ಹೇಮಾ ಮಾಲಿನಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಕನಿಷ್ಠ ನಿಮ್ಮ ಸಂತೋಷವನ್ನು ಮರೆಮಾಡುವ ಪ್ರಯತ್ನವನ್ನಾದರೂ ಮಾಡಿ ಎಂದು ಸಲಹೆ ನೀಡಿದ್ದಾರೆ.
ನವದೆಹಲಿ: ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಒಲಂಪಿಕ್ಸ್‌ನಲ್ಲಿ ಅನರ್ಹಗೊಂಡಿರೋದಕ್ಕೆ ಇಡೀ ದೇಶವೇ ಆಘಾತದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಸಹ ಕ್ರೀಡಾಪಟುವಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ವಿನೇಶ್ ಫೋಗಟ್ ಅನರ್ಹತೆ ಆಗಿದ್ದೇಕೆ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕೇವಲ 100 ಗ್ರಾಂ ತೂಕ ಹೆಚ್ಚಳಗೊಂಡಿದ್ದರಿಂದ ವಿನೇಶ್ ಫೋಗಟ್ ಅನರ್ಹಗೊಂಡಿದ್ದಾರೆ ಎಂದು ವರದಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ 100gm ಟ್ರೆಂಡ್ ಆಗ್ತಿದೆ. ಇದೀಗ ಬಿಜೆಪಿ ಸಂಸದೆ ಹೇಮಾ ಮಾಲಿನಿ ನೀಡಿರುವ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಹೇಮಾ ಮಾಲಿನಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಕನಿಷ್ಠ ನಿಮ್ಮ ಸಂತೋಷವನ್ನು ಮರೆಮಾಡುವ ಪ್ರಯತ್ನವನ್ನಾದರೂ ಮಾಡಿ ಎಂದು ಸಲಹೆ ನೀಡಿದ್ದಾರೆ.
ವಿನೇಶ್ ಫೋಗಟ್ ಅನರ್ಹತೆ ಬಗ್ಗೆ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಹೇಮಾ ಮಾಲಿನಿ, ಕೇವಲ 100 ಗ್ರಾಂ ತೂಕ ಹೆಚ್ಚಾಗಿದ್ದರಿಂದ ಅನರ್ಹಗೊಂಡಿರುವ ವಿಷಯ ಕೇಳಿ ಶಾಕ್ ಆಯ್ತು. ಕಲಾವಿದರು ಸೇರಿದಂತೆ ಮಹಿಳೆಯರಿಗೆ ತೂಕ ನಿಯಂತ್ರಣದಲ್ಲಿಟ್ಟುಕೊಳ್ಳೋದು ಎಷ್ಟು ಮುಖ್ಯ ಅನ್ನೋದು ಗೊತ್ತಾಗುತ್ತದೆ. 100 ಗ್ರಾಂನಿಂದ ಅನರ್ಹಗೊಂಡಿದ್ದಕ್ಕೆ ನೋವಿದೆ. ವಿನೇಶ್ ಫೋಗಟ್ ಶೀಘ್ರದಲ್ಲಿಯೇ 100 ಗ್ರಾಂ ತೂಕ ಕಳೆದುಕೊಳ್ಳುತ್ತಾನೆ ಎಂದು ಭಾವಿಸುತ್ತಾನೆ. ಆದ್ರೆ ಪದಕ ನಮ್ಮದಾಗಲ್ಲ ಎಂದು ಪರೋಕ್ಷವಾಗಿ ವ್ಯಂಗ್ಯ ಮಾಡಿದ್ದರು.
