Asianet Suvarna News Asianet Suvarna News

ಪ್ರತ್ಯೇಕತೆ ಕೂಗಿಗೆ ಇಲ್ಲಿದೆ ಉತ್ತರ.. ಇತಿಹಾಸದ ಕನ್ನಡಿಯಲ್ಲಿ ಕನ್ನಡನಾಡು

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಒಂದೆಡೆ ವಾದ-ವಿವಾದದ ಗಾಳಿ ಎಬ್ಬಿಸುತ್ತಿದೆ. ಹಾಗಾದರೆ ನಿಜಕ್ಕೂ ಪ್ರತ್ಯೇಕ ರಾಜ್ಯದ ಅನಿವಾರ್ಯತೆ ಇದೆಯೇ? ಲಾಭ-ನಷ್ಟಗಳು ಏನು? ಕರ್ನಾಟಕದ ಇತಿಹಾಸ ಏನು ಹೇಳುತ್ತದೆ? ಎಲ್ಲದಕ್ಕೂ ಉತ್ತರ ಹೇಳುವಂತಹ ಬರಹ ಇಲ್ಲಿದೆ...

The Historical answer to Uttara Karnataka separate statehood Explainer

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಒಂದೆಡೆ ವಾದ-ವಿವಾದದ ಗಾಳಿ ಎಬ್ಬಿಸುತ್ತಿದೆ. ಹಾಗಾದರೆ ನಿಜಕ್ಕೂ ಪ್ರತ್ಯೇಕ ರಾಜ್ಯದ ಅನಿವಾರ್ಯತೆ ಇದೆಯೇ? ಲಾಭ-ನಷ್ಟಗಳು ಏನು? ಕರ್ನಾಟಕದ ಇತಿಹಾಸ ಏನು ಹೇಳುತ್ತದೆ? ಎಲ್ಲದಕ್ಕೂ ಉತ್ತರ ಹೇಳುವಂತಹ ಬರಹ ಇಲ್ಲಿದೆ...

ಪ್ರತ್ಯೇಕ ಉತ್ತರ ಕರ್ನಾಟಕದ ಕೂಗು ಇದ್ದಕ್ಕಿದ್ದಂತೆ ಹೆಚ್ಚಾಗಿದೆ..ಅದ್ಯೇಕೋ ಗೊತ್ತಿಲ್ಲಾ..ಈ ಪ್ರತ್ಯೇಕತೆಯ ಕೂಗನ್ನ ಸಡನ್ ಆಗಿ ಮುನ್ನಲೆಗೆ ತರುವಂತಹ ಪ್ರಯತ್ನಗಳು ನಡೆದಿವೆ ಅನ್ನಿಸುತ್ತೆ..ಮುಖ್ಯಮಂತ್ರಿ ಕುಮಾರಸ್ವಾಮಿಯರು ಆಡಿದ್ದ ಮಾತಿನ ಎಳೆಯನ್ನ ಹಿಡಿದು , ನಮಗೆ ಅನ್ಯಾಯ ಆಗಿದೆ..ಅಭಿವೃದ್ಧಿ ಯಲ್ಲಿ ತಾರತಮ್ಯ ಆಗಿದೆ ಅಂತಾ ಉತ್ತರ ಕರ್ನಾಟಕದ ಮಂದಿ, ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟಿದ್ದಾರೆ..ಆದ್ರೆ ಈ ಬೇಡಿಕೆಯನ್ನ ಇಡೋದಕ್ಕೂ ಮುನ್ನ ಎಲ್ಲರೂ ಒಂದು ಬಾರಿ ಕರ್ನಾಟಕ ಏಕೀಕರಣದ ಕಥೆಯನ್ನ ತಿಳಿದುಕೊಳ್ಳಬೇಕು..

ಪ್ರತ್ಯೇಕ ರಾಜ್ಯ: ಯಾಕೆ ಬೇಕು? ಯಾಕೆ ಬೇಡ?

