Asianet Suvarna News Asianet Suvarna News

ವಿಭಿನ್ನ ಕಥೆ ಹೆಣೆದು ಗೆದ್ದು ಬೀಗಿದ ಕೊರಮ್ಮ

ಕೊರಮ್ಮನ ಕಥೆ ಹೇಳಿ ಹೃದಯ ಗೆದ್ದ ನಿರ್ದೇಶಕ ಶಿವಧ್ವಜ ಶೆಟ್ಟಿ ಮೂವಿಗೆ ಕರೆಯೋಕೆ ಮುಂಚೆ ಐದು ಗ್ಯಾರಂಟಿ ಕೊಟ್ಟಿದ್ರು. ಈ  ಗ್ಯಾರಂಟಿಯನ್ನೂ ಈಡೇರಿಸಿದ ಸಿನಿಮಾ ನವಿರಾದ ಮನಮುಟ್ಟುವ ಸಂಭಾಷಣೆಯ ಜೊತೆ ನಿಜಕ್ಕೂ ಮನ ಗೆದ್ದಿದೆ.

director Shivadwaj Shetty tulu movie Koramma review gow
Author
First Published Aug 28, 2023, 8:36 AM IST

ಸ್ವಸ್ತಿಕ್ ಕನ್ಯಾಡಿ, ಏಷ್ಯಾನೆಟ್ ಸುವರ್ಣನ್ಯೂಸ್

ಪ್ರಾದೇಶಿಕ ಸಿನಿಮಾಗಳು ಗೆಲ್ಲುವುತ್ತದೋ, ಸೋಲುತ್ತದೋ ಗೊತ್ತಿಲ್ಲ, ಆದರೆ ಹೃದಯವನ್ನಂತೂ ಗೆದ್ದೇ ಗೆಲ್ಲುತ್ತದೆ ಎಂಬುದಕ್ಕೆ ಕೊರಮ್ಮ ಸಾಕ್ಷಿ. ಪ್ರಾದೇಶಿಕತೆಯನ್ನು ಎತ್ತಿ ಮೆರೆಸುವ ಯಾವುದೇ ಅಸಂಬದ್ಧ ಹಾಸ್ಯವಿಲ್ಲದ, ಕಂಪ್ಲೀಟ್ ಕಥಾ ಹಂದರವಿರುವ, ನಮ್ಮ ಬದುಕಿನ ಕಥೆಯೇ ಎನ್ನಿಸುವ ಒಂದು ಸುಂದರ ಚಿತ್ರಕಥೆ ಕೊರಮ್ಮ.

ತುಳು ಭಾಷೆಯ ಪ್ರೇಕ್ಷಕ ವರ್ಗಕ್ಕೆ ಕಲಾತ್ಮಕ ಚಿತ್ರಗಳನ್ನು ನೋಡುವ ಅಭಿರುಚಿ ಇಲ್ಲ ಅಂತ ಇತ್ತೀಚೆಗೆ ಖ್ಯಾತ ನಿರ್ದೇಶಕರೊಬ್ಬರು ಹೇಳಿದ್ದರು.    ತುಳು ಭಾಷೆಯಲ್ಲಿ ಕಲಾತ್ಮಕ ಚಿತ್ರ ನೋಡುವ ಮಂದಿ ಇಲ್ಲ ಅನ್ನುವುದಕ್ಕಿಂತಲೂ ಅಂತಹ ಅಭಿರುಚಿ ಯಾರೂ ಹಿಡಿಸಿಲ್ಲ ಎಂಬುದು ಗಮನಾರ್ಹ. ಆದರೆ ಅಂತಹ ಪ್ರಯತ್ನ ಕೋಸ್ಟಲ್ ವುಡ್ ನಲ್ಲಿ ನಡೆದಿಲ್ಲ ಅಂತಲ್ಲ. ಪಡ್ಡಾಯಿ, ಗಗ್ಗರದಂತಹ ರಾಷ್ಟ್ರ ಪ್ರಶಸ್ತಿ ವಿಜೇತ ಕಲಾತ್ಮಕ ಚಿತ್ರ ಇಲ್ಲಿಂದಲೇ ಹುಟ್ಟಿದೆ. ಇದೇ ಕಾರಣಕ್ಕೋ ಏನೋ ಪ್ರಾದೇಶಿಕ ಭಾಷೆಗಳ ಕಲಾತ್ಮಕ ಚಿತ್ರವೆಂದರೆ ಅದು ಪ್ರಶಸ್ತಿಗಾಗಿಯೇ ಮಾಡಿದ್ದು ಅನ್ನೋ ಫೀಲಿಂಗ್ ಕೆಲವರಿಗೆ. ಆದರೆ ಇವೆಲ್ಲವನ್ನೂ ಸುಳ್ಳು ಮಾಡಿ ಯಶಸ್ಸಿನತ್ತ ಮುನ್ನುಗ್ಗುತ್ತಿರುವ ಸಿನಿಮಾ ಕೊರಮ್ಮ ಎಂದರೆ ಅತಿಶಯೋಕ್ತಿಯೇನಲ್ಲ.

