comscore

Other Sports

Seven years old Dhyan wins many national and international level awards awards in chess tournament ckm
Video Icon

ವಯಸ್ಸು ಕೇವಲ 7, ಸಾಧನೆ ಬಾನೆತ್ತರ; ಕೊಡಗಿನ ಕುವರ ಚೆಸ್ ಚಾಂಪಿಯನ್!

ಎನ್ ಧ್ಯಾನ್ ವಯಸ್ಸು ಕೇವಲ 7, ಆದರೆ ಸಾಧನೆ ಬಾನೆತ್ತರ. ಚೆಸ್ ಆಟದಲ್ಲಿ ಈತನ ಸಾಧನೆಗೆ ಕರ್ನಾಟಕವೆ ಹೆಮ್ಮೆ ಪಡುತ್ತಿದೆ. ಎನ್ ಧ್ಯಾನ್ ಕೊಡಗು ಜಿಲ್ಲೆಯ ಗೋಣಿಕೊಪ್ಪದ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಅಂಡರ್ 5, 6, 7 ಟೂರ್ನಮೆಂಟ್‍ನಲ್ಲಿ ಕೊಡಗಿನ ಧ್ಯಾನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾನೆ.  ನಾಲ್ಕನೆ ವಯಸ್ಸಿನಲ್ಲೇ ಚೆಸ್ ಆಡೋದಕ್ಕೆ ಶುರುಮಾಡಿದ್ದ. ನಾಲ್ಕು ವರ್ಷ ಹತ್ತು ತಿಂಗಳಲ್ಲಿ ಮಂಡ್ಯದಲ್ಲಿ ನಡೆದ ಟೂರ್ನಮೆಂಟ್‍ನಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿದ್ದ.  ಬಳಿಕ ಮದುರೈ, ಕೊಯಮತ್ತೂರು, ಕೇರಳ ಹೀಗೆ ವಿವಿದೆಡೆ ನಡೆದ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಈತ ಭಾಗವಹಿಸಿ ಬೆಸ್ಟ್ ಯಂಗೆಸ್ಟ್ ಪ್ಲೇಯರ್ ಟ್ರೋಫಿಯನ್ನು ಪಡೆದುಕೊಂಡಿದ್ದಾನೆ. ಓಪನ್ ಟು ಆಲ್ ಇವೆಂಟ್‍ನಲ್ಲಿ 60 ವರ್ಷದವರೆಗಿನ ಆಟಗಾರರೊಂದಿಗೆ ಆಡಿ ಸೈ ಎನಿಸಿಕೊಂಡಿದ್ದಾರೆ.