ಒಲಂಪಿಕ್ಸ್‌ನಲ್ಲಿ ಪುರುಷ ಈಜುಗಾರರು ಅತ್ಯಂತ ಚಿಕ್ಕ ಚಡ್ಡಿ ಧರಿಸೋದು ಯಾಕೆ ಎಂಬ ಪ್ರಶ್ನೆಯೊಂದು ಮುನ್ನಲೆಗೆ ಬಂದಿದೆ. ಚಿಕ್ಕ ಚಡ್ಡಿ ಬದಲು ಬೇರೆ ಉಡುಪು ಧರಿಸಬಹುದು ಅಲ್ಲವೇ?

ಪ್ಯಾರಿಸ್: ಈ ಬಾರಿಯ ಒಲಿಂಪಿಕ್ಸ್ ಅಂತ್ಯವಾಗುತ್ತಿದ್ದು, ಹಲವು ವಿಷಯಗಳಿಂದ ಇಡೀ ಜಗತ್ತಿನ ಗಮನ ಸೆಳೆದಿದೆ. ಕಾಂಡೋಮ್ ಹಂಚಿಕೆಯಿಂದ ಹಿಡಿದು ಹಲವು ವಿಚಿತ್ರ ಸನ್ನಿವೇಶಗಳಿಗೆ ಪ್ಯಾರಿಸ್ ಒಲಂಪಿಕ್ಸ್ ಸಾಕ್ಷಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿಯೂ ಒಲಂಪಿಕ್ಸ್ ಆಟಗಳ ವಿಡಿಯೋಗಳು ವೈರಲ್ ಆಗುತ್ತಿವೆ. ಅದರಲ್ಲಿಯೂ ಈಜುಪಟುಗಳ ಫೋಟೋ ಮತ್ತು ವಿಡಿಯೋಗಳು ಚರ್ಚೆಗೆ ಗ್ರಾಸವಾಗಿವೆ. ಪುರುಷ ಈಜುಪಟುಗಳು ಯಾಕಿಷ್ಟು ಚಿಕ್ಕ ಚಿಕ್ಕ ಚಡ್ಡಿಗಳನ್ನು ಧರಿಸುತ್ತಾರೆ ಎಂಬ ಪ್ರಶ್ನೆಯೊಂದು ಮೂಡಿದೆ. ಈ ಪ್ರಶ್ನೆಗೆ ಮಾಜಿ ಅಥ್ಲೀಟ್‌ ಉತ್ತರ ನೀಡಿದ್ದಾರೆ. ಈ ಕುರಿತು ಟಾಮ್‌ ದಾಲೈ ಪ್ರತಿಕ್ರಿಯಿಸಿದ್ದು, ಎಲ್ಲದರ ಹಿಂದೆಯೂ ಪ್ರಾಯೋಗಿಕ ಕಾರಣಗಳಿರುತ್ತವೆ. ದೇಹವವನ್ನು ಪ್ರದರ್ಶನ ಮಾಡೋದಕ್ಕೆ ಮಾತ್ರವಲ್ಲ ಎಂದು ಹೇಳಿದ್ದಾರೆ. 