ಕರುನಾಡಿನಲ್ಲಿ ನಡೀತಿತ್ತು ಐದು ಆಡಳಿತ..
ಸ್ವಾತಂತ್ರ್ಯ ಬರೋದಕ್ಕೂ ಹಿಂದಿನ ಕರ್ನಾಟಕವನ್ನ , ಇವತ್ತಿನ ಕರ್ನಾಟಕಕ್ಕೆ ಹೋಲಿಸಿ ನೋಡಿದ್ರೆ ನಮಗೆ ಒಂದಷ್ಟು ಮಾಹಿತಿಗಳು ತಟ್ಟನೇ ಗೊತ್ತಾಗಿ ಬಿಡುತ್ತೆ..ಏಕೆಂದ್ರೆ ಅವತ್ತಿಗೆ ಕರ್ನಾಟಕ ಐದು ಭಾಗಗಳಾಗಿ ಆಳಲ್ಪಟ್ಟಿತ್ತು..ಮೈಸೂರು ಸಂಸ್ಥಾನ, ಹೈದ್ರಾಬಾದ್ ಸಂಸ್ಥಾನ, ಬಾಂಬೆ ಪ್ರಾವಿನ್ಸಸ್ , ಕೊಡಗು ಸಂಸ್ಥಾನ ಮತ್ತು ಮದ್ರಾಸ್ ಪ್ರಾಂತ್ಯದ ಆಡಳಿತ ರಾಜ್ಯದಲ್ಲಿ ನಡೀತಿತ್ತು..ಈ ಎಲ್ಲಾ ಭಾಗಗಳಿಗೂ ಹೋಲಿಸಿಕೊಂಡ್ರೆ ಅವತ್ತಿಗೆ ಮೈಸೂರು ಸಂಸ್ಥಾನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದಲ್ಲಿ ಬೇರೆಲ್ಲಾ ಪ್ರದೇಶಗಳಿಗಿಂತಲೂ ತುಸು ಮುಂದಿತ್ತು..ಈ ಮಾತನ್ನ ಸಾಕಷ್ಟು ಜನ ಇವತ್ತಿಗೂ ಒಪ್ಪಿಕೊಳ್ತಾರೆ..ಯಾಕಂದ್ರೆ ಅವತ್ತಿಗೆ ಮೈಸೂರು ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆಯಾಗಿತ್ತು..ಮೈಸೂರು ಕನ್ನಡಿಗರ ನೆಚ್ಚಿನ ತಾಣವಾಗಿತ್ತು..ಆದರೆ ಮೈಸೂರು ಕರ್ನಾಟಕವನ್ನ ಹೊರತು ಪಡಿಸಿದ್ರೆ ಬೇರೆಭಾಗಗಳಲ್ಲಿದ್ದ ಕನ್ನಡಿಗರ ಸ್ಥಿತಿ ನಮ್ಮ ಮನೆಯಲ್ಲಿ ನಾವೇ ಅನಾಥರು ಅನ್ನೋಹಾಗಾಗಿತ್ತು..

ಮುಂಬೈ ಕರ್ನಾಟಕದಲ್ಲಿ ಮರಾಠಿ, ಹೈದ್ರಬಾದ್ ಕರ್ನಾಟಕದಲ್ಲಿ ಉರ್ದು, ಮಂಗಳೂರಿನಲ್ಲಿ ಇತ್ತು ತಮಿಳು ಪ್ರಾಬಲ್ಯ..

ಈ ಮಾತು ಕೇಳೋದಕ್ಕೆ , ಓದೋದಕ್ಕೆ ತುಸು ಕಷ್ಟ ಆಗಬಹುದು..ಆದ್ರೆ ಇದು ಸತ್ಯ..ಅವತ್ತಿಗೆ ಧಾರವಾಡದ ವರೆಗಿನ ಪ್ರದೇಶ ಬಾಂಬೆ ಸಂಸ್ಥಾನದ ಆಳ್ವಿಕೆಯಲ್ಲಿತ್ತು..ಈ ಭಾಗದಲ್ಲಿ ಮರಾಠಿ ಭಾಷೆಯನ್ನ ಅಧಿಕೃತ ಭಾಷೆಯನ್ನಾಗಿ ಬಳಸಲಾಗ್ತಿತ್ತು..ಹಾಗಾಗಿ ಕನ್ನಡಿಗರು ವಿಧಿಇಲ್ಲದೇ ಮರಾಠಿ ಭಾಷೆಯನ್ನ ಕಲಿಯ ಬೇಕಾಯ್ತು..

