ಭಾರತ ಹಾಕಿ ತಂಡದ ದಿಗ್ಗಜ ಗೋಲ್ ಕೀಪರ್ ಪಿ ಆರ್ ಶ್ರೀಜೇಶ್ ಅಂತಾರಾಷ್ಟ್ರೀಯ ಹಾಕಿ ವೃತ್ತಿಬದುಕಿಗೆ ವಿದಾಯ ಘೋಷಿಸಿದ್ದಾರೆ. ಇದೀಗ ಶ್ರೀಜೇಶ್‌ಗೆ ಹಾಕಿ ಇಂಡಿಯಾ ಮತ್ತೆ ಮಹತ್ವದ ಜವಾಬ್ದಾರಿ ನೀಡಿದೆ.

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕಂಚು ಗೆಲ್ಲುವುದರೊಂದಿಗೆ ಅಂತಾರಾಷ್ಟ್ರೀಯ ಹಾಕಿಗೆ ಗುಡ್‌ಬೈ ಹೇಳಿರುವ ಭಾರತದ ಹಿರಿಯ ಗೋಲ್‌ಕೀಪರ್‌ ಶ್ರೀಜೇಶ್‌ ಅವರನ್ನು ಹಾಕಿ ಇಂಡಿಯಾ ಕಿರಿಯರ ತಂಡಕ್ಕೆ ಕೋಚ್‌ ಆಗಿ ನೇಮಿಸಲು ನಿರ್ಧರಿಸಿದೆ. 

ಈ ಬಗ್ಗೆ ಮಾತನಾಡಿರುವ ಹಾಕಿ ಇಂಡಿಯಾ ಕಾರ್ಯದರ್ಶಿ, ಭೋಲನಾಥ್‌ ಸಿಂಗ್‌, ‘ಶ್ರೀಜೇಶ್‌ ಕೊನೆ ಹಾಕಿ ಪಂದ್ಯವಾಡಿದ್ದಾರೆ. ಆದರೆ ಅವರು ಇನ್ನು ಕಿರಿಯರ ತಂಡಕ್ಕೆ ಕೋಚ್‌ ಆಗಲಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಭಾರತ ಕ್ರೀಡಾ ಪ್ರಾಧಿಕಾರ(ಸಾಯ್‌)ದ ಜೊತೆ ಚರ್ಚಿಸುತ್ತೇವೆ’ ಎಂದಿದ್ದಾರೆ.

ಒಲಿಂಪಿಕ್ ಕ್ರೀಡಾಗ್ರಾಮದಲ್ಲಿ ಐಡಿ ಕಾರ್ಡ್ ದುರ್ಬಳಕೆ: ಅಂತಿಮ್ 3 ವರ್ಷ ಬ್ಯಾನ್?

ಭಾರತ ಹಾಕಿಯ ಮಹಾಗೋಡೆ ಶ್ರೀಜೇಶ್‌ಗೆ ಜಯದ ವಿದಾಯ!

ಪ್ಯಾರಿಸ್‌: ಭಾರತೀಯ ಹಾಕಿ ಕಂಡ ಸಾರ್ವಕಾಲಿಕ ಶ್ರೇಷ್ಠ ಗೋಲ್‌ಕೀಪರ್‌ಗಳಲ್ಲಿ ಒಬ್ಬರಾದ ಪಿ.ಆರ್‌.ಶ್ರೀಜೇಶ್‌ರ ವೃತ್ತಿಬದುಕು ಮುಕ್ತಾಯಗೊಂಡಿದೆ. ಪ್ಯಾರಿಸ್‌ ಒಲಿಂಪಿಕ್ಸ್‌ ಬಳಿಕ ನಿವೃತ್ತಿ ಪಡೆಯುವುದಾಗಿ ಮೊದಲೇ ಘೋಷಿಸಿದ್ದ ಶ್ರೀಜೇಶ್‌ಗೆ, ಗೆಲುವಿನ ವಿದಾಯ ದೊರೆಯಿತು. 

