ಬಿಜೆಪಿ ಬಾಂಬ್‌ಗೆ ಒಡೆಯದ ಕನಕಪುರ ಬಂಡೆ : ನಾಮಪತ್ರ ಊರ್ಜಿತದಿಂದ ಡಿಕೆಶಿ ಫುಲ್‌ ಖುಷ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕನಕಪುರ ವಿಧಾನಸಭಾ ಕ್ಷೇತ್ರ ದಿಂದ ಸ್ಪರ್ಧೆಗೆ ಸಲ್ಲಿಕೆ ಮಾಡಿದ್ದ ನಾಮಪತ್ರವನ್ನು ಚುನಾವಣಾಧಿಕಾರಿ ಸಂತೋಷ್‌ ಅಂಗೀಕರಿಸಿದ್ದಾರೆ.

Big relief for DK Shivakumar Nomination accepted from Kanakapur constituency sat

ರಾಮನಗರ (ಏ.21): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಕನಕಪುರದಲ್ಲಿ ಸಲ್ಲಿಕೆ ಮಾಡಿದ್ದ ನಾಮಪತ್ರ ತಿರಸ್ಕೃತ ಆಗುವ ಾತಂಕವಿತ್ತು. ಆದರೆ, ಇಮದು ದಾಖಲೆಗಳನ್ನು ಪರಿಶೀಲನೆ ಮಾಡಿದ ಚುನಾವಣಾಧಿಕಾರಿ ಸಂತೋಷ್‌  ಡಿ.ಕೆ. ಶಿವಕುಮಾರ್‌ ನಾಮಪತ್ರವನ್ನು ಅಂಗೀಕರಿಸಿದ್ದಾರೆ.

ಕನಕಪುರದಲ್ಲಿ ಕಳೆದ ಎರಡು ದಿನಗಳ ಹಿಂದೆ ಡಿ.ಕೆ. ಶವಕುಮಾರ್‌ ಅವರು ಭರ್ಜರಿ ರ್ಯಾಲಿಯೊಂದಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಿ ಬಂದಿದ್ದರು. ಆದರೆ, ಇದಾದ ಬೆನ್ನಲ್ಲೇ ಅವರು ಆಸ್ತಿ ವಿವರ ಸಲ್ಲಿಕೆಯ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ ಎಂದು ಬಿಜೆಪಿ ಕಾನೂನು ವಿಭಾಗದ ಸದಸ್ಯರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ಮುಂದಾಗಿದ್ದರು. ಇದಾದ ನಂತರ ಯಾವುದೇ ದಾಖಲೆಗಳಲ್ಲಿ ವ್ಯತ್ಯಾಸ ಆಗದಂತೆ ಮುತುವರ್ಜಿವಹಿಕೊಂಡು ಒಟ್ಟು 4 ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದರು. ಜೊತೆಗೆ, ಅವರ ಸಹೋದರನಿಂದ ನಾಮಪತ್ರ ಸಲ್ಲಿಕೆ ಮಾಡಿಸಿದ್ದರು. ಆದರೆ, ಇಂದು ಅವರ ನಾಮಪತ್ರವನ್ನು ರಾಮನಗರ ಜಿಲ್ಲೆಯ ಕನಕಪುರ ಚುನಾವಣಾಧಿಕಾರಿ ದಾಖಲೆಗಳನ್ನು ಪರಿಶೀಲನೆ ಮಾಡಿದ್ದು, ಅವರ ಎಲ್ಲ ದಾಖಲೆಗಳು ಸರಿಯಾಗಿದ್ದು, ನಾಮಪತ್ರ ಊರ್ಜಿತವಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