ಇನ್ನು ಹೈದ್ರಾಬಾದ್ ಕರ್ನಾಟಕದ ಸ್ಥತಿ ಏನು ಬೇರೆಯಾಗಿರಲಿಲ್ಲಾ..ನಿಜಾಮರ ಆಳ್ವಿಕೆಯಲ್ಲಿದ್ದ ಈ ಪ್ರದೇಶದಲ್ಲಿ ಉರ್ದು ಭಾಷೆ ಆಡಳಿತ ಭಾಷೆಯಾಗಿತ್ತು..ಹಾಗಾಗಿ ಕನ್ನಡ ಅನ್ನೋದು ಇಲ್ಲೂ ಸಹ ಸಮಸ್ಯೆಯಲ್ಲೇ ಇತ್ತು..ಇಲ್ಲಿನ ಜನರಿಗೆ ಕನ್ನಡದಷ್ಟೇ ಉರ್ದು ಮತ್ತು ಮರಾಠಿ ಭಾಷೆ ಸುಲಲಿತವಾಗಿ ಬರುವಷ್ಟು ಪ್ರಭಾವ ಇತ್ತು ಅಂದ್ರೆ ಅತಿಶಯೋಕ್ತಿ ಅಲ್ಲ.

ತುಳುನಾಡಲ್ಲೂ ಶುರುವಾಯ್ತು ಪ್ರತ್ಯೇಕ ರಾಜ್ಯ ಕೂಗು, ಕಾರಣ?

ಇದನ್ನ ಬಿಡಿ..ನಮ್ಮ ಕರಾವಳಿ ಪರಿಸ್ಥಿತಿ ಏನು ಭಿನ್ನವಾಗಿರಲಿಲ್ಲ..ಅವತ್ತಿಗೆ ಮದ್ರಾಸ್ ಪ್ರಾಂತ್ಯದ ಆಳ್ವಿಕೆಯಲ್ಲಿದ್ದ ಉತ್ತರ ಕನ್ನಡದ ಕೆಲಭಾಗ, ಅವಿಭಜಿತ ದಕ್ಷಣಕನ್ನಡ ಜಿಲ್ಲೆ, ಮಂಗಳೂರು, ಕಾಸರಗೋಡು ಎಲ್ಲ ಕಡೆಯಲ್ಲೂ ತಮಿಳು ಭಾಷೆ ಪ್ರಭಾವ ಹೆಚ್ಚಾಗಿತ್ತು..
ಇದ್ದಿದ್ದರಲ್ಲಿ ಕೊಡಗಿನಲ್ಲಿ ಕನ್ನಡ ಉಳಿದುಕೊಂಡಿತ್ತು..ಆದ್ರು ಅಲ್ಲಿ ಬ್ರಿಟಿಷರ ಆಡಳಿತ ಇದ್ದಿದ್ದರಿಂದ ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ಏನು ಸಿಕ್ಕಿರಲಿಲ್ಲಾ..