2016ರಲ್ಲಿ ನೀಡಿದ ಸಂದರ್ಶನಲ್ಲಿ ಟಾಮ್ ದಾಲೈ ಕಿರು ಉಡುಪಿನ ಬಗ್ಗೆ ಮಾತನಾಡಿದ್ದರು. ಸ್ವಿಮ್ಮರ್‌ಗಳು ಅತಿ ಚಿಕ್ಕ ಬಟ್ಟೆಗಳನ್ನೇ ಧರಿಸಬೇಕು. ಎಲ್ಲವೂ ಸೀಮಿತ ಸ್ಥಳದಲ್ಲಿಯೇ ಫಿಟ್ ಆಗಿರಬೇಕು. ಹಾಗಾಗಿ ಮಿನಿ ಟ್ರಂಕ್ ಅಥವಾ ಮಿನಿ ಬ್ರೀಫ್‌ ಧರಿಸಲು ಸಲಹೆ ನೀಡಲಾಗುತ್ತದೆ. ಅವರ ಜ್ಞಾನ ಯಾವುದೇ ಕಡೆಯೂ ಕದಲದಂತೆ ಆಗಲೂ ಈ ರೀತಿಯ ಉಡುಪು ನೀಡಲಾಗುತ್ತದೆ ಎಂದು ಟಾಮ್ ದಲೈ ಉಡುಪಿನ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಒಂದು ವೇಳೆ ಸಡಿಲವಾದ ಇನ್ನರ್ ವಿಯರ್ ಧರಿಸಿದ್ರೆ ಮೇಲಿನಿಂದ ಜಿಗಿದು ದೇಹ ಸ್ಪಿನ್ ಆಗುತ್ತಿರುವಾಗ ಗುಪ್ತಾಂಗ ಹೊರ ಬರುವ ಸಾಧ್ಯತೆಗಳೇ ಹೆಚ್ಚಿರುತ್ತವೆ. ಎತ್ತರದ ಸ್ಥಾನದಿಂದ ನೀರಿಗೆ ಧುಮುಕಿದಾಗ ಸಡಿಲವಾದ ಟ್ರಂಕ್ ಆಗಿದ್ರೆ ಕಳಚುವ ಸಾಧ್ಯತೆಗಳಿರುತ್ತವೆ. ಅದಕ್ಕಾಗಿ ಎಲ್ಲವೂ ಹತೋಟಿಯಲ್ಲಿರುವಂತೆ ಮಾಡಲು ಚಿಕ್ಕ ಮತ್ತು ಬಿಗಿಯಾದ ಚಡ್ಡಿಗಳನ್ನು ಧರಿಸಲಾಗುತ್ತದೆ ಎಂದು ಟಾಮ್ ದಲೈ ವಿವರಿಸಿದ್ದಾರೆ.

ಗುಪ್ತಾಂಗದಿಂದ ಅನರ್ಹಗೊಂಡ ಅಥ್ಲೀಟ್‌ಗೆ ಪೋರ್ನ್ ವೆಬ್‌ಸೈಟ್‌ನಿಂದ ಬಿಗ್ ಆಫರ್!

ಪುರುಷ ಅಥ್ಲೀಟ್‌ಗಳು ಚಿಕ್ಕ ಉಡುಪುಗಳನ್ನು ಆಟಕ್ಕಾಗಿ ಮಾತ್ರ ಧರಿಸುತ್ತಾರೆ. ಆರೋಗ್ಯದ ಬಗ್ಗೆಯೂ ಅಥ್ಲೀಟ್‌ಗಳು ಕಾಳಜಿ ಹೊಂದಿರೋದರಿಂದ ಸಹಜವಾಗಿ ಆಕರ್ಷಕವಾಗಿ ಕಾಣುತ್ತಾರೆ. ಆದ್ರೆ ಇದನ್ನೇ ಬಳಸಿ ಲೈಂಗಿಕ ಆಸೆಗಳನ್ನು ವ್ಯಕ್ತಪಡಿಸೋದು ತಪ್ಪು. ಪುರುಷ ಅಥ್ಲೀಟ್‌ಗಳು ಸಾರ್ವಜನಿಕ ಪ್ರದೇಶದಲ್ಲಿ ಇರೋದರಿಂದ ಅವರು ಸಹ ಉತ್ತೇಜನಕ್ಕೆ ಒಳಗಾಗಲ್ಲ ಎಂದು 42 ವರ್ಷದ ನಟ ಡೌಗ್ಲಾಸ್ ರೊಬ್ಸನ್ ಹೇಳುತ್ತಾರೆ. 

ಸಾರ್ವಜನಿಕ ಪ್ರದೇಶದಲ್ಲಿ ನೀವು ಇಂತಹ ಬಟ್ಟೆ ಧರಿಸಿದ್ರೆ ಎಲ್ಲರ ಕಣ್ಣುಗಳನ್ನು ನಿಮ್ಮನ್ನು ನೋಡುತ್ತಿರುತ್ತವೆ. ನೀವು ಏನು ಧರಿಸಿದ್ದೀರಿ ಎಂಬುದರ ಬಗ್ಗೆಯೂ ಗಮನಿಸಲಾಗುತ್ತದೆ. ಆಕರ್ಷಕ ಮೈಕಟ್ಟು ಹೊಂದಿರುವ ಪುರುಷ ಅಥ್ಲೀಟ್‌ಗಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ ಎಂದು ಡೌಗ್ಲಾಸ್ ರೊಬ್ಸನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿನೇಶ್ ಪೋಗಟ್‌ಗೆ ಒಲಿಂಪಿಕ್ ಬೆಳ್ಳಿ ನಿರೀಕ್ಷೆ, ಇಂದೇ ಕೋರ್ಟ್ ಆರ್ಡರ್!

Scroll to load tweet…