ಸ್ಪಂದನಾಗೆ ನಾನು ಕಣ್ಣೀರು ಹಾಕೋದು ಇಷ್ಟ ಆಗಲ್ಲ. ಆದ್ರೆ ನನ್ನ ಜೀವನವೇ ಒಂದು ಕಥೆ ಆಗಿ ಹೋಯ್ತು

ಈ ಕೊರಮ್ಮನ ಕಥೆ ಹೇಳಿ ಹೃದಯ ಗೆದ್ದ ನಿರ್ದೇಶಕ ಶಿವಧ್ವಜ ಶೆಟ್ಟಿ ಮೂವಿಗೆ ಕರೆಯೋಕೆ ಮುಂಚೆ ಐದು ಗ್ಯಾರಂಟಿ ಕೊಟ್ಟಿದ್ರು. ಈ ಸಿನಿಮಾದಲ್ಲೊಂದು ಉತ್ತಮ ಕಥೆ ಇದೆ. ಅದ್ಭುತ ಕ್ಯಾಮಾರಾ ಕೈಚಳಕವಿದೆ.  ಭಾವನಾತ್ಮಕ ಸನ್ನಿವೇಶಗಳಿವೆ. ಸುಂದರ ಅಭಿನಯವಿದೆ. ಮನಮುಟ್ಟುವ ಸಂಗೀತವಿದೆ ಅನ್ನೋ ಐದು ಗ್ಯಾರಂಟಿಯನ್ನೂ ಈಡೇರಿಸಿದ ಸಿನಿಮಾ ನವಿರಾದ ಮನಮುಟ್ಟುವ ಸಂಭಾಷಣೆಯ ಜೊತೆ ನಿಜಕ್ಕೂ ಮನ ಗೆದ್ದಿದೆ.

ಸಂಪೂರ್ಣ  ಬೈಲೂರುನಲ್ಲಿ ಚಿತ್ರೀಕರಣಗೊಂಡಿರುವ ಸಿನಿಮಾದಲ್ಲಿ ಪ್ರಾದೇಶಿಕತೆಯ ಶ್ರೀಮಂತಿಕೆಯ ಜೊತೆ 80-90ರ ದಶಕದಲ್ಲಿ ಇದ್ದ ಆಚರಣೆಗಳು, ಮೌಢ್ಯ, ತನ್ನೊಡೆಯನ ಮೇಲಿನ ಪ್ರೀತಿ, ಆತನಿಗಾಗಿ ಎಷ್ಟು ಬೇಕಾದರೂ ರಿಸ್ಕ್ ತಗೊಂಡು ತೋರಬಹುದಾಗಿರುವ ನಿಷ್ಟೆ ಇವೆಲ್ಲವನ್ನೂ ಕಾಣಬಹುದಾಗಿದೆ. 

ತಂದೆ-ಮಗ-ತಾಯಿಯ ಜೊತೆಗೆ ಮನೆ ಕೆಲಸದ ಕೊರಮ್ಮನ ಜೊತೆಗಿನ ನಂಟಿನೊಂದಿಗೆ ಕಥೆ ಸಾಗುತ್ತಾ ಹೋಗುತ್ತದೆ. ಒಬ್ಬ ತಂದೆ ಯಾವತ್ತೂ ತನ್ನ ಮಗನ ಒಳಿತನ್ನೇ ಬಯಸುತ್ತಾನೆ ಎಂಬ ಅದ್ಭುತ ಸಂದೇಶ ಮೊದಲಾರ್ಧದಲ್ಲಿದ್ದರೆ ಒಡೆಯ - ಸೇವಕನೆಂಬ ಬೇಧ-ಭಾವವನ್ನು ದ್ವಿತಿಯಾರ್ಧ ತೊಡೆದು ಹಾಕುತ್ತದೆ.