ಹೀಗಿತ್ತು ಕರ್ನಾಟಕ..ಇದೆಲ್ಲವನ್ನು ನೋಡಿ, ಕನ್ನಡ ಭಾಷೆಗೆ ಆಗುತ್ತಿದ್ದ ಅನ್ಯಾಯವನ್ನ ಕಂಡು ೧೮೫೦ರ ಹೊತ್ತಿಗೆ ಭಾಷಾವಾರು ಪ್ರಾಂತ್ಯದ ಕನಸು ಚಿಗುರೊಡೆದಿತ್ತು..ಅದರಲ್ಲೂ ಕನ್ನಡ ಭಾಷೆಮಾತನಾಡುವವರನ್ನ ಒಗ್ಗೂಡಿಸಿ ರಾಜ್ಯ ರಚಿಸ ಬೇಕು ಅನ್ನೋ ಹೋರಾಟ ಆರಂಭಗೊಂಡಿತ್ತು..ಇದಕ್ಕೆ ನೀರೆರೆದಿದ್ದು ಒಬ್ಬ ಬ್ರಿಟಿಷ್ ಅಧಿಕಾರಿ..ಅವತ್ತಿಗೆ ಬಳ್ಳಾರಿ ಕಮಿಷನರ್ ಆಗಿದ್ದ ಥಾಮಸ್ ಮನ್ರೋ ಕನ್ನಡ ಭಾಷಿಗರು ಒಂದಾಗಬೇಕು ಅನ್ನೋ ಮಾತನ್ನ ಹೇಳಿದ್ದ..ಅಲ್ಲಿಂದ ಶುರುವಾದ ಹೋರಾಟ ಕಡೆಗೂ ನೂರುವರ್ಷಗಳ ನಂತ್ರ ಫಲ ಕೊಟ್ಟಿತ್ತು..ಆದ್ರೆ ಅದು ನಿಜಕ್ಕೂ ಸಂಘರ್ಷದ ಹಾದಿ..

ಕರ್ನಾಟಕ ವಿದ್ಯಾವರ್ಧಕ ಸಂಘ
ಕನ್ನಡ ಭಾಷೆಯ ಉಳಿವಿಗಾಗಿ ಸ್ಥಾಪನೆಯಾಗಿದ್ದೇ ಕರ್ನಾಟಕ ವಿದ್ಯಾವರ್ಧಕ ಸಂಘ..೧೮೯೦ರಲ್ಲಿ ರಾ.ಹ.ದೇಶಪಾಂಡೆಯವರ ನೇತೃತ್ವದಲ್ಲಿ ಆರಂಭಗೊಂಡ ಈ ಸಂಘ ಕನ್ನಡ ಭಾಷೆಯ ಉಳಿವಿಗಾಗಿ, ಸಾಹಿತ್ಯದ ಉಳಿವಿಗಾಗಿ ಹಾಗೂ ಕನ್ನಡ ಭಾಷಿಕರ ಏಕೀಕರಣಕ್ಕಾಗಿ ಹಗಲಿರುಳು ಶ್ರಮಿಸಿತ್ತು..ಸಂಘ ಪ್ರಾರಂಭವಾದ ಎರಡು ವರ್ಷದ ನಂತ್ರ ವಾಗ್ಬೂಷಣ ಅನ್ನೋ ಪತ್ರಿಕೆಯನ್ನ ಹೊರತಂದಿತ್ತು..ದೇಶಪಾಂಡೆಯವರು ಉತ್ತರದಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಮೈಸೂರು ಮಹಾರಾಜರ ಸಹಾಯ ಕೇಳಿದ್ರು..ದೇಶಪಾಂಡೆಯವರ ಮನವಿಯನ್ನ ಸಕಾರಾತ್ಮಕ ವಾಗಿ ತೆಗೆದುಕೊಂಡ ನಾಲ್ವಡಿ ಕೃಷ್ಣರಾಜ ಒಡೆಯರ್ ಧಾರವಾಡಕ್ಕೆ ಕನ್ನಡ ಪಂಡಿತರನ್ನ ಕಳುಹಿಸಿಕೊಡೋದ್ರ ಮೂಲಕ ದೇಶಪಾಂಡೆಯವರ ಆಸೆಗೆ ನೀರೆದ್ರು ಆ ಸಂದರ್ಭದಲ್ಲಿ ಆಲೂರು ವೆಂಕಟರಾಯರ ಆಗಮನ ಆಗಿತ್ತು..