ಹೇಮಾ ಮಾಲಿನಿಯವರ ಈ ಹೇಳಿಕೆಗೆ ಹಲವು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಹೇಮಾ ಮಾಲಿನಿ ಹೇಳಿಕೆಯ ವಿಡಿಯೋಗೆ ರೀಟ್ವೀಟ್ ಮಾಡಿರುವ ಸಿದ್ಧಾರ್ಥ್ ಎಂಬವರು, ಟೀಕಿಸುವ ಕೆಲಸ ಆರಂಭವಾಗಿದೆ. ಸ್ವಲ್ಪವೂ ನಾಚಿಕೆ ಇಲ್ಲದೇ ವಿನೇಶ್ ಫೋಗಟ್ ಅವರನ್ನು ಹೇಮಾ ಮಾಲಿನಿ ಟೀಕಿಸಿದ್ದಾರೆ. ವಿನೇಶ್ ಫೋಗಟ್‌ಗೆ ಬೆಂಬಲವಾಗಿ ನಿಲ್ಲಬೇಕಾದ ಸಂದರ್ಭದಲ್ಲಿ ಟೀಕೆ ಮಾಡುವ ಕೆಲಸ ಶುರುವಾಗಿರೋದು ಬೇಸರದ ಸಂಗತಿ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ವಿನೇಶ್ ಪೋಗಟ್ ಕನಸು, ಶ್ರಮವನ್ನೇ ನುಂಗಿ ಹಾಕಿತಲ್ಲಾ ನೂರೇ ನೂರು ಗ್ರಾಂ ತೂಕ!
ಇದೇ ರೀತಿ ಹಲವು ಬಳಕೆದಾರರು ಹೇಮಾ ಮಾಲಿನಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೇಮಾ ಮಾಲಿನಿಯವರಿಗೆ ಇದು ಸಿನಿಮಾ ಕಥೆ ಅಲ್ಲ ಎಂದು ಯಾರಾದರೂ ಸ್ವಲ್ಪ ಹೇಳಿಕೊಡಿ. ತಾವು ಏನು ಮಾತನಾಡುತ್ತಿದ್ದೇನೆ ಎಂಬುವುದೇ ಅವರಿಗೆ ಗೊತ್ತಿರಲ್ಲ ಎಂದು ಹೇಳಿದ್ದಾರೆ. ಸಿಮ್ರಾನ್ ಎಂಬವರು, ಕನಿಷ್ಠ ನಿಮ್ಮ ನಗುವನ್ನು ಮರೆಮಾಡಲು ಪ್ರಯತ್ನಿಸಿ. ನಿಮ್ಮ ನಗು ಕಾಣಿಸುತ್ತಿದೆ ಎಂದಿದ್ದಾರೆ. ಭಾರತದ ಪ್ರತಿಭೆ ಅನರ್ಹಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡುವಾಗ ಒಬ್ಬ ಸಂಸದೆ ನಗುತ್ತಾ ಮಾತನಾಡುತ್ತಿರೋದನ್ನು ಕಂಡು ಆಶ್ಚರ್ಯವನ್ನುಂಟು ಮಾಡಿದೆ. ಇವರನ್ನ ದೇಶದಿಂದ ಹೊರಗೆ ಕಳಿಸಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಭಾರತ 2008ರಿಂದಲೂ ಸತತ 5ನೇ ಬಾರಿ ಒಲಿಂಪಿಕ್ಸ್ ಕುಸ್ತಿಯಲ್ಲಿ ಪದಕ ಗೆದ್ದಿದೆ. 2008 ಹಾಗೂ 2012ರಲ್ಲಿ ಸುಶೀಲ್ ಕುಮಾರ್ ಕಂಚು, 2016ರಲ್ಲಿ ಸಾಕ್ಷಿ ಮಲಿಕ್ ಕಂಚು, 2020ರಲ್ಲಿ ರವಿ ಕುಮಾರ್ ಬೆಳ್ಳಿ, ಬಜರಂಗ್ ಪೂನಿಯಾ ಕಂಚು ಜಯಿಸಿದ್ದರು. ಈ ಬಾರಿ ವಿನೇಶ್ ಪದಕದ ಭರವಸೆ ಮೂಡಿಸಿದ್ದರು. ಇನ್ನೇನು ಫೈನಲ್ ಪ್ರವೇಶಕ್ಕೂ ಮುನ್ನವೇ ಪಂದ್ಯದಿಂದಲೇ ವಿನೇಶ್ ಫೋಗಟ್ ಅನರ್ಹಗೊಂಡಿದ್ದಾರೆ.
ವಿನೇಶ್ ಅನರ್ಹ, ಗುಜ್‌ಮನ್-ಹಿಲ್ಡೆಬ್ರಾಂಡ್ ನಡುವೆ 50ಕೆಜಿ ರೆಸ್ಲಿಂಗ್ ಫೈನಲ್: ವಿಶ್ವ ಕುಸ್ತಿ ಅಧಿಕೃತ ಹೇಳಿಕೆ!
