comscore

Other Sports

Pro Kabaddi League season eight likely to commence in July says Anupam Goswami kvn
Gallery Icon

ಪ್ರೊ ಕಬಡ್ಡಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಆಯೋಜಕರು

ನವದೆಹಲಿ: ಕ್ರಿಕೆಟ್‌ ಬಳಿಕ ದೇಶದಲ್ಲಿ ಅತಿಹೆಚ್ಚು ಕ್ರೇಜ್‌ ಹುಟ್ಟುಹಾಕಿರುವ ದೇಸಿ ಕ್ರೀಡೆ ಕಬಡ್ಡಿ ಕಳೆದ ಕೆಲವು ವರ್ಷಗಳಿಂದ ಹೊಸ ಸಂಚಲವನ್ನೇ ಸೃಷ್ಠಿ ಮಾಡಿದೆ. ಕಬಡ್ಡಿ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡುವ ಸಾಮರ್ಥ್ಯ ಹೊಂದಿರುವ ಪ್ರೊ ಕಬಡ್ಡಿ ಟೂರ್ನಿಗೆ ದೇಶದ ನಾನಾ ಮೂಲೆಗಳಿಂದ ಅಭಿಮಾನಿಗಳಿದ್ದಾರೆ. ಈಗಾಗಲೇ ಯಶಸ್ವಿಯಾಗಿ 7 ಪ್ರೊ ಕಬಡ್ಡಿ ಟೂರ್ನಿ ಆಯೋಜನೆಗೊಂಡಿದ್ದು, ಕಳೆದ ವರ್ಷ ಕೊರೋನಾ ಭೀತಿಯಿಂದಾಗಿ ಟೂರ್ನಿಯನ್ನು ರದ್ದುಪಡಿಸಲಾಗಿತ್ತು. ಮತ್ತೆ ಯಾವಾಗ ಪ್ರೊ ಕಬಡ್ಡಿ ಶುರುವಾಗುತ್ತೆ ಎಂದು ಕನವರಿಸುತ್ತಿದ್ದ ಅಭಿಮಾನಿಗಳಿಗೆ ಪ್ರೊ ಕಬಡ್ಡಿ ಲೀಗ್(ಪಿಕೆಎಲ್) ಆಯೋಜಕರು ಗುಡ್ ನ್ಯೂಸ್‌ ನೀಡಿದ್ದಾರೆ.