ಆಲೂರರಿಂದ ಬದಲಾಯ್ತು ಏಕೀಕರಣದ ದಿಕ್ಕು ದೆಸೆ
ಕನ್ನಡ ಕುಲಪುರೋಹಿತ ಅಂತಲೇ ಪ್ರಖ್ಯಾತರಾದ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ದಲ್ಲಿ ಪ್ರಮುಖಪಾತ್ರವನ್ನ ನಿರ್ವಹಿಸಿದ್ರು..ಕರ್ನಾಟಕ ಗತ ವೈಭವ ಅನ್ನೋ ಪುಸ್ತಕವನ್ನು ಬರೆಯೋದ್ರ ಮೂಲಕ ಕನ್ನಡ ನಾಡಿನ ಇತಿಹಾಸವನ್ನ ಕನ್ನಡಿಗರ ಮನೆ ಮನಗಳಿಗೆ ಮುಟ್ಟಿಸಿದ್ರು..1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ ಆಯ್ತು..ಆ ನಂತ್ರ 1917ರಲ್ಲಿ ಕನ್ನಡ ಭಾಷಿಕರನ್ನ ಹಾಗೂ ಕನ್ನಡ ಭಾಷೆಮಾತನಾಡುವ ಪ್ರದೇಶಗಳನ್ನ ಒಟ್ಟುಗೂಡಿಸುವ ರೆಸಲ್ಯೂಷನ್ ನ ತರಲಾಯ್ತು..ಆನಂತ್ರದಲ್ಲಿ ಬೆಳಗಾವಿ ಅಧಿವೇಶನದಲ್ಲೂ ಏಕೀಕರಣ ವಿಚಾರ ಮುನ್ನಲೆಗೆ ಬಂದಿತ್ತು..ಆಲೂರರ ಜೊತೆಗೆ ಗುಡ್ಲಪ್ಪ ಹಳ್ಳಿಕೇರಿ, ಸಿದ್ದಪ್ಪ ಕಾಂಬ್ಲಿ, ರಾ.ಹ.ದೇಶಪಾಂಡೆ, ರಂಗರಾವ್ ದಿವಾಕರ್, ಕೌಜಲಗಿ ಶ್ರೀನಿವಾಸ್ ರಾವ್, ಕೆಂಗಲ್ ಹನುಮಂತಯ್ಯ, ಎಸ್, ನಿಜಲಿಂಗಪ್ಪ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಟಿ.ಮುನಿಯಪ್ಪ, ಸಾಹುಕಾರ್ ಚೆನ್ನಯ್ಯ, ಹೆಚ್.ಕೆ.ವೀರಣ್ಣಗೌಡ, ಹೆಚ್.ಸಿ.ದಾಸಪ್ಪ, ಕೆ.ಆರ್.ಕಾರಂತ್, ಬಿ.ಎಸ್.ಕಾಕ್ಕಿಲಾಯ, ಬಿ.ಎ, ಕಾಕ್ಕಿಲಾಯ ರಂತಹ ಮಹನೀಯರ ಪರಿಶ್ರಮದಿಂದ ನಾಲ್ಕು ದಶಕಗಳ ಸತತ ಹೋರಾಟದಿಂದ ಕರ್ನಾಟಕ ಏಕೀಕರಣದ ಆಯ್ತು..