ಡಿಕೆಶಿಗೆ ಜೈಲು ಶಿಕ್ಷೆಯ ಭಯ: ಕನಕಪುರದಲ್ಲಿ ನಾಮಪತ್ರ ಸಲ್ಲಿಸಿದ ಡಿ.ಕೆ. ಸುರೇಶ್

ಇನ್ನೂ ತೂಗುತ್ತಿದೆ ಆಕ್ರಮ ಆಸ್ತಿ ಗಳಿಕೆಯ ಉರುಳು: ಸಿಬಿಐ ಕೇಸ್‌ನಿಂದಲೂ ನಾಮಪತ್ರದ ಅನೂರ್ಜಿತ ಆತಂಕವಿತ್ತು. ಇನ್ನು ಡಿಕೆ. ಶಿವಕುಮಾರ್‌ ಅವರ ವಿರುದ್ಧ ಹಲವು ವರ್ಷಗಳಿಂದ ನಡೆಯುತ್ತಿರುವ ಅಕ್ರಮ ಆಸ್ತಿ ಗಳಿಕೆಯ ಪ್ರಕರಣದ ತನಿಖೆಯನ್ನು ಸ್ಥಗಿತಗೊಳಿಸುವಂತೆ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಹೈಕೋರ್ಟ್‌ ಅನೂರ್ಜಿತಗೊಳಿಸಿತ್ತು. ಇದರಿಂದ ಚುನಾವಣೆ ಎದುರಿಸಲು ಭಾರಿ ಆನುಕೂಲ ಆಗಿತ್ತು. ಆದರೆ, ಸಿಬಿಐ ಅಧಿಕಾರಿಗಳು ಸುಪ್ರೀಂ ಕೋರ್ಟ್‌ ಮೊರೆ ಹೋದಲ್ಲಿ ತನಿಖೆ ಮುಂದುವರೆಸಿ ವಿಚಾರಣೆ ಹಾಗೂ ಜೈಲಿಗೆ ಕಳುಹಿಸುವ ಮೂಲಕ ಅವರ ಚುನಾವಣಾ ಪ್ರಚಾರ ಕಾರ್ಯಗಳಿಗೆ ಅಡ್ಡಿಯನ್ನುಂಟು ಮಾಡುವ ಸಾಧ್ಯತೆಯೂ ಇದೆ. ಒಟ್ಟಾರೆ, ಸದ್ಯದ ಕ್ಷಣದಲ್ಲಿ ಡಿಕೆಶಿ ನಿಟ್ಟುಸಿರು ಬಿಟ್ಟಿದ್ದು, ಮುಂದಿನ ದಿನಗಳಲ್ಲಿ ಏನಾಗುತ್ತದೆ ಕಾದು ನೋಡಬೇಕಿದೆ.

ಬಿಜೆಪಿ  ನಾಯಕರ ವಿರುದ್ಧ ಡಿಕೆಶಿ ಆಕ್ರೋಶ ವ್ಯಕ್ತ: ಈ ಕುರಿತು ಒಂದು ಗಂಟೆಯ ಮೊದಲು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಡಿ.ಕೆ. ಶಿವಕುಮಾರ್ ಅವರು, ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ನಾಮಪತ್ರವನ್ನು ಬಿಜೆಪಿಯವರು ಕುತಂತ್ರವನ್ನು ಮಾಡಿ ಅನೂರ್ಜಿತ ಮಾಡುವ ಸಾಧ್ಯತೆಯಿದೆ. ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದು, ಅಧಿಕಾರಿಗಳು ನನ್ನ  ನಾಮಪತ್ರದಲ್ಲಿ ನೋ- ನಾಟ್, ಅಗ್ರಿ -ಡಿಸ್‌ ಅಗ್ರಿ, ಅಕ್ಸೆಪ್ಟ್ - ನಾಟ್‌ ಅಕ್ಸೆಪ್ಟ್‌ (No - Not, Agree - Disagree, Accept - Not Accept) ಎಂಬುದಾಗಿ ಬರೆಯಬಹುದು ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದರು. ಆದರೆ, ಈಗ ನಾಮಪತ್ರ ಅಂಗೀಕಾರ ಆಗಿದ್ದರಿಂದ ಸಂತಸದಿಂದಲೇ ಚುನಾವಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಡಿಕೆಶಿ ವಿರುದ್ಧದ ಐಟಿ, ಇಡಿ ತನಿಖೆ ಬಗ್ಗೆ ಆತಂಕ: ಡಿಕೆಶಿ ನಾಮಪತ್ರ ಓಕೆ ಆದರೆ ಡಿಕೆಸು ವಾಪಸ್‌?

ನಾಮಪತ್ರ ತಿರಸ್ಕಾರ ಆಗುವ ಷಡ್ಯಂತ್ರ ಇತ್ತು:  ಕಳೆದ ಬಾರಿಯೂ ನನ್ನ ನಾಮಪತ್ರ ತಿರಸ್ಕಾರ ಮಾಡಲು ಷಡ್ಯಂತ್ರ ನಡೆದಿತ್ತು. ಬಿಜೆಪಿ ಸೆಲ್ ಏನೇನು ಮಾಡ್ತಿದೆ ಅಂತ ಮಾಧ್ಯಮ ವರದಿ ಆಗಿದೆ. ಕಳೆದ 15 ವರ್ಷದಿಂದ ನಾನು‌ ಮನೆ ಬಿಟ್ಟು ಬೇರೆ ಎನೂ ಖರೀದಿ ಮಾಡಿಲ್ಲ. ನಾಮಪತ್ರ ತಿರಸ್ಕಾರ ಆಗುವ ಷಡ್ಯಂತ್ರ ಇತ್ತು. ಅಧಿಕಾರ ದುರುಪಯೋಗ ಆಗುತ್ತಿದೆ. ರಾಜಕಾರಣದಲ್ಲಿ ಎನೇ ಬೇಕಾದರೂ ಆಗಬಹುದು. ಒಂದೇ ದಿನದಲ್ಲಿ ಮನೆಯಿಂದ ಹೊರಗೆ ಹಾಕಿದರೆ ಏನು ಮಾಡೋದು? ಅಧಿಕಾರ ದುರುಪಯೋಗ ಆಗುವ ಸಾಧ್ಯತೆ ಇದೆ. ಅದಕ್ಕೆ ನಾವು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದರು.

Latest Videos
Follow Us:
Download App:
  • android
  • ios