಕೆಯಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಚಿಕ್ಕಮಗಳೂರು ನಗರಸಭೆ ಮೊದಲ ಅವಧಿಯ ಉಪಾಧ್ಯಕ್ಷ ಸ್ಥಾನ ಬಿಸಿಎಂ (ಬಿ)ಗೆ ಮೀಸಲಾಗಿದ್ದು, ಬಿಜೆಪಿಯಲ್ಲಿ ಉಮಾದೇವಿ, ಭವ್ಯಾ ಮಂಜುನಾಥ್ ಹಾಗೂ ಅಮೃತೇಶ್ ಅವರು ಈ ಮೀಸಲಾತಿಗೆ ಬರುವುದರಿಂದ ಮೊದಲ ಅವಧಿಗೆ ಉಮಾದೇವಿ ಅವರಿಗೆ ಅವಕಾಶ ನೀಡಲಾಗಿತ್ತು. ಅವರು ಈಗಾಗಲೇ 18 ತಿಂಗಳು ನಗರಸಭೆ ಉಪಾಧ್ಯಕ್ಷರಾಗಿದ್ದು, ಇದೀಗ ರಾಜೀನಾಮೆ ನೀಡಿದ್ದಾರೆ. ಈಗ ಇನ್ನುಳಿದ ಅವಧಿ 12 ತಿಂಗಳು ಮಾತ್ರ. ಬಿಜೆಪಿಯಲ್ಲಿ ಉಪಾಧ್ಯಕ್ಷರ ಆಕಾಂಕ್ಷಿ ಸಾಲಿನಲ್ಲಿ ಭವ್ಯ ಮಂಜುನಾಥ್ ಹಾಗೂ ಅಮೃತೇಶ್ ಇರುವುದರಿಂದ ಯಾ ರಿಗೆ ಉಳಿದ ಅವಧಿಯಲ್ಲಿ ಉಪಾಧ್ಯಕ್ಷರಾಗಲು ಅವಕಾಶ ಸಿಗುತ್ತದೆ ಎಂಬ ಕುತೂಹಲ ಜನರ ಮುಂದೆ ಇದೆ. ಆದರೆ, ನಿರ್ಧಾರ ಬಿಜೆಪಿ ನಗರ ಕೋರ್ ಕಮಿಟಿಯಲ್ಲಿ ಆಗಲಿದೆ.
ಚಿಕ್ಕಮಗಳೂರು: ಉದ್ಘಾಟನೆಗೂ ಮುನ್ನ ಸೇತುವೆ ತಡೆಗೋಡೆ, ರಸ್ತೆ ಬಿರುಕು, ಸ್ಥಳೀಯರ ಆಕ್ರೋಶ
ಅಂಗೀಕಾರ ಆಗುತ್ತಾ ?
ಉಪಾಧ್ಯಕ್ಷೆ ಉಮಾದೇವಿ ಅವರು ತಮ್ಮ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಂಗೀಕಾರ ಆಗುತ್ತಾ ? ಈ ಪ್ರಶ್ನೆ ಚಿಕ್ಕಮಗಳೂರು ಜನರಿಗೆ ಮೂಡಿದೆ. ಕಾರಣ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರು ಇತ್ತೀಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕೊನೆ ದಿನದಂದು ಮತ್ತೆ ವಾಪಸ್ ಪಡೆದುಕೊಂಡಿದ್ದರು. ಉಪಾಧ್ಯಕ್ಷರ ಮಾರ್ಗವೂ ಕೂಡ ಇದೇ ಆಗುತ್ತಾ ಎಂಬ ಸಂಶಯ ಇದೆ.
ಕಮಲದಲ್ಲಿ ಆಂತರಿಕ ತಳಮಳ
ಅಧ್ಯಕ್ಷರ ರಾಜೀನಾಮೆ ಅಂಗೀಕಾರ ಅಗಿ, ಚುನಾವಣೆ ನಡೆದಿದ್ದರೆ, ನಗರಸಭೆ ಆಡಳಿತ ಬಿಜೆಪಿ ಕೈಯಿಂದ ತಪ್ಪಿ ಕಾಂಗ್ರೆಸ್ ಪಾಲಾಗಲಿದೆ ಎಂಬ ಸಂಶಯ ಒಂದೆಡೆಯಾದರೆ, ಹಾಗೇನೂ ಆಗುವುದಿಲ್ಲ, ಪಕ್ಷದಲ್ಲಿ ಶಿಸ್ತಿದೆ. ಯಾವ ಸದಸ್ಯರು ಕೂಡ ಚುನಾವಣೆ ಸಂದರ್ಭದಲ್ಲಿ ಕೈ ಕೊಡುವುದಿಲ್ಲ ಎಂಬುದು ಇನ್ನೊಂದು ಗುಂಪಿನ ವಾದ. ಕಮಲದಲ್ಲಿನ ಈ ತಳಮಳ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ತಮ್ಮ ರಾಜೀನಾಮೆಯನ್ನು ವಾಪಸ್ ಪಡೆಯಲು ಕಾರಣವಾಯಿತು.
ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಭಾರೀ ಮಳೆಗೆ ವೃದ್ಧೆ ಬಲಿ
ನಗರಸಭೆ ಅಧ್ಯಕ್ಷರಾಗಿ ವರಸಿದ್ದಿ ವೇಣುಗೋಪಾಲ್ ಅವರು ಮುಂದುವರಿದಿರುವುದಕ್ಕೆ ಬಿಜೆಪಿ ನಗರಸಭೆ ಕೆಲವು ಸದಸ್ಯರು ಮಾತ್ರವಲ್ಲ, ಪಕ್ಷದ ಮುಖಂಡರಲ್ಲೂ ಅಸಮಾಧಾನ ಇದೆ. ಆದರೆ, ಸದ್ಯದ ಪರಿಸ್ಥಿತಿ ಬಿಜೆಪಿಗೆ ಪೂರಕವಾಗಿಲ್ಲ. ಹಾಗಾಗಿ ಅವರೇ ಅಧ್ಯಕ್ಷರಾಗಿ ಕೆಲವು ದಿನ ಮುಂದುವರೆಯಲಿ ಎಂಬ ಪಕ್ಷದ ನಿರ್ಧಾರದಿಂದಾಗಿ ಅವರು ರಾಜೀನಾಮೆ ಪತ್ರವನ್ನು ಹಿಂದಕ್ಕೆ ಪಡೆದುಕೊಂಡು ಅಧಿಕಾರದಲ್ಲಿ ಮುಂದುವರಿದಿದ್ದಾರೆ. ಇದೀಗ ಉಪಾಧ್ಯಕ್ಷರ ರಾಜೀನಾಮೆ ನಂತರದಲ್ಲೂ ಇದೇ ಪರಿಸ್ಥಿತಿ ಉದ್ಭವ ಆಗುತ್ತಾ ಕಾದು ನೋಡಬೇಕಾಗಿದೆ. ಅಧ್ಯಕ್ಷರ ಮುಂದುವರಿಕೆಗೆ ಯಾವ ಕಾರಣಗಳು ಮುಂದಾಗಿದ್ದವೋ, ಉಪಾಧ್ಯಕ್ಷರ ಮುಂದುವರಿಕೆಗೂ ಅದೇ ಕಾರಣಗಳು ಮುಂದಾಗುತ್ತಾ, ಈ ಕುತೂಹಲ ಜನರ ಮುಂದಿದೆ.