ನವಂಬರ್ 1, 1956 ಒಟ್ಟಾದೆವು ಕನ್ನಡಿಗರು, ಸೊಲ್ಲಾಪುರ ಕಾಸರಗೋಡನ್ನ ಬಿಟ್ಟು.. 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು.. ಆದ್ರೆ ಇವತ್ತಿನ ಕರ್ನಾಟಕ ರೂಪುಗೊಳ್ಳಲು ಸ್ವಾತಂತ್ರ್ಯದ ನಂತರ ಒಂಬತ್ತು ವರ್ಷಗಳನ್ನ ಸವೆಸ ಬೇಕಾಯ್ತು..1953 ರಲ್ಲಿ ಮದ್ರಾಸ್ ಪ್ರಾಂತ್ಯದಲ್ಲಿದ್ದ ಬಳ್ಳಾರಿ, ಮೈಸೂರು ಕರ್ನಾಟಕವನ್ನ ಸೇರಿತ್ತು..ಅದು ಪ್ರತ್ಯೇಕ ಆಂದ್ರ ಪ್ರದೇಶ ರಚನೆಯಾದ ಸಮಯ..ಈ ಘಟನೆ ನಡೆದು ಮೂರು ವರ್ಷಗಳ ನಂತ್ರ ಅಂದ್ರೆ ನವಂಬರ್ 1,1956 ರಂದು ಅಖಂಡ ಕರ್ನಾಟಕ ಸೃಷ್ಟಿಯಾಯ್ತು..ಆದ್ರೆ ಕಾಸರಗೋಡು ಕೇರಳದಲ್ಲೂ, ಸೊಲ್ಲಾಪುರ ಹಾಗೂ ಆ ಭಾಗದಲ್ಲಿದ್ದ ಕನ್ನಡ ಭಾಷಿಕ ಪ್ರದೇಶಗಳು ಮಹಾರಾಷ್ಟ್ರದಲ್ಲೂ, ಮಡಕಶಿರ ಆಂದ್ರಪ್ರದೇಶದಲ್ಲೂ ಉಳಿದುಕೊಂಡು ಬಿಟ್ಟವೂ..ಆ ನೋವಿನಲ್ಲೂ ಏಕೀಕರಣವಾದ ಸಂತಸ ಕರುನಾಡಿನಲ್ಲಿ ಮನೆ ಮಾಡಿತ್ತು..ಎಸ್ ನಿಜಲಿಂಗಪ್ಪನವರು ಅಖಂಡ ಕರುನಾಡಿನ ಮುಖ್ಯಮಂತ್ರಿ ಯಾದ್ರು..

ಮೈಸೂರಾಗೇ ಉಳಿದು ಬಿಟ್ಟಿತು ರಾಜ್ಯ..
1956 ರಲ್ಲಿ ಕರ್ನಾಟಕ ಏಕೀಕರಣ ಆದ್ರೂ ಅವತ್ತಿಗೆ ನಮ್ಮ ರಾಜ್ಯವನ್ನ ಮೈಸೂರು ರಾಜ್ಯ ಅಂತಲೇ ಕರೆಯಲಾಗ್ತಿತ್ತು..ಆದ್ರೆ ಹದಿನಾರು ವರ್ಷಗಳ ನಂತ್ರ ಅಂದ್ರೆ 1973 ರಲ್ಲಿ ಮೈಸೂರು ರಾಜ್ಯವನ್ನ ಕರ್ನಾಟಕ ಎಂದು ಬದಲಾಯಿಸಲಾಯ್ತು..

ಇಂತಹ ಹೋರಾಟದ‌ ಹಾದಿಯಲ್ಲಿ ಸೃಷ್ಟಿ ಯಾದ ನಮ್ಮ ರಾಜ್ಯವನ್ನ ನಾವು ಒಡೆಯೋದು ಸರಿಯೇ..ಅಭಿವೃದ್ಧಿ ವಿಚಾರವನ್ನ ಸರಿಯಾಗಿ ನಿಭಾಯಿಸೋಕೆ ಆಗದ ನಾವು ಮಹನೀಯರು ಕಟ್ಟಿದ ನಾಡನ್ನ ಒಡೆಯೋದು ಸರಿಯೇ..ಉತ್ತರದ ಕೊರತೆಗೆ ಕಾರಣ ಯಾರು..?ಇವತ್ತು ಆ ಭಾಗದ ಶಾಸಕರಲ್ಲಿ ಹೆಚ್ಚಿನವರು ಮೂರ್ನಾಲ್ಕು ಬಾರಿ ಆರಿಸಿ ಬಂದವರು..ಅವರೇ ಒಮ್ಮೆ ಆತ್ಮಾವಲೋಕನ‌ಮಾಡಿಕೊಳ್ಳಲಿ..

ಜೈಹಿಂದ್..ಜೈ ಕರ್ನಾಟಕ ಮಾತೆ..[ವಾಟ್ಸಪ್ ಕೃಪೆ]

Follow Us:
Download App:
  • android
  • ios