ಇಡೀ ಕುಟುಂಬವನ್ನು ತಂದೆ ಗುಂಡಿಕ್ಕಿ ಕೊಂದಾಗ ಬದುಕುಳಿದ ಏಕೈಕ ನಟ ಇವರು!

ಸಾಮಾಜಿಕ ಸಂದೇಶ ಸಾರುವ ನೆಪದಲ್ಲಿ ಎಲ್ಲೂ ಚಿತ್ರದಲ್ಲಿ ಕಥೆಯ ಎಳೆ ಮಿಸ್ ಆಗಿಲ್ಲ. ಕೊನೆಯವರೆಗೂ ಕೊರಮ್ಮ ಕೊಟ್ಟಿಗೆಯಲ್ಲೇ ಉಳಿಯುತ್ತಾನೆ ವಿನಃ ಡ್ರಾಮೆಟಿಕ್ ಅನ್ನಿಸುವ ರೀತಿ ಆತನೆಲ್ಲಿಯೂ ತನ್ನ ಒಡೆಯನ ಮನೆಯೊಳಗೆ ನುಗ್ಗಲಾರ. ಇಂತಹ ಅನೇಕ ನಿದರ್ಶನಗಳು ಸಿನಿಮಾದಲ್ಲಿದೆ. 

ಸಂಗೀತದ ವಿಚಾರದಲ್ಲೂ ಯಾವುದೇ ರಾಜಿಯಾಗದ ನಿರ್ದೇಶಕರು ಕೊಳಲು, ದುಡಿ, ತೆಂಬರೆಯಂತಹ ವಾದ್ಯಗಳಲ್ಲೇ ಬಹುತೇಕ ಮೋಡಿ ಮಾಡಿದ್ದಾರೆ.   ಮಲೆತ ನಡುಟು ಮಲೆತು ಉಂತುದೆನಾ.... ಓ ಮಲ್ಲ ಮರಕುಲು ಭೂಮಿ ಅಪ್ಪೆನ್ ಸಾಂಕಿ ಜೋಕುಲು ಎಂಬ ತಂದಾನಿ ಹಾಡಿನ ಸಾಹಿತ್ಯವಂತೂ ಮತ್ತೆ ಮತ್ತೆ ಗುನುಗುಡಿಸುತ್ತಲೇ ಮೆರೆಸುವಂತದ್ದು. 

ದೂರವಾಣಿಯೇ ಇಲ್ಲದ ಕಾಲವೊಂದಿತ್ತು, ಆಗಿನ ವ್ಯವಹಾರಗಳು, ಬದುಕು, ಸಂವಹನ ಹೇಗಿದ್ದವು ಎಂಬುದನ್ನು ದೊಡ್ಡವರಿಗೆ ಚಿತ್ರ ನೆನಪಿಸಿದರೆ ಆ ಲೋಕವನ್ನೇ ಕಿರಿಯರಿಗೆ ತೆರೆದಿಡುತ್ತದೆ ಈ ಚಿತ್ರ. 

ಮೊದಲಾರ್ಧ ಒಂದಿಷ್ಟು ಬೋರ್ ಅನ್ನಿಸಿದರೂ ದ್ವಿತಿಯಾರ್ಧ ಕಂಪ್ಲೀಟ್ ಪೈಸಾ ವಸೂಲ್ ರೀತಿ ಇದೆ. ಕೆಲವೊಂದು ಕಡೆ ಎಲಿಮೆಂಟ್ ಗಳು ಮಿಸ್ ಆಗಿದ್ದರೂ ಸಿನಿಮಾದ ಗಟ್ಟಿಕಥೆ ಅದನ್ನು ಮಂಕಾಗಿಸಬಲ್ಲದು. ಹೊಸ ಮಾದರಿಯಲ್ಲಿ ಯುವಕರನ್ನು ತಲುಪಿ ಮೊದಲ ಪ್ರಯತ್ನದಲ್ಲೇ ಚಿತ್ರ ನೋಡುಗ ವರ್ಗದ ಮನ ಗೆದ್ದಿದ್ದಂತೂ ಸುಳ್ಳಲ್ಲ... ಇಂತಹ ಅನೇಕ ಪ್ರಯತ್ನಗಳು ಪ್ರಾದೇಶಿಕ ಸಿನಿರಂಗದಲ್ಲಿ ಮೂಡಿ ಬರಲಿ ಎಂಬುದೇ ನಮ್ಮ ಬಯಕೆ...

Follow Us:
Download App:
  • android
  • ios