ಭಾರತ ಸತತ 2 ಒಲಿಂಪಿಕ್ಸ್‌ಗಳಲ್ಲಿ ಪದಕ ಗೆಲ್ಲುವಲ್ಲಿ ಶ್ರೀಜೇಶ್‌ರ ಪಾತ್ರ ಬಹಳ ಮುಖ್ಯವಾದದ್ದು. ಭಾರತ ಹಾಕಿಯ ಮಹಾಗೋಡೆ ಎಂದೇ ಕರೆಸಿಕೊಳ್ಳುವ ಶ್ರೀಜೇಶ್‌, 20 ವರ್ಷ ಕಾಲ ರಾಷ್ಟ್ರೀಯ ತಂಡಕ್ಕೆ ಸೇವೆ ಸಲ್ಲಿಸಿದ್ದಾರೆ. ಭಾರತ ಪರ 336 ಪಂದ್ಯಗಳನ್ನಾಡಿರುವ ಶ್ರೀಜೇಶ್‌, ಹಲವು ವರ್ಷ ಕಾಲ ತಂಡದ ನಾಯಕರೂ ಆಗಿದ್ದರು. ಒಲಿಂಪಿಕ್ಸ್‌ನಲ್ಲಿ 2 ಕಂಚು, ಏಷ್ಯನ್‌ ಗೇಮ್ಸ್‌ನಲ್ಲಿ 2 ಚಿನ್ನ, 1 ಕಂಚು, ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ 2 ಬೆಳ್ಳಿ, ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ 4 ಚಿನ್ನ, ಒಂದು ಬೆಳ್ಳಿ, ಏಷ್ಯಾಕಪ್‌ನಲ್ಲಿ ಒಂದು ಬೆಳ್ಳಿ, ಚಾಂಪಿಯನ್ಸ್‌ ಟ್ರೋಫಿಯಲ್ಲಿ 2 ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ.

Paris Olympics: ಪ್ಯಾರಿಸ್‌ನಲ್ಲಿ ಕಂಚಿನ ಹಣತೆ ಹಚ್ಚಿದ ಹಾಕಿ ಟೀಮ್‌!

ಶ್ರೀಜೇಶ್‌ಗೆ 2017ರಲ್ಲಿ ಪದ್ಮಶ್ರೀ, 2021ರಲ್ಲಿ ಖೇಲ್‌ ರತ್ನ ಪ್ರಶಸ್ತಿಗಳು ದೊರೆತಿವೆ. 2022ರಲ್ಲಿ ವಿಶ್ವ ಗೇಮ್ಸ್‌ನ ವರ್ಷದ ಅಥ್ಲೀಟ್‌ ಪ್ರಶಸ್ತಿಗೂ ಭಾಜನರಾಗಿದ್ದರು. 2021, 2022ರಲ್ಲಿ ಸತತ 2 ವರ್ಷ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್‌ (ಎಫ್‌ಐಎಚ್‌) ವರ್ಷದ ಶ್ರೇಷ್ಠ ಗೋಲ್‌ ಕೀಪರ್‌ ಗೌರವಕ್ಕೂ ಪಾತ್ರರಾಗಿದ್ದರು.

ದೇಶದಲ್ಲಿ ಈ ಕಂಚಿಗೆ ಚಿನ್ನದಷ್ಟೇ ಮೌಲ್ಯವಿದೆ: ಸದ್ಗುರು

ಇನ್ನು ಭಾರತ ಪುರುಷರ ಹಾಕಿ ತಂಡವು ಸ್ಪೇನ್ ಎದುರು 2-1 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಕಂಚಿನ ಪದಕ ಜಯಿಸಿತು. ಒಲಿಂಪಿಕ್ಸ್‌ ಇತಿಹಾಸದಲ್ಲಿ 52 ವರ್ಷಗಳ ಬಳಿಕ ಭಾರತ ಹಾಕಿ ತಂಡವು ಸತತ ಎರಡು ಬಾರಿ ಪದಕ ಜಯಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಟೋಕಿಯೋ ಒಲಿಂಪಿಕ್ಸ್‌ನಲ್ಲೂ ಭಾರತ ಹಾಕಿ ತಂಡವು ಕಂಚಿನ ಪದಕ ಜಯಿಸಿತ್ತು.

Scroll to load tweet…

ಭಾರತ ಹಾಕಿ ತಂಡದ ಪ್ರದರ್ಶನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ಸದ್ಗುರು, ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಅವರಿಂದ ಹಿಡಿದು ಸರ್‌ಪಂಚ್ ಸಾಬ್ ಹರ್ಮನ್‌ಪ್ರೀತ್‌ವರೆಗೆ ಭಾರತ ಹಾಕಿ ತಂಡವು ಮತ್ತೊಮ್ಮೆ ಒಲಿಂಪಿಕ್ಸ್‌ನಲ್ಲಿ ತನ್ನ ಹೆಜ್ಜೆಗುರುತು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಶ್ರೀಜೇಶ್‌ಗೆ ಅತ್ಯುತ್ತಮ ವಿದಾಯವಾಗಿದೆ. ನಮ್ಮ ದೇಶದಲ್ಲಿ ಈ ಕಂಚಿಗೆ ಬಂಗಾರದಷ್ಟೇ ಮೌಲ್ಯವಿದೆ ಎಂದು ಶುಭ ಹಾರೈಸಿದ್ದಾರೆ.